ಹೊತ್ತಿ ಉರಿದ ಸ್ಯಾನಿಟೈಸರ್ ಫ್ಯಾಕ್ಟರಿ ಘಟಕದೊಳಗೆ ಸಿಲುಕಿಗ ಹಲವು ಸಿಬ್ಬಂದಿಗಳು  7 ಮಂದಿ ಸಾವು, 20 ಮಂದಿ ರಕ್ಷಣೆ, 10 ಮಂದಿ ಕಣ್ಮೆರೆ

ಪುಣೆ(ಜೂ.07): ಕೊರೋನಾ ವಕ್ಕರಿಸಿದ ಬಳಿಕ ಸ್ಯಾನಿಟೈಸರ್ ಬೇಡಿಕೆ ಹೆಚ್ಚಾಗಿದೆ. ಹೀಗಾಗಿ ಹಲವು ಕಂಪನಿಗಳು ಸ್ಯಾನಿಟೈಸರ್ ಉತ್ಪಾದನೆ ಮಾಡುತ್ತಿದೆ. ಹೀಗೆ ಸ್ಯಾನಿಟೈಸರ್ ಉತ್ಪಾದನೆ ಮಾಡುತ್ತಿದ್ದ ಪುಣೆಯ ಕೆಮಿಕಲ್ ಫ್ಯಾಕ್ಟರಿ ದಿಢೀರ್ ಹೊತ್ತಿ ಉರಿದಿದೆ. ಸದ್ಯದ ಮಾಹಿತಿ ಪ್ರಕಾರ 7 ಮಂದಿ ಬೆಂಕಿಯಲ್ಲಿ ಸುಟ್ಟು ಕರಕಲಾಗಿದ್ದಾರೆ.

ಕೊರೋನಾ ಮಾರ್ಗಸೂಚಿ ಪಾಲನೆ ವೇಳೆ ಎಚ್ಚರ ಮರೆತ ಚಾಲಕ; ಹೊತ್ತಿ ಉರಿದ ಕಾರು!.

ಬೆಂಕಿ ಕಾಣಿಸಿಕೊಂಡ ತಕ್ಷಣವೆ ಕೆಮಿಕಲ್ ಹೊತ್ತಿ ಉರಿದಿದೆ. ಪರಿಣಾಣ ಇಡಿ ಫ್ಯಾಕ್ಟರಿಗೆ ಆವರಿಸಿಕೊಂಡಿದೆ. ಕೆಲಸ ಮಾಡುತ್ತಿದ್ದ ಸಿಬ್ಬಂದಿಗಳಿಗೆ ಹೊರಗೆ ಓಡಲು ಸಾಧ್ಯವಾಗದೆ ಸಿಲುಕಿಕೊಂಡರು. 20 ಮಂದಿಯನ್ನು ರಕ್ಷಿಸಲಾಗಿದೆ. ಇನ್ನು 10 ಮಂದಿ ಕಣ್ಮರೆಯಾಗಿದ್ದಾರೆ.

Scroll to load tweet…

ಸ್ಥಳಕ್ಕೆ ಅಗ್ನಿಶಾಮಕ ದಳ ಧಾವಿಸಿದ್ದು ಬೆಂಕಿ ನಂದಿಸುವ ಕಾರ್ಯದಲ್ಲಿ ತೊಡಗಿದೆ. ಪೊಲೀಸರು ಠಿಕಾಂ ಹೂಡಿದ್ದು, ರಕ್ಷಣಾ ಕಾರ್ಯದಲ್ಲಿ ತೊಡಗಿದ್ದಾರೆ. ಅಗ್ನಿದುರಂತಕ್ಕೆ ತೀವ್ರ ಬೇಸರ ವ್ಯಕ್ತಪಡಿಸಸಿದ ಪ್ರಧಾನಿ ಮೋದಿ, ಮಡಿದವರ ಕಟುಂಬಕ್ಕೆ ಸಾಂತ್ವನ ಹೇಳಿದ್ದಾರೆ. ಇದೇ ವೇಳೆ ಮೃತರ ಕುಟುಂಬಕ್ಕೆ 2 ಲಕ್ಷ ರೂಪಾಯಿ ಹಾಗೂ ಗಾಯಗೊಂಡವರಿಗೆ 50,000 ಸಾವಿರ ರೂಪಾಯಿ ಘೋಷಿಸಿದ್ದಾರೆ.

Scroll to load tweet…
Scroll to load tweet…