Asianet Suvarna News

ಶಿಮ್ಲಾದಲ್ಲಿ ಬಿಜೆಪಿ ಸಾರಥಿ, ಆಸ್ಪತ್ರೆಗೆ ತೆರಳಿ ಮಾಜಿ ಸಿಎಂ, ಕಾಂಗ್ರೆಸ್‌ ನಾಯಕನ ಭೇಟಿ!

* ಹಿಮಾಚಲ ಪ್ರವಾಸದಲ್ಲಿದ್ದಾರೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ

* ಮಾಜಿ ಸಿಎಂ ವೀರಭದ್ರ ಸಿಂಗ್‌ ಭೇಟಿಯಾದ ಜೆ. ಪಿ. ನಡ್ಡಾ

* ವಿಭಿನ್ನ ಕಾಯಿಲೆಯಿಂದ ಬಳಲುತ್ತಿರುವ ಮಾಜಿ ಸಿಎಂ

JP Nadda Visits Ailing Ex CM Virbhadra In Shimla pod
Author
Bangalore, First Published Jul 5, 2021, 1:49 PM IST
  • Facebook
  • Twitter
  • Whatsapp

ಶಿಮ್ಲಾ(ಜು.05): ಭಾರತೀಯ ಜನತಾ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ. ಪಿ. ನಡ್ಡಾ ಎರಡು ದಿನಗಳ ಹಿಮಾಚಲ ಪ್ರವಾಸದಲ್ಲಿದ್ದಾರೆ. ಹೀಗಿರುವಾಗ ಅವರು ಸೋಮವಾರ ಶಿಮ್ಲಾದ ಐಜಿಎಂಸಿಯಲ್ಲಿ ದಾಖಲಾಗಿರುವ ಮಾಜಿ ಸಿಎಂ ವೀರಭದ್ರ ಸಿಂಗ್‌ರನ್ನು ಭೇಟಿಯಾಗಿ, ಆರೋಗ್ಯ ವಿಚಾರಿಸಿದ್ದಾರೆ. ಜೊತೆಗೆ ವೈದ್ಯರ ಬಳಿಯೂ ಮಾಹಿತಿ ಪಡೆದಿದ್ದಾರೆ.

ವಿಭಿನ್ನ ಕಾಯಿಲೆಯಿಂದ ಬಳಲುತ್ತಿರುವ ಮಾಜಿ ಸಿಎಂ

ಮಾಜಿ ಸಿಎಂ ವೀರಭದ್ರ ಸಿಂಗ್‌ರಿಗೆ ಕೊರೋನಾ ಸೋಂಕು ತಗುಲಿದ ಬಳಿಕ ಆರೋಗ್ಯ ಮತ್ತಷ್ಟು ಹದಗೆಟ್ಟಿದೆ. ಹೀಗಾಗಿ ಅವರು ಐಜಿಎಂಸಿಗೆ ದಾಖಲಾಗಿದ್ದಾರೆ. ಸದ್ಯ ಅವರ ರಿಪೋರ್ಟ್‌ ನೆಗೆಟಿವ್ ಬಂದಿದ್ದರೂ ಅವರು ಇನ್ನಿತರ ಸಮಸ್ಯೆಗಳಿಂದ ಬಳಲುತ್ತಿದ್ದಾರೆ. 

ಬಲಶಾಲಿ ನಾಯಕರೆಂದ ನಡ್ಡಾ

ಮಾಜಿ ಸಿಎಂ ಭೇಟಿಯಾದ ಬಳಿಕ ಮಾತನಾಡಿದ ಜೆ. ಪಿ. ನಡ್ಡಾ, ಸಿಂಗ್ ಓರ್ವ ಓಲ್ಡ್ ನಾಯಕ. ಅವರು ಅತೀ ಶೀಘ್ರವಾಗಿ ಗುಣಮುಖರಾಗಲಿದ್ದಾರೆ ಎಂದಿದ್ದಾರೆ.

ಮಾಜಿ ಸಿಎಂ ಭೇಟಿಯಾಗಲು ಕಾರ್ಯಕ್ರಮವನ್ನೇ ಬಲಾಯಿಸಿದ ನಡ್ಡಾ

ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ. ಪಿ. ನಡ್ಡಾ ಜೊತೆ ಆಸ್ಪತ್ರೆಗೆ ಭೇಟಿ ನೀಡುವ ಸಂದರ್ಭದಲ್ಲಿ ಹಾಲಿ ಸಿಎಂ ಜಯರಾಮ್ ಠಾಕೂರ್ ಕೂಡಾ ಜೊತೆಗಿದ್ದರು. ಆಸ್ಪತ್ರೆಗೆ ಭೇಟಿ ನೀಡಿದ ಬಳಿಕ ಸಂಘಟನೆ ಜೊತೆಗಿನ ಭೇಟಿಯಾಗಲು ಕುಲ್ಲೂಗೆ ತೆರಳಿದ್ದಾರೆ. ಆದರೆ ಈ ಕಾರ್ಯಕ್ರಮ ಭಾನುವಾರ ನಿಗಧಿಯಾಗಿತ್ತು. ಆದರೆ ತಮ್ಮ ವೇಳಾಪಟ್ಟಿಯಲ್ಲಿ ಬದಲಾಯಿಸಿ ಅವರು ಮಾಜಿ ಸಿಎಂ ಭೇಟಿಯಾಗಿದ್ದಾರೆ. 

Follow Us:
Download App:
  • android
  • ios