ಬಿಜೆಪಿ ನಾಯಕಿ ಮನೆಯಲ್ಲಿ 8 ವರ್ಷಗಳ ಕಾಲ 'ಬಂಧಿ'ಯಾಗಿದ್ದ ಕೆಲಸದಾಕೆ..!

ಬಿಜೆಪಿ ನಾಯಕಿಯ ಮಗ ಸಂತ್ರಸ್ಥೆಗೆ ಸಹಾಯ ಮಾಡಲು ಪ್ರಯತ್ನಿಸಿದ್ದು ಮತ್ತು ಜಾರ್ಖಂಡ್ ಸರ್ಕಾರದಲ್ಲಿ ಸಿಬ್ಬಂದಿ ಇಲಾಖೆ ಅಧಿಕಾರಿಯಾಗಿರುವ ತನ್ನ ಸ್ನೇಹಿತ ವಿವೇಕ್ ಬಾಸ್ಕಿಗೆ ಮನೆಯಲ್ಲಿ ನಡೆದ ಘಟನೆಗಳ ಬಗ್ಗೆ ತಿಳಿಸಿದ್ದರು ಎಂದು ತಿಳಿದುಬಂದಿದೆ. 

jharkhand bjp leader forced domestic help to lick urine for 8 years ash

ಜಾರ್ಖಂಡ್ ನಾಯಕಿ ಸೀಮಾ ಪಾತ್ರಾ ಅವರು ತಮ್ಮ ಮನೆಯ ಸಹಾಯಕಿಯನ್ನು ಕೂಡಿ ಹಾಕಿದ್ದಾರೆ  ಮತ್ತು ಕ್ರೂರವಾಗಿ ಚಿತ್ರಹಿಂಸೆ ನೀಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಈ ಹಿನ್ನೆಲೆ ಬಿಜೆಪಿ ಮಂಗಳವಾರ ಅವರನ್ನು ಅಮಾನತುಗೊಳಿಸಿದೆ. ಪಾತ್ರಾ ಅವರು ಬಿಜೆಪಿಯ ಮಹಿಳಾ ವಿಭಾಗದ ರಾಷ್ಟ್ರೀಯ ಕಾರ್ಯಕಾರಿ ಸಮಿತಿಯ ಸದಸ್ಯರಾಗಿದ್ದರು. ಹಾಗೂ, ಅವರ ಪತಿ ಮಹೇಶ್ವರ್ ಪಾತ್ರಾ ನಿವೃತ್ತ ಐಎಎಸ್ ಅಧಿಕಾರಿ ಎಂದು ತಿಳಿದುಬಂದಿದೆ. ಮನೆ ಕೆಲಸದಾಕೆ ಮಹಿಳೆಗೆ ಚಿತ್ರಹಿಂಸೆ ನೀಡಿದ್ದಾರೆ ಎಂಬ ಆರೋಪ ಕೇಳಿಬಂದ ಹಿನ್ನೆಲೆ ಹಾಗೂ ಈ ಸಂಬಂಧದ ವಿಡಿಯೋಗಳು ವೈರಲ್‌ ಆದ ಬೆನ್ನಲ್ಲೇ ಜಾರ್ಖಂಡ್ ಬಿಜೆಪಿ ಮುಖ್ಯಸ್ಥ ದೀಪಕ್ ಪ್ರಕಾಶ್, ಸೀಮಾ ಪಾತ್ರ ಅವರ ವಿರುದ್ಧ ಕ್ರಮಕ್ಕೆ ಆದೇಶಿಸಿದ್ದಾರೆ. 

ಆನ್‌ಲೈನ್‌ನಲ್ಲಿ ಹರಿದಾಡುತ್ತಿರುವ ವಿಡಿಯೋಗಳಲ್ಲಿ, ಸುನೀತಾ ಎಂಬ ಮಹಿಳೆ ಆಸ್ಪತ್ರೆಯ ಹಾಸಿಗೆಯ ಮೇಲೆ ಕಾಣಿಸಿಕೊಂಡಿದ್ದಾರೆ. ಆಕೆಯ ಹಲವಾರು ಹಲ್ಲುಗಳು ಕಾಣೆಯಾಗಿದ್ದು, ಹಾಗೂ ಆಕೆಗೆ ಸರಿಯಾಗಿ ಕುಳಿತುಕೊಳ್ಳಲೂ ಸಾಧ್ಯವಾಗುತ್ತಿಲ್ಲ ಎಂದು ತಿಳಿದುಬಂದಿದೆ. ಅಲ್ಲದೆ, ಆಕೆಯ ದೇಹದ ಮೇಲಿನ ಗಾಯದ ಗುರುತುಗಳು ದಾಳಿಯ ಪುನರಾವರ್ತಿತ ನಿದರ್ಶನಗಳನ್ನು ಸೂಚಿಸುತ್ತವೆ ಎಂದು ಸ್ಥಳೀಯ ಮಾಧ್ಯಮ ವರದಿಗಳು ತಿಳಿಸಿವೆ.

