Asianet Suvarna News Asianet Suvarna News

ಭಾರತದಲ್ಲಿ 10 ಲಕ್ಷ ಜನರಿಗೆ 19 ಜಡ್ಜ್‌ಗಳು

10 ಲಕ್ಷ ಜನರಿಗೆ 19 ಜಡ್ಜ್‌ಗಳು: ಒಟ್ಟು 6000 ಜಡ್ಜ್‌ಗಳ ಕೊರತೆ | ಕೆಳ ಹಂತದ ನ್ಯಾಯಾಲಯಗಳಲ್ಲಿ 2.76 ಕೋಟಿ ಕೇಸು ವಿಚಾರಣೆ ಹಂತದಲ್ಲಿದ್ದು, ಅಲ್ಲೇ ಗರಿಷ್ಠ ಅಂದರೆ 5748 ಜಡ್ಜ್‌ ಹುದ್ದೆಗಳು ಭರ್ತಿಯಾಗಬೇಕಿದೆ | 

India has 19 judges per 10 lakh people says report
Author
Bengaluru, First Published Sep 25, 2018, 12:05 PM IST

ನವದೆಹಲಿ (ಸೆ. 25): ದೇಶದಲ್ಲಿ ಸರಾಸರಿ 10 ಲಕ್ಷ ಜನರಿಗೆ 19 ನ್ಯಾಯಾಧೀಶರು ಕಾರ್ಯನಿರ್ವಹಿಸುತ್ತಿದ್ದಾರೆ. ಒಟ್ಟಾರೆ ವಿವಿಧ ಹಂತದ ನ್ಯಾಯಾಲಯಗಳಲ್ಲಿ 6000 ಜಡ್ಜ್‌ಗಳ ಕೊರತೆ ಇದೆ ಎಂದು ಕೇಂದ್ರ ಕಾನೂನು ಸಚಿವಾಲಯದ ಅಂಕಿಅಂಶಗಳು ಹೇಳಿವೆ.

1987ರಲ್ಲಿ ಪ್ರತಿ 10 ಲಕ್ಷ ಜನರಿಗೆ 10 ಜಡ್ಜ್‌ಗಳಿದ್ದರು. ಅದನ್ನು ಕನಿಷ್ಠ 50ಕ್ಕೆ ಏರಿಸುವಂತೆ ಕಾನೂನು ಆಯೋಗ ಶಿಫಾರಸು ಮಾಡಿದ್ದರು ಕೂಡಾ ಇದುವರೆಗೆ ಅದು ಸೂಕ್ತ ಪ್ರಮಾಣದಲ್ಲಿ ಜಾರಿಗೆ ಬಂದಿಲ್ಲ ಎಂಬುದನ್ನು ಅಂಕಿಅಂಶಗಳು ಬಹಿರಂಗಪಡಿಸಿವೆ.

ಕೆಳಹಂತದ ನ್ಯಾಯಾಲಯಗಳಿಗೆ 22474 ಜಡ್ಜ್‌ ಹುದ್ದೆ ಮಂಜೂರಾಗಿದ್ದು, ಆ ಪೈಕಿ 16726 ಹುದ್ದೆ ಮಾತ್ರ ಭರ್ತಿಯಾಗಿವೆ. 24 ಹೈಕೋರ್ಟ್‌ಗಳಲ್ಲಿ 1079 ಜಡ್ಜ್‌ ಹುದ್ದೆ ಮಂಜೂರಾಗಿದ್ದು, 673 ಜಡ್ಜ್‌ಗಳು ಮಾತ್ರ ಕಾರ್ಯನಿರ್ವಹಿಸುತ್ತಿದ್ದಾರೆ. ಸುಪ್ರೀಂಕೋರ್ಟ್‌ಗೆ 31 ಹುದ್ದೆ ಮಂಜೂರಾಗಿದ್ದು, 6 ಹುದ್ದೆ ಖಾಲಿ ಇದೆ. ಹೀಗೆ ಒಟ್ಟಾರೆ 6160 ಹುದ್ದೆ ಖಾಲಿ ಇದೆ.

ಕೆಳ ಹಂತದ ನ್ಯಾಯಾಲಯಗಳಲ್ಲಿ 2.76 ಕೋಟಿ ಕೇಸು ವಿಚಾರಣೆ ಹಂತದಲ್ಲಿದ್ದು, ಅಲ್ಲೇ ಗರಿಷ್ಠ ಅಂದರೆ 5748 ಜಡ್ಜ್‌ ಹುದ್ದೆಗಳು ಭರ್ತಿಯಾಗಬೇಕಿದೆ.

Follow Us:
Download App:
  • android
  • ios