Asianet Suvarna News Asianet Suvarna News

Terrorist Attack Alert: ನಾಗ್ಪುರದ ಆರೆಸ್ಸೆಸ್‌ ಕಚೇರಿ ಮೇಲೆ ಉಗ್ರರ ಕೆಂಗಣ್ಣು

ಮಹಾರಾಷ್ಟ್ರದ ನಾಗ್ಪುರದಲ್ಲಿರುವ ಆರೆಸ್ಸೆಸ್‌ ಕೇಂದ್ರ ಕಚೇರಿ ಸೇರಿದಂತೆ ಇನ್ನಿತರ ಪ್ರಮುಖ ಸ್ಥಳಗಳ ಬಗ್ಗೆ ಜೈಷ್‌-ಎ-ಮೊಹಮ್ಮದ್‌ ಉಗ್ರರು ಭೂ ಸರ್ವೇಕ್ಷಣೆ ನಡೆಸಿದ್ದಾರೆ ಎಂಬ ಸ್ಫೋಟಕ ಮಾಹಿತಿ ಇದೀಗ ಬಹಿರಂಗವಾಗಿದೆ. ತನ್ಮೂಲಕ ಆರೆಸ್ಸೆಸ್‌ ಕಚೇರಿ ಸೇರಿದಂತೆ ನಾಗ್ಪುರದಲ್ಲಿರುವ ಮುಖ್ಯ ಸ್ಥಳಗಳು ಉಗ್ರರ ಕೆಂಗಣ್ಣಿಗೆ ಗುರಿಯಾಗಿರುವುದು ಖಚಿತವಾಗಿದೆ.

Jaish e Mohammed terrorists conduct recce of RSS headquarters in Nagpur security tightened gvd
Author
Bangalore, First Published Jan 8, 2022, 8:28 AM IST

ನಾಗ್ಪುರ (ಜ. 08): ಮಹಾರಾಷ್ಟ್ರದ ನಾಗ್ಪುರದಲ್ಲಿರುವ ಆರೆಸ್ಸೆಸ್‌ ಕೇಂದ್ರ ಕಚೇರಿ (RSS Headquarters) ಸೇರಿದಂತೆ ಇನ್ನಿತರ ಪ್ರಮುಖ ಸ್ಥಳಗಳ ಬಗ್ಗೆ ಜೈಷ್‌-ಎ-ಮೊಹಮ್ಮದ್‌ (Jaish e Mohammed) ಉಗ್ರರು ಭೂ ಸರ್ವೇಕ್ಷಣೆ ನಡೆಸಿದ್ದಾರೆ ಎಂಬ ಸ್ಫೋಟಕ ಮಾಹಿತಿ ಇದೀಗ ಬಹಿರಂಗವಾಗಿದೆ. ತನ್ಮೂಲಕ ಆರೆಸ್ಸೆಸ್‌ ಕಚೇರಿ ಸೇರಿದಂತೆ ನಾಗ್ಪುರದಲ್ಲಿರುವ ಮುಖ್ಯ ಸ್ಥಳಗಳು ಉಗ್ರರ ಕೆಂಗಣ್ಣಿಗೆ ಗುರಿಯಾಗಿರುವುದು ಖಚಿತವಾಗಿದೆ.

ಕೆಲ ತಿಂಗಳುಗಳ ಹಿಂದೆ ಜೆಇಎಂನ ಸ್ಲೀಪರ್‌ಸೆಲ್‌ ಸದಸ್ಯರು ನಗರದಲ್ಲಿರುವ ಆರೆಸ್ಸೆಸ್‌ ಕಚೇರಿ, ಬಹುಮುಖ್ಯ ಪ್ರದೇಶಗಳು ಹಾಗೂ ಸೂಕ್ಷ್ಮ ಸ್ಥಳಗಳಲ್ಲಿ ಸರ್ವೇಕ್ಷಣೆ ನಡೆಸಿದ್ದಾರೆ. ಈ ಸಂಬಂಧ ಅಪರಾಧ ವಿಭಾಗದ ಪೊಲೀಸರು, ಕಾನೂನು ಬಾಹಿರ ಚಟುವಟಿಕೆಗಳ ತಡೆ ಕಾಯ್ದೆಯಡಿ ಕೇಸ್‌ ದಾಖಲಿಸಿಕೊಂಡು ತನಿಖೆಗೆ ಇಳಿದಿದ್ದಾರೆ. ಅಲ್ಲದೆ ಆರೆಸ್ಸೆಸ್‌ ಕೇಂದ್ರ ಕಚೇರಿ ಹೆಡ್ಗೆವರ್‌ ಭವನಕ್ಕೆ ಪೊಲೀಸ್‌ ಭದ್ರತೆಯನ್ನು ಹೆಚ್ಚಿಸಲಾಗಿದ್ದು, ಭವನದ ಫೋಟೋ ಸೆರೆಹಿಡಿಯಲು ನಿಷೇಧಿಸಲಾಗಿದೆ. ಜತೆಗೆ ಭವನದ ಸುತ್ತಮುತ್ತಲಿನ 2 ಕಿ.ಮೀ ವ್ಯಾಪ್ತಿಯಲ್ಲಿ ಡ್ರೋನ್‌ಗಳು ಸಂಚರಿಸಿದರೆ, ಅವುಗಳನ್ನು ಧ್ವಂಸಗೊಳಿಸಲಾಗುತ್ತದೆ ಅಥವಾ ವಶಕ್ಕೆ ತೆಗೆದುಕೊಳ್ಳಲಾಗುತ್ತದೆ ಎಂದು ವರದಿಗಳು ತಿಳಿಸಿವೆ.