ಕೈಕೊಟ್ಟ ಲಿಫ್ಟ್‌: ಭದ್ರತಾ ಸಿಬ್ಬಂದಿ, ಲಿಫ್ಟ್ ಆಪರೇಟರ್‌ಗೆ ಥಳಿಸಿದ ಉದ್ಯಮಿ ಬಂಧನ

29 ವರ್ಷದ ಸುನೀತಾ, ಜಾರ್ಖಂಡ್‌ನ ಗುಮ್ಲಾ ಮೂಲದವರಾಗಿದ್ದು, ಸುಮಾರು 10 ವರ್ಷಗಳ ಹಿಂದೆಯೇ ಪಾತ್ರಾ ಅವರ ಮನೆಯಲ್ಲಿ ಕೆಲಸಕ್ಕೆ ಸೇರಿದ್ದರು. ಅವರ ಮಗಳು ವತ್ಸಲಾ ಕೆಲಸದ ನಿಮಿತ್ತ ದೆಹಲಿಗೆ ತೆರಳುತ್ತಿದ್ದು, ಸುನೀತಾ ಅವರ ಸಹಾಯಕ್ಕೆ ತೆರಳಿದ್ದರು. ನಂತರ, ಸುಮಾರು 4 ವರ್ಷಗಳ ಹಿಂದೆ ವತ್ಸಲಾ ಮತ್ತು ಸುನೀತಾ ರಾಂಚಿಗೆ ಮರಳಿದ್ದರು. ಇನ್ನು, ಮಹಿಳೆಯ ಸಹೋದರಿ ಮತ್ತು ಸೋದರ ಮಾವನಿಗೆ ಪಾತ್ರಾ ಮನೆಯವರು ನೀಡುತ್ತಿದ್ದ ಹಿಂಸೆ ಬಗ್ಗೆ ತಿಳಿಸಿದ್ದರಾದರೂ, ಅವರು ಆಕೆಯನ್ನು ತಮ್ಮ ಮನೆಗೆ ಕರೆದುಕೊಂಡು ಹೋಗಲು ನಿರಾಕರಿಸಿದ್ದರು ಎಂದು ತಿಳಿದುಬಂದಿದೆ. ವರದಿಗಳ ಪ್ರಕಾರ, ಪಾತ್ರಾ ಅವರ ಮಗ ಆಯುಷ್ಮಾನ್, ಸುನೀತಾ ಅವರ ಪರಿಸ್ಥಿತಿಯನ್ನು ಸ್ನೇಹಿತರಿಗೆ ವಿವರಿಸಿದರು ಮತ್ತು ಸಹಾಯಕ್ಕಾಗಿ ಕೇಳಿದನು. ನಂತರ ಆತನ ಸ್ನೇಹಿತ ಪೊಲೀಸರಿಗೆ ದೂರು ದಾಖಲಿಸಿದ್ದು, ಸುನೀತಾಳನ್ನು ರಕ್ಷಿಸಲಾಗಿದೆ.

