Asianet Suvarna News Asianet Suvarna News

ಹಳೆ ಕಾರು ಗುಜ​ರಿಗೆ ಹಾಕುವವರಿಗೆ ಸರ್ಕಾರದ ಭರ್ಜರಿ ಆಫರ್!

ಹೊಸ ವಾಹನ ಖರೀದಿ ನೀತಿಯಡಿ ಆಫರ್‌| ಹಳೆ ಕಾರು ಗುಜ​ರಿಗೆ ಹಾಕಿದರೆ ಹೊಸ ಕಾರಿಗೆ ಶೇ.5 ರಿಯಾಯಿತಿ| 

Junk your old car and get 5pc rebate from automakers on new purchase Gadkari pod
Author
Bangalore, First Published Mar 8, 2021, 7:56 AM IST

ನವ​ದೆ​ಹ​ಲಿ(ಮಾ.08): ಹಳೆಯ ಕಾರನ್ನು ಗುಜ​ರಿಗೆ ಹಾಕಿ ಹೊಸ ಕಾರು ಖರೀ​ದಿ​ಸುವ ಗ್ರಾಹ​ಕ​ರಿಗೆ ನೂತನ ವಾಹನ ಖರೀದಿ ನೀತಿಯಡಿ, ಶೇ.5ರಷ್ಟುರಿಯಾಯ್ತಿ ಸಿಗ​ಲಿದೆ ಎಂದು ಕೇಂದ್ರ ಸಚಿವ ನಿತಿನ್‌ ಗಡ್ಕರಿ ತಿಳಿ​ಸಿ​ದ್ದಾರೆ.

ಈ ಬಗ್ಗೆ ಭಾನು​ವಾರ ಪಿಟಿಐ ಸುದ್ದಿ ಸಂಸ್ಥೆ ಜೊತೆ ಮಾತ​ನಾ​ಡಿದ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ಗಡ್ಕರಿ ಅವರು, ‘2021-22ನೇ ಬಜೆ​ಟ್‌​ನಲ್ಲಿ ಘೋಷಿ​ಸ​ಲಾ​ದಂತೆ ಹಳೇ ವಾಹ​ನ​ಗ​ಳನ್ನು ಗುಜ​ರಿಗೆ ಹಾಕಿ ಹೊಸ ಕಾರು ಖರೀ​ದಿ​ಸುವ ಗ್ರಾಹ​ಕರಿಗೆ ವಾಹನ ಉತ್ಪಾ​ದಕ ಕಂಪ​ನಿ​ಗಳು ಶೇ.5ರಷ್ಟುರಿಯಾ​ಯಿತಿ ನೀಡ​ಲಿ​ವೆ’ ಎಂದು ಹೇಳಿ​ದರು.

20 ವರ್ಷದ ಹಳೆ​ಯ​ದಾದ ವೈಯ​ಕ್ತಿಕ ವಾಹ​ನ​ಗಳು ಮತ್ತು 15 ವರ್ಷ ಪೂರೈ​ಸಿದ ಸರ​ಕು-ಸಾಗ​ಣೆ ವಾಹ​ನ​ಗಳನ್ನು ಗುಜ​ರಿಗೆ ಹಾಕು​ವ​ವ​ರಿಗೆ ರಿಯಾಯ್ತಿ ನೀಡುವ ನೀತಿ​ಯೊಂದನ್ನು 2021-22ರ ಬಜೆ​ಟ್‌​ನಲ್ಲಿ ಘೋಷಿ​ಸ​ಲಾ​ಗಿದೆ. ಆದರೆ ಆರಂಭದಲ್ಲಿ ಈ ನೀತಿಯನ್ನು ಸರ್ಕಾರಿ ವಾಹನಗಳಿಗೆ ಜಾರಿಗೆ ತರಲು ಸರ್ಕಾರ ನಿರ್ಧರಿಸಿದೆ. ನಂತರದಲ್ಲಿ ಇದನ್ನು ಜನಸಾಮನ್ಯರಿಗೂ ವಿಸ್ತರಣೆ ಮಾಡಲಿದೆ.

Follow Us:
Download App:
  • android
  • ios