ರೈಲು ಪ್ರಯಾಣಿಕರೇ ಗಮನಿಸಿ, ಕಾಂಚನಜುಂಗಾ ಎಕ್ಸ್‌ಪ್ರೆಸ್ ಅಪಘಾತದಿಂದ 19 ಟ್ರೈನ್ ರದ್ದು!
ಗೂಡ್ಸ್ ರೈಲಿಗೆ ಕಾಂಚನಜುಂಗಾ ಎಕ್ಸ್‌ಪ್ರೆಸ್ ರೈಲು ಡಿಕ್ಕಿಯಾದ ಪರಿಣಾಮ ಸಾವಿನ ಸಂಖ್ಯೆ 15ಕ್ಕೆ ಏರಿಕೆಯಾಗಿದೆ. ಈ ರೈಲು ಅಪಘಾತದಿಂದ ಇದೀಗ 19ಕ್ಕೂ ಹೆಚ್ಚು ರೈಲು ಪ್ರಯಾಣ ರದ್ದಾಗಿದೆ. ಯಾವ ರೈಲು ರದ್ದಾಗಿದೆ? ಇಲ್ಲಿದೆ ಫುಲ್ ಲಿಸ್ಟ್
ನವದೆಹಲಿ(ಜೂ.17) ಮತ್ತೊಂದು ಭೀಕರ ರೈಲು ಅಪಘಾತದಿಂದ ಪ್ರಯಾಣಿಕರು ಹಾಗೂ ಕುಟುಂಬಸ್ಥರು ಜರ್ಝರಿತರಾಗಿದ್ದಾರೆ. ಕಳೆದ ವರ್ಷ ಒಡಿಶಾದಲ್ಲಿ ನಡೆದ ರೈಲು ದುರಂತ ಒಂದು ವರ್ಷ ತುಂಬಿದ ಬೆನ್ನಲ್ಲೇ ಇದೀಗ ಮತ್ತೊಂದು ಭೀಕರ ಅಪಘಾತಕ್ಕೆ 15 ಜೀವಗಳು ಬಲಿಯಾಗಿದೆ. 30ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಪಶ್ಚಿಮಬಂಗಾಳದ ರಂಗಪಾನಿ ರೈಲು ನಿಲ್ದಾಣದ ಸಮೀಪದಲ್ಲಿ ಕಾಂಚನಜುಂಗಾ ಹಾಗೂ ಗೂಡ್ಸ್ ರೈಲು ಡಿಕ್ಕಿಯಾಗಿದೆ. ಈ ಅಪಘಾತದ ಪರಿಣಾಮ 19ಕ್ಕೂ ಹೆಚ್ಚು ರೈಲುಗಳ ಪ್ರಯಾಣ ರದ್ದಾಗಿದೆ.
ಕೋಲ್ಕತಾದಿಂದ ಸೆಲ್ದಾಹ್ ರೈಲು ನಿಲ್ದಾಣದತ್ತ ತೆರಳುತ್ತಿದ್ದ ಎಕ್ಸ್‌ಪ್ರೆಸ್ ರೈಲಿಗೆ ವೇಗವಾಗಿ ಬಂದ ಗೂಡ್ಸ್ ರೈಲು ಡಿಕ್ಕಿಯಾಗಿದೆ. ಎರಡು ಬೋಗಿಗಳು ಮೇಲಕ್ಕೆ ಹಾರಿ ಭೀಕರ ಅಪಘಾತ ಸಂಭವಿಸಿದೆ. ಈ ಅಪಘಾತಿಂದ ಈ ಮಾರ್ಗದಲ್ಲಿ ಸಂಚರಿಸುವ 19 ರೈಲುಗಳು ರದ್ದು ಮಾಡಲಾಗಿದೆ.
