ಭಾರತ-ಜಪಾನ್ ನಡುವೆ ದ್ವಿಪಕ್ಷೀಯ ಮಾತುಕತೆಮುಂದಿನ ಐದು ವರ್ಷದಲ್ಲಿ ಜಪಾನ್ ನಿಂದ 3.2 ಲಕ್ಷ ಕೋಟಿ ಹೂಡಿಕೆಮಾತುಕತೆಯ ಬಳಿಕ ಪ್ರಧಾನಿ ನರೇಂದ್ರ ಮೋದಿ ಹೇಳಿಕೆ

ನವದೆಹಲಿ (ಮಾ.19): ಭಾರತದಲ್ಲಿ (In India) ಮುಂದಿನ ಐದು ವರ್ಷಗಳಲ್ಲಿ 42 ಬಿಲಿಯನ್ ಅಮೆರಿಕನ್ ಡಾಲರ್ ಹೂಡಿಕೆ ಮಾಡುವ ಗುರಿಯನ್ನು ಜಪಾನ್ (Japan) ಹೊಂದಿದೆ ಎಂದು ಪ್ರಧಾನಿ ನರೇಂದ್ರ ಮೋದಿ ( Prime Minister Narendra Modi ) ಅವರು ಶನಿವಾರ ಸಂಜೆ ದೆಹಲಿಯಲ್ಲಿ ಜಪಾನ್ ಪ್ರಧಾನಿ ಫುಮಿಯೊ ಕಿಶಿಡಾ ( Japan PM Fumio Kishida ) ಅವರೊಂದಿಗೆ ದ್ವಿಪಕ್ಷೀಯ ಸಭೆಯ (Bilateral Talks) ನಂತರ ಹೇಳಿದರು. "ಜಪಾನ್ ಮುಂದಿನ ಐದು ವರ್ಷಗಳಲ್ಲಿ ಭಾರತದಲ್ಲಿ ತನ್ನ ಹೂಡಿಕೆಯ ಗುರಿಯನ್ನು ಮಹತ್ವಾಕಾಂಕ್ಷೆಯ 5 ಟ್ರಿಲಿಯನ್ ಯೆನ್ ಅಥವಾ ₹ 3.2 ಲಕ್ಷ ಕೋಟಿಗೆ ($ 42 ಬಿಲಿಯನ್) ಹೆಚ್ಚಿಸಲಿದೆ" ಎಂದು ಪ್ರಧಾನಿ ಮೋದಿ ಘೋಷಿಸಿದರು.

14ನೇ ಭಾರತ-ಜಪಾನ್ ವಾರ್ಷಿಕ ಶೃಂಗಸಭೆಗಾಗಿ (India-Japan Annual Summit) ಜಪಾನ್ ಸರ್ಕಾರದ ಮುಖ್ಯಸ್ಥರಾಗಿ ಇದೇ ಮೊದಲ ಬಾರಿಗೆ ಭಾರತ ಭೇಟಿಗೆ ಉನ್ನತ ಮಟ್ಟದ ನಿಯೋಗದೊಂದಿಗೆ ಮಧ್ಯಾಹ್ನ 3.40ರ ಸುಮಾರಿಗೆ ಕಿಶಿದಾ ದೆಹಲಿಗೆ ಆಗಮಿಸಿದ್ದರು. ಜಪಾನ್‌ನ ಮಾಜಿ ಪ್ರಧಾನಿ ಶಿಂಜೋ ಅಬೆ (Shinzo Abe) ಅವರು 2014 ರಲ್ಲಿ ಭಾರತಕ್ಕೆ ಭೇಟಿ ನೀಡಿದಾಗ ಐದು ವರ್ಷಗಳಲ್ಲಿ ಭಾರತದಲ್ಲಿ ಹೂಡಿಕೆ ಹಾಗೂ ಹಣಕಾಸು ಕಾರ್ಯಗಳಿಗಾಗಿ 3.5 ಟ್ರಿಲಿಯನ್ ಯೆನ್ ಘೋಷಣೆ ಮಾಡುವುದಾಗಿ ತಿಳಿಸಿದ್ದರು.

