ವಲಸೆ ಕಾರ್ಮಿಕರ ಶಿಬಿರದ ಮೇಲೆ ದಾಳಿ, 7 ಸಾವು; ಉಗ್ರರಿಂದ ಆನ್‌ಲೈನ್ ನೇಮಕಾತಿ

ಜಮ್ಮು-ಕಾಶ್ಮೀರದಲ್ಲಿ ಉಗ್ರರು ವಲಸೆ ಕಾರ್ಮಿಕರ ಶಿಬಿರದ ಮೇಲೆ ದಾಳಿ ನಡೆಸಿ 6 ವಲಸೆ ಕಾರ್ಮಿಕರು ಮತ್ತು ಓರ್ವ ವೈದ್ಯರನ್ನು ಕೊಂದಿದ್ದಾರೆ. ಈ ಘಟನೆಯಲ್ಲಿ ಐವರು ಗಾಯಗೊಂಡಿದ್ದಾರೆ. ಕಳೆದ ಮೂರು ದಿನಗಳಲ್ಲಿ ಏಳು ವಲಸೆ ಕಾರ್ಮಿಕರು ಬಲಿಯಾಗಿದ್ದಾರೆ.

Terrorist opened fire construction site at jammu kashmir mrq

ಶ್ರೀನಗರ: ಜಮ್ಮು-ಕಾಶ್ಮೀರದ ಗಂದೇರ್ ಬಾಲ್ ಜಿಲ್ಲೆಯಲ್ಲಿ ಭಾನುವಾರ ಉಗ್ರರು ವಲಸೆ ಕಾರ್ಮಿಕರ ಶಿಬಿರದ ಮೇಲೆ ದಾಳಿ ನಡೆಸಿದ್ದಾರೆ. ಆಗ 6 ವಲಸೆ ಕಾರ್ಮಿಕರು ಸಾವನ್ನಪ್ಪಿದ್ದಾರೆ. ಇದೇ ವೇಳೆ ಅವರ ಜತೆಗಿದ್ದ ಒಬ್ಬ ಕಾಶ್ಮೀರಿ ವೈದ್ಯನನ್ನೂ ಉಗ್ರರು ಸಾಯಿಸಿದ್ದಾರೆ. ಐವರು ಗಾಯಗೊಂಡಿದ್ದಾರೆ. ಇದರಿಂದ ಕಳೆದ 3 ದಿನದಲ್ಲಿ 7 ವಲಸೆ ಕಾರ್ಮಿಕರುಬಲಿಯಾದಂತಾಗಿದೆ.ಶುಕ್ರವಾರ ಬಿಹಾರಿಕಾರ್ಮಿಕನನ್ನು ಹತ್ಯೆ ಮಾಡಲಾಗಿತ್ತು. ಜಿಲ್ಲೆಯ ಗುಂಡ್‌ನಲ್ಲಿ ಹೆದ್ದಾರಿ ಸುರಂಗ ಕೊರೆತದಲ್ಲಿ ತೊಡಗಿದ್ದ ಖಾಸಗಿ ಕಂಪನಿಯ ಕಾರ್ಮಿಕರ ಶಿಬಿರದ ಮೇಲೆ ಇಬ್ಬರು ಉಗ್ರರು ಭಾನುವಾರ ದಾಳಿ ನಡೆಸಿದ್ದಾರೆ. ಈ ವೇಳೆ ಕಾರ್ಮಿಕರುಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಬಳಿಕ ಪರಾರಿ ಆಗಿರುವ ಉಗ್ರರಿಗೆ ಶೋಧ ನಡೆದಿದೆ ಕೃತ್ಯವನ್ನು ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಕೇಂದ್ರ ಗೃಹ ಸಚಿವ ಅಮಿತ್ ಶಾ ತೀವ್ರವಾಗಿ ಖಂಡಿಸಿದ್ದಾರೆ.

