Asianet Suvarna News Asianet Suvarna News

ಮುಂದಿನ ಚುನಾವಣೆಯಲ್ಲಿ‘ಕಾಂಗ್ರೆಸ್‌’ಅಭ್ಯರ್ಥಿಗಳದೇ ಗೆಲುವು: ಮಾಜಿ ಸಂಸದ ಸಿ.ನಾರಾಯಣಸ್ವಾಮಿ

ದೇವನಹಳ್ಳಿ ಮತ್ತು ವಿಜಯಪುರ ಬ್ಲಾಕ್‌ ಮಟ್ಟದಲ್ಲಿ ಐವತ್ತಕ್ಕಿಂತ ಹೆಚ್ಚಿಗೆ ಡಿಜಿಟಲ್‌ ಸದಸ್ಯತ್ವ ನೋಂದಣಿ ಮಾಡಿಸಿದ ಸದಸ್ಯರಿಗೆ ಅಭಿನಂದನಾ ಸಮಾರಂಭ ನಡೆಯಿತು.

In the next election Congress candidates will win says Ex MP C Narayanaswamy gvd
Author
First Published Jan 12, 2023, 7:42 PM IST

ದೇವನಹಳ್ಳಿ (ಜ.12): ದೇವನಹಳ್ಳಿ ಮತ್ತು ವಿಜಯಪುರ ಬ್ಲಾಕ್‌ ಮಟ್ಟದಲ್ಲಿ ಐವತ್ತಕ್ಕಿಂತ ಹೆಚ್ಚಿಗೆ ಡಿಜಿಟಲ್‌ ಸದಸ್ಯತ್ವ ನೋಂದಣಿ ಮಾಡಿಸಿದ ಸದಸ್ಯರಿಗೆ ಅಭಿನಂದನಾ ಸಮಾರಂಭ ನಡೆಯಿತು. ನಗರದ ಬೆಂಗಳೂರು ರಸ್ತೆಯ ಚಿಕ್ಕಸಣ್ಣೆ ಬಳಿ ಇರುವ ಎಸ್‌ಎಸ್‌ಬಿ ಕನ್ವೆನ್ಷನ್‌ ಹಾಲ್‌ನಲ್ಲಿ ವಿಜಯಪುರ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ರಾಮಚಂದ್ರಪ್ಪ ಅಧ್ಯಕ್ಷತೆಯಲ್ಲಿ ಮಾಜಿ ಶಾಸಕ ವೆಂಕಟಸ್ವಾಮಿರವರು ಸಮಾರಂಭವನ್ನು ಆಯೋಜಿಸಿದ್ದರು. ಮಾಜಿ ಸಂಸದ ಸಿ.ನಾರಾಯಣಸ್ವಾಮಿ ಸಮಾರಂಭದ ಉದ್ಘಾಟನೆ ನೆರವೇರಿಸಿ, ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿಯೇ ದೇವನಹಳ್ಳಿ ತಾಲೂಕಿನಲ್ಲಿ ಹೆಚ್ಚು ಮಂದಿ ಸದಸ್ಯತ್ವ ಪಡೆದಿದ್ದು, ಮುಂಬರುವ ಚುನಾವಣೆಗಳಲ್ಲಿ ನಮ್ಮ ಪಕ್ಷದ ಅಭ್ಯರ್ಥಿಗಳು ಗೆಲವು ಸಾಧಿಸಲಿದ್ದಾರೆ ಎಂದರು.

