ಜಾಮಿಯಾ ಹಿಂಸಾಚಾರ ಪ್ರಕರಣದಲ್ಲಿ, ಎಲ್ಲಾ 11 ಆರೋಪಿಗಳನ್ನು ಖುಲಾಸೆಗೊಳಿಸಿದ ಕೆಳ ನ್ಯಾಯಾಲಯದ ಆದೇಶವನ್ನು ದೆಹಲಿ ಹೈಕೋರ್ಟ್ ಭಾಗಶಃ ರದ್ದುಗೊಳಿಸಿದೆ. ನ್ಯಾಯಮೂರ್ತಿ ಸ್ವರ್ಣ ಕಾಂತ ಶರ್ಮಾ ಈ ಪ್ರಕರಣದಲ್ಲಿ ತೀರ್ಪು ನೀಡಿದ್ದು, 2 ಗಂಟೆಗೂ ಹೆಚ್ಚು ಕಾಲ ನಡೆದ ವಿಸ್ತೃತ ವಿಚಾರಣೆ ಬಳಿಕ ಆದೇಶವನ್ನು ಕಳೆದ ವಾರ ಕಾಯ್ದಿರಿಸಲಾಗಿತ್ತು.
ನವದೆಹಲಿ (ಮಾ.28): ದೆಹಲಿಯ ಜಾಮಿಯಾ ಹಿಂಸಾಚಾರ ಪ್ರಕರಣದಲ್ಲಿ, ಎಲ್ಲಾ 11 ಆರೋಪಿಗಳನ್ನು ಖುಲಾಸೆಗೊಳಿಸಿದ ವಿಚಾರಣಾ ನ್ಯಾಯಾಲಯದ ತೀರ್ಪನ್ನು ದೆಹಲಿ ಹೈಕೋರ್ಟ್ ಭಾಗಶಃ ರದ್ದು ಮಾಡಿದೆ. ಆದ್ದರಿಂದ, ಶಾರ್ಜೀಲ್ ಇಮಾಮ್, ಆಸಿಫ್ ತನ್ಹಾ, ಸಫೂರ ಜರ್ಗರ್ ಮತ್ತು ಇತರ 6 ಮಂದಿ ಗಲಭೆ ಮತ್ತು ಅಕ್ರಮ ಸಭೆಗೆ ಸಂಬಂಧಿಸಿದ ಆರೋಪಗಳ ವಿಚಾರಣೆಯನ್ನು ಎದುರಿಸಬೇಕಾಗಲಿದೆ. ಪೌರತ್ವ ತಿದ್ದುಪಡಿ ಕಾಯ್ದೆ ಅಂದರೆ ಸಿಎಎ ವಿರುದ್ಧ 2019 ರಲ್ಲಿ ಹಿಂಸಾತ್ಮಕ ಪ್ರತಿಭಟನೆಗಳು ನಡೆದಿದ್ದವು. ಈ ವೇಳೆ ದೆಹಲಿಯ ಜಾಮಿಯಾ ಪ್ರದೇಶದಲ್ಲಿ ಹಿಂಸಾಚಾರ ನಡೆದಿದೆ. ಈ ಹಿಂಸಾಚಾರದ ಆರೋಪಿಗಳಾದ ಶಾರ್ಜೀಲ್ ಇಮಾಮ್, ಸಫೂರ ಜರ್ಗರ್ ಮತ್ತು ಇತರ ಆರೋಪಿಗಳನ್ನು ಖುಲಾಸೆಗೊಳಿಸಿದ ಕೆಳ ನ್ಯಾಯಾಲಯದ ತೀರ್ಪನ್ನು ಪ್ರಶ್ನಿಸಿ ದೆಹಲಿ ಪೊಲೀಸರು ಹೈಕೋರ್ಟ್ ಮೆಟ್ಟಿಲೇರಿದ್ದರು. ಅದರ ವಿಚಾರಣೆ ನಡೆಸಿದ ದೆಹಲಿ ಹೈಕೋರ್ಟ್, ಕೆಳ ನ್ಯಾಯಾಲಯದ ತೀರ್ಪನ್ನು ಭಾಗಶಃ ರದ್ದು ಮಾಡಿದೆ.
ಕಳೆದ ವಾರ ದೆಹಲಿ ಹೈಕೋರ್ಟ್‌ನಲ್ಲಿ ಎರಡು ಗಂಟೆಗೂ ಅಧಿಕ ಕಾಲ ನಡೆದ ವಿಸ್ತ್ರತ ವಿಚಾರಣೆಯ ಬಳಿಕ, ತೀರ್ಪನ್ನು ನ್ಯಾಯಮೂರ್ತಿ ಸ್ವರ್ಣ ಕಾಂತಾ ಶರ್ಮ ಕಾಯ್ದಿರಿಸಿದ್ದರು. ಈ ಪ್ರಕರಣದಲ್ಲಿ, ಪ್ರಾಸಿಕ್ಯೂಟರ್ ದೆಹಲಿ ಪೊಲೀಸರು ದೆಹಲಿ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸುವ ಮೂಲಕ ಕೆಳ ನ್ಯಾಯಾಲಯದ ತೀರ್ಪನ್ನು ಪ್ರಶ್ನಿಸಿದರು. ವಿಚಾರಣೆಯ ಸಂದರ್ಭದಲ್ಲಿ, ವಿಚಾರಣಾ ನ್ಯಾಯಾಲಯವು ತನಿಖಾ ಸಂಸ್ಥೆಯ ವಿರುದ್ಧ ಅವಲೋಕನಗಳನ್ನು ರವಾನಿಸುವ ಮೂಲಕ ತನ್ನ ಅಧಿಕಾರ ವ್ಯಾಪ್ತಿಯನ್ನು ಉಲ್ಲಂಘಿಸಿದೆ ಎಂದು ದೆಹಲಿ ಪೊಲೀಸರು ಹೇಳಿದ್ದರು. ಅದಲ್ಲದೆ, ವಿಚಾರಣಾ ನ್ಯಾಯಾಲಯದ ಅವಲೋಕಗಳನ್ನು ತೀರ್ಪಿನಿಂದ ಹೊರಹಾಕಬೇಕು ಎಂದು ವಾದಿಸಿತ್ತು.
