ದೀಪಾವಳಿ ಹಬ್ಬಕ್ಕೆ ರಿಲಯನ್ಸ್ ಜಿಯೋ ಭರ್ಜರಿ ಕೊಡುಗೆ ನೀಡಿದೆ. 24 ಗಂಟೆ ಅನ್‌ಲಿಮಿಟೆಡ್ ಇಂಟರ್ನೆಟ್ ಕೊಡುಗೆ ಘೋಷಣೆ ಮಾಡಿದೆ. ಇದು ಕೇವಲ 15 ರೂಪಾಯಿಗೆ. ಹೈ ಸ್ಪೀಡ್ ಡೇಟಾ ಜೊತೆಗೆ ಇತರ ಕೆಲ ಆಫರ್ ನೀಡಲಾಗಿದೆ.

ಬೆಂಗಳೂರು (ನ.05) ರಿಲಯನ್ಸ್ ಜಿಯೋ ದೀಪಾವಳಿ ಹಬ್ಬದ ಸಂಭ್ರಮದಲ್ಲಿ ಭರ್ಜರಿ ಆಫರ್ ನೀಡಿದೆ. ಹೈಸ್ಪೀಡ್ ಡೇಟಾ ಜೊತೆ ಲೈವ್ ಸ್ಟ್ರೀಮಿಂಗ್, ಸಿನಿಮಾ ಸೇರಿದಂತೆ ಫುಲ್ ಪ್ಯಾಕ್ ಮನರಂಜನಾ ಕೊಡುಗೆಗಳನ್ನು ಅತೀ ಕಡಿಮೆ ಬೆಲೆಯಲ್ಲಿ ನೀಡುತ್ತಿದೆ. ಜಿಯೋ ತನ್ನು 5ಜಿ ಸ್ಮಾರ್ಟ್‌ಫೋನ್ ಬಳಕೆದಾರರಿಗೆ ಕಡಿಮೆ ಬೆಲೆಯಲ್ಲಿ ಈ ಬಿಗ್ ಆಫರ್‌ ಪರಿಚಯಿಸಿದೆ. ಕೇವಲ 15 ರೂಪಾಯಿಗೆ 24 ಗಂಟೆಗಳ ಕಾಲ ಅನ್ ಲಿಮಿಟೆಡ್ 5G ಹೈ-ಸ್ಪೀಡ್ ಡೇಟಾ ನೀಡುವ ನೂತನ ಡೇಟಾ ಪ್ಯಾಕ್ ಬಿಡುಗಡೆ ಮಾಡಿದೆ. ಈ ಮೂಲಕ ಗ್ರಾಹಕರು ಡೇಟಾ ಖಾಲಿಯಾಗುವ ಯಾವುದೇ ಆತಂಕವಿಲ್ಲದೆ ಇಡೀ ದಿನ ಹೈ-ಸ್ಪೀಡ್ ಇಂಟರ್ನೆಟ್ ಸೇವೆಯನ್ನು ಆನಂದಿಸಬಹುದಾಗಿದೆ.

ಸಿನಿಮಾ, ಲವ್ ಸ್ಟ್ರೀಮ್ ಸೇರಿ ಹಲವು ಉಪಯೋಗ

ವಿಶೇಷವಾಗಿ ಹೆಚ್ಚಿನ ಡೇಟಾ ಅಗತ್ಯವಿರುವ ಬಳಕೆದಾರರನ್ನು ಗಮನದಲ್ಲಿಟ್ಟುಕೊಂಡು ಜಿಯೋ ಈ ಆಕರ್ಷಕ ಪ್ಯಾಕ್ ಅನ್ನು ಮಾರುಕಟ್ಟೆಗೆ ತಂದಿದೆ. ನವೆಂಬರ್ 4, 2026 ರಿಂದ ಜಾರಿಗೆ ಬಂದಿರುವ ಈ ಪ್ಲಾನ್ ಮೂಲಕ ಗ್ರಾಹಕರು 4K ಗುಣಮಟ್ಟದಲ್ಲಿ ಸಿನಿಮಾಗಳು ಹಾಗೂ ವೀಡಿಯೊಗಳನ್ನು ವೀಕ್ಷಿಸಬಹುದು. ಜೊತೆಗೆ ಲೈವ್ ಸ್ಪೋರ್ಟ್ಸ್ ಸ್ಟ್ರೀಮಿಂಗ್, ಹೆವಿ ಆನ್‌ಲೈನ್ ಗೇಮಿಂಗ್, ಬೃಹತ್ ಫೈಲ್‌ಗಳ ಡೌನ್‌ಲೋಡ್, ಸಾಫ್ಟ್‌ವೇರ್ ಅಪ್‌ಡೇಟ್ ಹಾಗೂ ಕ್ಲೌಡ್‌ಗೆ ಡೇಟಾ ಅಪ್‌ಲೋಡ್ ಮಾಡುವಂತಹ ಕೆಲಸಗಳನ್ನು ಯಾವುದೇ ಅಡಚಣೆಯಿಲ್ಲದೆ ಸುಲಭವಾಗಿ ಮಾಡಬಹುದು. ಗ್ರಾಹಕರಿಗೆ ಡೇಟಾ ಮುಗಿಯುವ ಚಿಂತೆಯಿಲ್ಲ, ಸ್ಪೀಡ್ ಕಡಿಮೆಯಾಗುವ ಆತಂಕವಿಲ್ಲದೆ ಬಳಕೆ ಮಾಡಬಹುದು.