ಆನ್‌ಲೈನ್‌ ಮೂಲಕ  ನೇಮಕಾತಿಗೆ ಮುಂದಾದ ಉಗ್ರ ಸಂಘಟನೆಗಳು 
ಪಾಕಿಸ್ತಾನದ ಗುಪ್ತಚರ ಇಲಾಖೆ (ಐಎಸ್‌ಐ) ಮತ್ತು ಭಯೋತ್ಪಾದಕ ಸಂಘಟನೆಗಳು ಜಮ್ಮು ಮತ್ತು ಕಾಶ್ಮೀರದಲ್ಲಿ ಡಿಜಿಟಲ್ ಫ್ಲ್ಯಾಟ್‌ಫಾರ್ಮ್‌ಗಳ ಮೂಲಕ ನೇಮಕಾತಿ ಪ್ರಯತ್ನಗಳನ್ನು ಹೆಚ್ಚಿಸುತ್ತಿವೆ ಎಂದು ಮೂಲಗಳಿಂದ ತಿಳಿದು ಬಂದಿದೆ. ಆನ್‌ಲೈನ್‌ ಮೂಲಕ ಜಮ್ಮು ಕಾಶ್ಮೀರದಲ್ಲಿ ನೇಮಕಾತಿಗೆ ಯತ್ನಿಸುತ್ತಿರುವ ಐಎಸ್‌ಐ ಮತ್ತು ಉಗ್ರ ಗುಂಪುಗಳು ಎಕ್ಸ್‌, ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ವಾಟ್ಸ್ಯಾಪ್‌ಗಳಂತಹ ಸಂದೇಶ ಕಳುಹಿಸುವ ಡಿಜಿಟಲ್ ಫ್ಲ್ಯಾಟ್‌ಫಾರ್ಮ್‌ಗಳ ಮೂಲಕ ಯುವಕರನ್ನು ಸೆಳೆಯುವ ಯತ್ನ ಮಾಡುತ್ತಿವೆ. 

ಯಾರು ಪತ್ತೆಹಚ್ಚಬಾರದು ಎನ್ನುವ ಕಾರಣಕ್ಕೆ ನಕಲಿ ವಿಪಿಎನ್‌ ಖಾತೆಗಳನ್ನು ಬಳಕೆ ಮಾಡುತ್ತಿದ್ದಾರೆ. ಇದನ್ನು ಐಎಸ್‌ಐ ನಿಯೋಜನೆ ಮಾಡಿರುವ ಕೆಲವರು, ನೇಮಕಾತಿ ಮತ್ತು ದ್ವೇಷವನ್ನು ಪ್ರಚೋದಿಸಲು ಬಳಕೆ ಮಾಡುತ್ತಿದ್ದರು ಎನ್ನಲಾಗಿದೆ.

ಷ್ಟ್ರೀಯವಾದಿಗಳು ಎಂದು ಕರೆಯಲ್ಪಟ್ಟಿರುವ ಕೆಲವರು ಜಮಾತ್‌- ಎ- ಇಸ್ಲಾಮಿ ಸೇರಿದಂತೆ ಕೆಲ ತೀವ್ರಗಾಮಿ ಗುಂಪುಗಳೊಂದಿಗೆ ಸಂಬಂಧ ಹೊಂದಿದ್ದಾರೆ. ಮಾತ್ರವಲ್ಲದೇ ರಜೌರಿ ಮತ್ತು ಫೂಂಛ್‌ನಂತಹ ಕೆಲ ಜಿಲ್ಲೆಗಳಲ್ಲಿರುವ ನಿಷೇಧಗೊಂಡಿರವ ಟೆಲಿಗ್ರಾಮ್ ಮತ್ತು ಮಾಸ್ಟೋಡಾನ್‌ನಂತಹ ಅಪ್ಲಿಕೇಶನ್‌ಗಳನ್ನು ಹೆಚ್ಚಾಗಿ ಬಳಸಿಕೊಳ್ಳುತ್ತಿದ್ದಾರೆ ಇವರು ಬಳಸಿಕೊಳ್ಳುತ್ತಿದ್ದಾರೆ ಎನ್ನಲಾಗಿದೆ.

