Asianet Suvarna News Asianet Suvarna News

ಮೋದಿ ಆಡಳಿತದಲ್ಲಿ ಐತಿಹಾಸಿಕ ಕ್ಷಣಕ್ಕೆ ಸಾಕ್ಷಿ, ಕಾಶ್ಮೀರದಲ್ಲಿ 35 ವರ್ಷಗಳ ಬಳಿಕ ಸಿನಿಮಾ ಥಿಯೇಟರ್!

ಜಮ್ಮು ಮತ್ತು ಕಾಶ್ಮೀರಕ್ಕೆ ಐತಿಹಾಸಿಕ ದಿನ. ಸದಾ ಬಾಂಬ್, ಉಗ್ರ ದಾಳಿ, ಕಲ್ಲುತೂರಾಟದಿಂದ ಕಣಿವೆ ರಾಜ್ಯದ ಚಿತ್ರಣವೇ ಬದಲಾಗಿತ್ತು. ಆದರೆ ಮೋದಿ ಆಡಳಿತದಲ್ಲಿ ಕಣಿವೆ ರಾಜ್ಯದ ಪರಿಸ್ಥಿತಿ ಬದಲಾಯಿತು. ಇದೀಗ ಜಮ್ಮು ಕಾಶ್ಮೀರಕ್ಕೆ ಮನರಂಜನೆ ಮರುಕಳಿಸಿದೆ. ಸದಾ ಗುಂಡು, ಬಾಂಬ್, ಕಲ್ಲ ತೂರಟದ ಶಬ್ದ ಹಾಗೂ ಆತಂಕದಿಂದಲೇ ದಿನದೂಡಿದ್ದ ಜನ ಇದೀಗ ಸಿನಿಮಾ ನೋಡುವ ಅವಕಾಶ ಪಡೆದಿದ್ದಾರೆ.

Jammu Kashmir Historic day under PM Modi administration multiplex theatre inaugurated by Lieutenant governor manoj sinha ckm
Author
First Published Sep 18, 2022, 4:36 PM IST

ಕಾಶ್ಮೀರ(ಸೆ.18): ಜಮ್ಮು ಮತ್ತು ಕಾಶ್ಮೀರದ ಜನ ಮನರಂಜನೆಯನ್ನೇ ಮರೆತಿದ್ದರು. ಕಾರಣ ಹೊರಗಡೆ ಹೋಗುವಂತಿಲ್ಲ, ಧೈರ್ಯ ಮಾಡಿ ಹೋದರೆ ಮನೆಗೆ ಮರಳಿ ಬರುವ ಯಾವುದೇ ವಿಶ್ವಾಸವಿಲ್ಲ. ಹಬ್ಬ, ಉತ್ಸವ, ಜಾತ್ರೆಗಳ ಒಂದು ಸಮುದಾಯಕ್ಕೆ ಮಾತ್ರ ಸೀಮಿತವಾಗಿತ್ತು. ಕಾಶ್ಮೀರಿ ಪಂಡಿತರು, ಹಿಂದೂಗಳು ಅನುಭಿವಿಸಿದ ನರಕ ಯಾತನೆ ಹೇಳತೀರದು. ಬರೋಬ್ಬರಿ 35 ರಿಂದ 40 ವರ್ಷಗಳ ಕಾಲ ಮನರಂಜನೆಯಿಂದ ದೂರ ಉಳಿದಿದ್ದ ಜಮ್ಮು ಮತ್ತು ಕಾಶ್ಮೀರದಲ್ಲಿ ಹೊಸ ಗಾಳಿ ಬೀಸಿದೆ. ಪ್ರಧಾನಿ ನರೇಂದ್ರ ಮೋದಿ ಕಣಿವೆ ರಾಜ್ಯವನ್ನು ಕೇಂದ್ರಾಡಳಿತ ಪ್ರದಶವನ್ನಾಗಿ ಘೋಷಿಸಿದ ಬಳಿಕ ತ್ವರಿತಗತಿಯಲ್ಲಿ ಚಿತ್ರಣ ಬದಲಾಯಿತು. ಇದೀಗ ಕಾಶ್ಮೀರದ ಪುಲ್ವಾಮಾ ಹಾಗೂ ಶೋಪಿಯಾನ್‌ನಲ್ಲಿ ಎರಡು ಮಲ್ಟಿಪ್ಲೆಕ್ಸ್ ಥಿಯೇಟರ್ ಉದ್ಘಾಟನೆ ಗೊಂಡಿದೆ. ಜಮ್ಮು ಮತ್ತು ಕಾಶ್ಮೀರ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹ ಮಲ್ಟಿಪ್ಲೆಕ್ಸ್ ಥಿಯೇಟರ್ ಉದ್ಘಾಟನೆ ಮಾಡಿದ್ದಾರೆ. ಉದ್ಘಾಟನೆ ದಿನ ಬಾಗ್ ಮಿಲ್ಕಾ ಬಾಗ್ ಬಾಲಿವುಡ್ ಚಿತ್ರ ಪ್ರದರ್ಶಿಸಲಾಗಿದೆ.

