Asianet Suvarna News Asianet Suvarna News

Operation Ganga ಯಶಸ್ವಿ ಮುಕ್ತಾಯ, ಕೊನೆಯ ದಿನ 674 ಮಂದಿ ಆಗಮನ

- ಕೊನೆಯ 674 ಭಾರತೀಯರು ನಿನ್ನೆ ಆಗಮನ

- 14 ದಿನ, 90 ವಿಮಾನ, 18000 ಜನರ ರಕ್ಷಣೆ

- ಉಕ್ರೇನ್‌ ಯುದ್ಧದಿಂದ ಭಾರತೀಯರು ಪಾರು

jaishankar hails operation ganga as students evacuated from ukraines sumy arrive in india san
Author
Bengaluru, First Published Mar 12, 2022, 4:15 AM IST | Last Updated Mar 12, 2022, 4:15 AM IST

ನವದೆಹಲಿ ( ಮಾ. 11): ಭಾರತವು ಯುದ್ಧಪೀಡಿತ ಉಕ್ರೇನ್‌ನಲ್ಲಿ (War torn Ukraine) ಸಿಲುಕಿದ್ದ ಭಾರತೀಯರನ್ನು ರಕ್ಷಿಸಲು ಆರಂಭಿಸಿದ್ದ ‘ಆಪರೇಶನ್‌ ಗಂಗಾ’ ( Operation Ganga ) ತೆರವು ಕಾರ್ಯಾಚರಣೆಗೆ 14ನೇ ದಿನವಾದ ಶುಕ್ರವಾರ ತೆರೆ ಬಿದ್ದಿದೆ. 674 ಭಾರತೀಯರನ್ನು ಹೊತ್ತ 3 ವಿಮಾನಗಳು ಪೋಲೆಂಡ್‌ನಿಂದ (Poland) ಶುಕ್ರವಾರ ದಿಲ್ಲಿಗೆ ಆಗಮಿಸಿದ್ದು, ಇದರೊಂದಿಗೆ ಕಾರ್ಯಾಚರಣೆಗೆ ಮಂಗಳ ಹಾಡಿದಂತಾಗಿದೆ. ಇದರ ಬೆನ್ನಲ್ಲೇ ಭಾರತ ಸರ್ಕಾರವು (Indian Governament) ತೆರವು ಕಾರ್ಯಾಚರಣೆಗೆ ಸಹಕರಿಸಿದ ರಷ್ಯಾ, ಉಕ್ರೇನ್‌, ಸ್ಲೊವಾಕಿಯಾ, ಹಂಗೇರಿ, ರೊಮೇನಿಯಾ, ಪೋಲೆಂಡ್‌ ದೇಶಗಳಿಗೆ ಹಾಗೂ ರೆಡ್‌ ಕ್ರಾಸ್‌ ಸಂಸ್ಥೆಗೆ ಧನ್ಯವಾದ ಸಮರ್ಪಿಸಿದೆ.

‘ಏರ್‌ ಇಂಡಿಯಾ’ದ ಮೊದಲ ವಿಮಾನ ಶುಕ್ರವಾರ ನಸುಕಿನ ಜಾವ 5.45ಕ್ಕೆ ಪೋಲೆಂಡ್‌ನಿಂದ ದಿಲ್ಲಿಗೆ ಆಗಮಿಸಿತು. ಬಳಿಕ ಮಧ್ಯಾಹ್ನ 12.15ಕ್ಕೆ ಭಾರತೀಯ ವಾಯುಪಡೆಯ ವಿಮಾನ ಹಿಂಡನ್‌ ವಾಯುನೆಲೆಗೆ ಬಂದಿಳಿಯಿತು. ಇದಾದ ಐದೇ ನಿಮಿಷದಲ್ಲಿ 12.20ಕ್ಕೆ ದಿಲ್ಲಿಯ ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಇಂಡಿಗೋ ವಿಮಾನ ಭಾರತೀಯರನ್ನು ಹೊತ್ತು ತಂದಿತು.

