ರಸ್ತೆಯಲ್ಲಿರುವ ಹೊಂಡ ಗುಂಡಿಗಳಿಂದ ಬೇಸತ್ತ ಕಾಂಗ್ರೆಸ್ ಶಾಸಕಿಯೊಬ್ಬರು (congress MLA) ರಸ್ತೆಯ ಹೊಂಡದಲ್ಲಿ ತುಂಬಿದ ನೀರಿನಲ್ಲಿ ಸ್ನಾನ(Bath) ಮಾಡಿದ ಘಟನೆ ಜಾರ್ಖಂಡ್‌ನಲ್ಲಿ (Jharkhand) ನಡೆದಿದೆ.

ರಾಂಚಿ: ರಸ್ತೆಯಲ್ಲಿರುವ ಹೊಂಡ ಗುಂಡಿಗಳಿಂದ ಬೇಸತ್ತ ಕಾಂಗ್ರೆಸ್ ಶಾಸಕಿಯೊಬ್ಬರು (congress MLA) ರಸ್ತೆಯ ಹೊಂಡದಲ್ಲಿ ತುಂಬಿದ ನೀರಿನಲ್ಲಿ ಸ್ನಾನ(Bath) ಮಾಡಿದ ಘಟನೆ ಜಾರ್ಖಂಡ್‌ನಲ್ಲಿ (Jharkhand) ನಡೆದಿದೆ. ಕಾಂಗ್ರೆಸ್ ಶಾಸಕಿ ದೀಪಿಕಾ ಪಾಂಡೆ(Deepika Pandey singh) ರಸ್ತೆಯಲ್ಲೇ ಸ್ನಾನ ಮಾಡಿದ ಕಾಂಗ್ರೆಸ್ ಶಾಸಕಿ. ಗೊಡ್ಡಾ ಜಿಲ್ಲೆಯ ರಾಷ್ಟ್ರೀಯ ಹೆದ್ದಾರಿಯಲ್ಲಿ (National Highway) ಈ ಘಟನೆ ನಡೆದಿದೆ. ಈ ಹೆದ್ದಾರಿ ಹೊಂಡಗುಂಡಿಗಳಿಂದ ತುಂಬಿದ್ದು, ಮಳೆಯಿಂದಾಗಿ ಇಲ್ಲಿ ನೀರು ತುಂಬಿ ಈಜುಕೊಳದಂತಾಗಿತ್ತು. ರಸ್ತೆಯ ಅವ್ಯವಸ್ಥೆಯಿಂದ ಬೇಸತ್ತ ಶಾಸಕಿ ಕೂಡಲೇ ರಸ್ತೆ ದುರಸ್ಥಿಗೆ ಆಗ್ರಹಿಸಿ ಹೀಗೆ ವಿಭಿನ್ನವಾಗಿ ಪ್ರತಿಭಟನೆ ನಡೆಸಿದ್ದಾರೆ. 

ಮಹಾಗಾಮ ವಿಧಾನಸಭಾ ಕ್ಷೇತ್ರದ (Mahagama assembly constituency) ಶಾಸಕರಾಗಿರುವ ದೀಪಿಕಾ ಪಾಂಡೆ ಸಿಂಗ್, ಅವರು ರಸ್ತೆಯಲ್ಲಿರುವ ಹೊಂಡಕ್ಕೆ ಇಳಿದು ತಲೆಯಿಂದ ಕಾಲಿನವರೆಗೆ ಹೊಂಡದಲ್ಲಿ ತುಂಬಿದ ಕೆಸರು ನೀರನ್ನು ಸುರಿದುಕೊಂಡು ಸ್ನಾನ ಮಾಡಿದ್ದರು. ರಸ್ತೆ ಹೊಂಡದಲ್ಲಿ ಮುಳುಗೆದ್ದು ಇವರು ಸ್ನಾನ ಮಾಡುತ್ತಿರುವ ದೃಶ್ಯಗಳು ಕ್ಯಾಮರಾದಲ್ಲಿ ಸೆರೆ ಆಗಿದ್ದು, ಸಾಮಾಜಿಕ ಜಾಲತಾಣದಲ್ಲಿ (Social Media) ವೈರಲ್ ಆಗಿವೆ. 