ಲ್ಯಾಪ್‌ಟಾಪ್ ಸೇರಿ ಇತರೆಡೆ ವೈಫೈ ಕನೆಕ್ಟ್ ಮಾಡುವ ಅವಕಾಶ

ಈ 15 ರೂಪಾಯಿ ಪ್ಲಾನ್ ಸಕ್ರಿಯಗೊಳಿಸಿದ ನಂತರ ಗ್ರಾಹಕರು ತಮ್ಮ 5G ಸ್ಮಾರ್ಟ್‌ಫೋನ್‌ಗಳನ್ನು ವೈ-ಫೈ ಹಾಟ್‌ಸ್ಪಾಟ್ (Wi-Fi Hotspot) ಮಾಡುವ ಮೂಲಕ ಲ್ಯಾಪ್ಟಾಪ್‌ಗಳು ಹಾಗೂ ಟ್ಯಾಬ್ಲೆಟ್‌ಗಳಿಗೂ ಸಂಪರ್ಕಿಸಿ ಉಚಿತವಾಗಿ ಇಂಟರ್ನೆಟ್ ಬಳಸಬಹುದಾಗಿದೆ. ಇದು ವರ್ಕ್ ಫ್ರಮ್ ಹೋಮ್ ಮಾಡುವವರಿಗೆ, ವೀಡಿಯೊ ಕಾನ್ಫರೆನ್ಸಿಂಗ್ ಹಾಗೂ ತುರ್ತು ಆನ್‌ಲೈನ್ ಕೆಲಸದಲ್ಲಿ ತೊಡಗಿಸಿಕೊಳ್ಳುವವರಿಗೆ ಭಾರಿ ನೆರವಾಗಲಿದೆ.

ಸುಲಭವಾಗಿ ರೀಚಾರ್ಜ್

ಜಿಯೋದ ಈ 15 ರೂಪಾಯಿಯ ಬಿಗ್ ಆಫರ್ ಪ್ಲಾನ್ ದೇಶಾದ್ಯಂತದ ಎಲ್ಲಾ ಟೆಲಿಕಾಂ ವಲಯಗಳಲ್ಲಿ ಲಭ್ಯವಿದೆ. ಗ್ರಾಹಕರು ಮೈಜಿಯೋ ಆ್ಯಪ್, ಜಿಯೋ ಅಧಿಕೃತ ವೆಬ್‌ಸೈಟ್, ಸ್ಥಳೀಯ ರಿಟೇಲ್ ಮಳಿಗೆಗಳು ಹಾಗೂ ಫೋನ್ ಪೇ, ಗೂಗಲ್ ಪೇ ನಂತಹ ಥರ್ಡ್ ಪಾರ್ಟಿ ರೀಚಾರ್ಜ್ ಪ್ಲಾಟ್‌ಫಾರ್ಮ್‌ಗಳ ಮೂಲಕ ತಕ್ಷಣವೇ ಈ ಪ್ಲಾನ್ ರೀಚಾರ್ಜ್ ಮಾಡಿಕೊಂಡು ಸಕ್ರಿಯಗೊಳಿಸಿಕೊಳ್ಳಬಹುದು.

ರಿಲಯನ್ಸ್ ಜಿಯೋ ಈಗಾಗಲೇ ಐಪಿಒ ಮೂಲಕ ಭಾರಿ ಸದ್ದು ಮಾಡುತ್ತಿದೆ. ಇತ್ತೀಚೆಗೆ ಜಿಯೋ ಷೇರುಮಾರುಕಟ್ಟೆಗೆ ಲಗ್ಗೆ ಇಟ್ಟು ಭಾರಿ ಸಂಚಲನ ಸೃಷ್ಟಿಸಿದೆ. ಇದರ ಬೆನ್ನಲ್ಲೇ ಇದೀಗ ದೀಪಾವಳಿ ಹಬ್ಬಕ್ಕೆ ಜಿಯೋ ತನ್ನ ಆಕರ್ಷಕ ಕೊಡುಗೆ ಮೂಲಕ ಗ್ರಾಹಕರಿಗೆ ಆಫರ್ ನೀಡುತ್ತಿದೆ. ಟೆಲಿಕಾಂ ಕ್ಷೇತ್ರದಲ್ಲಿ ಮುಂಚೂಣಿ ಸಂಸ್ಥೆಯಾಗಿ ಮುನ್ನುಗ್ಗುತ್ತಿರುವ ಜಿಯೋ , ಆಕರ್ಷಕ ಕೊಡುಗೆಗಳ ಮೂಲಕ ಗ್ರಾಹಕರನ್ನು ಸೆಳೆಯುತ್ತಿದೆ.