ಸಮಾರಂಭದ ಆಯೋಜಕರಾದ ಮಾಜಿ ಶಾಸಕ ವೆಂಕಟಸ್ವಾಮಿ ಮಾತನಾಡಿ, ತಾಲೂಕಿನಲ್ಲಿ 52287 ಮಂದಿ ಹೊಸದಾಗಿ ಸದಸ್ಯತ್ವ ನೋಂದಣಿ ಮಾಡಿಕೊಂಡಿದ್ದಾರೆ. ಇದಕ್ಕೆ ಸಹಕರಿಸಿದವರನ್ನು ಅಭಿನಂದಿಸುತ್ತಿದ್ದೇವೆ ಎಂದು ತಿಳಿಸಿದ ಅವರು, ನಮ್ಮ ತಾಲೂಕಿನಿಂದ 14 ಮಂದಿ ವಿಧಾನಸಭೆಗೆ ಸ್ಪರ್ಧಿಸಲು ಅರ್ಜಿ ಹಾಕಿದ್ದಾರೆ. ಎಲ್ಲೋ ಒಂದು ಕಡೆ ಗುಂಪು ಗಾರಿಕೆ ಜಾಸ್ತಿಯಾಗುತ್ತದೆ. ಅಲ್ಲದೆ ನಮ್ಮ ಪಕ್ಷದ ಮುಖಂಡರ ಮೇಲೆ ಇಲ್ಲ ಸಲ್ಲದ ಅಪಪ್ರಚಾರ ಮಾಡಿ ಕಾಲೆಳೆಯುವ ಕೆಲಸ ಮಾಡುತ್ತಿದ್ದಾರೆ ಎಂದು ಆರೋಪಿಸಿದರು. ಸಮಾರಂಭದಲ್ಲಿ ಜಿ. ಪಂ. ಮಾಜಿ ಅಧ್ಯಕ್ಷ ಬಿ.ರಾಜಣ್ಣ, ಮುಖಂಡರಾದ ಶಾಂತಕುಮಾರ್‌, ಜಿ.ಪಂ. ಮಾಜಿ ಸದಸ್ಯ ಕೆ.ಸಿ. ಮಂಜುನಾಥ್‌, ಜಿಲ್ಲಾಧ್ಯಕ್ಷೆ ರೇವತಿ ಹಾಗೂ ಅನಂತಕುಮಾರಿ ಚಿನ್ನಪ್ಪ ಮಾತನಾಡಿದರು. ಸಮಾರಂಭದಲ್ಲಿ ಮುಖಂಡರಾದ ಬುಳ್ಳಹಳ್ಳಿ ರಾಜಪ್ಪ, ಪಟಾಲಪ್ಪ, ಸೋಮಣ್ಣ, ಲಕ್ಷ್ಮೇಕಾಂತ್‌ ಉಪಸ್ಥಿತರಿದ್ದರು.

Ramanagara: ನರೇಗಾ ಕಾಮಗಾರಿಗೆ ಮೇಘಾಲಯ ಟೀಂ ಮೆಚ್ಚುಗೆ

ಜ.16ಕ್ಕೆ ರಾಜ್ಯಕ್ಕೆ ಪ್ರಿಯಾಂಕ: ಪ್ರಿಯಾಂಕ ಗಾಂಧಿರವರು ಜ.16ರಂದು ಕರ್ನಾಟಕಕ್ಕೆ ಆಗಮಿಸಲಿದ್ದಾರೆ. ರಾಜ್ಯದಲ್ಲಿ ಶೇ.50ಕ್ಕಿಂತ ಹೆಚ್ಚು ಮಹಿಳಾ ಮತದಾರ ರಿದ್ದಾರೆ. ಆದ್ದರಿಂದ ಮಹಿಳೆಯರಿಗೆ ಹೆಚ್ಚು ಪ್ರಾತಿನಿಧ್ಯ ನೀಡಬೇಕೆಂಬ ದೃಷ್ಟಿಯಿಂದ ಸಾದಹಳ್ಳಿ ಗೇಟ್‌ ಬಳಿ ಸ್ವಾಗತ ಮಾಡಿ ನಂತರ ಅರಮನೆ ಮೈದಾನದಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಮಾಜಿ ಶಾಸಕ ಮುನಿ ನರಸಿಂಹಯ್ಯ ಹೇಳಿದರು.

