ಹಿರಿಯ ಕಾಂಗ್ರೆಸ್ಸಿಗ ಗುಲಾಂ ನಬೀ ಆಜಾದ್ ತಮ್ಮನ ಮಗ BJP ತೆಕ್ಕೆಗೆ
ಹಿರಿಯ ಕಾಂಗ್ರೆಸ್ ನಾಯಕ ಹಾಗೂ ಜಮ್ಮು-ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಗುಲಾಂ ನಬೀ ಆಜಾದ್ ಅವರ ತಮ್ಮನ ಮಗ ಮುಬಾಶಿರ್ ಆಜಾದ್ ಅವರು ತಮ್ಮ ಬೆಂಬಲಿಗರೊಂದಿಗೆ ಭಾನುವಾರ ಬಿಜೆಪಿಗೆ ಸೇರ್ಪಡೆಯಾದರು.
ಜಮ್ಮು (ಫೆ.28): ಹಿರಿಯ ಕಾಂಗ್ರೆಸ್ ನಾಯಕ (Congress Leader) ಹಾಗೂ ಜಮ್ಮು-ಕಾಶ್ಮೀರದ (Jammu-Kashmira) ಮಾಜಿ ಮುಖ್ಯಮಂತ್ರಿ ಗುಲಾಂ ನಬೀ ಆಜಾದ್ (Ghulam Nabi Azad) ಅವರ ತಮ್ಮನ ಮಗ ಮುಬಾಶಿರ್ ಆಜಾದ್ (Mubashir Azad) ಅವರು ತಮ್ಮ ಬೆಂಬಲಿಗರೊಂದಿಗೆ ಭಾನುವಾರ ಬಿಜೆಪಿಗೆ ಸೇರ್ಪಡೆಯಾದರು.
ಯುವ ಮುಖಂಡ ಮುಬಾಶಿರ್ ಅವರ ಬಿಜೆಪಿ (BJP) ಸೇರ್ಪಡೆ ಜಮ್ಮು-ಕಾಶ್ಮೀರದಲ್ಲಿ ಬಿಜೆಪಿ ಆಗಿರುವ ಪ್ರಮುಖ ತಿರುವು ಎಂದು ಜಮ್ಮು-ಕಾಶ್ಮೀರ ಬಿಜೆಪಿ ಅಧ್ಯಕ್ಷ ರವೀಂದರ್ ರೈನಾ (Ravinder Raina) ಪ್ರತಿಪಾದಿಸಿದ್ದು, ಮುಂದಿನ ದಿನಗಳಲ್ಲಿ ಹಲವು ಯುವ ಮುಖಂಡರು ಬಿಜೆಪಿ ಸೇರಲಿದ್ದಾರೆ ಎಂದು ಆಶಿಸಿದ್ದಾರೆ. ಮುಬಾಶಿರ್ ಆಜಾದ್ ಅವರು ಗುಲಾಂ ನಬೀ ಆಜಾದ್ ಅವರ ಕಿರಿಯ ಸೋದರ ಲಿಯಾಖತ್ ಅಲಿ ಅವರ ಪುತ್ರ.
ಕೇಸರಿ ಪಕ್ಷ ಸೇರ್ಪಡೆ ಬಳಿಕ ಮಾತನಾಡಿದ ಮುಬಾಶಿರ್ ಅವರು, ‘ಪ್ರಧಾನಿ ನರೇಂದ್ರ ಮೋದಿ (Prime Minister Narendra Modi) ಅವರ ಕಾರ್ಯವೈಖರಿಯಿಂದ ಪ್ರಭಾವಿತನಾಗಿ ಬಿಜೆಪಿ ಸೇರಿದ್ದೇನೆ. ಹಿರಿಯ ನಾಯಕರಾದ ನನ್ನ ದೊಡ್ಡಪ್ಪ ಗುಲಾಂ ನಬೀ ಆಜಾದ್ ಅವರನ್ನು ಕಾಂಗ್ರೆಸ್ ಅವಮಾನಿಸಿದ್ದು, ನನ್ನ ಭಾವನೆಗೆ ಧಕ್ಕೆಯಾಗಿದೆ. ಅಂಥ ಪಕ್ಷ ಸೇರ್ಪಡೆ ನನಗೆ ಇಷ್ಟವಿಲ್ಲ. ಆದರೆ, ಬಿಜೆಪಿ ಸೇರುವ ಕುರಿತು ಗುಲಾಂ ನಬೀ ಆಜಾದ್ ಅವರ ಬಳಿ ಚರ್ಚಿಸಿಲ್ಲ’ ಎಂದು ಹೇಳಿದ್ದಾರೆ.
UP Elections: ಸ್ವಾಮಿ ಪ್ರಸಾದ್ ಪುತ್ರಿ ಸಂಘಮಿತ್ರ ನಡೆಯಿಂದ ಬಿಜೆಪಿ ತತ್ತರ!
ಕಾಂಗ್ರೆಸ್‌ನಲ್ಲಿ ಅಧ್ಯಕ್ಷ ಸೇರಿದಂತೆ ಇನ್ನಿತರ ಪ್ರಮುಖ ಹುದ್ದೆ ಸೇರಿ ಪಕ್ಷದ ಅಮೂಲಾಗ್ರ ಬದಲಾವಣೆಗೆ ಒತ್ತಾಯಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರಿಗೆ ಪತ್ರ ಬರೆದ ಕಾಂಗ್ರೆಸ್‌ನ ಹಿರಿಯ ಜಿ-23 ಗುಂಪಿನ ನಾಯಕರಲ್ಲಿ ಆಜಾದ್ ಸಹ ಒಬ್ಬರಾಗಿದ್ದರು.