ಜಪಾನ್ ದೇಶವು ತನ್ನ ಬುಲೆಟ್ ಟ್ರೈನ್ ತಂತ್ರಜ್ಞಾನದ ಆಧಾರದ ಮೇಲೆ ಭಾರತದ ನಗರ ಮೂಲಸೌಕರ್ಯ ಅಭಿವೃದ್ಧಿ ಮತ್ತು ಹೈಸ್ಪೀಡ್ ರೈಲ್ವೇಗೆ ಬೆಂಬಲ ನೀಡುತ್ತಿದೆ. ಇದಕ್ಕೂ ಮುನ್ನ ರಾಷ್ಟ್ರ ರಾಜಧಾನಿಯ ಹೈದರಾಬಾದ್ ಹೌಸ್‌ನಲ್ಲಿ ಉಭಯ ನಾಯಕರು ಉಭಯ ದೇಶಗಳ ನಡುವೆ ಆರ್ಥಿಕ ಮತ್ತು ಸಾಂಸ್ಕೃತಿಕ ಸಂಬಂಧವನ್ನು ಹೆಚ್ಚಿಸುವ ಮಾರ್ಗಗಳ ಕುರಿತು ಪ್ರಧಾನ ಮಂತ್ರಿಗಳ ಕಚೇರಿಯ ಪ್ರಕಾರ ಚರ್ಚಿಸಿದರು.

Scroll to load tweet…


ಪ್ರಧಾನಿ ಮೋದಿ ಅವರು 2021 ರ ಅಕ್ಟೋಬರ್‌ನಲ್ಲಿ ಅಧಿಕಾರ ವಹಿಸಿಕೊಂಡ ಕೂಡಲೇ ಪಿಎಂ ಕಿಶಿದಾ ಅವರೊಂದಿಗೆ ಫೋನ್‌ನಲ್ಲಿ ಮಾತನಾಡಿದ್ದರು. ವಿಶೇಷ ಕಾರ್ಯತಂತ್ರ ಮತ್ತು ಜಾಗತಿಕ ಪಾಲುದಾರಿಕೆಯನ್ನು ಮತ್ತಷ್ಟು ಬಲಪಡಿಸುವ ಬಯಕೆಯನ್ನು ಎರಡೂ ಕಡೆಯವರು ವ್ಯಕ್ತಪಡಿಸಿದ್ದಾರೆ. ಈ ವರ್ಷ ಉಭಯ ದೇಶಗಳ ನಡುವಿನ ರಾಜತಾಂತ್ರಿಕ ಸಂಬಂಧಗಳ ಸ್ಥಾಪನೆಯ 70 ನೇ ವಾರ್ಷಿಕೋತ್ಸವವನ್ನು ಆಚರಿಸಲಾಗುತ್ತಿದೆ.

Japan Earthquake ಜಪಾನ್ ರಾಜಧಾನಿ ಟೋಕಿಯೋ ಬಳಿ ಭಾರಿ ಪ್ರಮಾಣದ ಭೂಕಂಪ, ಸುನಾಮಿ ಎಚ್ಚರಿಕೆ!
“ಜಗತ್ತು ಇನ್ನೂ ಕೋವಿಡ್ -19 ಸಾಂಕ್ರಾಮಿಕ ಮತ್ತು ಅದರ ಅಡ್ಡಪರಿಣಾಮಗಳೊಂದಿಗೆ ಹೋರಾಡುತ್ತಿದೆ. ಜಾಗತಿಕ ಆರ್ಥಿಕ ಚೇತರಿಕೆಯ ಪ್ರಕ್ರಿಯೆಯಲ್ಲಿ ಇನ್ನೂ ಅಡೆತಡೆಗಳಿವೆ. ಭೌಗೋಳಿಕ-ರಾಜಕೀಯ ಘಟನೆಗಳು ಸಹ ಹೊಸ ಸವಾಲುಗಳನ್ನು ಪ್ರಸ್ತುತಪಡಿಸುತ್ತಿವೆ ಎಂದು ಪ್ರಧಾನಿ ಮೋದಿ ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ. ಭಾರತ-ಜಪಾನ್ ಪಾಲುದಾರಿಕೆಯನ್ನು ಗಾಢವಾಗಿಸುವುದರೊಂದಿಗೆ ಇಂಡೋ-ಪೆಸಿಫಿಕ್ ಪ್ರದೇಶದಲ್ಲಿ ಮತ್ತು ಜಾಗತಿಕ ಮಟ್ಟದಲ್ಲಿ ಶಾಂತಿ, ಸಮೃದ್ಧಿ ಮತ್ತು ಸ್ಥಿರತೆಯನ್ನು ಉತ್ತೇಜಿಸುತ್ತದೆ ಎಂದು ಪ್ರಧಾನಿ ಹೇಳಿದರು.
ಪ್ರಧಾನಿ ಮೋದಿ ಮತ್ತು ಪಿಎಂ ಫ್ಯೂಮಿಯೊ ಕಿಶಿದಾ ನಡುವಿನ ಮಾತುಕತೆಯ ನಂತರ ಭಾರತ ಮತ್ತು ಜಪಾನ್ ಆರು ಒಪ್ಪಂದಗಳಿಗೆ ಸಹಿ ಹಾಕಿದವು. ಪಿಎಂ ಮೋದಿ ಮತ್ತು ಪಿಎಂ ಕಿಶಿದಾ ನಡುವಿನ ಮಾತುಕತೆಯ ನಂತರ ಉಭಯ ದೇಶಗಳು ಶುದ್ಧ ಇಂಧನ ಪಾಲುದಾರಿಕೆಯನ್ನು ಘೋಷಿಸಿದವು.