ಕೊನೆಯ ತಂಡದಲ್ಲಿದ್ದ 674 ಜನರು ಉಕ್ರೇನ್‌ನ ಯುದ್ಧಪೀಡಿತ ಸುಮಿ ( Sumy )ನಗರದಲ್ಲಿ ಸಿಲುಕಿದ್ದರು. ಬಳಿಕ ರಷ್ಯಾ-ಉಕ್ರೇನ್‌ ತಾತ್ಕಾಲಿಕ ಕದನವಿರಾಮ ಸಾರಿದ್ದ ಕಾರಣ ಇವರನ್ನು ಪೋಲೆಂಡ್‌ಗೆ ರಸ್ತೆ ಮಾರ್ಗದಲ್ಲಿ ಕರೆತರಲಾಗಿತ್ತು ಹಾಗೂ ಪೋಲೆಂಡ್‌ನಿಂದ ಭಾರತಕ್ಕೆ ಕರೆತರಲು ಕೇಂದ್ರ ಸರ್ಕಾರ ವಿಮಾನ ವ್ಯವಸ್ಥೆ ಮಾಡಿತ್ತು.

ಉಕ್ರೇನ್‌ನಲ್ಲಿ ಯುದ್ಧ ಆರಂಭವಾದ ನಂತರ ಸೆ.26ರಿಂದ ಸುತ್ತಮುತ್ತಲಿನ ರೊಮೇನಿಯಾ, ಪೋಲೆಂಡ್‌, ಹಂಗೇರಿ ಹಾಗೂ ಸ್ಲೊವಾಕಿಯಾದಿಂದ ಭಾರತೀಯರ ತೆರವು ಕಾರ್ಯಾಚರಣೆ ಆರಂಭಿಸಿತ್ತು. ಭಾರತೀಯರನ್ನು ರಸ್ತೆ ಮಾರ್ಗದ ಮೂಲಕ ಈ ದೇಶಗಳಿಗೆ ಬರಲು ಸೂಚಿಸಿ, ಅಲ್ಲಿಂದ ಉಚಿತ ವಿಮಾನ ವ್ಯವಸ್ಥೆ ಮಾಡಿತ್ತು. ಅಲ್ಲದೆ, ಈ ನಾಲ್ಕೂ ದೇಶಗಳಲ್ಲಿ ಭಾರತೀಯರು ಸುರಕ್ಷಿತವಾಗಿ ವಿಮಾನ ಏರುವಂತೆ ಮಾಡಲು ಕೇಂದ್ರ ಸಚಿವರಾದ ಜ್ಯೋತಿರಾದಿತ್ಯ ಸಿಂಧಿಯಾ,  ವಿ.ಕೆ. ಸಿಂಗ್‌, ಹರ್ದೀಪ್‌ ಪುರಿ ಹಾಗೂ ಕಿರಣ್‌ ರಿಜಿಜು ಅವರನ್ನು ಪ್ರಧಾನಿ ನರೇಂದ್ರ ಮೋದಿ ಕಳಿಸಿಕೊಟ್ಟಿದ್ದರು. ಒಟ್ಟು 14 ದಿನಗಳ ತೆರವು ಕಾರ್ಯಾಚರಣೆಯಲ್ಲಿ 90 ವಿಮಾನಗಳ ಮೂಲಕ ಸುಮಾರು 18 ಸಾವಿರ ಭಾರತೀಯರನ್ನು ಉಕ್ರೇನ್‌ನಿಂದ ಕರೆತರಲಾಗಿದೆ ಎಂದು ಸರ್ಕಾರದ ಮೂಲಗಳು ಹೇಳಿವೆ.

Russia Ukraine War ಉಕ್ರೇನ್‌ಗೆ ಸೇನಾ ನೆರವು ಹೆಚ್ಚಿಸಿದ ಐರೋಪ್ಯ ಒಕ್ಕೂಟ
ಜೈಶಂಕರ್‌ ಧನ್ಯವಾದ: ಭಾರತೀಯರ ಸುರಕ್ಷಿತ ವಾಪಸಾತಿಗೆ ಸಹಕರಿಸಿ ರಷ್ಯಾ, ಉಕ್ರೇನ್‌, ರೆಡ್‌ಕ್ರಾಸ್‌ ಸಂಸ್ಥೆ, ಸ್ಲೊವಾಕಿಯಾ, ಹಂಗೇರಿ, ರೊಮೇನಿಯಾ, ಪೋಲೆಂಡ್‌ ದೇಶಗಳಿಗೆ ವಿದೇಶಾಂಗ ಸಚಿವ ಎಸ್‌.ಜೈಶಂಕರ್‌ ಧನ್ಯವಾದ ಸಲ್ಲಿಸಿದ್ದಾರೆ. "ಉಕ್ರೇನ್‌ನಿಂದ, ಅದರಲ್ಲೂ ಸುಮಿ ನಗರದಿಂದ ನಾಗರಿಕರ ರಕ್ಷಣೆ ಸವಾಲಿನದಾಗಿತ್ತು. ಪ್ರಧಾನಿ ಮೋದಿ ಅವರ ನಾಯಕತ್ವ ಹಾಗೂ ಬದ್ಧತೆಯ ಕಾರಣ ಆಪರೇಷನ್‌ ಗಂಗಾ ಯಶಸ್ವಿಯಾಗಿದೆ. ಇದಕ್ಕೆ ಸಹಕರಿಸಿದ ಎಲ್ಲರಿಗೂ ಧನ್ಯವಾದ" ಎಂದು ವಿದೇಶಾಂಗ ಸಚಿವ ಜೈಶಂಕರ್ ಟ್ವಿಟರ್ ನಲ್ಲಿ ಬರೆದಿದ್ದಾರೆ.

