ಶ್ರೀನಗರ[ಡಿ.26]: ಜಮ್ಮು- ಕಾಶ್ಮೀರದ ಉರಿ ಸೆಕ್ಟರ್‌ನಲ್ಲಿರುವ ಗಡಿ ನಿಯಂತ್ರಣ ರೇಖೆಯಗುಂಟ ಪಾಕಿಸ್ತಾನ ಪಡೆಗಳು ಬುಧವಾರ ಕದನ ವಿರಾಮ ಉಲ್ಲಂಘಿಸಿ ಅಪ್ರಚೋದಿತ ಗುಂಡಿನ ದಾಳಿ ನಡೆಸಿವೆ.

ಗಡಿ ಗ್ರಾಮದ ನಾಗರಿಕರನ್ನು ಗುರಿಯಾಗಿಸಿಕೊಂಡು ಪಾಕಿಸ್ತಾನ ಪಡೆಗಳು ಗನ್‌ ಮತ್ತು ಮೊರ್ಟಾರ್‌ ಶೆಲ್‌ ಮೂಲಕ ದಾಳಿ ನಡೆಸಿದ್ದು, ಕಿರಿಯ ನಿಯೋಜಿತ ಅಧಿಕಾರಿ (ಸುಬೆದಾರ್‌) ಹಾಗೂ ಮಹಿಳೆಯೊಬ್ಬಳು ಸಾವಿಗೀಡಾಗಿದ್ದಾರೆ. ಇದಕ್ಕೆ ಭಾರತೀಯ ಪಡೆಗಳು ಪ್ರತಿದಾಳಿ ನಡೆಸಿವೆ ಎಂದು ಮೂಲಗಳು ತಿಳಿಸಿವೆ.

ಪಾಕಿಸ್ತಾನದ ಸೇನಾ ಮುಖ್ಯಸ್ಥರು ಇತ್ತೀಚಿಗೆ ಗಡಿ ನಿಯಂತ್ರಣ ರೇಖೆಯ ಬಳಿ ಇರುವ ಹಾಜಿಪಿರ್‌ಗೆ ಭೇಟಿ ನೀಡಿದ ಬೆನ್ನಲ್ಲೇ ಈ ದಾಳಿ ನಡೆಸಲಾಗಿದೆ.