ಪುಲ್ವಾಮಾ(Pulwama) ಹಾಗೂ ಶೋಫಿಯಾನ್(Shopian) ವಲಯದಲ್ಲಿ ಎರಡು ಮಲ್ಟಿಪ್ಲೆಕ್ಸ್ ಥಿಯೇಟರ್(multiplex) ಉದ್ಘಾಟನೆ ಮಾಡಲಾಗಿದೆ. ಈ ಕುರಿತು ಮನೋಜ್ ಸಿನ್ಹಾ(Lenient governor Manoj Sinha) ಟ್ವೀಟ್ ಮೂಲಕ ಸಂತಸ ಹಂಚಿಕೊಂಡಿದ್ದಾರೆ. ಈ ಮಲ್ಲಿಪ್ಲೆಕ್ಸ್ ಥಿಯೇಟರ್‌ನಿದ ಕಣಿವೆ ರಾಜ್ಯದ(Jammu and Kashmir) ಜನತೆಗೆ ಎಲ್ಲರಂತೆ ಸಿನಿಮಾ ವೀಕ್ಷಿಸಲು ಸಾಧ್ಯವಾಗಲಿದೆ.  ಬಾಲಿವುಡ್ ಸೇರಿದಂತೆ ಎಲ್ಲಾ ಚಿತ್ರಗಳು ಈ ಮಲ್ಟಿಪ್ಲೇಕ್ಸ್ ಥಿಯೇಟರ್‌ನಲ್ಲಿ ಪ್ರದರ್ಶನಗೊಳ್ಳಲಿದೆ. ಆದರೆ ಈ ಮಲ್ಟಿಪ್ಲೆಕ್ಸ್ ಥಿಯೇಟರ್ ಕೇವಲ ಚಿತ್ರಪ್ರದರ್ಶನಕ್ಕೆ ಮಾತ್ರ ಸೀಮಿತವಾಗಿಲ್ಲ. ಯುವ ಸಮೂಹಕ್ಕೆ ತರಬೇತಿ ನೀಡುವ ಕೇಂದ್ರಗಳು ಆಗಿವೆ ಎಂದು ಮನೋಜ್ ಸಿನ್ಹ ಹೇಳಿದ್ದಾರೆ. ಸಿನಿಮಾ ಪ್ರೊಡಕ್ಷನ್, ನಿರ್ಮಾಣ, ಕಿರು ಚಿತ್ರ ನಿರ್ಮಾಣ, ನಿರ್ದೇಶನ ಕುರಿತು ತರಬೇತಿಗಳನ್ನು ನೀಡಲಾಗುತ್ತದೆ ಎಂದು ಮನೋಜ್ ಸಿನ್ಹ ಹೇಳಿದ್ದಾರೆ.

ಜಮ್ಮು ಕಾಶ್ಮೀರದಲ್ಲಿ ಸುಳ್ಳು ಸುದ್ದಿ ಹರಡುತ್ತಿದ್ದ 7 ನ್ಯೂಸ್ ವೆಬ್‌ಸೈಟ್‌ಗೆ ನಿಷೇಧ!

