Ramanagara: ನರೇಗಾ ಕಾಮಗಾರಿಗೆ ಮೇಘಾಲಯ ಟೀಂ ಮೆಚ್ಚುಗೆ
ಮೇಘಾಲಯ ರಾಜ್ಯದ ಯೋಜನಾ ಇಲಾಖೆ ಜಂಟಿ ಕಾರ್ಯದರ್ಶಿ ಡಿ.ಬಿ. ಗುಣಾಂಕ್ ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳ ತಂಡ ಬುಧವಾರ ತಾಲೂಕಿಗೆ ಭೇಟಿ ನೀಡಿ ನರೇಗಾ ಕಾಮಗಾರಿಗಳನ್ನು ವೀಕ್ಷಣೆ ಮಾಡಿತು.
ಕನಕಪುರ (ಜ.12): ಮೇಘಾಲಯ ರಾಜ್ಯದ ಯೋಜನಾ ಇಲಾಖೆ ಜಂಟಿ ಕಾರ್ಯದರ್ಶಿ ಡಿ.ಬಿ. ಗುಣಾಂಕ್ ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳ ತಂಡ ಬುಧವಾರ ತಾಲೂಕಿಗೆ ಭೇಟಿ ನೀಡಿ ನರೇಗಾ ಕಾಮಗಾರಿಗಳನ್ನು ವೀಕ್ಷಣೆ ಮಾಡಿತು. ಕರ್ನಾಟಕದಲ್ಲಿ ಜಲ ಸಂರಕ್ಷಣೆ-ವೈಜ್ಞಾನಿಕ ಯೋಜನೆ ಅನುಷ್ಠಾನ ಕುರಿತು ಅಧ್ಯಯನ ಮಾಡುವ ಉದ್ದೇಶದಿಂದ ಕನಕಪುರ ತಾಲೂಕಿಗೆ ಭೇಟಿ ನೀಡಿದ ಅಧಿಕಾರಿಗಳು, ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ಅನುಷ್ಠಾನ ಮಾಡಲಾದ ವಿವಿಧ ಕಾಮಗಾರಿಗಳನ್ನು ವೀಕ್ಷಿಸಿ, ಸಂಬಂಧಪಟ್ಟಅಧಿಕಾರಿಗಳ ಬಳಿ ಮಾಹಿತಿ ಪಡೆ ದರು.
ಮೊದಲಿಗೆ ಕೊಳ್ಳಿಗನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಡಸಿಕೊಪ್ಪ ಗ್ರಾಮದಲ್ಲಿ ನರೇಗಾ ಯೋಜನೆಯಡಿ ಅನುಷ್ಠಾನ ಮಾಡಲಾದ ಗ್ರಾಮೀಣ ಉದ್ಯಾನವನಕ್ಕೆ ಭೇಟಿ ನೀಡಿದರು. ಹೈಟೆಕ್ ಉದ್ಯಾನವನ ಕಾಮಗಾರಿ ಕಂಡು ಮೆಚ್ಚುಗೆ ವ್ಯಕ್ತಪಡಿಸಿದರು. ಜೊತೆಗೆ ಸಾರ್ವಜನಿಕರಿಗೆ ಹಾಗೂ ಮಕ್ಕಳಿಗೆ ಉದ್ಯಾನವನದಿಂದ ಆಗುತ್ತಿರುವ ಅನುಕೂಲಗಳ ಬಗ್ಗೆ ಮಾಹಿತಿ ಪಡೆದರು. ನಂತರ ಕಡಸಿಕೊಪ್ಪ ಸರ್ಕಾರಿ ಶಾಲೆಯ ಆವರಣದಲ್ಲಿ ಶಾಲಾ ಆಟದ ಮೈದಾನ ವೀಕ್ಷಿಸಿ, ಮಕ್ಕಳೊಂದಿಗೆ ಕ್ರೀಡಾ ಚಟುವಟಿಕೆ ಕುರಿತು ಸಂವಾದ ನಡೆಸಿದರು. ಮಕ್ಕಳು ಕೂಡ ಅತಿ ಉತ್ಸಾಹದಿಂದ ಭಾಗವಹಿಸಿ ಅಧಿಕಾರಿಗಳ ಮಾತುಗಳನ್ನು ಆಲಿಸಿದರು.
ಬಿಜೆಪಿ ಸೇರಲು ಮುಂದಾಗಿದ್ದ ಶಾಸಕ ಮಂಜುನಾಥ್: ಬಾಲಕೃಷ್ಣ ಆರೋಪ
ತರುವಾಯ ಚೀಲೂರು ಗ್ರಾಮ ಪಂಚಾಯಿತಿಯ ರಸ್ತೆ ಜಕ್ಕಸಂದ್ರ ಗ್ರಾಮದ ಚನ್ನಣ್ಣನ ಕೆರೆ ಅಬಿವೃದ್ಧಿ ಕಾಮಗಾರಿ ವೀಕ್ಷಿಸಿ, ಸಾರ್ವಜನಿಕರ ವಾಯುವಿಹಾರಕ್ಕಾಗಿ ಮಾಡಲಾಗಿ ರುವ ವಾಕಿಂಗ್ ಪಾತ್ ಕಂಡು ಅಧಿಕಾರಿಗಳನ್ನು ಪ್ರಶಂಸಿದರು. ಅದೇ ರೀತಿ ದ್ಯಾವಸಂದ್ರ ಗ್ರಾಮ ಪಂಚಾಯಿತಿಯ ರೇಷ್ಮೆ ಇಲಾಖೆಯ ಯೋಜನೆಯಡಿ ಅನುಷ್ಠಾನಿಸಲಾದ ರಾಜು/ಚೆಲುವೇಗೌಡ ಅವರ ಜಮೀನಲ್ಲಿ ಹಿಪ್ಪು ನೇರಳೆ ಕೃಷಿ ನಾಟಿ ಕಾಮಗಾರಿ ವೀಕ್ಷಿಸಿ, ಫಲಾನುಭವಿಯ ವಾರ್ಷಿಕ ಆದಾಯ ಹಾಗೂ ರೇಷ್ಮೆ ಕೃಷಿ ಬಗ್ಗೆ ಮಾಹಿತಿ ಪಡೆದರು.
ಬನವಾಸಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸ್ಮಶಾನ ಅಭಿವೃದ್ಧಿ ಕಾಮಗಾರಿ ಮತ್ತು ಚೆಕ್ ಡ್ಯಾಂ ನಿರ್ಮಾಣದ ಅನುಕೂಲಗಳ ಬಗ್ಗೆ ಸ್ವತಃ ರೈತರ ಬಳಿ ಸಂವಾದ ನಡೆಸಿದರು. ವಿವಿಧ ಕಾಮಗಾರಿಗಳ ಬಗ್ಗೆ ಜಿಪಂ ಸಿಇಒ ದಿಗ್ವಿಜಯ್ ಬೋಡ್ಕೆ ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳ ಬಳಿ ಸಮಾಲೋಚಿಸಿದ ಡಿ.ಬಿ.ಗುಣಾಂಕ್, ನರೇಗಾ ಯೋಜನೆ ಜಿಲ್ಲೆಯ ಜನರಿಗೆ ಬಹಳ ಹತ್ತಿರವಾಗಿವೆ. ಜಿಲ್ಲೆಯಲ್ಲಿ ಅನುಷ್ಠಾನಗೊಂಡ ಕಾಮಗಾರಿಗಳು ಬಹಳ ಉಪಯುಕ್ತವಾಗಿವೆ ಎಂದರು.
ಈ ಸಂದರ್ಭದಲ್ಲಿ ರಾಜ್ಯ ಆಯುಕ್ತಾಲಯದ ಜಂಟಿ ನಿರ್ದೇಶಕರು ಕೃಷಿ ಇಲಾಖೆ ರಶ್ಮಿ ,ಜಿಪಂ ಉಪಕಾರ್ಯದರ್ಶಿ ಟಿ.ಕೆ.ರಮೇಶ್, ರೇಷ್ಮೆ ಇಲಾಖೆ ಉಪ ನಿರ್ದೇಶಕ ಸಿ.ಡಿ.ಬಸವರಾಜು , ಕನಕಪುರ ತಾಪಂ ಕಾರ್ಯ ನಿರ್ವಾಹಕ ಅಧಿಕಾರಿ ಭೈರಪ್ಪ , ಸಹಾಯಕ ನಿರ್ದೇಶಕ ಮೋಹನ್ ಬಾಬು, ಆಯುಕ್ತಾಲಯದ ಸಹಾಯಕ ನಿರ್ದೇಶಕ ಶಿವಾನಂದ್ ಔರಾದ್, ಪೂಜಾ, ವಿನಾಯಕ್ , ಪ್ರಾಜೆಕ್ಟ್ ಎಕ್ಸಿಕ್ಯೂಟಿವ್ ರಾಜೇಶ್, ಎನ್ ಆರ್ ಎಲ… ಎಂ ಜಿಲ್ಲಾ ಕಾರ್ಯಕ್ರಮ ವ್ಯವಸ್ಥಾಪಕ ವಿನೋದ್ ಕುಮಾರ್ , ಜಿಲ್ಲಾ ಐಇಸಿ ಸಂಯೋಜಕ ಅರುಣ್ ಕುಮಾರ್, ಜಿಲ್ಲಾ ನರೇಗಾ ಶಾಖೆ ವಿಷಯ ನಿರ್ವಾಹಕ ಅಭಿಷೇಕ್, ತಾಂತ್ರಿಕ ಸಂಯೋಜಕ ಮಹದೇವಸ್ವಾಮಿ, ತಾಲೂಕು ಐಇಸಿ ಸಂಯೋಜಕರು ಪ್ರಸನ್ನ ಮತ್ತಿತರರು ಹಾಜರಿದ್ದರು.
ಜ.11ರಿಂದ ಐದು ದಿನಗಳ ಕಾಲ ಅದ್ಧೂರಿ ಕನಕೋತ್ಸವ: ಸಂಸದ ಸುರೇಶ್
ಇಲ್ಲಿ ನಡೆದಿರುವ ಕಾಮಗಾರಿಗಳು ನಮಗೂ ಸಹ ಹೊಸ ಅನುಭವ ಮತ್ತು ಹೊಸ ಯೋಜನೆ ಕಲ್ಪಿಸಿವೆ. ಚೆಕ್ ಡ್ಯಾಂ, ಉದ್ಯಾನವನದ ರೂಪ ಮತ್ತು ವಿನ್ಯಾಸ ಬಹಳ ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ. ಇಲ್ಲಿನ ಯೋಜನೆಗಳ ಬಗ್ಗೆ ನಮ್ಮ ರಾಜ್ಯಕ್ಕೆ ಪರಿಚಯ ಮಾಡಲು ಸೂಕ್ತವಾಗಿವೆ.
- ಡಿ.ಬಿ. ಗುಣಾಂಕ್, ಯೋಜನಾ ಇಲಾಖೆ ಜಂಟಿ ಕಾರ್ಯದರ್ಶಿ, ಮೇಘಾಲಯ