ಹತ್ಯೆಗೈದವರನ್ನು ಉಗ್ರರೆನ್ನಲು ಒಮರ್ ಹಿಂದೇಟು; ಸಿಎಂ ಮೃದು ಧೋರಣೆಗೆ ವ್ಯಾಪಕ ಟೀಕೆ
ಜಮ್ಮು ಕಾಶ್ಮೀರದ ಗಂದೇರ್‌ಬಾಲ್‌ನಲ್ಲಿ ನಾಗರಿಕರ ಮೇಲೆ ನಡೆದ ದಾಳಿಯನ್ನು 'ಉಗ್ರ ದಾಳಿ' ಎಂದು ಕರೆಯಲು ಸಿಎಂ ಒಮರ್ ಅಬ್ದುಲ್ಲಾ ಹಿಂದೇಟು ಹಾಕಿದ್ದಾರೆ.
ಶ್ರೀನಗರ: ಜಮ್ಮು ಕಾಶ್ಮೀರದ ಗಂದೇರ್‌ಬಾಲ್ ಜಿಲ್ಲೆಯಲ್ಲಿ ನಾಗರಿಕರ ಮೇಲೆ ನಡೆದ ದಾಳಿಯನ್ನು 'ಉಗ್ರ ದಾಳಿ' ಎಂದು ಕರೆಯಲು ಸಿಎಂ ಒಮರ್ ಅಬ್ದುಲ್ಲಾ ಹಿಂದೇಟು ಹಾಕಿದ್ದಾರೆ. ಅವರ ಈ ನಡೆಗೆ ಭಾರೀ ಟೀಕೆ ವ್ಯಕ್ತವಾಗಿದೆ. ಶ್ರೀನಗರ- ಲೇಹ್ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆಯುತ್ತಿದ್ದ ಸುರಂಗ ನಿರ್ಮಾಣಕ್ಕಾಗಿ ವಿವಿಧ ರಾಜ್ಯಗಳಿಂದ ಆಗಮಿಸಿದ್ದ ವೇಳೆ ಕಾರ್ಮಿಕರ ಮೇಲೆ ನಡೆದ ದಾಳಿಯನ್ನು ಖಂಡಿಸಿ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ ಒಮರ್, ದಾಳಿ ಮಾಡಿದವರನ್ನು ಉಗ್ರರೆಂದು ಟೀಕಿಸುವುದರಿಂದ ದೂರವೇ ಉಳಿದಿದ್ದಾರೆ. ಇದಕ್ಕೆ ಸಾಮಾಜಿಕ ಜಾಲತಾಣದಲ್ಲಿ ಭಾರೀ ಟೀಕೆ ವ್ಯಕ್ತವಾಗುತ್ತಿದ್ದು, 'ಜಮ್ಮು ಕಾಶ್ಮೀರದಲ್ಲಿ ಎನ್‌ಸಿ ಹಾಗೂ ಉಗ್ರವಾದ ಮರಳಿದೆ. ನಿಮ್ಮ ಪರಿವಾರ ಉಗ್ರರ ಪರ ಎಂದು ತಿಳಿದಿದೆ. ಆದರೆ ಸಾರ್ವಜನಿಕ ವೇದಿಕೆಗಳಲ್ಲಾದರೂ ಅವರನ್ನು ನೇರವಾಗಿ ಉಗ್ರರು ಎಂದು ಕರೆಯಿರಿ' ಎಂದು ಜನ ವ್ಯಂಗ್ಯವಾಡಿದ್ದಾರೆ. ಅತ್ತ ಮಾಜಿ ಸಿಎಂ ಮೆಹಬೂಬಾ ಮುಫ್ಟಿ ಕೂಡ ಇದನ್ನು ಉಗ್ರ ದಾಳಿ ಎಂದು ಕರೆದಿಲ್ಲ.
