Asianet Suvarna News Asianet Suvarna News

ರಾಹುಲ್ ಗಾಂಧಿ ಹಳೇ ವಿಡಿಯೋ ಶೇರ್ ಮಾಡಿದ ಜೆಪಿ ನಡ್ಡಾ; ಇಕ್ಕಟ್ಟಿಗೆ ಸಿಲುಕಿದ ಕಾಂಗ್ರೆಸ್!

ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಟ್ವಿಟರ್ ಮೂಲಕ ರಾಹುಲ್ ಗಾಂಧಿ ಹಳೇ ವಿಡಿಯೋವನ್ನು ಶೇರ್ ಮಾಡಿದ್ದಾರೆ. ನಡ್ಡಾ ಟ್ವೀಟ್ ಮಾಡಿದ ಬೆನ್ನಲ್ಲೇ ವಿಡಿಯೋ ವೈರಲ್ ಆಗಿದೆ. ಇಷ್ಟೇ ಅಲ್ಲ ಕಾಂಗ್ರೆಸ್ ಪಕ್ಷ ಇಕ್ಕಟ್ಟಿಗೆ ಸಿಲುಕಿದೆ.

JP nadda Share old rahul gandhi video and hits back congress over criticism of farm laws ckm
Author
Bengaluru, First Published Dec 27, 2020, 7:09 PM IST

ನವದೆಹಲಿ(ಡಿ.27): ಕೇಂದ್ರ ಕೃಷಿ ಕಾನೂನು ವಿರುದ್ಧ ರೈತರು ನಡೆಸುತ್ತಿರುವ ಪ್ರತಿಭಟನೆಗೆ ಕಾಂಗ್ರೆಸ್ ಬೆಂಬಲ ನೀಡಿದೆ. ಇಷ್ಟೇ ಅಲ್ಲ ಕೇಂದ್ರದ ಎಪಿಎಂಪಿಸಿ ಕಾಯ್ದೆ ತಿದ್ದುಪಡಿಯನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದೆ. ಇದೀಗ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ, ರಾಹುಲ್ ಗಾಂಧಿ ಹಳೇ ವಿಡಿಯೋ ಶೇರ್ ಮಾಡಿದ್ದಾರೆ. ರಾಹುಲ್ ಗಾಂಧಿ ಮಾತು ಇದೀಗ ಕಾಂಗ್ರೆಸ್ ಪಕ್ಷಕ್ಕೆ ಇರಿಸುಮುರಿಸು ತಂದಿದೆ.

ರೈತರ ಪ್ರತಿಭಟನೆ, ಕಾಂಗ್ರೆಸ್ ಅಧ್ಯಕ್ಷ ಚುನಾವಣೆ ನಡುವೆ ಇಟಲಿಗೆ ಹಾರಿದ ರಾಹುಲ್ ಗಾಂಧಿ!..

ರೈತರು ತಮ್ಮ ಉತ್ಪನ್ನವನ್ನು ಎಪಿಎಂಸಿ, ಮಂಡಿ ಮಾತ್ರವಲ್ಲ, ತಮಗೆ ಎಲ್ಲಿ ಬೇಕಾದರೂ ಮಾರಾಟ ಮಾಡುವ ಅವಕಾಶವನ್ನು ಕೇಂದ್ರ ಸರ್ಕಾರ ನೂತನ ಕೃಷಿ ಕಾನೂನು ಮೂಲಕ ನೀಡಿದೆ. ಇದಕ್ಕೆ ಸದ್ಯ ಪ್ರತಿಭಟನೆ ನಡೆಸುತ್ತಿರುವ ರೈತರು ಸೇರಿದತೆ ಕಾಂಗ್ರೆಸ್ ವಿರೋಧ ವ್ಯಕ್ತಪಡಿಸಿದೆ. ಆದರೆ ಜೆಪಿ ನಡ್ಡ ಹಂಚಿಕೊಂಡಿರುವ ಹಳೆ ವಿಡಿಯೋದಲ್ಲಿ ರಾಹುಲ್, ರೈತರು ತಮ್ಮ ಉತ್ಪನ್ನವನ್ನು ಎಲ್ಲಿ ಬೇಕಾದರೂ ಮಾರಾಟ ಮಾಡುವ ತಿದ್ದುಪಡಿ ಅಗತ್ಯವಿದೆ ಎಂದು ಹೇಳಿದ್ದಾರೆ. 

ಕೆಲವರಿಂದ ನನಗೆ ಪ್ರಜಾಪ್ರಭುತ್ವದ ಪಾಠ ಹೇಳುವ ಪ್ರಯತ್ನ; ರಾಹುಲ್ ಗಾಂಧಿ ತಿವಿದ ಮೋದಿ

ಕಾಂಗ್ರೆಸ್ ದ್ವಂದ್ವ ನಿಲುವಿನ ಮಾಹಿತಿ ಇಲ್ಲಿದೆ. ಈ ಹಿಂದೆ ಎಪಿಎಂಪಿ ಕಾಯ್ದೆ ತಿದ್ದುಪಡಿಯನ್ನು ಬೆಂಬಲಿಸಿದ್ದೀರಿ, ಇದೀಗ ವಿರೋಧಿಸುತ್ತಿದ್ದೀರಿ ಎಂದು ಜೆಪಿ ನಡ್ಡಾ ಬರೆದುಕೊಂಡಿದ್ದಾರೆ. 2015ರಲ್ಲಿ ರಾಹುಲ್ ಗಾಂಧಿ ಲೋಕಸಭೆಯ ವಿಡಿಯೋ ಇದೀಗ ವೈರಲ್ ಆಗಿದೆ.

