ಒಡಿಶಾದ ಗ್ರಾಮವೊಂದರಲ್ಲಿ, ಕಾಳಿ ಎಂಬ ಬೀದಿನಾಯಿಯೊಂದು 30 ಮಕ್ಕಳನ್ನು ವಿಷಕಾರಿ ಹಾವಿನಿಂದ ರಕ್ಷಿಸಲು ತನ್ನ ಪ್ರಾಣವನ್ನೇ ಪಣಕ್ಕಿಟ್ಟಿದೆ. ಹಾವನ್ನು ಕೊಂದರೂ, ಅದರ ಕಡಿತದಿಂದಾಗಿ ನಾಯಿ ಪ್ರಾಣ ಬಿಟ್ಟಿದ್ದು, ಗ್ರಾಮಸ್ಥರು ಅದಕ್ಕೆ ವೀರ ವಿದಾಯ ನೀಡಿ ಗೌರವ ಸಲ್ಲಿಸಿದ್ದಾರೆ.

ಮಕ್ಕಳ ಪ್ರಾಣ ಉಳಿಸಿದ ನಾಯಿಗೆ ಗ್ರಾಮಸ್ಥರ ಭಾವುಕ ವಿದಾಯ

ಸ್ವಾಮಿನಿಷ್ಠೆಗೆ ಮತ್ತೊಂದು ಹೆಸರೇ ನಾಯಿಗಳು ತಮ್ಮಗೊಂದು ತುತ್ತು ಹಾಕಿದ ಮನುಷ್ಯನನ್ನು ಈ ಶ್ವಾನಗಳು ಎಂದಿಗೂ ಮರೆಯುವುದಿಲ್ಲ, ಕೆಲವು ಬೀದಿನಾಯಿಗಳು ಉಗ್ರಸ್ವರೂಪಿಗಳಾದರೆ ಇನ್ನೂ ಕೆಲವು ಬೀದಿನಾಯಿಗಳು ಆ ಪ್ರದೇಶದ ಮಕ್ಕಳು ದೊಡ್ಡವರೆನ್ನದೇ ಎಲ್ಲರ ಜೊತೆ ಒಂದು ಉತ್ತಮ ಬಾಂಧವ್ಯ ಹೊಂದಿರುತ್ತಾರೆ. ಆ ಏರಿಯಾದಲ್ಲಿ ಹೊರಗಿನವರು ಬರದಂತೆ ಕಾವಲು ಕಾಯುತ್ತವೆ. ತನ್ನವರ ರಕ್ಷಣೆಗೆ ಮುಂದಾಗುತ್ತವೆ. ತಮ್ಮವರಿಗಾಗಿ ಶ್ವಾನಗಳು ಜೀವ ಪಣಕ್ಕಿಟ್ಟ ಹಲವು ಘಟನೆಗಳು ಈಗಾಗಲೇ ನಡೆದು ಹೋಗಿವೆ. ಹಾಗೆಯೇ ಇಲ್ಲೊಂದು ಕಡೆ ಶ್ವಾನವೊಂದು ತನ್ನ ಜೀವವನ್ನೇ ಮಕ್ಕಳ ರಕ್ಷಿಸುವುದಕ್ಕೆ ಪಣಕ್ಕಿಟ್ಟು ಪ್ರಾಣ ಬಿಟ್ಟಿದೆ. ಹೌದು ಬೀದಿನಾಯಿಯೊಂದು ವಿಷಕಾರಿ ಹಾವುಗಳಿಂದ 30 ಮಕ್ಕಳ ರಕ್ಷಣೆ ಮಾಡಿ ಜೀವ ಬಿಟ್ಟಿದೆ. ಒಡಿಶಾದ ಧೀರಕುಲ ಎಂಬ ಗ್ರಾಮದಲ್ಲಿ ಈ ಘಟನೆ ನಡೆದಿದೆ.

ಹೌದು ಕಾಳಿ ಹೆಸರಿನ ಬೀದಿನಾಯೊಂದು 30ಕ್ಕೂಎ ಹೆಚ್ಚು ಮಕ್ಕಳಿಗೆ ಹಾವಿನಿಂದ ರಕ್ಷಣೆ ನೀಡಲು ಕಾದಾಡಿದ್ದು, ಕೊನೆಗೆ ಹಾವಿನ ಜೊತೆಗಿನ ಹೋರಾಟದಲ್ಲಿ ಪ್ರಾಣ ಚೆಲ್ಲಿದೆ ಎಂದು ವರದಿಯಾಗಿದೆ. ಈ ವಿಚಾರ ಗ್ರಾಮಸ್ಥರಿಗೆ ತಿಳಿಯುತ್ತಿದ್ದಂತೆ ಗ್ರಾಮಸ್ಥರು ನಾಯಿಯ ಸಾವಿನಿಂದ ತೀವ್ರ ಭಾವುಕರಾಗಿದ್ದು, ಹೀಗೆ ವೀರಾವೇಶದಿಂದ ಮಡಿದ ಶ್ವಾನಕ್ಕೆ ಭಾವುಕ ವಿದಾಯ ಏರ್ಪಡಿಸಿ ಅಂತಿಮ ಸಂಸ್ಕಾರ ನಡೆಸಿದ್ದಾರೆ.

