ರೈತರ ಪ್ರತಿಭಟನೆ, ಕಾಂಗ್ರೆಸ್ ಅಧ್ಯಕ್ಷ ಚುನಾವಣೆ ನಡುವೆ ಇಟಲಿಗೆ ಹಾರಿದ ರಾಹುಲ್ ಗಾಂಧಿ!

First Published Dec 27, 2020, 5:08 PM IST

ರೈತರ ಪ್ರತಿಭಟನೆಗೆ ಬೆಂಬಲ ನೀಡಿರುವ ಕಾಂಗ್ರೆಸ್ ಇದೀಗ ಅರ್ಧಕ್ಕೆ ಹಿಂದೆ ಸರಿಯುವಂತೆ ಕಾಣುತ್ತಿದೆ. ಕಾರಣ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ದಿಝೀರ್ ಇಟಲಿಗೆ ಹಾರಿದ್ದಾರೆ. ಈ ಕುರಿತು ಹೆಚ್ಚಿನ ವಿವರ ಇಲ್ಲಿದೆ.

ಕೇಂದ್ರದ ಕೃಷಿ ಕಾನೂನು ವಿರುದ್ಧ ಹೋರಾಟ ನಡೆಸುತ್ತಿರುವ ರೈತರಿಗೆ ಬೆಂಬಲ ನೀಡಿದ್ದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಇದೀಗ ಯಾರಿಗೂ ಹೇಳದೆ ಇಟಲಿಗೆ ಹಾರಿದ್ದಾರೆ.

ಒಂದೆಡೆ ರೈತರ ಪ್ರತಿಭಟನೆ ಮತ್ತೊಂದೆಡೆ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡುವೆ ರಾಹುಲ್ ಗಾಂಧಿ, ಕತಾರ್ ಏರ್‌ಲೈನ್ ಮೂಲಕ ಇಟಲಿಯ ಮಿಲನ್‌ಗೆ ತೆರಳಿದ್ದಾರೆ ಎಂದು ಮೂಲಗಳು ವರದಿ ಮಾಡಿದೆ.

ರಾಹುಲ್ ಗಾಂಧಿ ಸೇರಿದಂತೆ ಕಾಂಗ್ರೆಸ್ ನಿಯೋಗ ಇತ್ತಿಚೆಗೆ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಭೇಟಿಯಾಗಿ ಕೇಂದ್ರದ 3 ಕೃಷಿ ಕಾನೂನುನ್ನು ರದ್ದು ಮಾಡಬೇಕು ಎಂದು ಮನವಿ ಮಾಡಿದ್ದರು.

ಇದೀಗ ರಾಹುಲ್ ಗಾಂಧಿ ದಿಢೀರ್ ಇಟಲಿ ಭೇಟಿಯಿಂದ ರೈತರ ಪ್ರತಿಭಟನಾಕಾರರು ಮಾತ್ರವಲ್ಲ, ಸ್ವತಃ ಕಾಂಗ್ರೆಸ್ ಪಕ್ಷವೇ ಇಕ್ಕಟ್ಟಿಗೆ ಸಿಲುಕಿದೆ.

ಕಾಂಗ್ರೆಸ್ ಪಕ್ಷ ಅಧ್ಯಕ್ಷೀಯ ಚುನಾವಣೆಗೆ ಸಜ್ಜಾಗುತ್ತಿದೆ. ಪಕ್ಷ ದುರ್ಬಲಗೊಳ್ಳುತ್ತಿದೆ. ನಾಯಕರ ಬದಲಾವಣೆ, ಹಿರಿಯರ ಬಂಡಾಯದ ಬೆನ್ನಲ್ಲೇ ರಾಹುಲ್ ಗಾಂಧಿ ಅನುಪಸ್ಥಿತಿ ಕಾಂಗ್ರೆಸ್‌ಗೆ ತೀವ್ರ ಹಿನ್ನಡೆ ತರಲಿದೆ.

ಯುಪಿಎ ನೇತೃತ್ವ ವಹಿಸಲು ರಾಹುಲ್ ಗಾಂಧಿ ಹಿಂದೇಟು ಹಾಕಿದ ಕಾರಣ, ಈ ಸ್ಥಾನಕ್ಕೆ ಎನ್‌ಸಿಪಿ ನಾಯಕ ಶರದ್ ಪವಾರ್ ಹೆಸರು ಕೇಳಿಬರುತ್ತಿದೆ. ಈದರೆ ಎನ್‌ಸಿಪಿ ನಿರಾಕರಿಸಿದರೂ, ಶಿವಸೇನೆ ಶರದ್ ಪವಾರ್‌ಗೆ ಬೆಂಬಲ ಸೂಚಿಸಿದೆ.

ರಾಹುಲ್ ಗಾಂಧಿ ನಿರ್ಣಾಯಕ ಘಟ್ಟದಲ್ಲಿ ವಿದೇಶಕ್ಕೆ ಹಾರಿದ ಹಲವು ಊದಾಹರಣೆಗಳಿವೆ. ಕಾಂಗ್ರೆಸ್‌ನಲ್ಲಿ ಎರಡು ಬಣಗಳ ನಡುವಿನ ಗುದ್ದಾಟ ಆರಂಭಗೊಳ್ಳುತ್ತಿದ್ದಂತೆ 2019ರ ನವೆಂಬರ್ ತಿಂಗಳಲ್ಲಿ ರಾಹುಲ್ ನೇರವಾಗಿ ಬ್ಯಾಂಕ್‌ಕಾಕ್‌ಗೆ ತೆರಳಿದ್ದರು.

ಮಹಾರಾಷ್ಟ್ರ-ಹರಿಯಾಣ ಚುನಾವಣೆಗೂ ಮುನ್ನ ರಾಹುಲ್ ಗಾಂಧಿಯ ಬ್ಯಾಂಕ್‌ಕಾಕ್ ಟ್ರಿಪ್‌ನಿಂದ ಕಾಂಗ್ರೆಸ್ ತೀವ್ರ ಹಿನ್ನಡೆಯಾಗಿತ್ತು. ಹರ್ಯಾಣ ಕಾಂಗ್ರೆಸ್ ಮುಖ್ಯಸ್ಥ ಅಶೋಕ್ ತನ್ವಾರ್ ಪಕ್ಷಕ್ಕೆ ರಾಜೀನಾಮೆ ನೀಡಿ ಹೊರಬಂದಿದ್ದರು.

ಇದೀಗ ರಾಹುಲ್ ಗಾಂಧಿ ಇಟಲಿಗೆ ತೆರಳಿದ್ದಾರೆ. ಇತ್ತ ರೈತರು ಪ್ರತಿಭಟನೆ ಮೂಲಕ ಪಟ್ಟು ಬಿಗಿಗೊಳಿಸುತ್ತಿದ್ದಾರೆ. ಇತ್ತ ಪಕ್ಷ ಸಂಘಟನ ಹಾಗೂ ಅಧ್ಯಕ್ಷ ಸ್ಥಾನಕ್ಕೆ ಪೈಪೋಟಿ ನಡುವೆ ರಾಹುಲ್ ಅನುಪಸ್ಥಿತಿ ಇದೀಗ ಅನುಮಾನಕ್ಕೆ ಕಾರಣವಾಗಿದೆ.

Today's Poll

ಎಷ್ಟು ಜನರೊಂದಿಗೆ ಆನ್‌ಲೈನ್ ಗೇಮ್ ಆಡಲು ಇಚ್ಛಿಸುತ್ತೀರಿ?