ನಾನೊಬ್ಬ ಸೆಲೆಬ್ರಿಟಿ ಇನ್ನು ಕಡಲೆಕಾಯಿ ಮಾರಲಾರೆ ಎಂದಿದ್ದ ಭುವನ್ ಕಚ್ಚಾಬಾದಮ್ ಹಾಡಿನಿಂದ ರಾತ್ರೋರಾತ್ರಿ ಖ್ಯಾತಿ ಗಳಿಸಿದ್ದ ಈತ ಬೀದಿಯಲ್ಲಿ ಕಡಲೆಕಾಯಿ ಮಾರುತ್ತಿದ್ದ ಭುವನ್ ಬಡ್ಯಾಕರ್
ತಮ್ಮ ಕಚ್ಚಾ ಬಾದಮ್ ಹಾಡಿನಿಂದ ರಾತ್ರೋರಾತ್ರಿ ಖ್ಯಾತಿ ಗಳಿಸಿದ್ದ ಗಾಯಕ ಭುವನ್ ಬಡ್ಯಾಕರ್ ಅವರೀಗ ತಮ್ಮ ಹೇಳಿಕೆಗೆ ವಿಷಾದಿಸುವುದಾಗಿ ಹೇಳಿದ್ದಾರೆ. ಕಚ್ಚಾ ಬಾದಮ್ ಹಾಡು ಬಹಳಷ್ಟು ಖ್ಯಾತಿ ಗಳಿಸಿ ರಾತ್ರೋರಾತ್ರಿ ಫೇಮಸ್ ಆದ ಬಳಿ ಭುವನ್ ಬಡ್ಯಾಕರ್ ಅವರು ನಾನು ಇನ್ನು ಮೇಲೆ ಕಡಲೆಕಾಯಿ ಮಾರಾಟ ಮಾಡುವುದಿಲ್ಲ. ಈ ಹಾಡಿನಿಂದ ನಾನು ಸೆಲೆಬ್ರಿಟಿ ಆಗಿದ್ದೇನೆ ಇನ್ನು ಮುಂದೆ ಕಡೆಕಾಯಿ ಮಾರುವ ಅವಶ್ಯಕತೆ ನನಗಿಲ್ಲ ಎಂದು ಹೇಳಿದ್ದರು.
ಜನರು ನನ್ನ ಹಾಡಿಗೆ ಕುಣಿಯುತ್ತಿದ್ದಾರೆ. ಹಾಗಾಗಿ ನಾನೀಗ ಸೆಲೆಬ್ರಿಟಿ ಎಂದು ನೀವು ಊಹಿಸಬಹುದು. ಇನ್ನು ಮುಂದೆ ನಾನು ಕಡಲೆಕಾಯಿಯನ್ನು ಮಾರಬೇಕಾಗಿಲ್ಲ. ನಾನು ಈಗ ಕಡಲೆಕಾಯಿಯನ್ನು ಮಾರಲು ಪ್ರಯತ್ನಿಸಿದರೆ ಜನರು ಖರೀದಿಸುವುದಿಲ್ಲ, ಎಲ್ಲರೂ ನನ್ನ ಹಾಡನ್ನು ಕೇಳಲು ಬಯಸುತ್ತಾರೆ ಎಂದು ಅವರು ಟೈಮ್ಸ್ ಆಫ್ ಇಂಡಿಯಾಗೆ ನೀಡಿದ ಸಂದರ್ಶನದಲ್ಲಿ ಹೇಳಿದರು. ಆದರೆ ಅವರ ಈ ಹೇಳಿಕೆ ಅನೇಕರ ಟೀಕೆಗೆ ಗುರಿಯಾಯಿತು. ಅನೇಕರು ಅವರನ್ನು ತರಾಟೆಗೆ ತೆಗೆದುಕೊಂಡರು.