ಒಡಿಶಾದ ಮಯೂರ್‌ಭಂಜ್ ಜಿಲ್ಲೆಯ ಧಿರಾಕುಲಾ ಗ್ರಾಮದಲ್ಲಿ ಈ ಬೀದಿನಾಯಿ ಕಾಳಿ ಎಂದೇ ಫೇಮಸ್ ಆಗಿತ್ತು. ಸೋಮವಾರ ಬೆಳಗ್ಗೆ ಸುಮಾರು ಎಂಟೂವರೆ ಗಂಟೆಗೆ, ಹತ್ತಿರದ ಪ್ರಾಥಮಿಕ ಶಾಲೆಯಾದ ಶ್ರೀ ಜಗನ್ನಾಥ ಶಿಶು ವಿದ್ಯಾ ಮಂದಿರದ ಮೂವತ್ತಕ್ಕೂ ಹೆಚ್ಚು ವಿದ್ಯಾರ್ಥಿಗಳು ತಮ್ಮ ಶಾಲಾ ಆವರಣದ ಹೊರಗೆ ಕುಳಿತಿದ್ದಾಗ, ವಿಷಪೂರಿತ ಹಾವೊಂದು ಅವರ ಕಡೆಗೆ ಚಲಿಸುತ್ತಿರುವುದು ಕಂಡುಬಂದಿದೆ. ಈ ವೇಳೆ ಕಾಳಿ ಯಾವುದೇ ಹಿಂಜರಿಕೆಯಿಲ್ಲದೆ ಹಾವನ್ನು ಓಡಿಸುವ ಪ್ರಯತ್ನ ಮಾಡಿದೆ. ಹಾವನ್ನು ಓಡಿಸಿ ನಾಯಿ ಕೊಂದು ಹಾಕಿದೆ. ಆದರೆ ಈ ಕಾಳಗದ ವೇಳೆ ಹಾವು ಕೂಡ ನಾಯಿಗೆ ಕಚ್ಚಿದ್ದು, ಪರಿಣಾಮವಾಗಿ ನಾಯಿಯೂ ಸತ್ತು ಹೋಗಿದೆ.

ಇದನ್ನೂ ಓದಿ: ಟ್ರಂಪ್ ಹತ್ಯೆಗೆ ಯತ್ನಿಸಿದ ಶೂಟರ್ ಸಾಮಾನ್ಯನಲ್ಲ: ನಾಸಾ ಫೆಲೋ, ಇಂಜಿನಿಯರ್ ಹಾಗೂ ಗೇಮ್ ಡೆವಲಪರ್ ಈ ಅಲೆನ್.

ಕಾಳಿಯ ಸಾವಿನ ಸುದ್ದಿ ಗ್ರಾಮದಾದ್ಯಂತ ಹರಡಿದಾಗ ಅಲ್ಲಿನ ಗ್ರಾಮಸ್ಥರು ತೀವ್ರ ಭಾವುಕರಾಗಿದ್ದು, ತಮ್ಮ ಪುಟ್ಟ ಮಕ್ಕಳನ್ನು ಹಾವಿನಿಂದ ರಕ್ಷಿಸಿದ ಶ್ವಾನದ ಗೌರವಾರ್ಥವಾಗಿ ಶ್ವಾನದ ಮೆರವಣಿಗೆಯನ್ನು ಮಾಡಿದ್ದಾರೆ. ನಾಯಿಯ ದೇಹವನ್ನು ಟ್ರಾಲಿಯ ಮೇಲೆ ಇರಿಸಿ, ಹೂವುಗಳಿಂದ ಅಲಂಕರಿಸಿ, ಬಿಳಿ ಬಟ್ಟೆಯಲ್ಲಿ ಸುತ್ತಿ, ಗ್ರಾಮದಾದ್ಯಂತ ಸಾಗಿಸಿ ನಂತರ ಪೂರ್ಣ ವಿಧಿವಿಧಾನಗಳೊಂದಿಗೆ ಸಮಾಧಿ ಮಾಡಿದ್ದಾರೆ. ಕಾಳಿ ತಮ್ಮ ಮಕ್ಕಳನ್ನು ರಕ್ಷಿಸಿ ಪ್ರಾಣ ಬಿಡುವ ಮೂಲಕ ನಮ್ಮ ಹೃದಯದಲ್ಲಿ ಶಾಶ್ವತವಾಗಿ ನೆಲೆಯೂರಿದೆ ಎಂದು ಗ್ರಾಮಸ್ಥರು ಹೇಳಿಕೊಂಡಿದ್ದಾರೆ.

ಇದನ್ನೂ ಓದಿ: ಬೆಳಗಾವಿಯಲ್ಲಿ ಗುಂಡಿನ ದಾಳಿ: ಹೈ ಪ್ರೊಫೈಲ್ ಕೇಸ್ ನಿರ್ವಹಿಸುತ್ತಿದ್ದ ಪ್ರಭಾವಿ ವಕೀಲೆಯ ನಿವಾಸದ ಮೇಲೆ ಫೈರಿಂಗ್