'ಓಂ ಮತ್ತು ಅಲ್ಲಾ ಒಂದೇ..' ಎಂದ ಮುಸ್ಲಿಂ ಧರ್ಮಗುರು, ವೇದಿಕೆಯಿಂದ ಕೆಳಗಿಳಿದ ಹಿಂದು ಧಾರ್ಮಿಕ ನಾಯಕರು!

ದೆಹಲಿಯ ರಾಮಲೀಲಾ ಮೈದಾನದಲ್ಲಿ ನಡೆಯುತ್ತಿರುವ ಜಮೀಯತ್ ಉಲೇಮಾ-ಎ-ಹಿಂದ್‌ನ ವಾರ್ಷಿಕ ಮಹಾ ಅಧಿವೇಶನದಲ್ಲಿ ಅರ್ಷದ್ ಮದನಿ ಮಾತನಾಡುತ್ತಾ, ಹಿಂದು ಧರ್ಮದ ಓಂ ಹಾಗೂ ಇಸ್ಲಾಂನ ಅಲ್ಲಾ ಎರಡೂ ಒಂದೇ ಎಂದು ಹೇಳುವ ಮೂಲಕ ವಿವಾದ ಸೃಷ್ಟಿಸಿದ್ದರು. ಇದಕ್ಕೆ ಕೆರಳಿದ ಹಿಂದು ನಾಯಕರು ವೇದಿಕೆಯಿಂದ ಕೆಳಗಿಳಿದು ಹೊರನಡೆದಿದ್ದಾರೆ.
 

Muslim body chief Arshad Madani Om and Allah remark angry religious leaders leave stage san

ನವದೆಹಲಿ (ಫೆ.12): ಜಮಿಯತ್ ಉಲೇಮಾ-ಎ-ಹಿಂದ್ (ಅರ್ಷದ್ ಬಣ) ಅಧ್ಯಕ್ಷ ಮೌಲಾನಾ ಸೈಯದ್ ಅರ್ಷದ್ ಮದನಿ "ಓಂ ಮತ್ತು ಅಲ್ಲಾ ಒಂದೇ" ಎಂದು ಹೇಳುವ ಮೂಲಕ ಭಾನುವಾರ ಹೊಸ ವಿವಾದ ಸೃಷ್ಟಿಸಿದ್ದಾರೆ. ಜಮೀಯತ್ ಉಲಮಾ-ಎ-ಹಿಂದ್ ನ 34ನೇ ಮಹಾ ಅಧಿವೇಶನದಲ್ಲಿ ಪಾಲ್ಗೊಂಡಿದ್ದ ಹಿಂದು ಸೇರಿದಂತೆ ಇತರ ಧರ್ಮದ ಹಲವಾರು ಧಾರ್ಮಿಕ ಮುಖಂಡರು ಅರ್ಷದ್ ಮದನಿ ಭಾಷಣದ ನಂತರ ಸಿಟ್ಟಿನಿಂದ ವೇದಿಕೆಯ ಕೆಳಗಿಳಿದು ಹೋಗಿದ್ದಾರೆ. ಸುದ್ದಿಸಂಸ್ಥೆ ಎಎನ್‌ಐ ಈ ವಿಡಿಯೋವನ್ನು ತನ್ನ ಟ್ವಿಟರ್‌ ಪುಟದಲ್ಲಿ ಹಂಚಿಕೊಂಡಿದೆ. ಇದರದಲ್ಲಿ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಅರ್ಷದ್‌ ಮದನಿ, 'ನಾನು ಹಿಂದು ಧರ್ಮಗುರುಗಳಲ್ಲಿ ಒಂದು ವಿಚಾರ ಕೇಳುತ್ತಿದ್ದೆ. ಶ್ರೀರಾಮನಾಗಲಿ, ಬ್ರಹ್ಮನಾಗಲಿ ಯಾರೂ ಇಲ್ಲದಿದ್ದಾಗ, ಮನು ಯಾರನ್ನು ಪೂಜೆ ಮಾಡುತ್ತಿದ್ದರು? ಎನ್ನುವ ಪ್ರಶ್ನೆ ಕೇಳಿದೆ. ಅದಕ್ಕೆ ಅವರು ಆ ಸಮಯದಲ್ಲಿ 'ಓಂ' ಆರಾಧನೆ ಮಾಡುತ್ತಿದ್ದರು ಎಂದು ಹೇಳಿದ್ದರು. ಆಗ ನಾನು ಅವರಿಗೆ ಹೇಳಿದ್ದೇನೆಂದರೆ, ಇದರರ್ಥ ಓಂ ಅಥವಾ ಅಲ್ಲಾ ಒಂದೇ, ಮತ್ತು ಎರಡೂ ಒಂದೇ, ಮತ್ತು ಮನು ಪೂಜಿಸುತ್ತಿದ್ದ ಏಕೈಕ ವಸ್ತು ಇದೇ ಆಗಿದೆ. ಶಿವನೂ ಇಲ್ಲ, ಬ್ರಹ್ಮನೂ ಇಲ್ಲ. ಇದ್ದಿದ್ದು ಓಂ ಹಾಗೂ ಅಲ್ಲಾ ಮಾತ್ರ. ನೀವು ಓಂ ಆರಾಧನೆ ಮಾಡುವುದನ್ನೇ ನಾವು ಅಲ್ಲಾ ಎಂದು ಕರೆಯುತ್ತೇವೆ. ಅದನ್ನೇ ನೀವು ಹಿಂದುಗಳು ಈಶ್ವರ ಎನ್ನುತ್ತೀರಿ. ಪರ್ಷಿಯನ್‌ ಜನರು ಖುದಾ ಎನ್ನುತ್ತಾರೆ. ಇಂಗ್ಲೀಷ್‌ ಭಾಷೆಯ ಜನರು ಇದನ್ನು 'ಗಾಡ್‌' ಎನ್ನುತ್ತಾರೆ' ಎಂದು ಹೇಳಿದ್ದರು.


