ಬೆಂಗಳೂರು(ಜು. 04): ಕ್ಷುಲ್ಲಕ ಕಾರಣಕ್ಕೆ ಜಗಳ ತೆಗೆದು ಅವಾಚ್ಯವಾಗಿ ನಿಂದಿಸಿದ್ದಾರೆ ಎಂದು ಆರೋಪಿಸಿ ನೆರೆಮನೆ ನಿವಾಸಿ ಮಹಿಳೆ ವಿರುದ್ಧ ಐಪಿಎಸ್‌ ಅಧಿಕಾರಿ ಪತ್ನಿ ಕಮರ್ಷಿಯಲ್‌ ಸ್ಟ್ರೀಟ್‌ ಠಾಣೆಗೆ ದೂರು ನೀಡಿದ್ದಾರೆ.

ಅಧಿಕಾರಿ ಪತ್ನಿ ಹನಿ ಹಿಲೋರಿ ಕೊಟ್ಟದೂರಿನ ಮೇರೆಗೆ ಚಂದನಾ ಎಂಬ ಮಹಿಳೆ ವಿರುದ್ಧ ಎಫ್‌ಐಆರ್‌ ದಾಖಲಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

ಮಾಜಿ ಪ್ರೇಯಸಿಯ ಪತಿಗೆ ನಗ್ನ ವಿಡಿಯೋ ಕಳಿಸಿದ!

ಅಜಯ್‌ ಹಿಲೋರಿ ಕುಟುಂಬ ಇನ್ಫೆಂಟ್ರಿ ರಸ್ತೆಯಲ್ಲಿರುವ ಅಪಾರ್ಟ್‌ಮೆಂಟ್‌ನಲ್ಲಿ ವಾಸವಿದ್ದಾರೆ. ಕೆಎಸ್‌ಆರ್‌ಪಿ ಡಿಸಿಪಿಯಾಗಿರುವ ಅಜಯ್‌ ಹಿಲೋರಿ ಅವರಿಗೆ ಕೊರೋನಾ ಸೋಂಕು ದೃಢಪಟ್ಟಿರುವ ಹಿನ್ನೆಲೆಯಲ್ಲಿ ಚಿಕಿತ್ಸೆಗೆ ಒಳಗಾಗಿದ್ದಾರೆ. ಮನೆಯಲ್ಲೇ ಮಕ್ಕಳು ಹಾಗೂ ನಾನು ಕ್ವಾರಂಟೈನ್‌ ಆಗಿದ್ದೇವೆ. ಜೂ.29ರಂದು ಪತಿ ಆಸ್ಪತ್ರೆಯಿಂದ ಮಕ್ಕಳಿಗೆ ಕರೆ ಮಾಡಿ ಮಾತನಾಡುತ್ತಿದ್ದರು. ಚಿಕ್ಕಮಕ್ಕಳಾದ ಕಾರಣ ಜೋರಾಗಿ ಮಾತನಾಡುತ್ತಿದ್ದರು. ಇಷ್ಟಕ್ಕೆ ಅಪಾರ್ಟ್‌ಮೆಂಟ್‌ನ 2ನೇ ಮಹಡಿಯಲ್ಲಿರುವ ವಂದನಾ ಎಂಬಾಕೆ ಗಲಾಟೆ ತೆಗೆದರು. ಅಲ್ಲದೆ, ಅವಾಚ್ಯವಾಗಿ ನಿಂದಿಸಿ ಮನೆಯವರಿಗೆಲ್ಲ ಸೋಂಕು ತಗುಲಲಿ ಎಂದು ನಿಂದಿಸಿದ್ದರು ಎನ್ನಲಾಗಿದೆ.

ರಕ್ಷಿಸಿದ ವೈದ್ಯೆ ಸಾವಿಗೆ ನೊಂದು ಕಟ್ಟಡದಿಂದ ಹಾರಿ ನಾಯಿ ಸಾವು!

ಈ ಸಂಬಂಧ ಪೊಲೀಸರಿಗೆ ದೂರು ಕೊಟ್ಟ ಹಿನ್ನೆಲೆಯಲ್ಲಿ, ಆಕೆಯ ಮನೆ ಬಳಿ ಹೋಗಿ ಬುದ್ಧಿ ಹೇಳಿ ಹೋಗಿದ್ದರು. ಇದನ್ನೇ ಮನಸ್ಸಿನಲ್ಲಿಟ್ಟುಕೊಂಡು, ಪುನಃ ಮತ್ತೆ ಮನೆ ಬಳಿ ಹೋಗಿ ಗಲಾಟೆ ಮಾಡಿದ್ದಾರೆ. ಅಲ್ಲದೆ, ಇನ್ನೊಮ್ಮೆ ನನ್ನ ತಂಟೆಗೆ ಬಂದರೆ ಗತಿಕಾಣಿಸುವುದಾಗಿ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಿ ಅಧಿಕಾರಿ ಪತ್ನಿ ದೂರು ಕೊಟ್ಟಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಆರೋಪಿತೆ ಮಹಿಳೆ ವಂದನಾ, ಐಪಿಎಸ್‌ ಅಧಿಕಾರಿಯ ಪತ್ನಿ ದೌರ್ಜನ್ಯ ಎಸಗಿದ್ದಾರೆ ಎಂದು ಆರೋಪಿಸಿ ಸಾಮಾಜಿಕ ಜಾಲತಾಣ ಫೇಸ್‌ಬುಕ್‌ನಲ್ಲಿ ಬರೆದು ನಗರ ಪೊಲೀಸ್‌ ಆಯುಕ್ತರು ಹಾಗೂ ದಕ್ಷಿಣ ವಿಭಾಗ ಪೊಲೀಸ್‌ ಪೇಜ್‌ಗೆ ಟ್ಯಾಗ್‌ ಮಾಡಿ ನ್ಯಾಯ ಒದಗಿಸುವಂತೆ ಕೋರಿದ್ದರು.