ನವದೆಹಲಿ(ಜು. 08)  ದುರ್ವತನೆ ಮತ್ತು ಕೆಟ್ಟ ನಡವಳಿಕೆ ತೋರಿದ ಆರೋಪದ ಮೇಲೆ ಜಮ್ಮು ಮತ್ತು ಕಾಶ್ಮೀರ ಕೇಡರ್ ಐಪಿಎಸ್‌ ಅಧಿಕಾರಿ ಬಸಂತ್ ರಾತ್ ಅವರನ್ನು ಅಮಾನತು ಮಾಡಲಾಗಿದೆ.

ತಕ್ಷಣ ಜಾರಿಗೆ ಬರುವಂತೆ ಅಮಾನತು ಮಾಡಲಾಗಿದೆ ಎಂದು ಕೇಂದ್ರ ಗೃಹ ಇಲಾಖೆ ತಿಳಿಸಿದೆ. ಮಂಗಳವಾರ ಸಂಜೆ ಆದೇಶ ಹೊರಡಿಸಲಾಗಿದೆ. ಬಸಂತ್  2000 ನೇ ಇಸವಿಯ ಬ್ಯಾಚ್ ಅಧಿಕಾರಿ.

ನೆರೆಮನೆಯವರ ಮೇಲೆ ಐಪಿಎಸ್ ಅಧಿಕಾರಿ ಪತ್ನಿ ದೂರು

ಜಮ್ಮು ಮತ್ತು ಕಾಶ್ಮೀರ ಕೇಂದ್ರಾಡಳಿತ ಪ್ರದೇಶದ  ಕಾನೂನು ಮತ್ತು ಸುವ್ಯವಸ್ಥೆ ಐಜಿಯಾಗಿ ಬಸಂತ್  ನೇಮಕವಾಗಿದ್ದರು. ಜಮ್ಮು ಮತ್ತು ಕಾಶ್ಮೀರದ ಡೈರೆಕ್ಟರ್ ಜನರಲ್ ಅನುಮತಿ ಇಲ್ಲದೆ ಎಲ್ಲಿಯೂ ತೆರಳುವಂತಿಲ್ಲ ಎಂದು ತಿಳಿಸಲಾಗಿದೆ.

ದುಷ್ಟ ಶಕ್ತಿಗಳೊಂದಿಗೆ ಸಂಪರ್ಕ ಹೊಂದಿದ್ದ ಆರೋಪವೂ ರಾತ್ ಮೇಲೆ ಕೇಳಿ ಬಂದಿತ್ತು.  ಕೆಟ್ಟ ವರ್ತನೆ ಕಾರಣ ನೀಡಿ ಅವರನ್ನು ಇದೀಗ ಅಮಾನತು ಮಾಡಲಾಗಿದೆ.