ದೆಹಲಿಯ ರಾಮಲೀಲಾ ಮೈದಾನದಲ್ಲಿ ನಡೆಯುತ್ತಿರುವ ಜಮೀಯತ್ ಉಲೇಮಾ-ಎ-ಹಿಂದ್‌ನ ವಾರ್ಷಿಕ ಮಹಾ ಅಧಿವೇಶನದಲ್ಲಿ ಅರ್ಷದ್ ಮದನಿ ಈ ವಿವಾದಾತ್ಮಕ ಮಾತುಗಳನ್ನು ಆಡಿದ್ದಾರೆ.  ಆರ್ಷದ್‌ ಮದನಿ ಮಾತಿನ ಬಳಿಕ ವೇದಿಕೆಯಲ್ಲಿದ್ದ ಜೈನ ಮುನಿ ಆಚಾರ್ಯ ಲೋಕೇಶ್‌ ಮುನಿ ಮಾತನಾಡುತ್ತಾ, ಆರ್ಷದ್‌ ಮದನಿ ಅವರ ಹೇಳಿಕೆಗೆ ಆಕ್ಷೇಪ ವ್ಯಕ್ತಪಡಿಸಿದರು. 'ಭಾವೈಕ್ಯತೆಯಿಂದ ಬಾಳಬೇಕು ಎನ್ನುವ ಮಾತನ್ನು ನಾನು ಮಾತ್ರವೇ ಒಪ್ಪುತ್ತೇನೆ. ಆದರೆ, ಅವರು ಹೇಳಿದ ಓಂ, ಅಲ್ಲಾ ಹಾಗೂ ಮನು ವಿಚಾರದ ಎಲ್ಲಾ ಕಥೆಗಳು ಕಸದ ತೊಟ್ಟಿಗೆ ಹಾಕುವಂಥವು. ಅವರು (ಮದನಿ) ಅಧಿವೇಶನದ ವಾತಾವರಣವನ್ನು ಸಂಪೂರ್ಣವಾಗಿ ಹಾಳು ಮಾಡಿದ್ದಾರೆ' ಎಂದು ಹೇಳಿದರು.

ಅವರು ಕಟ್ಟುಕಥೆಗಳನ್ನು ಹೇಳಿದ್ದಾರೆ. ನಾನು ಅದಕ್ಕಿಂತ ದೊಡ್ಡದಾದ ಕಥೆಗಳನ್ನು ಹೇಳಬಲ್ಲೆ. ನನ್ನೊಂದಿಗೆ ಚರ್ಚೆಗೆ ಬರಲು ಮದನಿ ಅವರಿಗೆ ವಿನಂತಿಸುತ್ತೇನೆ ಅಥವಾ ಸಹರಾನ್‌ಪುರದಲ್ಲಿಯೇ ನಾನು ಅವರನ್ನು ಭೇಟಿಯಾಗಿ ಇಂಥ ಕಥೆಗಳನ್ನು ಹೇಳಬಲ್ಲೆ' ಎಂದು ವೇದಿಕೆಯಲ್ಲಿಯೇ ಆಕ್ರೋಶ ವ್ಯಕ್ತಪಡಿಸಿದರು. ಮೊದಲ ಜೈನ ತೀರ್ಥಂಕರರು ರಿಷಭರು ಮತ್ತು ಅವರ ಮಕ್ಕಳು ಭರತ ಮತ್ತು ಬಾಹುಬಲಿ ಎಂದು ನೆನಪಿಸಿಕೊಳ್ಳಬೇಕು, ಅವರ ಹೆಸರಿನ ಮೇಲೆ ಈ ದೇಶವನ್ನು ಭಾರತ ಎಂದು ಹೆಸರಿಸಲಾಗಿದೆ ಎನ್ನುವುದನ್ನು ಅವರು ಅರ್ಥ ಮಾಡಿಕೊಳ್ಳಬೇಕು. ನೀವು ಇದನ್ನು ಅಳಿಸಿ ಹಾಕೋಕೆ ಸಾಧ್ಯವೇ ಇಲ್ಲ. ನಿಮ್ಮ ಹೇಳಿಕೆಯನ್ನು ನಾನು ಒಪ್ಪೋದಿಲ್ಲ' ಎಂದು ಮದನಿ ಅವರ ಮಾತುಗಳಿಂದ ಕೋಪಗೊಂಡಿದ್ದ ಆಚಾರ್ಯ ಮುನಿ ಹೇಳಿದ್ದಾರೆ. ವೇದಿಕೆಯ ಮೇಲಿದ್ದ ಇತರ ಜೈನ ಹಾಗೂ ಹಿಂದು ಧರ್ಮದ ಸಂತರು ಕೂಡ ವೇದಿಕೆಯಿಂದ ಈ ವೇಳೆ ಕೆಳಗಿಳಿದು ಹೋಗಿದ್ದಾರೆ.