ಕಚ್ಚಾ ಬಾದಮ್ ಬಳಿಕ ಮತ್ತೊಂದು ಹಾಡಿನೊಂದಿಗೆ ಬಂದ ಬಡ್ಯಾಕರ್... ನೀವೂ ಕೇಳಿ
ಜನರ ಟೀಕೆಗಳ ನಂತರ ನಾನು ಹೀಗೆ ಮಾತನಾಡಬಾರದಿತ್ತು ಎಂದು ನನಗೆ ಅರಿವಾಗಿದೆ ಎಂದು ಬಡ್ಯಾಕರ್ ಹೇಳಿದರು. ನಾನಿದನ್ನು ಹೇಳಬಾರದಿತ್ತು ಎಂದು ನನಗೆ ಈಗ ಅರಿವಾಗಿದೆ. ಜನರು ನನ್ನನ್ನು ಸೆಲೆಬ್ರಿಟಿಯನ್ನಾಗಿ ಮಾಡಿದ್ದಾರೆ ಮತ್ತು ಪರಿಸ್ಥಿತಿ ಬಂದರೆ ನಾನು ಮತ್ತೆ ಕಡಲೆಕಾಯಿ ಮಾರುತ್ತೇನೆ. ನಿಮ್ಮೆಲ್ಲರಿಂದ ಅಂತಹ ಪ್ರೀತಿಯನ್ನು ಪಡೆಯುವುದು ನನ್ನ ಅದೃಷ್ಟ ಎಂದು ಭಾವಿಸುತ್ತೇನೆ. ನಾನು ಸರಳ ಮನುಷ್ಯ ಮತ್ತು ಯಾವಾಗಲೂ ಸರಳವಾಗ ಬದುಕಲು ಬಯಸುತ್ತೇನೆ. ನನ್ನ ಜೀವನವೇ ಹಾಗೆ ಸ್ಟಾರ್‌ಡಮ್, ಮಾಧ್ಯಮದ ಗಮನ ಮತ್ತು ಗ್ಲಾಮರ್‌ನಂತಹ ಈ ವಿಷಯಗಳು ಶಾಶ್ವತವಾಗಿ ಇರುವುದಿಲ್ಲ. ನಾನು ಒಬ್ಬ ವ್ಯಕ್ತಿಯಾಗಿ ಬದಲಾಗದೆ ಇರುವೆ ಎಂದು ನಾನು ನಿಮಗೆ ಭರವಸೆ ನೀಡಬಲ್ಲೆ ಎಂದು ಅವರು ತಮಗೆ ಆಯೋಜಿಸಿದ್ದ ಅಭಿನಂದನಾ ಕಾರ್ಯಕ್ರಮದಲ್ಲಿ ಹೇಳಿದರು ಎಂದು ಎಬಿಪಿ ವರದಿ ಮಾಡಿದೆ.
ಕಾರು ಅಪಘಾತ: ಕಚ್ಚಾ ಬಾದಮ್ ಗಾಯಕ ಆಸ್ಪತ್ರೆಗೆ ದಾಖಲು
ಕಚ್ಚಾ ಬಾದಮ್ ಚಿತ್ರದ ಯಶಸ್ಸಿನ ನಂತರ ಬಡ್ಯಾಕರ್ ಅವರು ಅಮರ್ ನೋಟುನ್ ಗರಿ (ನನ್ನ ಹೊಸ ಕಾರು) ಎಂಬ ಹೊಸ ಹಾಡನ್ನು ಕೂಡ ಬಿಡುಗಡೆ ಮಾಡಿದರು. ಇದಕ್ಕೂ ಮೊದಲು ಅವರು ಒಂದು ಸೆಕೆಂಡ್ ಹ್ಯಾಂಡ್ ಕಾರೊಂದನ್ನು ಖರೀದಿಸಿದ್ದರು.ಆ ಕಾರನ್ನು ಚಲಾಯಿಸಲು ಕಲಿಯುತ್ತಿದ್ದಾಗ ಅವರು ಅಪಘಾತಕ್ಕೊಳಗಾಗಿದ್ದರು. ಬಳಿಕ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಗುಣಮುಖರಾದ ಬಳಿಕ ಅವರು ತಾವು ಕಾರು ಅಪಘಾತದಲ್ಲಿ ಹೇಗೆ ಸಿಲುಕಿದೆ ಮತ್ತು ಹೆಚ್ಚು ಗಂಭೀರವಾದ ಗಾಯಗಳಿಂದ ದೇವರು ನನ್ನನ್ನು ಹೇಗೆ ರಕ್ಷಿಸಿದರು ಎಂಬುದರ ಕುರಿತು ಹಾಡು ಹಾಡಿದ್ದರು.
