ಗೋವಾಕ್ಕೆ ವರ್ಷಾಚರಣೆಗೆ ಬರುವವರಿಗೆ ಎಚ್ಚರಿಕೆ| ಹೊಸ ವರ್ಷಾಚರಣೆಗಾಗಿ ಗೋವಾದ ವಿವಿಧ ಬೀಚ್‌ಗಳಿಗೆ ಬರುವ ಪ್ರವಾಸಿಗರು ಎಚ್ಚರ, ಕಾರಣವೇನು? ಇಲ್ಲಿದೆ ವಿವರ
ಪಣಜಿ[ಡಿ.26]: ಹೊಸ ವರ್ಷಾಚರಣೆಗಾಗಿ ಗೋವಾದ ವಿವಿಧ ಬೀಚ್‌ಗಳಿಗೆ ಬರುವ ಪ್ರವಾಸಿಗರು ಎಚ್ಚರದಿಂದ ಇರುವುದು ಒಳಿತು ಎಂದು ಸ್ಥಳೀಯ ಸಂಘಟನೆಯೊಂದು ಎಚ್ಚರಿಸಿದೆ.
ಕಳಸಾ ಬಂಡೂರಿ ಯೋಜನೆ ಜಾರಿಗೆ ಪರಿಸರ ಸಚಿವಾಲಯದ ಅನುಮತಿ ಬೇಕಿಲ್ಲ ಎಂದು ಕೇಂದ್ರ ಸಚಿವ ಪ್ರಕಾಶ್ ಜಾವಡೇಕರ್ ಅವರು ಡಿ.24ಕ್ಕೆ ಕರ್ನಾಟಕ ಸರ್ಕಾರಕ್ಕೆ ಪತ್ರ ಬರೆದಿರುವ ಹಿನ್ನೆಲೆಯಲ್ಲಿ ಪ್ರತಿಕ್ರಿಯಿಸಿರುವ ಪ್ರೋಗ್ರೇಸ್ಸಿವ್ ಫ್ರಂಟ್ ಆಫ್ ಗೋವಾ ಎಂಬ ಸಂಘಟನೆ ಇನ್ನು 48 ಗಂಟೆಗಳಲ್ಲಿ ಗೋವಾ ಸಿಎಂ ಪ್ರಮೋದ್ ಸಾವಂತ್ ರಾಜೀನಾಮೆ ನೀಡಬೇಕು ಎಂದು ಎಚ್ಚರಿಸಿದೆ.
ಇಲ್ಲದೇ ಹೋದಲ್ಲಿ ನಾವು ಪ್ರತಿಭಟನೆ ತೀವ್ರಗೊಳಿಸುತ್ತೇವೆ. ಹೀಗಾಗಿ ಪ್ರವಾಸಿಗರು ಎಚ್ಚರ ವಹಿಸಬೇಕು ಎಂದಿದ್ದಾರೆ.