ಬಲವಂತವಾಗಿ ಮೂತ್ರ ಕುಡಿಸುತ್ತಿದ್ದರು, ಆಹಾರ, ನೀರು ನೀಡುತ್ತಿರಲಿಲ್ಲ..!
ಸೀಮಾ ಪಾತ್ರಾ ತನ್ನನ್ನು ನಿಯಮಿತವಾಗಿ ಥಳಿಸುತ್ತಿದ್ದಳು ಮತ್ತು ಮೂತ್ರ ನೆಕ್ಕಲು, ತನ್ನ ನಾಲಿಗೆಯಿಂದ ನೆಲವನ್ನು ಸ್ವಚ್ಛಗೊಳಿಸಲು ಮತ್ತು ಬಿಸಿ ಬಾಣಲೆಯಿಂದ ಸುಡುತ್ತಿದ್ದರು ಹಾಗೂ ರಾಡ್‌ನಿಂದ  ಹೊಡೆದು ಹಲ್ಲು ಮುರಿದಿದ್ದಾರೆ ಎಂದು ಸುನೀತಾ ರಕ್ಷಣೆಯ ಬಳಿಕ ಹೇಳಿದ್ದಾರೆ. "ಅವರು ಕಬ್ಬಿಣದ ರಾಡ್, ಬೆಲ್ಟ್‌ನಿಂದ ನನ್ನನ್ನು ಥಳಿಸುತ್ತಿದ್ದರು ಮತ್ತು ಬಿಸಿ ಬಾಣಲೆಯಿಂದ ಸುಡುತ್ತಿದ್ದರು" ಎಂದು ಸುನೀತಾ ಕಷ್ಟದ ಸ್ಥಿತಿಯನ್ನು ವಿವರಿಸಿದರು. "ಸೀಮಾ ನನಗೆ ಆಹಾರ ಮತ್ತು ನೀರನ್ನು ಸಹ ನೀಡಲಿಲ್ಲ ಮತ್ತು ತನ್ನನ್ನು ಕೋಣೆಯಲ್ಲಿ ಲಾಕ್ ಮಾಡಲಾಗಿತ್ತು" ಎಂದೂ ಸುನೀತಾ ಹೇಳಿದ್ದಾರೆ. ಸುನೀತಾ ಈಗ ರಾಂಚಿಯ ರಿಮ್ಸ್ ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಆಂಬುಲೆನ್ಸ್‌ ಇಲ್ಲದೆ 2 ವರ್ಷದ ಮಗುವಿನ ಶವ ಹೊತ್ತೊಯ್ದ 10 ವರ್ಷದ ಸಹೋದರ

ವಿರೋಧ ಪಕ್ಷದ ನಾಯಕರಿಂದ ಖಂಡನೆ
ಶಿವಸೇನೆ ಸಂಸದೆ ಪ್ರಿಯಾಂಕಾ ಚತುರ್ವೇದಿ ಮತ್ತು ತೆಲಂಗಾಣ ರಾಷ್ಟ್ರೀಯ ಸಮಿತಿ (ಟಿಆರ್‌ಎಸ್) ಸುನೀತಾಗೆ ಸೀಮಾ ಪಾತ್ರಾ ನೀಡಿದ ಚಿತ್ರಹಿಂಸೆಗಾಗಿ ಬಿಜೆಪಿಯನ್ನು ತರಾಟೆಗೆ ತೆಗೆದುಕೊಂಡರು. ಪ್ರಿಯಾಂಕಾ ಚತುರ್ವೇದಿ ಟ್ವೀಟ್‌ನಲ್ಲಿ, “ಬಿಜೆಪಿ ನಾಯಕಿ ಸೀಮಾ ಪಾತ್ರಾ ಅವರ ಮನೆಯಲ್ಲಿ ಕೆಲಸ ಮಾಡುತ್ತಿದ್ದ ಕೆಲಸದಾಕೆಯನ್ನು ಮಾಲೀಕರು ಬಿಸಿ ಬಾಣಲೆಯಿಂದ ಸುಟ್ಟುಹಾಕಿದ ನಂತರ ಆಕೆಯ ದೇಹದ ಮೇಲೆ ಹತ್ತಾರು ಗಾಯಗಳಾಗಿವೆ, ಇದು ಭಯಾನಕ ಮತ್ತು ನಾಚಿಕೆಗೇಡಿನ ಸಂಗತಿಯಾಗಿದೆ. ಈ ಬಿಜೆಪಿ ನಾಯಕರು ಎಂತಹ ಅಧಿಕಾರದ ಮದದಲ್ಲಿದ್ದಾರೆ..?’’ ಎಂದು ಟೀಕಿಸಿದ್ದಾರೆ.

ಇನ್ನೊಂದೆಡೆ, ಈ ವಿಡಿಯೋ ಹಂಚಿಕೊಂಡಿರುವ ಟಿಆರ್‌ಎಸ್ ನಾಯಕ, "ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿ ಸಮಿತಿಯ ನಾಯಕಿ ಸೀಮಾ ಪಾತ್ರಾ ಅವರು ಬುಡಕಟ್ಟು ಜನಾಂಗದ ಬಾಲಕಿಯನ್ನು 8 ವರ್ಷಗಳ ಕಾಲ ಹಿಂಸಿಸಿದ್ದು ಹೀಗೆ..." ಎಂದು ಟ್ವೀಟ್‌ ಮಾಡಿದ್ದಾರೆ. 

Latest Videos
Follow Us:
Download App:
  • android
  • ios