Scroll to load tweet…

ತಮ್ಮ ಈ ಪ್ರತಿಭಟನೆ ಬಗ್ಗೆ ಮಾತನಾಡಿದ ದೀಪಿಕಾ ಸಿಂಗ್, ನಾನು, ರಾಜ್ಯ ಹಾಗೂ ಕೇಂದ್ರ ಸರ್ಕಾರದ ಜಟಾಪಟಿಯ ನಡುವೆ ಸಿಲುಕಲು ಇಷ್ಟಪಡುವುದಿಲ್ಲ. ಇದು ರಾಷ್ಟ್ರೀಯ ಹೆದ್ದಾರಿ 133, ಈ ಹೆದ್ದಾರಿ ಪ್ರಾಧಿಕಾರದವರು ಈ ರಸ್ತೆಯನ್ನು ರಿಪೇರಿ (Road repair) ಮಾಡಲು ಮೇ ತಿಂಗಳಲ್ಲಿ ಜವಾಬ್ದಾರಿ ತೆಗೆದುಕೊಂಡಿದ್ದರು. ಆದರೆ ಕೇಂದ್ರ ಈ ಕಾರ್ಯಕ್ಕೆ ಹಣ ಬಿಡುಗಡೆ ಮಾಡಿಲ್ಲ. ಆದರೆ ಈ ಹಾಳಾದ ರಸ್ತೆಯಿಂದ ಜನರು ಸಂಕಷ್ಟಕ್ಕೊಳಗಾಗಿದ್ದು, ಕೂಡಲೇ ಈ ರಸ್ತೆಯನ್ನು ಸರಿಪಡಿಸುವಂತೆ ಸಿಎಂಗೆ ಮನವಿ ಮಾಡುತ್ತಿದ್ದೇನೆ ಎಂದು ಅವರು ಹೇಳಿದರು.

Chikkamagaluru; ಅಧಿಕಾರಿಗಳ ನಿರ್ಲಕ್ಷ ಖಂಡಿಸಿ ನಡು ರಸ್ತೆಯಲ್ಲಿ ಬಾಳೆ ಗಿಡ ನೆಟ್ಟು ಪ್ರತಿಭಟನೆ

ಅಲ್ಲದೇ ಈ ಬಗ್ಗೆ ಗೊಡ್ಡ ಸಂಸದ ನಿಶಿಕಾಂತ್ ದುಬೆ (Nishikanth dube) ಅವರು ಟ್ವಿಟ್ ಮಾಡಿದ್ದು, ಸಾರ್ವಜನಿಕ ಜನಪ್ರತಿನಿಧಿಗಳು ಇಲ್ಲಿ ಬಂದು ಕುಳಿತರೆ ಅವರಿಗೆ ಜನರ ಕಷ್ಟ ಏನು ಎಂದು ಅರ್ಥವಾಗಬಹುದು ಎಂದು ಹೇಳಿದರು. ಇದಕ್ಕೆ ಟ್ವಿಟ್ಟರ್‌ನಲ್ಲಿ ಪ್ರತಿಕ್ರಿಯಿಸಿದ ದುಬೆ, ಮಹಾಗಮ ಕ್ಷೇತ್ರದ ಕಾಂಗ್ರೆಸ್ ಶಾಸಕಿ ದೀಪಿಕಾ ಪಾಂಡೆ ಸಿಂಗ್ ಅವರು ರಾಜ್ಯದ ಮುಖ್ಯಮಂತ್ರಿ ಹೇಮಂತ್ ಸೊರೇನ್ (Hemanth soren) ವಿರುದ್ಧ ಧರಣಿ ನಡೆಸುತ್ತಿದ್ದಾರೆ. ಈ ಹೆದ್ದಾರಿಯನ್ನು ರಸ್ತೆ ನಿರ್ಮಾಣ ವಿಭಾಗ ನಿರ್ವಹಿಸುತ್ತಿದೆ. ಅಲ್ಲದೇ ಆರು ತಿಂಗಳ ಹಿಂದೆ ಕೇಂದ್ರ ಸರ್ಕಾರ 75 ಕೋಟಿ ರೂಪಾಯಿ ಹಣವನ್ನು ಈ ರಸ್ತೆಯ ನಿರ್ವಹಣೆಗಾಗಿ ಬಿಡುಗಡೆ ಮಾಡಿದೆ ಎಂದರು. ಆದರೆ ಶಾಸಕಿ ದೀಪಿಕಾ ಸಿಂಗ್ ಇದನ್ನು ಅಲ್ಲಗಳೆದಿದ್ದು, ಕೇಂದ್ರದಿಂದ ರಸ್ತೆ ರಿಪೇರಿಗೆ ಯಾವುದೇ ಹಣ ಬಂದಿಲ್ಲ ಎಂದು ಹೇಳಿದ್ದಾರೆ. 

ಚಿಕ್ಕಮಗಳೂರು - ಮೂಡಿಗೆರೆ ರಾಷ್ಟ್ರೀಯ ಹೆದ್ದಾರಿ ದುಸ್ಥಿತಿ ಕೇಳೋರೇ ಇಲ್ಲ!

ಕೆಲ ದಿನಗಳ ಹಿಂದೆ ಕೇರಳದ ವ್ಯಕ್ತಿಯೊಬ್ಬ ರಸ್ತೆ ದುರಸ್ಥಿಗೆ ಆಗ್ರಹಿಸಿ, ರಸ್ತೆಯ ಹೊಂಡದಲ್ಲಿ ತುಂಬಿದ ನೀರಿನಲ್ಲಿ ಸ್ನಾನ ಮಾಡಿದ್ದಲ್ಲದೇ ಯೋಗಾಸನವನ್ನೂ ಕೂಡ ಮಾಡಿದ್ದರು. ಇದು ಮಾಧ್ಯಮಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿಯೂ ಸಾಕಷ್ಟು ಸುದ್ದಿಯಾಗಿತ್ತು.