ಕಾಶ್ಮೀರದಲ್ಲಿ ವಲಸೆ ಕಾರ್ಮಿಕರ ಶಿಬಿರದ ಮೇಲೆ ಉಗ್ರರ ದಾಳಿ
ಜಮ್ಮು-ಕಾಶ್ಮೀರದ ಗಂದೇರ್‌ಬಾಲ್ ಜಿಲ್ಲೆಯಲ್ಲಿ ಭಾನುವಾರ ವಲಸೆ ಕಾರ್ಮಿಕರು ತಂಗಿದ್ದ ಶಿಬಿರದ ಮೇಲೆ ದಾಳಿ ನಡೆಸಿದ ಉಗ್ರರ ಬಳಿ ಭಾರೀ ಶಸ್ತ್ರಾಸ್ತ್ರಗಳಿದ್ದವು. ಹೆಚ್ಚು ಜನರನ್ನು ಕೊಲ್ಲುವ ಉದ್ದೇಶದಿಂದಲೇ ಕಾರ್ಮಿಕರ ಕ್ಯಾಂಪ್ ಮೇಲೆ ಉಗ್ರರು ದಾಳಿ ನಡೆಸಿದರು ಎಂದು ರಾಷ್ಟ್ರೀಯ ತನಿಖಾ ದಳ (ಎನ್‌ಐಎ) ತಿಳಿಸಿದೆ.
ವಲಸೆ ಕಾರ್ಮಿಕರ ಶಿಬಿರದ ಮೇಲೆ ದಾಳಿ, 7 ಸಾವು; ಉಗ್ರರಿಂದ ಆನ್‌ಲೈನ್ ನೇಮಕಾತಿ
ಘಟನಾ ಸ್ಥಳಕ್ಕೆ ಭೇಟಿ ನೀಡಿರುವ ಎನ್‌ಐಎ ತಂಡ ತನಿಖೆ ಕೈಗೊಂಡಿದ್ದಾರೆ. ಭಾನುವಾರ ಇಬ್ಬರು ಉಗ್ರರು ಶಸ್ತ್ರ ಸಜ್ಜಿತರಾಗಿ ಶಿಬಿರದ ಮೇಲೆ ದಾಳಿ ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಘಟನೆ ಬಗ್ಗೆ ಪ್ರತಿಕ್ರಿಯಿಸಿದ ನ್ಯಾಷನಲ್ ಕಾನ್ಫರೆನ್ಸ್ ಪಕ್ಷದ ಅಧ್ಯಕ್ಷ ಫಾರೂಖ್ ಅಬ್ದುಲ್ಲಾ, ‘ಪಾಕ್ ಸರ್ಕಾರ ಭಯತ್ಪಾದನೆಗೆ ಬೆಂಬಲ ನೀಡುವುದನ್ನು ನಿಲ್ಲಿಸುವವರೆಗೂ ಭಾರತದ ಜೊತೆಗೆ ಶಾಂತಿ ಮಾತುಕತೆ ಸಾಧ್ಯವಿಲ್ಲ’ ಎಂದಿದ್ದಾರೆ. ಇನ್ನೊಂದೆಡೆ ರಾಹುಲ್ ಗಾಂಧಿ, ‘ಗಂದೇರ್‌ಬಾಲ್ ಉಗ್ರ ದಾಳಿಯಲ್ಲಿ 7 ಮಂದಿಯನ್ನು ಕೊಂದಿರುವುದು ಹೇಡಿತನ ಮತ್ತು ಕ್ಷಮಿಸಲಾಗದ ಅಪರಾಧ’ ಎಂದಿದ್ದಾರೆ. ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಪ್ರತಿಕ್ರಿಯಿಸಿ, ‘ಇದೊಂದು ಅಮಾನವೀಯ ಹಾಗೂ ಹೇಯ ಕೃತ್ಯ. ಒಂದು ರಾಷ್ಟ್ರವಾಗಿ, ಉಗ್ರರ ವಿರುದ್ಧ ನಡೆಸುವ ಹೋರಾಟಕ್ಕೆ ನಮ್ಮ ಒಪ್ಪಿಗೆ ಇದೆ’ ಎಂದು ಹೇಳಿದ್ದಾರೆ.