ಜಮ್ಮು ಮತ್ತು ಕಾಶ್ಮೀರ(ಜೂ.08): ಕಣಿವೆ ರಾಜ್ಯದ  ರಿಯಾಲಿ ಜಿಲ್ಲೆಯ ವೈಷ್ಣೋವಿ ದೇವಾಲಯದ ಸಂಕೀರ್ಣದಲ್ಲಿರುವ ಕಟ್ಟದಲ್ಲಿ ದಿಢೀರ್ ಬೆಂಕಿ ಕಾಣಿಸಿಕೊಂಡು ಸಂಪೂರ್ಣ ಕಟ್ಟದ ಧಗ ಧಗ ಹೊತ್ತಿ ಉರಿದಿದೆ. ಪರಿಣಾಮ ದೇವಾಲಯದ ನಗದು ಕೌಂಟರ್ ಸಂಪೂರ್ಣ ಭಸ್ಮವಾಗಿದೆ.

ವೈಷ್ಣೋ ದೇವಿ ಪೂಜೆಯ ಪ್ರಸಾದ ನಿಮ್ಮ ಮನೆ ಬಾಗಿಲಿಗೆ..!..

ಜಮ್ಮು ಮತ್ತು ಕಾಶ್ಮೀರದ ಅತ್ಯಂತ ಪವಿತ್ರ ಕ್ಷೇತ್ರ ವೈಷ್ಣೋವಿ ದೇವಾಲಯದ ಗರ್ಭ ಗುಡಿ ಸನಿಹದಲ್ಲಿರುವ ಕಾಳಿಕಾ ಭವನದಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಸಂಜೆ 4.15ರ ಸುಮಾರಿಗೆ ಕಾಣಿಸಿಕೊಂಡ ಬೆಂಕಿ ದಿಢೀರ್ ದೇಗುಲದ ನಗದು ಕೌಂಟರ್‌‌ಗೆ ಆವರಿಸಿಕೊಂಡಿದೆ. ಇದರಿಂದ ಕೌಂಟರ್ ಸಂಪೂರ್ಣ ಭಸ್ಮವಾಗಿದೆ. ಇಷ್ಟೇ ಅಲ್ಲ ದೇಗಲುದ ನಗದು ಹಣ ಸುಟ್ಟುಹೋಗಿದೆ. ಇದರೊಂದಿಗೆ ದಾಖಲೆ ಪತ್ರಗಳು ಕೂಡ ನಾಶವಾಗಿದೆ.

"

ತಕ್ಷಣವೇ ಸ್ಥಳಕ್ಕೆ ಆಗಮಿಸಿದ ರಿಯಾಸಿ ಜಿಲ್ಲಾ ಆಗ್ನಿಶಾಮಕ ದಳ ಹಾಗೂ ಪೊಲೀಸರು ಬೆಂಕಿ ನಂದಿಸುವ ಕಾರ್ಯದಲ್ಲಿ ಯಶಸ್ವಿಯಾಗಿದ್ದಾರೆ. ದೇಗುಲದ ಆಡಳಿತ ಮಂಡಳಿ ಸದಸ್ಯರು, ಭಕ್ತರು ಬೆಂಕಿ ನಂದಿಸಲು ನೆರವಾಗಿದ್ದಾರೆ. ಅಷ್ಟರವೇಳೆಗೆ ಕಾಳಿಗಾ ಭವನ ಸಂಪೂರ್ಣ ಹೊತ್ತಿ ಉರಿದಿದೆ. ಅದೃಷ್ಟವಶಾತ್ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ.

ಪುಣೆಯ ಸ್ಯಾನಿಟೈಸರ್ ಫ್ಯಾಕ್ಟರಿಯಲ್ಲಿ ಅಗ್ನಿ ದುರಂತ; ಸಾಂತ್ವನ ಜೊತೆಗೆ ಪರಿಹಾರ ಘೋಷಿಸಿದ ಮೋದಿ

ನಿನ್ನೆ(ಜೂ.07) ಪುಣೆಯ ಕೆಮಿಕಲ್ ಫ್ಯಾಕ್ಟರಿಯಲ್ಲಿ ಬೆಂಕಿ ಕಾಣಿಸಿಕೊಂಡಿತ್ತು. ಪರಿಣಾಮ 18 ಜೀವಗಳು ಸುಟ್ಟುಕರಕಲಾಗಿತ್ತು. ಈ ಘಟನೆ ಬೆನ್ನಲ್ಲೇ ಇದೀಗ ಜಮ್ಮು ಮತ್ತು ಕಾಶ್ಮೀರದ ವೈಷ್ಣೋವಿ ದೇವಾಲಯದಲ್ಲಿ ಆಗ್ನಿ ದುರಂತ ಸಂಭವಿಸಿದೆ. ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದ  ಬೆಂಕಿ ಕಾಣಿಸಿಕೊಂಡಿದೆ ಅಧಿಕಾರಿಗಳು ಹೇಳಿದ್ದಾರೆ.