ಕಾಶ್ಮೀರದಲ್ಲಿ ಮೊದಲ ಅಂ.ರಾ. ಮ್ಯಾರಥಾನ್!
ಭಯೋತ್ಪಾದನೆಗೆ ನಲುಗಿರುವ ಕಾಶ್ಮೀರದಲ್ಲಿ ಬದಲಾವಣೆಯ ಸಂಕೇತ ಎಂಬಂತೆ ಮೊಟ್ಟ ಮೊದಲ ಅಂತಾರಾಷ್ಟ್ರೀಯ ಮ್ಯಾರಥಾನ್ ಓಟ ಭಾನುವಾರ ನಡೆದಿದೆ. 2000 ಜನ ಭಾಗಿಯಾಗಿದ್ದ ಈ ಮ್ಯಾರಥಾನ್‌ನಲ್ಲಿ ಮುಖ್ಯಮಂತ್ರಿ ಒಮರ್‌ ಅಬ್ದುಲ್ಲಾ ಕೂಡ ಪಾಲ್ಗೊಂಡು 2 ತಾಸಿನಲ್ಲಿ 21 ಕಿ.ಮೀ ಓಡಿ ಗಮನ ಸೆಳೆದಿದ್ದಾರೆ.

ಶ್ರೀನಗರದ ಪೋಲೋ ಸ್ಟೇಡಿಯಂನಲ್ಲಿ ಕಾಶ್ಮೀರದ ಮೊದಲ ಅಂತಾರಾಷ್ಟ್ರೀಯ ಮ್ಯಾರಥಾನ್ ನಡೆಯಿತು. 59 ವಿದೇಶಿ ಅಥ್ಲೀಟ್‌ಗಳು ಸೇರಿ ಸುಮಾರು 2000 ಜನರು ಭಾಗಿಯಾಗಿದ್ದರು. ಸಿಎಂ ಒಮರ್ ಅಬ್ದುಲ್ಲಾ ಅಲ್ಲದೆ, ಬಾಲಿವುಡ್‌ ನಟ ಸುನೀಲ್ ಶೆಟ್ಟಿ ಕೂಡ ಭಾಗಿಯಾಗಿದ್ದರು.

ಅಥ್ಲೀಟ್ಸ್‌ ಜೊತೆಗೆ ಮ್ಯಾರಥಾನ್‌ ಓಟದಲ್ಲಿ ಭಾಗಿಯಾಗಿದ್ದ ಒಮರ್ ಅಬ್ದುಲ್ಲಾ, 2 ಗಂಟೆಯಲ್ಲಿ 21 ಕಿ.ಮೀ ಓಡಿದರು. ಈ ಕುರಿತು ಟ್ವೀಟ್‌ ಮಾಡಿರುವ ಅವರು, ‘ಈ ಹಿಂದೆ ಒಂದು ಬಾರಿ 13 ಕಿ.ಮೀ ಓಡಿದ್ದೆ. ಅದಕ್ಕಿಂತ ಜಾಸ್ತಿ ಎಂದೂ ಓಡಿರಲಿಲ್ಲ. ಆದರೆ ಇಂದು ಮ್ಯಾರಥಾನ್‌ನಲ್ಲಿ ಪ್ರತಿ 5 ನಿಮಿಷ 54 ಸೆಕೆಂಡ್‌ಗೆ 1 ಕಿ.ಮೀ ಸರಾಸರಿಯಲ್ಲಿ 21 ಕಿಮೀ ಓಡಿದ್ದೇನೆ. ಇದು ಸಂತಸ ತಂದಿದೆ’ ಎಂದಿದ್ದಾರೆ.

Latest Videos
Follow Us:
Download App:
  • android
  • ios