Belagavi: ಮೈನವಿರೇಳಿಸಿದ ಇಂಡೋ - ಜಪಾನೀಸ್‌ ಜಂಟಿ ಸಮರಾಭ್ಯಾಸ
ಉಭಯ ದೇಶಗಳ ನಡುವಿನ ಆರ್ಥಿಕ ಮತ್ತು ಸಾಂಸ್ಕೃತಿಕ ಸಂಬಂಧಗಳನ್ನು ಹೆಚ್ಚಿಸುವ ಮಾರ್ಗಗಳನ್ನು ಚರ್ಚಿಸುವುದರ ಜೊತೆಗೆ, ಉಕ್ರೇನ್ ಮೇಲೆ ರಷ್ಯಾದ ಆಕ್ರಮಣ ಸೇರಿದಂತೆ ಇತರ ಜಾಗತಿಕ ವಿಷಯಗಳ ಕುರಿತು ಉಭಯ ನಾಯಕರು ಚರ್ಚಿಸಿದರು. ಉಕ್ರೇನ್ ಮೇಲಿನ ರಷ್ಯಾದ ದಾಳಿಯನ್ನು ಉಲ್ಲೇಖಿಸಿದ ಜಪಾನ್ ಪಿಎಂ ಕಿಶಿಡಾ, "ಬಲವನ್ನು ಬಳಸಿಕೊಂಡು ಯಥಾಸ್ಥಿತಿಯನ್ನು ಬದಲಾಯಿಸುವ ಏಕಪಕ್ಷೀಯ ಪ್ರಯತ್ನಗಳನ್ನು ಅನುಮತಿಸಬಾರದು" ಎಂದು ಹೇಳಿದರು. "ಉಕ್ರೇನ್‌ನ ಮೇಲೆ ರಷ್ಯಾದ ಆಕ್ರಮಣವು ಅತ್ಯಂತ ಗಂಭೀರವಾದ ಘಟನೆಯಾಗಿದ್ದು, ಇದು ಅಂತರರಾಷ್ಟ್ರೀಯ ನಿಯಮಗಳು ಮತ್ತು ವಿಶ್ವ ಕ್ರಮದ ಬೇರುಗಳನ್ನು ಅಲ್ಲಾಡಿಸಿದೆ" ಎಂದು ಜಪಾನಿನ ಪ್ರಧಾನಿ ಹೇಳಿದರು, "ಬಲದ ಬಳಕೆಯಿಂದ ಯಾವುದೇ ರೀತಿಯ ಏಕಪಕ್ಷೀಯ ಬದಲಾವಣೆಗಳನ್ನು ನಿಲ್ಲಿಸಲು ನಾವು ಬದ್ಧರಾಗಿರಬೇಕು." ಎಂದರು.