ಬಾಂಗ್ಲಾ ಹಿಂದೂ ಬಗ್ಗೆ ರಾಹುಲ್ ಗಾಂಧಿಯನ್ನ ಪ್ರಶ್ನಿಸಿದ್ದಕ್ಕೆ ಕಾಂಗ್ರೆಸ್ ನಾಯಕರಿಂದ ಪತ್ರಕರ್ತನ ಮೇಲೆ ಹಲ್ಲೆ!
ಬಾಂಗ್ಲಾ ಹಿಂದೂಗಳ ಮೇಲಿನ ದೌರ್ಜನ್ಯದ ಕುರಿತು ರಾಹುಲ್ ಗಾಂಧಿ ನಡೆ ಬಗ್ಗೆ ಪ್ರಶ್ನೆ ಕೇಳಿದ್ದಕ್ಕೆ ಕಾಂಗ್ರೆಸ್ ನಾಯಕರು ಟೀವಿ ವರದಿಗಾರನ ಮೇಲೆ ಹಲ್ಲೆ ನಡೆಸಿದ ಘಟನೆ ನಡೆದಿದೆ.
ನವದೆಹಲಿ (ಸೆ.14): ಬಾಂಗ್ಲಾ ಹಿಂದೂಗಳ ಮೇಲಿನ ದೌರ್ಜನ್ಯದ ಕುರಿತು ರಾಹುಲ್ ಗಾಂಧಿ ನಡೆ ಬಗ್ಗೆ ಪ್ರಶ್ನೆ ಕೇಳಿದ್ದಕ್ಕೆ ಕಾಂಗ್ರೆಸ್ ನಾಯಕರು ಟೀವಿ ವರದಿಗಾರನ ಮೇಲೆ ಹಲ್ಲೆ ನಡೆಸಿದ ಘಟನೆ ನಡೆದಿದೆ.
ರಾಹುಲ್ ಅಮೆರಿಕದ ಟೆಕ್ಸಾಸ್‌ಗೆ ಆಗಮನಕ್ಕೂ ಮುನ್ನ ಕಾಂಗ್ರೆಸ್‌ನ ಸಾಗರೋತ್ತರ ಘಟಕದ ಮುಖ್ಯಸ್ಥ ಸ್ಯಾಮ್ ಪಿತ್ರೋಡಾ ಜೊತೆ ಇಂಡಿಯಾ ಟುಡೇ ವರದಿಗಾರ ರೋಹಿತ್ ಶರ್ಮಾ ಸಂದರ್ಶನ ನಡೆಸಿದ್ದರು. ಸಂದರ್ಶನದ ಕಡೆಯ ಭಾಗದಲ್ಲಿ ರೋಹಿತ್, ಅಮೆರಿಕ ಸಂಸದರ ಭೇಟಿ ವೇಳೆ ರಾಹುಲ್ ಬಾಂಗ್ಲಾ ಹಿಂದೂಗಳ ಮೇಲಿನ ದಾಳಿಯ ವಿಷಯ ಪ್ರಸ್ತಾಪಿಸುತ್ತಾರೆಯೇ ಎಂದು ಪ್ರಶ್ನಿಸಿದ್ದರು. ಅದಕ್ಕೆ ಪಿತ್ರೋಡಾ ಉತ್ತರಿಸುವ ಮುನ್ನ ಅಲ್ಲಿದ್ದ 30 ಕಾಂಗ್ರೆಸ್ ನಾಯಕರು ಇದು ವಿವಾದಿತ ವಿಷಯ ಎಂದು ಕೂಗಾಡುತ್ತಾ ರೋಹಿತ್ ಮೈಕ್, ಮೊಬೈಲ್ ಕಿತ್ತೆಸೆದು ಹಲ್ಲೆ ನಡೆಸಿದ್ದಾರೆ. 'ಬಂದ್ ಕರೋ, ಬಂದ್ ಕರೋ (ನಿಲ್ಲಿಸಿ) ಅದು, ನಿಲ್ಲಿಸು)." ಎಂದು ಹಲ್ಲೆ ನಡೆಸಿರುವ ಕಾಂಗ್ರೆಸ್ ನಾಯಕರು. ಈ ನಡುವೆ ರಾಹುಲ್ ಗಾಂಧೀ ಸ್ವಾಗತ ಮಾಡುವುದರ ಜೊತೆಗೆ ಕಾರ್ಯಕರ್ತರಿಂದ ತಪ್ಪಿಸಿಕೊಳ್ಳಲು ವರದಿಗಾರನಿಗೆ ಅವಕಾಶ ಮಾಡಿಕೊಟ್ಟಿದ್ದಾರೆ. ಘಟನೆ ಬಳಿಕ ಸಂದರ್ಶನದ ವೇಳೆ ಹಲ್ಲೆ ನಡೆದ ದೃಶ್ಯಗಳು ಹೊರಗೆ ಬರದಂತೆ ಅಳಿಸಿ ಹಾಕಿದ್ದಾರೆ.