ಮಹಿಳಾ ಆಯೋಗದ ಅಧ್ಯಕ್ಷೆ ಮನಿಷಾ ಗುಲಾಟಿ ಬಿಜೆಪಿಗೆ: ಪಂಜಾಬ್ ವಿಧಾನಸಭಾ ಚುನಾವಣೆಯ ದಿನಾಂಕ ಸಮೀಪಿಸುತ್ತಿದೆ. ಹೀಗಿರುವಾಗ ರಾಜ್ಯ ರಾಜಕಾರಣ ರಂಗೇರುತ್ತಿದೆ. ಈ ಮಧ್ಯೆ, ಪಂಜಾಬ್ ಮಹಿಳಾ ಆಯೋಗದ ಅಧ್ಯಕ್ಷೆ ಮನಿಶಾ ಗುಲಾಟಿ ಕಾಂಗ್ರೆಸ್ ತೊರೆದು ಭಾರತೀಯ ಜನತಾ ಪಕ್ಷ (ಬಿಜೆಪಿ) ಸೇರಲಿದ್ದಾರೆ ಎಂಬ ಮಾಹಿತಿ ಹೊರಬಿದ್ದಿದೆ. ಜಲಂಧರ್‌ನಲ್ಲಿ ನಡೆಯಲಿರುವ ಪ್ರಧಾನಿ ನರೇಂದ್ರ ಮೋದಿ ಅವರ ಮೊದಲ ಭೌತಿಕ ರ್ಯಾಲಿಯಲ್ಲಿ ಅವರು ಬಿಜೆಪಿ ಸೇರಬಹುದು ಎಂದು ಹೇಳಲಾಗುತ್ತಿದೆ.
ಮಹಿಳಾ ಹಕ್ಕುಗಳ ವಿಚಾರದಲ್ಲಿ ಸದ್ದು ಮಾಡುತ್ತಿರುತ್ತಾರೆ: ಮನಿಶಾ ಗುಲಾಟಿ ಅವರನ್ನು ಪಂಜಾಬ್ ಮಾಜಿ ಸಿಎಂ ಕ್ಯಾಪ್ಟನ್ ಅಮರಿಂದರ್ ಸಿಂಗ್ ಆಪ್ತರೆಂದು ಪರಿಗಣಿಸಲಾಗಿದೆ. ಸಿಎಂ ಆದ ಬಳಿಕ ಕ್ಯಾಪ್ಟನ್ ಮನೀಷಾಗೆ ಅಧ್ಯಕ್ಷ ಸ್ಥಾನವನ್ನು ಹಸ್ತಾಂತರಿಸಿದ್ದರು. ಅವರು ಕಾಂಗ್ರೆಸ್ ತೊರೆದು ಬಿಜೆಪಿಗೆ ಹೋಗುವುದರ ಹಿಂದೆ ಕ್ಯಾಪ್ಟನ್ ಅಮರಿಂದರ್ ಸಿಂಗ್ ಅವರ ದೊಡ್ಡ ಕೈವಾಡವಿದೆ ಎಂಬ ಚರ್ಚೆಯೂ ರಾಜಕೀಯ ವಲಯದಲ್ಲಿ ನಡೆಯುತ್ತಿದೆ. ಅವರು ರಾಜ್ಯದಲ್ಲಿ ಮಹಿಳೆಯರ ಹಕ್ಕುಗಳು ಮತ್ತು ಭದ್ರತೆಗಾಗಿ ಜನಮನದಲ್ಲಿ ಉಳಿದಿದ್ದಾರೆ. ಅಷ್ಟೇ ಅಲ್ಲ ರಾಜ್ಯದಲ್ಲಿರುವ ಮದುವೆಯಾದ ಪುರುಷರು ವಿದೇಶಕ್ಕೆ ಪಲಾಯನ ಮಾಡುವ ವಿಚಾರದ ಬಗ್ಗೆಯೂ ಉಲ್ಲೇಖಿಸಿದ್ದಾರೆ.
Punjab Elections: 'ದಿ ಗ್ರೇಟ್ ಖಲಿ' ಬಿಜೆಪಿಗೆ: ಕೃಷಿ ಕಾನೂನು ವಿರೋಧಿಸಿದ್ದ ರಾಣಾರಿಂದ ಮೋದಿ ಹೊಗಳಿಕೆ!
ಸಿಎಂ ಚನ್ನಿ MeToo ವಿಚಾರ ಪ್ರಸ್ತಾಪ: ಸಿಎಂ ಚರಣ್‌ಜಿತ್ ಸಿಂಗ್ ಚನ್ನಿ ಮೀಟೂ ವಿಚಾರವನ್ನು ಪ್ರಸ್ತಾಪಿಸಿದ ನಂತರ ಮನೀಶಾ ಗುಲಾಟಿ ಮುನ್ನೆಲೆಗೆ ಬಂದಿದ್ದರು ಎಂಬುವುದು ಉಲ್ಲೇಖನೀಯ. ಎರಡು ವರ್ಷಗಳ ಹಿಂದೆ ಚನ್ನಿ ವಿರುದ್ಧ ಮೀಟೂ ಕೇಸ್ ಹಾಕಿದ್ದರು ಮನೀಶಾ ಗುಲಾಟಿ. ಈ ಬಗ್ಗೆ ಕ್ರಮ ಜರುಗಿಸಿ, ನೋಟಿಸ್ ಕೂಡ ಜಾರಿ ಮಾಡಿದೆ. ಆದರೆ ಮುಖ್ಯಮಂತ್ರಿ ಕ್ಯಾಪ್ಟನ್ ಅಮರಿಂದರ್ ಸಿಂಗ್ ಮಧ್ಯಪ್ರವೇಶಿಸಿದ ನಂತರ ವಿಷಯ ಇತ್ಯರ್ಥವಾಗಿತ್ತು.