ಹಿಂದುಳಿದ ವರ್ಗಗಳ ಮೂಲಕ ಕಾಂಗ್ರೆಸ್‌ ಸಂಘಟನೆ: ಹಿಂದುಳಿದ ವರ್ಗಗಳ ಮೂಲಕ ಕಾಂಗ್ರೆಸ್‌ ಪಕ್ಷವನ್ನು ಸಂಘಟನೆ ಮಾಡುತ್ತಿದ್ದು, ಈಗಾಗಲೇ ರಾಜ್ಯಾದ್ಯಂತ 25 ಜಿಲ್ಲೆಗಳಲ್ಲಿ ಪ್ರವಾಸ ಮಾಡಲಾಗಿದೆ ಎಂದು ಕೆಪಿಸಿಸಿ ಹಿಂದುಳಿದ ವರ್ಗಗಳ ರಾಜ್ಯಾಧ್ಯಕ್ಷ ಮಧು ಬಂಗಾರಪ್ಪ ತಿಳಿಸಿದರು. ಪಟ್ಟಣದ ಬ್ಲಾಕ್‌ ಕಾಂಗ್ರೆಸ್‌ ಪಕ್ಷ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ರಾಜ್ಯದಾದ್ಯಂತ ಸಂಚರಿಸಿ ಒಬಿಸಿ ಸಂಘಟನೆ ಮಾಡಲಾಗುತ್ತಿದೆ. ಜಿಲ್ಲಾವಾರು ಒಬಿಸಿ ಸಮಾವೇಶ ಮಾಡಿ ಜನರ ಬೇಡಿಕೆಗಳಿಗೆ ಅನುಗುಣವಾಗಿ ವಿಧಾನಸಭೆ ಚುನಾವಣೆ ಪ್ರಣಾಳಿಕೆ ತಯಾರಿಸಲಾಗುತ್ತದೆ ಎಂದರು.

ಆನೇಕಲ್‌ನಲ್ಲೊಂದು ವಿಸ್ಮಯ: ಒಂದೇ ಕೊಂಬೆಗೆ ಸರತಿಯಲ್ಲಿ ಬರುವ ನಾಗರ ಹಾವುಗಳು!

ಬಿಜೆಪಿ ವಿರುದ್ಧ ವಾಗ್ದಾಳಿ: ರಾಜ್ಯದಲ್ಲಿ ಬಿಜೆಪಿ ವಾಮಮಾರ್ಗದ ಮೂಲಕ ಅಧಿಕಾರಕ್ಕೆ ಬಂದಿದ್ದು, ಭ್ರಷ್ಟಾಚಾರದಲ್ಲಿ ಮುಳುಗಿದೆ. ಅಭಿವೃದ್ಧಿ ಪರ ಚರ್ಚೆ ಮಾಡದೇ ಬರಿ ಧರ್ಮ ಜಾತಿ ಆಧಾರದ ಮೇಲೆ ಮತ ಕೇಳುತ್ತಿದೆ. ಇದರಿಂದ ಜನರು ಬೇಸರಗೊಂಡಿದ್ದು, ಬರುವ ವಿಧಾನಸಭೆ ಚುನಾವಣೆಯಲ್ಲಿ ಖಂಡಿತವಾಗಿ ಕಾಂಗ್ರೆಸ್‌ ಪಕ್ಷ ಅಧಿಕಾರಕ್ಕೆ ಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ ಮಧು ಬಂಗಾರಪ್ಪ ಬಿಜೆಪಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. ಜಿಲ್ಲಾ ಒಬಿಸಿ ಅಧ್ಯಕ್ಷ ಕಾಶಿನಾಥ ಹುಡೇದ, ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಹನಮಂತ ಯಕ್ಕಪ್ಪನ್ನವರ, ಯುವಮುಖಂಡ ಭೀಮಸೇನ ಚಿಮ್ಮನಕಟ್ಟಿ, ಮಂಜು ಗುಬ್ಬಿ, ಶಶಿಕಾಂತ ಉದಗಟ್ಟಿ, ರೇವಣಸಿದ್ದಪ್ಪ ನೋಟಗಾರ, ರಂಗು ಗೌಡರ, ಹನಮಂತ ದೇವರಮನಿ, ಸಂಜಯ ಬರಗುಂಡಿ, ನಾಗಪ್ಪ ಅಡಪಟ್ಟಿ, ಮುತ್ತು ಬಾಗಲೆ, ಅನಿಲಕುಮಾರ ದಡ್ಡಿ, ಶಿವು ಮಣ್ಣೂರ, ಸಿದ್ದು ಗೌಡರ, ಇತರರು ಹಾಜರಿದ್ದರು.

Follow Us:
Download App:
  • android
  • ios