ಮೊದಲ ದಿನ, ಮೊದಲ ಪೋಸ್ಟಿಂಗ್‌, ಮೊದಲ ಲಂಚ ಪಡೆಯುವಾಗಲೇ ರೆಡ್‌ ಹ್ಯಾಂಡ್‌ ಆಗಿ ಸಿಕ್ಕಿಬಿದ್ದ ಅಧಿಕಾರಿ!


ಜೆಪಿಎಸ್‌ಸಿ ಪರೀಕ್ಷೆಯಲ್ಲಿ 108ನೇ ಶ್ರೇಯಾಂಕ ಪಡೆದುಕೊಂಡಿದ್ದ ಮಿಥಾಲಿ ಶರ್ಮ, ತನ್ನ ಮೊದಲ ಪೋಸ್ಟಿಂಗ್‌ನ ಮೊದಲ ದಿನವೇ ಮೊದಲ ಲಂಚ ಪಡೆಯುವಾಗಲೇ ರೆಡ್‌ ಹ್ಯಾಂಡ್‌ ಆಗಿ ಸಿಕ್ಕಿಬಿದ್ದಿದ್ದಾರೆ. ಆಕೆಯನ್ನು ಜಾರ್ಖಂಡ್‌ ಎಸಿಬಿ ಬಂಧಿಸಿದೆ.
 

Jharkhand ACB nabs assistant registrar Mithali Sharma in Koderma Taking bribe rs 10000 san

ರಾಂಚಿ  (ಜು.17): ದೇಶ ಉದ್ದಾರ ಮಾಡುವ ಕನಸಿನಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಪಡೆದು ಸರ್ಕಾರಿ ಕೆಲಸ ಪಡೆದುಕೊಳ್ಳುವ ವ್ಯಕ್ತಿಗಳು ವರ್ಷಗಳು ಕಳೆದಂತೆ ಲಂಚಕ್ಕೆ ಕೈಯೊಡ್ಡುವುದು ಸಾಮಾನ್ಯ. ಲಂಚವಿಲ್ಲದೆ ಅಂಥ ವ್ಯಕ್ತಿಗಳ ನಡುವೆ ಒಂದೇ ಒಂದು ಫೈಲ್‌ಗೆ ಸಹಿ ಹಾಕಿಸಿಕೊಳ್ಳೋದು ಸಾಧ್ಯವಿಲ್ಲ. ಆದರೆ, ಜಾರ್ಖಂಡ್‌ ರಾಜ್ಯದಲ್ಲಿ ಜೆಪಿಎಸ್‌ಸಿ ಪರೀಕ್ಷೆಯ್ಲಿ 108ನೇ ಶ್ರೇಯಾಂಕ ಪಡೆದು ಒಂದು ವಾರದ ಹಿಂದೆಯಷ್ಟೇ ಮೊದಲ ಪೋಸ್ಟಿಂಗ್‌ ಪಡೆದುಕೊಂಡಿದ್ದ ಮಿಥಾಲಿ ಶರ್ಮ, ಮೊದಲ ದಿನವೇ ತನ್ನ ಮೊದಲ ಲಂಚ ಪಡೆಯುವಾಗಲೇ ರೆಡ್‌ಹ್ಯಾಂಡ್‌ ಆಗಿ ಸಿಕ್ಕಿಬಿದ್ದಿದ್ದಾರೆ. ಜಾರ್ಖಂಡ್‌ನ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ಕೋ-ಆಪರೇಟಿವ್‌ ಸೊಸೈಟಿಯಲ್ಲಿ ಸಹಾಯಕ ರಿಜಿಸ್ಟ್ರಾರ್‌ ಹುದ್ದೆಯಲ್ಲಿದ್ದ ಮಿಥಾಲಿ ಶರ್ಮರನ್ನು ಬಂಧಿಸಿದೆ. 10 ಸಾವಿರ ಲಂಚ ಪಡೆಯುವಾಗ ಈಕೆ ರೆಡ್‌ ಹ್ಯಾಂಡ್‌ ಆಗಿ ಸಿಕ್ಕಿಬಿದ್ದಿದ್ದಾರೆ. ಮಿಥಾಲಿ ಶರ್ಮ ಲಂಚಕ್ಕೆ ಬೇಡಿಕೆ ಇಟ್ಟಿದ್ದಾರೆ ಎಂದು ರಾಮೇಶ್ವರ ಪ್ರಸಾದ್‌ ಯಾದವ್‌ ಎನ್ನುವ ವ್ಯಕ್ತಿಯಿಂದ ದೂರು ದಾಖಲಾದ ಬೆನ್ನಲ್ಲಿಯೇ ಎಸಿಬಿ ಕಾರ್ಯಪ್ರವೃತ್ತವಾಗಿ ಮಿಥಾಲಿ ಶರ್ಮಳನ್ನು ಬಂಧಿಸಿದೆ.