ರಾಜ್ಯದಲ್ಲಿ ತಾಲಿಬಾನ್ ಸರ್ಕಾರವಿದೆ: ವಿಪಕ್ಷ ನಾಯಕ ಆರ್ ಆಶೋಕ್ ವಾಗ್ದಾಳಿ
ವರದಿಗಾರ ಹೇಳಿದ್ದೇನು?
ನಾನು ಸ್ಯಾಮ್ ಪಿಟ್ರೋಡ್ ಜೊತೆ ರಾಹುಲ್ ಗಾಂಧಿಯೊಂದಿಗೆ ಮಾತುಕತೆ ನಡೆಸಿದ ಬಾಂಗ್ಲಾ ಹಿಂದೂಗಳ ಮೇಲಿನ ದಾಳಿ ಬಗ್ಗೆ ಪ್ರಸ್ತಾಪಿಸಿದೆ ಅಷ್ಟರಲ್ಲೇ ರಾಹುಲ್ ಬೆಂಬಲಿಗರಲ್ಲಿ ಒಬ್ಬ ವ್ಯಕ್ತಿ ನನ್ನ ಮೈಕ್ ಕಿತ್ತುಕೊಳ್ಳಲು ಯತ್ನಿಸಿದ. ಅದನ್ನು ನಾನು ವಿರೋಧಿಸಿದೆ ಇನ್ನೊಬ್ಬ ನನ್ನ ಮೊಬೈಲ್ ಬಲವಂತವಾಗಿ ಕಿತ್ತುಕೊಂಡು ರೆಕಾರ್ಡ್ ನಿಲ್ಲಿಸಿದರು. ಈ ವೇಳೆ ಬೆಂಬಲಿಗರು ನೂಕಾಟ ಹಲ್ಲೆ ಮಾಡಲು ಮುಂದಾದರು. ಸ್ಯಾಮ್ ಪಿತ್ರೋಡಾ ಶಾಂತವಾಗಿರುವಂತೆ ಒತ್ತಾಯಿಸಿದರೂ ರಾಹುಲ್ ಬೆಂಬಲಿಗರ ಸುಮ್ಮನಗಾಲಿಲ್ಲ. ಈ ವೇಳೆ ಸ್ಯಾಮ್ ಕೂಡ ನನ್ನಂತೆ ನಡುಗಿಹೋದದ್ದು ಕಾಣಿಸಿತು.
ಯೋಗಿ ಆದಿತ್ಯನಾಥ್-ರಾಹುಲ್ ಗಾಂಧಿ ಕುಂಡಲಿ ಹೇಳುತ್ತಿದೆ ಭವಿಷ್ಯ, 2029ರಲ್ಲಿ ಯಾರಾಗ್ತಾರೆ ಪ್ರಧಾನಿ?
ಕನಿಷ್ಟ 15 ಜನರು ಕೊಠಡಿಯಲ್ಲಿ ಕೂರಿಸಿ ಸಂದರ್ಶನದ ಅಂತಿಮ ಪ್ರಶ್ನೆಯನ್ನು ಹಲ್ಲೆ ದೃಶ್ಯವನ್ನು ಬಲವಂತವಾಗಿ ತೆಗೆದುಹಾಕಿದರು. ನನ್ನ ಮೊಬೈಲ್ ಅನುಮತಿಯಿಲ್ಲದೆ ಅನ್‌ಲಾಕ್ ಮಾಡಿ ಸಂದರ್ಶನದ ವಿಡಿಯೋ ದೃಶ್ಯ ಅಳಿಸಲು ಮುಂದಾದರು. ಸಂದರ್ಶನದ ಯಾವುದೇ ಕುರುಹು ಉಳಿದಿಲ್ಲ ಎಂದು ಖಚಿತಪಡಿಕೊಳ್ಳಲು ಐಕ್ಲೌಡ್ ಸಹ ಪರಿಶೀಲನೆ ನಡೆಸಿದರು. ರೆಕಾರ್ಡ್ ಸಮಯದಲ್ಲಿ ನನ್ನ ಮೊಬೈಲ್ ಏರ್‌ಪ್ಲೇನ್ ಮೋಡ್‌ನಲ್ಲಿದೆ ವಿಡಿಯೋ ಸಿಂಕ್ ಆಗಲು ಸಾಧ್ಯವಾಗಲಿಲ್ಲ ಎಂದು ಕಾಂಗ್ರೆಸ್ ಬೆಂಬಲಿಗರ ಕೈಯಲ್ಲಿ ಸಿಲುಕಿದ ಮೂವತ್ತು ನಿಮಿಷಗಳ ಯಾತನಾಮಯ ಘಟನೆಯಲ್ಲಿ ಬಿಚ್ಚಿಟ್ಟರು.