ಈ ಕಚ್ಚಾಬಾದಮ್ ಈ ಹಾಡನ್ನು ಬಳಸಿಕೊಂಡು ಸಂಗೀತಾ ಕಂಪನಿಗಳು ಅದಕ್ಕೆ ಹಲವು ರಿಮಿಕ್ಸ್ ಮಾಡಿ ಕೋಟ್ಯಾಂತರ ದುಡ್ಡು ಮಾಡಿದ್ದರು. ಆದರೆ ಮೂಲ ಗಾಯಕ ಭುವನ್ ಬಡ್ಯಾಕರ್ ಅವರಿಗೆ ಮಾತ್ರ ಇದರಿಂದ ನಯಾಪೈಸೆಯೂ ಸಿಕ್ಕಿರಲಿಲ್ಲ. ಅವರು ಕಡಲೆಕಾಯಿ ಮಾರುತ್ತಲೇ ಇರಬೇಕಾಯಿತು. ಆದರೆ ನಂತರಗೋಧೂಳಿಬೆಲೆ ಎಂಬ ಸಂಗೀತಾ ಸಂಸ್ಥೆಯೊಂದು ಕಚ್ಚಾ ಬಾದಾಮ್‌ನ ಮೂಲ ಹಾಡುಗಾರನನ್ನು ಗುರುತಿಸಿ ಅವರಿಗೆ ಬಹುಮಾನ ನೀಡಿದೆ. ಈ ಹಾಡು ತನ್ನ ಸೂಪರ್ ಕ್ಯಾಚಿ ಜಿಂಗಲ್‌ನಿಂದಾಗಿ ಪಶ್ಚಿಮ ಬಂಗಾಳದ ಕಡಲೆಕಾಯಿ ಮಾರಾಟಗಾರ ಭುವನ್ ಬಡ್ಯಾಕರ್ ಅವರನ್ನು ಗಾಯಕನಾಗಿ ತ್ವರಿತವಾಗಿ ಪ್ರಚಾರಕ್ಕೆ ತಂದಿತು. ಹಾಡಿನ ರೀಮಿಕ್ಸ್ ಆವೃತ್ತಿಯನ್ನು ರಚಿಸಿದ ಗೋಧೂಳಿಬೆಳ ಸಂಗೀತಾ ಸಂಸ್ಥೆ ಭುವನ್‌ಗೆ 3 ಲಕ್ಷ ರೂ.ಬಹುಮಾನವನ್ನು ನೀಡಿದೆ.
ಬಡ ಕಡಲೆಕಾಯಿ ಮಾರಾಟಗಾರ, ಹಾಡಿನ ಮೂಲ ಸೃಷ್ಟಿಕರ್ತ ಆದರೆ ಅವನಿಗೆ ನೀಡಬೇಕಾದ ಕ್ರೆಡಿಟ್ ಅನ್ನು ಏಕೆ ನೀಡುತ್ತಿಲ್ಲ ಎಂದು ಅನೇಕ ಸಾಮಾಜಿಕ ಮಾಧ್ಯಮ ಬಳಕೆದಾರರು ಪ್ರಶ್ನಿಸಿದ ಬಳಿಕ ಈ ಬೆಳವಣಿಗೆ ನಡೆದಿದೆ. ಇದಕ್ಕೂ ಮೊದಲು ಭುವನ್ ಸಾಕಷ್ಟು ಖ್ಯಾತಿ ಗಳಿಸಿದ್ದರೂ ಅವರ ಆರ್ಥಿಕ ಪರಿಸ್ಥಿತಿಯು ಸುಧಾರಿಸಿರಲಿಲ್ಲ ಮತ್ತು ಯಾರೂ ಅವರಿಗೆ ಸಹಾಯ ಮಾಡಿರಲಿಲ್ಲ.