ಪಾಟ್ನಾ( ಡಿ.8)  ಭಾರತ್ ಬಂದ್ ಗೆ ಉತ್ತರ ಭಾರತದಲ್ಲಿ ಮಿಶ್ರ ಪ್ರತಿಕ್ರಿಯೆ ಸಿಕ್ಕದ್ದರೆ ದಕ್ಷಿಣ ಭಾರತದಲ್ಲಿ ಅಂಥ ಪರಿಣಾಮ ಏನೂ ಕಂಡುಬರಲಿಲ್ಲ. ಆದರೆ ಈ ನವವಧು ಮಾತ್ರ ಭಾರತ ಬಂದ್ ನಿಂದ ಪಡಬಾರದ ಕಷ್ಟ ಅನುಭವಿಸಿದ್ದಾಳೆ.

ಬಿಹಾರದ ಸಮಸ್ತಿಪುರದಲ್ಲಿ ಬಂದ್ ಜೋರಾಗಿತ್ತು. ಪರಿಣಾಮ  ಮದುವೆಗೆ ಸಿದ್ಧವಾಗಿದ್ದ ವಧು ಎರಡು ಕಿಮೀ ನಡೆದುಕೊಂಡು ದೇವಸ್ಥಾನ ತಲುಪಬೇಕಾಯಿತು . 

ನಿಹಾರಿಕಾ ಮದುವೆ ಸಂಭ್ರಮದಲ್ಲಿ ತಾರೆಗಳ ದಂಡು.. ಮೆಗಾ ಇವೆಂಟ್!

ದೇವಾಲಯದಲ್ಲಿ ಪೂಜೆ ಸಲ್ಲಿಸಲು ವಧು ಹೊರಟಿದ್ದಾಳೆ. ಈ ವೇಳೆ ಆಕೆಯ ವಾಹನವನ್ನು ತಡೆಯಲಾಗಿದೆ. ಅನಿವಾರ್ಯವಾಗಿ ಕಾಲು ನಡಿಗೆಯಲ್ಲಿಯೇ ದೇವಾಲಯದ ಕಡೆ ಹೆಜ್ಜೆ ಹಾಕಿದ್ದಾರೆ. ಮುಂದೆ ಸಿಕ್ಕ ಆಟೋವೊಂದನ್ನು ಹಿಡಿದು ದೇವಾಲಯ ತಲುಪಿದ್ದಾರೆ,. 

 ವಧುವಿನ ಜತೆಗೆ ಅನೇಕ ಮಹಿಳೆಯರು ಇದ್ದರು. ದೇವಾಲಯದಲ್ಲಿ ಪೂಜೆ ಸಲ್ಲಿಸಿ ಮತ್ತೆ ವಾಪಸ್ ಬಂದು ಮದುವೆ ಮಂಟಪಕ್ಕೆ ತೆರಳಿದ್ದಾಳೆ .