WB Train Accident Update: ಕಾಂಚನಜುಂಗಾ ಎಕ್ಸ್‌ಪ್ರೆಸ್‌ಗೆ ಗೂಡ್ಸ್ ಟ್ರೈನ್ ಡಿಕ್ಕಿ: ಮೃತರ ಸಂಖ್ಯೆ 15ಕ್ಕೆ ಏರಿಕೆ
ರೈಲು ಸಂಖ್ಯೆ 19602 ಜಲ್‌ಪೈಗುರಿ - ಉದಯಪುರಿ ಸಿಟಿ ಎಕ್ಸ್‌ಪ್ರೆಸ್
ರೈಲು ಸಂಖ್ಯೆ 20503 ದಿಬ್ರುಗಡ- ನವದೆಹಲಿ ರಾಜಧಾನಿ ಎಕ್ಸ್‌ಪ್ರೆಸ್
ರೈಲು ಸಂಖ್ಯೆ 12423 ದಿಬ್ರುಗಡ -ನವದೆಹಲಿ ರಾಜಧಾನಿ ಎಕ್ಸ್‌ಪ್ರೆಸ್
ರೈಲು ಸಂಖ್ಯೆ 01666 ಅಗರ್ತಲಾ- ರಂಗಿಯಾ ವಿಶೇಷ
ರೈಲು ಸಂಖ್ಯೆ 12346 ಗುವ್ಹಾಟಿ- ಹೌರಾ ಸರಯಿಘಾಟ್ ಎಕ್ಸ್‌ಪ್ರೆಸ್
ರೈಲು ಸಂಖ್ಯೆ 12505 ಕಾಮಾಕ್ಯ - ಆನಂದ ವಿಹಾರ ಟರ್ಮಿನಲ್ ನಾರ್ತ್ಈಸ್ಟ್ ಎಕ್ಸ್‌ಪ್ರೆಸ್
ರೈಲು ಸಂಖ್ಯೆ 01666 ಅಗರ್ತಲ -ರಂಗಿಯಾ ಸ್ಪೆಷಲ್
ರೈಲು ಸಂಖ್ಯೆ 12510 ಗುಹ್ವಾಟಿ- ಸಿಲ್ಚಾರ್ ಎಕ್ಸ್‌ಪ್ರೆಸ್
ರೈಲು ಸಂಖ್ಯೆ 22302 ನ್ಯೂ ಜಲ್‌ಪೈಗುರಿ- ಹೌರ ವಂದೇ ಭಾರತ್ ಎಕ್ಸ್‌ಪ್ರೆಸ್
ರೈಲು ಸಂಖ್ಯೆ 22504 ದಿಬ್ರುಗಡ - ಕನ್ಯಾಕುಮಾರಿ ಎಕ್ಸ್‌ಪ್ರೆಸ್
ರೈಲು ಸಂಖ್ಯೆ 15620 ಕಾಮಾಕ್ಯ - ಗಯಾ ಎಕ್ಸ್‌ಪ್ರೆಸ್
ರೈಲು ಸಂಖ್ಯೆ 15962 ದಿಬ್ರುಗಡ - ಹೌರ ಎಕ್ಸ್‌ಪ್ರೆಸ್
ರೈಲು ಸಂಖ್ಯೆ 15636 ಗುವ್ಹಾಟಿ -ಒಕ್ಹಾ ಎಕ್ಸ್‌ಪ್ರೆಸ್
ರೈಲು ಸಂಖ್ಯೆ 15930 ಟಿನುಸುಕಿಯಾ- ತಂಬರಮ್ ಎಕ್ಸ್‌ಪ್ರೆಸ್
ರೈಲು ಸಂಖ್ಯೆ 12377 ಸೀಲ್ದಾಹ್ - ಅಲಿಪುರದೌರ್ ಎಕ್ಸ್‌ಪ್ರೆಸ್
ರೈಲು ಸಂಖ್ಯೆ 06105 ನಾಗರಕೊಯಿಲ್-ದಿಬ್ರುಗಡ ಎಕ್ಸ್‌ಪ್ರೆಸ್
ರೈಲು ಸಂಖ್ಯೆ 12424 ನವದೆಹಲಿ- ದಿಬ್ರುಗಡ ರಾಜಧಾನಿ ಎಕ್ಸ್‌ಪ್ರೆಸ್
ರೈಲು ಅಪಘಾತದಲ್ಲಿ ಮೃತಪಟ್ಟ ಕುಟುಂಬದವರಿಗೆ ಪ್ರಧಾನಿ ಮೋದಿ ಪರಿಹಾರ ನಿಧಿಯಿಂದ ತಲಾ 2 ಲಕ್ಷ ಲಕ್ಷ ರೂಪಾಯಿ ಹಾಗೂ ಗಾಯಗೊಂಡವರಿಗೆ ತಲಾ 50 ಸಾವಿರ ರೂಪಾಯಿ ಘೋಷಿಸಲಾಗಿದೆ.
ಇತ್ತ ರೈಲು ಅಪಘಾತದ ಬೆನ್ನಲ್ಲೇ ರೈಲ್ವೇ ಸಚಿವಾಲಯ ಸಹಾಯವಾಣಿ ತೆರೆದಿದೆ.
033-23508794
033-23833326
Boat Accident ಗಂಗಾ ನದಿಯಲ್ಲಿ ಮುಳುಗಿದ ಭಕ್ತರ ದೋಣಿ, 17ರ ಮಂದಿ ಪೈಕಿ 6 ಜನ ನಾಪತ್ತೆ!
GHY ನಿಲ್ದಾಣ ಸಹಾಯವಾಣಿ
03612731621
03612731622
03612731623