ತನ್ನ ದೂರಿನಲ್ಲಿ, ಯಾದವ್ ಅವರು ಕೊಡೆರ್ಮಾ ವ್ಯಾಪಾರ್ ಮಂಡಲ್ ಸಹೋಗ್ ಸಮಿತಿ ಲಿಮಿಟೆಡ್‌ನ ನಿರ್ವಹಣಾ ಸಮಿತಿಯ ಸದಸ್ಯರಾಗಿದ್ದಾರೆ. ಕೊಡೆರ್ಮ ವ್ಯಾಪಾರ ಮಂಡಲವು ಬೀಜ ವಿತರಣೆಯ ನೋಡಲ್ ಏಜೆನ್ಸಿಯಾಗಿದೆ. ಜೂನ್ 16 ರಂದು ಮಿಥಾಲಿ ಶರ್ಮ ಅವರು ಕಚೇರಿಯ ಪರಿಶೀಲನೆಗೆ ಆಗಮಿಸಿದರು.  ನನಗೆ ಗೊತ್ತಿಲ್ಲದ ಯಾವುದೋ ವಿಚಾರವನ್ನು ಹಿಡಿದುಕೊಂಡು ನನಗೆ ಶೋಕಾಸ್‌ ನೋಟೀಸ್‌ ಜಾರಿ ಮಾಡಿದ್ದರು. ಇದನ್ನು ಕೇಳುವ ಕುರಿತಾಗಿ ನಾನು ಅವರ ಕಚೇರಿಗೆ ಹೋಗಿದ್ದೆ  ಈ ವೇಳೆ ಇಲಾಖಾ ಶಿಸ್ತು ಕ್ರಮದಿಂದ ಪಾರಾಗಬೇಕಿದ್ದಲ್ಲಿ 20 ಸಾವಿರ ರೂಪಾಯಿ ಹಣ ನೀಡುವಂತೆ ಬೇಡಿಕೆ ಇಟ್ಟಿದ್ದರು ಎಂದು ರಾಮ್‌ಪ್ರಸಾದ್‌ ಯಾದವ್‌ ತನ್ನ ದೂರಿನಲ್ಲಿ ತಿಳಿಸಿದ್ದರು.

ಆದರೆ, ತನ್ನದಲ್ಲದ ತಪ್ಪಿಗೆ ಯಾವುದೇ ಕಾರಣಕ್ಕೂ ಲಂಚ ನೀಡುವುದಿಲ್ಲ ಎಂದು ನಿರ್ಧಾರ ಮಾಡಿದ್ದ ರಾಮ್‌ಪ್ರಸಾದ್‌ ಯಾದವ್‌, ಮುಂದಿನ ಕ್ರಮಕ್ಕಾಗಿ ಜಾರ್ಖಂಡ್‌ನ ಭ್ರಷ್ಟಾಚಾರ ನಿಗ್ರಹ ದಳದ ಅಧಿಕಾರಿಗಳನ್ನು ಸಂಪರ್ಕಿಸಿದ್ದರು.

ದೆಹಲಿಯಲ್ಲಿ ಪ್ರವಾಹ, ಸಿಎಂ ಪ್ರವಾಸ: ಅರವಿಂದ್‌ ಕೇಜ್ರಿವಾಲ್‌ ಬೆಂಗಳೂರು ಸಭೆ ಟೀಕಿಸಿದ ಬಿಜೆಪಿ!

ಈ ದೂರಿಗೆ ಸಂಬಂಧಿಸಿದಂತೆ ಬ್ಯೂರೋ ಕಚೇರಿಯಿಂದ ಪರಿಶೀಲನೆ ಕೂಡ ನಡೆಸಲಾಗಿದೆ. ಪರಿಶೀಲನಾ ವರದಿಯಲ್ಲಿ ಲಂಚಕ್ಕೆ ಬೇಡಿಕೆ ಇಟ್ಟಿರುವುದು ನಿಜ ಎಂದು ತಿಳಿದುಬಂದಿದೆ. ಯಾದವ್ ಅವರ ದೂರಿನ ಆಧಾರದ ಮೇಲೆ, ಶರ್ಮಾ ವಿರುದ್ಧ ಬ್ಯೂರೋದ ಹಜಾರಿಬಾಗ್ ಕಛೇರಿ ಸಂಖ್ಯೆ-05/2023 ರಲ್ಲಿ ದಿನಾಂಕ 06.07.2023 ರಂದು ಪ್ರಕರಣ ದಾಖಲಿಸಲಾಗಿದೆ. ಆಕೆಯನ್ನು ರೆಡ್‌ಹ್ಯಾಂಡ್‌ ಆಗಿ ಹಿಡಿಯುವ ಉದ್ದೇಶದಿಂದ ರಾಮ್‌ಪ್ರಸಾದ್‌ ಯಾದವ್‌ ನೀಡಿದ 10 ಸಾವಿರ ರೂಪಾಯಿ ಹಣವನ್ನು ಹಿಡಿದುಕೊಂಡಾಗಲೇ ಮಿಥಾಲಿ ಶರ್ಮರನ್ನು ಬಂದಿಸಲಾಗಿದೆ. ಮಿಥಾಲಿ ಶರ್ಮ ಹಜಾರಿಬಾಗ್ ಪಟ್ಟಣದ ಬಡಾ ಬಜಾರ್ ಮೊಹಲ್ಲಾ ನಿವಾಸಿ ಮುಖೇಶ್ ಶರ್ಮಾ ಅವರ ಪುತ್ರಿ.

ನಾಲ್ಕೇ ದಿನದಲ್ಲಿ ಚಂದ್ರನತ್ತ ಹೋಗುತ್ತೆ ಅಮೆರಿಕಾ, ಭಾರತಕ್ಕೆ ಏಕೆ 42 ದಿನ?

Latest Videos
Follow Us:
Download App:
  • android
  • ios