ಇಸ್ಲಾಂ ಧರ್ಮ ಭಾರತಕ್ಕೆ ಬಂದಿದ್ದಲ್ಲ. ಅದು ಸೃಷ್ಟಿಯಾಗಿದ್ದೇ ಭಾರತದಲ್ಲಿ: ಮದನಿ

ಅಧಿವೇಶನವನ್ನುದ್ದೇಶಿಸಿ ಮಾತನಾಡಿದ ಅರ್ಷದ್ ಮದನಿ, "ದೇಶದಲ್ಲಿ ಸುಮಾರು 1400 ವರ್ಷಗಳಿಂದ ಹಿಂದೂಗಳು ಮತ್ತು ಮುಸ್ಲಿಮರು ಸಹೋದರರಂತೆ ವಾಸಿಸುತ್ತಿದ್ದಾರೆ ಮತ್ತು ನಾವು ಯಾರನ್ನೂ ಬಲವಂತವಾಗಿ ಇಸ್ಲಾಂಗೆ ಪರಿವರ್ತಿಸಿಲ್ಲ" ಎಂದು ಹೇಳಿದರು. 20 ಕೋಟಿ ಮುಸ್ಲಿಮರನ್ನು ಮನೆಗೆ ಕಳುಹಿಸಬೇಕು ಎಂದು ನಾವು ಕೇಳಿದ್ದು ಬಿಜೆಪಿ ಸರ್ಕಾರದ ಅಡಿಯಲ್ಲಿ ಮಾತ್ರ, ಅವರನ್ನು ಮನೆಗೆ ಕಳುಹಿಸುವ ಮೂಲಕ ಅವರನ್ನು ಹಿಂದೂಗಳಾಗಿ ಪರಿವರ್ತಿಸಲು ಅವರು ಉದ್ದೇಶಿಸಿದ್ದಾರೆ. ಈ ಜನರಿಗೆ ಭಾರತದ ಇತಿಹಾಸದ ಬಗ್ಗೆ ಏನೂ ತಿಳಿದಿಲ್ಲ ಎಂದು ಅವರು ಹೇಳಿದರು.

ನಾನು ಇಸ್ಲಾಂ ಧರ್ಮ ಅನುಸರಿಸುತ್ತಿಲ್ಲ; ಧರ್ಮವನ್ನು ಟಾರ್ಗೇಟ್ ಮಾಡಿದವರಿಗೆ ಉರ್ಫಿ ಖಡಕ್ ತಿರುಗೇಟು

ಶನಿವಾರದಂದು, ಜಮಿಯತ್ ಉಲೇಮಾ-ಎ-ಹಿಂದ್ (ಮಹಮೂದ್ ಮದನಿ ಬಣ) ಅಧ್ಯಕ್ಷ ಮೌಲಾನಾ ಮಹಮೂದ್ ಮದನಿ ಭಾರತವು "ಇಸ್ಲಾಂನ ಜನ್ಮಸ್ಥಳ" ಎಂದು ಪ್ರತಿಪಾದಿಸಿದ್ದರು ಮತ್ತು ಪ್ರಧಾನಿ ನರೇಂದ್ರ ಮೋದಿ ಮತ್ತು ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್‌ ಅವರಂತೆಯೇ ದೇಶವು ತನಗೆ ಸೇರಿದೆ ಎಂದು ಪ್ರತಿಪಾದಿಸಿದರು.  ಮಹಮೂದ್ ಮದನಿ "ಇಸ್ಲಾಂ ಧರ್ಮದ ಮೊದಲ ಪ್ರವಾದಿ ಆದಮ್ ಭಾರತದಲ್ಲಿಯೇ ಜನಿಸಿದ್ದವರು" ಎಂದು ಹೇಳುವ ಮೂಲಕ ಇಸ್ಲಾಂ ಹೊರಗಿನಿಂದ ಬಂದದ್ದು ಎಂದು ಸೂಚಿಸುವುದು ತಪ್ಪು ಎಂದು ಹೇಳಿದರು.

Latest Videos
Follow Us:
Download App:
  • android
  • ios