ಬಿಡುಗಡೆಯ ನಿರ್ಧಾರ ವಿರೋಧಿಸಿದ್ದ ದೆಹಲಿ ಪೊಲೀಸ್: ಹೈಕೋರ್ಟ್‌ನಲ್ಲಿ ಘಟನೆಯ ಕೆಲವು ವಿಡಿಯೋಗಳನ್ನು ದೆಹಲಿ ಪೊಲೀಸರು ನ್ಯಾಯಮೂರ್ತಿಗಳಿಗೆ ತೋರಿಸಿದರು. ಈ ವಿಡಿಯೋ ತುಣುಕುಗಳ ಆಧಾರದ ಮೇಲೆ ಕೆಳ ನ್ಯಾಯಾಲಯವು ಆ ವಿದ್ಯಾರ್ಥಿಗಳನ್ನು ಅಮಾಯಕರು ಎಂದು ಕರೆದರೆ, ಅದಕ್ಕೆ ಖಂಡಿತಾ ನಮ್ಮ ವಿರೋಧವಿದೆ. ಮೂರನೇ ಪೂರಕ ಆರೋಪ ಪಟ್ಟಿಯು ಗಾಯಾಳುಗಳ ಹೇಳಿಕೆಗಳನ್ನು ಒಳಗೊಂಡಿದೆ ಎಂದು ದೆಹಲಿ ಪೊಲೀಸರು ತಿಳಿಸಿದ್ದಾರೆ. ಇದರಲ್ಲಿ ಒಬ್ಬ ಗಾಯಾಳು ಇವರುಗಳನ್ನು ಗುರುತಿಸಿದ್ದ ಎಂದೂ ತಿಳಿಸಿದ್ದಾರೆ.
BBC documentary ಅನುಮತಿ ಇಲ್ಲದೆ ಯಾವುದೇ ಚಿತ್ರಕ್ಕೆ ಅವಕಾಶವಿಲ್ಲ, ಜಾಮಿಯಾ ವಿವಿ ಸ್ಪಷ್ಟನೆ!
ಶಾರ್ಜೀಲ್ ಪರ ವಕೀಲರು ಹೇಳಿದ್ದೇನು?: ಕಳೆದ ವಿಚಾರಣೆ ವೇಳೆ ಶರ್ಜೀಲ್ ಇಮಾಮ್ ಪರ ವಕೀಲರು ನನ್ನ ಕಕ್ಷಿದಾರನ ವಿರುದ್ಧ ಯಾವುದೇ ಸಾಕ್ಷಿಯ ವಿಡಿಯೋ ಅಥವಾ ಹೇಳಿಕೆ ಇಲ್ಲ, ನನ್ನ ವಿರುದ್ಧದ ಆರೋಪಪಟ್ಟಿಯಲ್ಲಿ ಒಂದು ಪದವೂ ಇಲ್ಲ ಎಂದು ಹೇಳಿದ್ದರು. ನನ್ನ ಮೇಲಿನ ಆರೋಪ ಸಾಬೀತುಪಡಿಸುವ ಯಾವುದೇ ಹೇಳಿಕೆ ಅವರ ವಿರುದ್ಧ ಇಲ್ಲ ಎಂದಿದ್ದರು.
'ಓಂ ಮತ್ತು ಅಲ್ಲಾ ಒಂದೇ..' ಎಂದ ಮುಸ್ಲಿಂ ಧರ್ಮಗುರು, ವೇದಿಕೆಯಿಂದ ಕೆಳಗಿಳಿದ ಹಿಂದು ಧಾರ್ಮಿಕ ನಾಯಕರು!
ಸಫುರಾ ಜರ್ಗರ್ ಪರ ವಕೀಲರು ವಾದ: ದೆಹಲಿ ಪೊಲೀಸರು ಮಾತನಾಡುತ್ತಿರುವ ವಿಡಿಯೋ ತುಣುಕಿನಲ್ಲಿ ನನ್ನ ಗುರುತು ಬಹಿರಂಗವಾಗಿಲ್ಲ ಎಂದು ಸಫೂರ ಜರ್ಗರ್ ಪರ ವಕೀಲರು ಹೇಳಿದ್ದರು. ಆ ಕ್ಲಿಪ್‌ನಲ್ಲಿರುವ ವ್ಯಕ್ತಿ ತನ್ನ ಮುಖವನ್ನು ಮುಚ್ಚಿಕೊಂಡಿದ್ದರಿಂದ ಗುರುತನ್ನು ಇಲ್ಲಿಯವರೆಗೆ ಬಹಿರಂಗಪಡಿಸಲಾಗಿಲ್ಲ. ಸಿಡಿಆರ್ ಆಧಾರದಲ್ಲಿ ನನ್ನ ಮೇಲೆ ಆರೋಪ ಹೊರಿಸುವಂತಿಲ್ಲ. ಘಟನೆ ನಡೆದ ಸ್ಥಳದಿಂದ ನನ್ನ ಮನೆ 3-4 ಕಿಲೋಮೀಟರ್ ದೂರದಲ್ಲಿದೆ ಎಂದಿದ್ದರು.
