* ಜಮ್ಮು ವಿಮಾನ ನಿಲ್ದಾಣದ ಟೆಕ್ನಿಕಲ್ ಏರಿಯಾದಲ್ಲಿ ರಾತ್ರಿ ಸುಮಾರು 2 ಗಂಟೆಗೆ ಎರಡು ಸ್ಪೋಟ ಸಂಭವಿಸಿದೆ.* ಭಾರತೀಯ ವಾಯುಪಡೆಯು ನಿರ್ವಹಿಸುತ್ತಿರುವ ವಿಮಾನ ನಿಲ್ದಾಣದ ಒಂದು ಭಾಗದಲ್ಲಿ ಸ್ಫೋಟ* ಸ್ಫೋಟದ ತೀವ್ರತೆಗೆ ಕಟ್ಟಡವೊಂದರ ಛಾವಣಿ ಕುಸಿದು ಬಿದ್ದಿದೆ
ಜಮ್ಮು(ಜೂ.27): ಜಮ್ಮು ವಿಮಾನ ನಿಲ್ದಾಣದ ತಾಂತ್ರಿಕ ಕ್ಷೇತ್ರದಲ್ಲಿ ಭಾನುವಾರ ಸ್ಪೋಟ ಸಂಭವಿಸಿದೆ. ಭಾರತೀಯ ವಾಯುಪಡೆಯು ನಿರ್ವಹಿಸುತ್ತಿರುವ ವಿಮಾನ ನಿಲ್ದಾಣದ ಒಂದು ಭಾಗದಲ್ಲಿ ಸ್ಫೋಟ ಸಂಭವಿಸಿದೆ ಎಂದು ಮೂಲಗಳು ತಿಳಿಸಿವೆ. ಸ್ಫೋಟವು ತಡರಾತ್ರಿ ಎರಡು ಗಂಟೆಗೆ ಸಂಭವಿಸಿದ್ದು, ಬಾಂಬ್ ನಿಷ್ಕ್ರಿಯ ದಳ ಸ್ಫೋಟ ಸಂಭವಿಸಿದ ಸ್ಥಳವನ್ನು ತಲುಪಿದೆ.
ಜಮ್ಮು ವಾಯುಪಡೆ ನಿಲ್ದಾಣದ ತಾಂತ್ರಿಕ ಪ್ರದೇಶದಲ್ಲಿ ಭಾನುವಾರ ಮುಂಜಾನೆ ಕಡಿಮೆ ತೀವ್ರತೆಯ ಎರಡು ಸ್ಫೋಟಗಳು ವರದಿಯಾಗಿವೆ ಎಂದು ಐಎಎಫ್ ಬಿಡುಗಡೆ ಮಾಡಿದ ಅಧಿಕೃತ ಹೇಳಿಕೆಯಲ್ಲಿ ತಿಳಿಸಲಾಗಿದೆ.
ಸ್ಫೋಟದಲ್ಲಿ ಯಾರಿಗೂ ಗಾಯವಾಗಿಲ್ಲ ಅಥವಾ ಯಾವುದೇ ಉಪಕರಣಗಳಿಗೆ ಹಾನಿಯಾಗಿಲ್ಲ. ತನಿಖೆ ಾರಮಭಿಸಲಾಗಿದ್ದು, ಹೆಡಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.