1980ರ ದಶಕದ ಆರಂಭದಲ್ಲಿ ಕಾಶ್ಮೀರದಲ್ಲಿ(Kashmir) ಎಲ್ಲಾ ರಾಜ್ಯಗಳಂತೆ ಸಿನಿಮಾ ಮಂದಿರದಲ್ಲಿ ಸಿನಿಮಾ(Cinema) ಪ್ರದರ್ಶನಗೊಳ್ಳುತ್ತಿತ್ತು. ಆದರೆ 80ರ ದಶಕದ ಆರಂಭದಲ್ಲೇ ಕಾಶ್ಮೀರವನ್ನು ಉಗ್ರರು ತೆಕ್ಕೆಗೆ ತೆಗೆದುಕೊಳ್ಳುವ ಪ್ರಯತ್ನಗಳು ಜೋರಾಗಿತ್ತು. ಕಾಶ್ಮೀರ ಪಂಡಿತರನ್ನು(Kashmir pandit) ಕಣಿವೆ ರಾಜ್ಯದಿಂದ ಹೊಡೆದೋಡಿಸುವ ಕೆಲಸವು ಶುರುವಾಗಿತ್ತು. ಮುಸ್ಲಿಂ ಮೂಲಭೂತವಾದಿಗಳು ಮಸೀದಿಗಳ ಮೈಕ್‌‌ಗಳಲ್ಲಿ ಬಹಿರಂಗವಾಗಿ ಪ್ರಕಟಣೆ ಹೊರಡಿಸಿದ್ದರು. ಪಂಡಿತರು, ಹಿಂದೂಗಳು ಮುಸ್ಲಿಂಗೆ ಮತಾಂತರಗೊಳ್ಳಬೇಕು ಇಲ್ಲಾ, ಬಿಟ್ಟು ಹೋಗಬೇಕು. ಆಜ್ಞೆ ಉಲ್ಲಂಘಿಸಿದರೆ ಹತ್ಯೆ ಎಂದು ಎಚ್ಚರಿಕೆ ನೀಡಲಾಗಿತ್ತು. 1900ರಲ್ಲಿ ಕಾಶ್ಮೀರ ಪಂಡಿತರ ನರಮೇಧವೆ(kashmir pandit genocide) ನಡೆದು ಹೋಗಿದೆ. ಈ ಕುರಿತ ದಿ ಕಾಶ್ಮೀರ ಫೈಲ್ಸ್ ಚಿತ್ರ(The Kashmir Files) ಕೂಡ ತೆರೆಗೆ ಬಂದಿದೆ.

 

 

ಕಾಶ್ಮೀರದ ಸಿನಿಮಾ ಥಿಯೇಟರ್‌ಗಳನ್ನು(cinema theatre) ಮುಚ್ಚುವ ಕೆಲಸವೂ ನಡೆಯಿತು. 1985ರ ವೇಳೆಗೆ ಜಮ್ಮು ಮತ್ತು ಕಾಶ್ಮೀರದ ಬಹುತೇಕ ಎಲ್ಲಾ ಸಿನಿಮಾ ಥಿಯೇಟರ್‌ಗಳು ಮುಚ್ಚಿ ಹೋಗಿತ್ತು. ಇನ್ನು 1999ರಲ್ಲಿ ಲಾಲ್ ಚೌಕ್‌ನಲ್ಲಿ ಸಿನಿಮಾ ಥಿಯೇಟರ್ ಮತ್ತೆ ತೆರೆಯಲಾಯಿತು. ಆದರೆ ಅಷ್ಟೇ ವೇಗದಲ್ಲಿ ಈ ಚಿತ್ರಮಂದಿರ ಮುಚ್ಚಲಾಗಿತ್ತು. ಜಮ್ಮು ಮತ್ತು ಕಾಶ್ಮೀರ ಜನರು 1990ರ ಬಳಿಕ ಹೊರಗಡೆ ಹೋಗಿ ಸಿನಿಮಾ ಮಂದಿರದಲ್ಲಿ ಚಿತ್ರ ನೋಡಿದ ಊದಾಹರಣೆಗಳಿಲ್ಲ. ಹೋಗುವ ಅವಕಾಶವೂ ಇರಲಿಲ್ಲ. 

 

ಪಾಕ್ ಆಕ್ರಮಿತ ಕಾಶ್ಮೀರ ಭಾರತದ ಅವಿಭಾಜ್ಯ ಅಂಗ, ಶತ್ರುರಾಷ್ಟ್ರದಲ್ಲಿ ತಳಮಳ ಸೃಷ್ಟಿಸಿದ ರಾಜನಾಥ್ ಹೇಳಿಕೆ!

ಮನರಂಜನೆಯಿಂದ ದೂರ ಉಳಿದಿದ್ದ ಜಮ್ಮು ಕಾಶ್ಮೀರ ಮತ್ತೆ ಸಹಜಸ್ಥಿತಿಗೆ ಮರಳುತ್ತಿದೆ. ಆರ್ಟಿಕಲ್ 370 ರದ್ದು, ಕೇಂದ್ರಾಡಳಿತ ಪ್ರದೇಶ ಘೋಷಣೆ ಬಳಿಕ ಕಣಿವೆ ರಾಜ್ಯ ಒಂದೊಂದು ಸವಲತ್ತು ಪಡೆಯತೊಡಗಿದೆ. ಇದೀಗ ಮಲ್ಟಿಪ್ಲೆಕ್ಸ್ ಉದ್ಘಾಟನೆಗೊಳ್ಳುವ ಮೂಲಕ ಹೊಸ ಇತಿಹಾಸ ರಚಿಸಿದೆ.
 

Follow Us:
Download App:
  • android
  • ios