Asianet Suvarna News Asianet Suvarna News

ಕಾನೂನು ಆಯೋಗ ಅಧ್ಯಕ್ಷರಾಗಿ ನ್ಯಾ ಅವಸ್ಥಿ ಅಧಿಕಾರ ಸ್ವೀಕಾರ

ಕರ್ನಾಟಕ ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ನ್ಯಾ. ರಿತುರಾಜ್‌ ಅವಸ್ಥಿ ಅವರು ಭಾರತೀಯ ಕಾನೂನು ಆಯೋಗದ ನೂತನ ಅಧ್ಯಕ್ಷರಾಗಿ ಬುಧವಾರ ಅಧಿಕಾರ ವಹಿಸಿಕೊಂಡರು.

Justice Awasthi assumes office as Chairman of Law Commission of India akb
Author
First Published Nov 10, 2022, 11:34 AM IST

ನವದೆಹಲಿ: ಕರ್ನಾಟಕ ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ನ್ಯಾ. ರಿತುರಾಜ್‌ ಅವಸ್ಥಿ ಅವರು ಭಾರತೀಯ ಕಾನೂನು ಆಯೋಗದ ನೂತನ ಅಧ್ಯಕ್ಷರಾಗಿ ಬುಧವಾರ ಅಧಿಕಾರ ವಹಿಸಿಕೊಂಡರು. ಈ ಆಯೋಗವು ಸಂಕೀರ್ಣ ಕಾನೂನು ಸಮಸ್ಯೆಗಳ ಕುರಿತು ಸರ್ಕಾರಕ್ಕೆ ಸಲಹೆ ನೀಡುತ್ತದೆ. ನ್ಯಾ ಕೆ.ಟಿ ಶಂಕರನ್‌ (KT Sankaran), ಪ್ರೊ ಆನಂದ್‌ ಪಾಲಿವಾಲ್‌(Anand Paliwal), ಪ್ರೊ ಡಿ.ಪಿ ವರ್ಮಾ(DP Verma), ಪ್ರೊ ರಾಕಾ ಆರ್ಯಾ, ಹಾಗೂ ಎಂ.ಕರುಣಾನಿಧಿ (Karunanidhi) ಆಯೋಗದ ಸದಸ್ಯರಾಗಿ ನೇಮಕವಾಗಿದ್ದಾರೆ. ಆಯೋಗವು ಬಹುಚರ್ಚಿತ ಏಕರೂಪ ನಾಗರಿಕ ಸಂಹಿತೆಯನ್ನು ಈ ಬಾರಿ ಕೈಗೆತ್ತಿಕೊಳ್ಳುವ ಸಾಧ್ಯತೆಗಳಿವೆ. ಸದ್ಯ 22ನೇ ಕಾನೂನು ಆಯೋಗ ಜಾರಿಯಲ್ಲಿದ್ದು ಇದನ್ನು 2021ರ ಫೆಬ್ರವರಿಯಲ್ಲಿ ರಚಿಸಲಾಗಿತ್ತು. ಈ ಆಯೋಗದ ಅಧ್ಯಕ್ಷರು ಹಾಗೂ ಸದಸ್ಯರ ಅಧಿಕಾರಾವಧಿ 3 ವರ್ಷಗಳು. ರಾಜ್ಯದಲ್ಲಿ ಹಿಜಾಬ್‌ ತೀರ್ಪು ನೀಡಿದ್ದ ಪೀಠದ ನೇತೃತ್ವವನ್ನು ರಿತುರಾಜ್‌ ವಹಿಸಿಕೊಂಡಿದ್ದರು.

ಭಾರತದಲ್ಲಿ 10 ಲಕ್ಷ ಜನರಿಗೆ 19 ಜಡ್ಜ್‌ಗಳು

ಪದೇ ಪದೇ ಚುನಾವಣೆಗಳು ಬೇಡ - ಕಾನೂನು ಆಯೋಗದ ಕರಡು ವರದಿ

 

Follow Us:
Download App:
  • android
  • ios