 

ಈ ವಿಡಿಯೋದಲ್ಲಿ ರಾಹುಲ್ ಗಾಂಧಿ, ಕೆಲ ವರ್ಷಗಳ ಹಿಂದೆ ನಾನು ಉತ್ತರ ಪ್ರದೇಶಕ್ಕೆ ತೆರಳಿದ್ದೆ. ಈ ವೇಳೆ ರೈತನೋರ್ವ ನನಗೆ ಪ್ರಶ್ನೆಯೊಂದನ್ನು ಕೇಳಿದ್ದರು. ನಾವು ಆಲೂಗಡ್ಡೆಯನ್ನು ಕೆಜಿಗೆ ಕೇವಲ 2 ರೂಪಾಯಿಗೆ ಮಾರಾಟ ಮಾಡುತ್ತೇವೆ. ಆದರೆ ನಮ್ಮ ಮಕ್ಕಳು ಆಲೂಗಡ್ಡೆ ಚಿಪ್ಸ್ ಖರೀದಿಸುತ್ತಾರೆ. ಒಂದು ಸಣ್ಣ ಪ್ಯಾಕ್‌ಗೆ 10 ರೂಪಾಯಿ ನೀಡಬೇಕು. ಇದು ಯಾವ ರೀತಿಯ ಮ್ಯಾಜಿಕ್ ಎಂದು ರೈತ ಪ್ರಶ್ನಿಸಿದ್ದ. ಇದಕ್ಕೆ ನಿಮಗೆ ಏನು ಕಾರಣ ಇರಬಹುದು ಎಂದು ನಾನು ಕೇಳಿದ್ದೆ ಎಂದು ಕೇಳಿದೆ.

ಸೋನಿಯಾ ಸಭೆ ದಿನವೇ ಕಾಂಗ್ರೆಸ್‌ಗೆ ಶಾಕ್; ಪಕ್ಷದ ಪ್ರಮುಖ ನಾಯಕಿ ರಾಜೀನಾಮೆ!

ಫ್ಯಾಕ್ಟರಿಗಳು ತುಂಬಾ ದೂರವಿರುತ್ತದೆ. ನಾವು ಮಂಡಿಯಲ್ಲಿ ಕಡಿಮೆ ಬೆಲೆಗೆ ಮಾರಾಟ ಮಾಡುತ್ತೇವೆ. ನಡುವಿನ ದಲ್ಲಾಳಿಗಳು, ಮಧ್ಯವರ್ತಿಗಳು ಹಣ ಪಡೆದು ಫ್ಯಾಕ್ಟರಿಗೆ ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಾರೆ. ಇದರ ಬದಲು ನಾವೇ ನೇರವಾಗಿ ಫ್ಯಾಕ್ಟರಿಗೆ ಆಲೂಗಡ್ಡೆ ಮಾರಾಟ ಮಾಡುವಂತಿದ್ದರೆ, ನೇರವಾಗಿ ನಮಗೆ ಹಣ ಸಿಗಲಿದೆ. ಇದರಿಂದ ನಮಗೆ ಹೆಚ್ಚಿನ ಬೆಲೆ ಸಿಗಲಿದೆ ಎಂದು ರೈತ ನನ್ನಲ್ಲಿ ಹೇಳಿದ ಎಂದು ರಾಹುಲ್ ಗಾಂಧಿ ಲೋಕಸಭೆಯಲ್ಲಿ ಹೇಳಿದ್ದರು.

ಇದೀಗ ಕೇಂದ್ರ ತಂದಿರುವ ಒಂದು ಕೃಷಿ ಕಾನೂನು ಇದನ್ನೇ ಹೇಳುತ್ತದೆ. ರೈತರು ತಮ್ಮ ಬೆಳಗಳನ್ನು ತನಗೆ ಬೇಕಾದ ಕಡೆ, ಎಲ್ಲಿ ಹೆಚ್ಚಿನ ಬೆಲೆ ಸಿಗುತ್ತದ ಅಲ್ಲಿ ಮಮಾರಾಟ ಮಾಡಲು ಅವಕಾಶ ನೀಡಲಾಗಿದೆ. ಅಂದು ಬೆಂಬಲಿ ಇದೀಗ, ಉಲ್ಟಾ ಹೊಡೆಯುತ್ತಿದ್ದೀರಿ ಇದು ಕಾಂಗ್ರೆಸ್ ಎಂದು ಜೆಪಿ ನಡ್ಡಾ ಹೇಳಿದ್ದಾರೆ.

ಇದೇನು ಮ್ಯಾಜಿಕ್ ರಾಹುಲ್ ಗಾಂಧಿ, ರೈತರ ನಿಜವಾದ ಕಾಳಜಿ ನಿಮಗಿಲ್ಲ. ಕೇವಲ ರಾಜಕಾರಣಕ್ಕಾಗಿ ವಿರೋಧ ಮಾಡುತ್ತಿದ್ದೀರಿ ಎಂದು ನಡ್ಡಾ ಹಳೇ ವಿಡಿಯೋ ಮೂಲಕ ರಾಹುಲ್ ಹಾಗೂ ಕಾಂಗ್ರೆಸ್ ಕುಟುಕಿದ್ದಾರೆ.

Follow Us:
Download App:
  • android
  • ios