Ukraine Crisis ಹೆರಿಗೆ ಆಸ್ಪತ್ರೆ ಸೇರಿ ಕಂಡ ಕಂಡಲ್ಲಿ ದಾಳಿ ನಡೆಸುತ್ತಿದೆ ರಷ್ಯಾ!
ಯುರೋಪ್‌ ಒಕ್ಕೂಟದ ನೆಚ್ಚಿನ ದೇಶದ ಪಟ್ಟಿಯಿಂದ ರಷ್ಯಾಕ್ಕೆ ಕೊಕ್‌ಗೆ ನಿರ್ಧಾರ
ವಾಷಿಂಗ್ಟನ್‌ :
ರಷ್ಯಾ ಉಕ್ರೇನ್‌ ಮೇಲೆ ಯುದ್ಧ ಸಾರಿರುವ ಹಿನ್ನೆಲೆಯಲ್ಲಿ ಯೂರೋಪಿಯನ್‌ ಒಕ್ಕೂಟದ ದೇಶಗಳು ವ್ಯಾಪಾರದ ಉದ್ದೇಶದಲ್ಲಿ ರಷ್ಯಾಕ್ಕೆ ನೀಡಿದ್ದ ಅತ್ಯಾಪ್ತ ದೇಶದ ಸ್ಥಾನಮಾನ ಹಿಂತೆಗೆದಕೊಳ್ಳಲು ನಿರ್ಧರಿಸಿದೆ ಎಂದು ಅಮೆರಿಕ ತಿಳಿಸಿದೆ. ರಷ್ಯಾವನ್ನು ನೆಚ್ಚಿನ ರಾಷ್ಟ್ರಗಳ ಪಟ್ಟಿಯಿಂದ ತೆಗೆಯುವುದರಿಂದ ಅಮೆರಿಕ ಮತ್ತು ಮಿತ್ರ ರಾಷ್ಟ್ರಗಳು ರಷ್ಯಾದ ಮೇಲೆ ಅಮದು ಸುಂಕ ಹೇರಿಕೆಗೆ ಸಹಾಯವಾಗುತ್ತದೆ, ಇದರಿಂದಾಗಿ ರಷ್ಯಾದ ಆರ್ಥಿಕತೆಗೆ ಹೊಡೆತ ಬೀಳುತ್ತದೆ, ರಷ್ಯಾದೊಂದಿಗಿನ ವ್ಯಾಪಾರ ಸಂಬಂಧಗಳನ್ನು ಕಡಿದುಕೊಳ್ಳುವಂತೆ ಮಿತ್ರ ರಾಷ್ಟ್ರಗಳಿಂದ ಒತ್ತಡ ಬಂದಿರುವ ಹಿನ್ನೆಲೆಯಲ್ಲಿ ಬಿಡೆನ್‌ ಈ ನಿರ್ಣಯಕ್ಕೆ ಬಂದಿದ್ದಾರೆ ಎಂದು ಹೇಳಲಾಗಿದೆ.
ಉಕ್ರೇನ್‌ ಅಧ್ಯಕ್ಷ ರಷ್ಯಾದ ಮೇಲಿನ ವ್ಯಾಪರ ಸಂಬಂಧಗಳನ್ನು ಕಡಿತುಕೊಳ್ಳುವಂತೆ ಅಮೆರಿಕ ಮತ್ತು ಇತರೆ ಮಿತ್ರ ರಾಷ್ಟ್ರಗಳಿಗೆ ಒತ್ತಡ ಹೇರಿದ್ದರು ಈ ಹಿನ್ನೆಲೆಯಲ್ಲಿ ಹಲು ದೇಶಗಳು ರಷ್ಯಾದ ತೈಲೋತ್ಪನ್ನಗಳನ್ನು ನಿಷೇಧಿಸಿವೆ.

Latest Videos
Follow Us:
Download App:
  • android
  • ios