ಹತ ನಕ್ಸಲ್ ನಾಯಕ ತೇಲ್ತುಂಬ್ಡೆ ತಲೆಗಿತ್ತು 50 ಲಕ್ಷ ರೂಪಾಯಿ ಮೌಲ್ಯ!

ಆರೆಸ್ಸೆಸ್‌ ಜಿಮ್‌, ಸೇನಾ ಸಂಘಟನೆಯಲ್ಲ, ಕೌಟುಂಬಿಕ ವಾತಾವರಣ ಹೊಂದಿರುವ ಗುಂಪು!: ರಾಷ್ಟ್ರೀಯ ಸ್ವಯಂ ಸೇವಕ ಸಂಘಟನೆಯು (RSS) ಸೇನಾ ಸಂಘಟನೆ ಅಥವಾ ಅಖಿಲ ಭಾರತ ಸಂಗೀತ ಶಾಲೆಯಲ್ಲ ( Not a Music School). ಬದಲಾಗಿ ಆರೆಸ್ಸೆಸ್‌ ಎಂಬುದು ಕುಟುಂಬದ ವಾತಾವರಣ ಇರುವ ಒಂದು ಗುಂಪು ಅಷ್ಟೇ ಎಂದು ಸಂಘಟನೆ ಮುಖ್ಯಸ್ಥ ಮೋಹನ್‌ ಭಾಗವತ್‌ (Mohan Bhagwat) ಅವರು ಅಭಿಪ್ರಾಯಪಟ್ಟಿದ್ದಾರೆ. 

ಸಂಘದ ಮಧ್ಯಭಾರತ್‌ ಪ್ರಾಂತ್‌ನಲ್ಲಿ ನಡೆದ 4 ದಿನಗಳ ಸಂಗೀತ ಶಿಬಿರದ (Musical Band Camp) ಕೊನೇ ದಿನವಾದ ಭಾನುವಾರ ಮಾತನಾಡಿದ ಭಾಗವತ್‌ ಅವರು, ಸಂಘವು ಅಖಿಲ ಭಾರತ ಜಿಮ್‌ ಅಥವಾ ಮಾರ್ಷಲ್‌ ಆಟ್ಸ್‌ರ್‍ ಕ್ಲಬ್‌ ಅಲ್ಲ. ಕೆಲವು ಬಾರಿ ಸಂಘವನ್ನು ಪ್ಯಾರಾಮಿಲಿಟರಿ ಎಂದು ಗುರುತಿಸಲಾಗುತ್ತದೆ. ಆದರೆ ಸಂಘವು ಸೇನಾ ಸಂಸ್ಥೆಯೂ ಅಲ್ಲ ಎಂದು ಸ್ಪಷ್ಟಪಡಿಸಿದರು. 

ಇನ್ನು ಸಂಗೀತವನ್ನು ಪಾಶ್ಚಾತ್ಯ ದೇಶಗಳು (Westen Countries) ಮನೋರಂಜನೆಯಾಗಿ ಗುರುತಿಸುತ್ತವೆ. ಆದರೆ ಭಾರತದಲ್ಲಿ ಸಂಗೀತವು ಮನಃಶಾಂತಿಗೆ ಇರುವ ಒಂದು ಸಾಧನ ಎಂದರು. ಭಾರತವು 1947ರಲ್ಲಿ ಸ್ವಾತಂತ್ರ್ಯಗೊಂಡಿತು. ಆದರೆ 1857ರಲ್ಲೇ ಸ್ವಾತಂತ್ರ್ಯ ಹೋರಾಟ ಆರಂಭವಾಗಿತ್ತು. ಅಲ್ಲದೆ ದೇಶದ ಲೂಟಿ ಮತ್ತು ಅವ್ಯವಸ್ಥೆಯಿಂದ ದೇಶವನ್ನು ದುರಸ್ತಿಗೊಳಿಸಲು ಕನಿಷ್ಠ 10-12 ವರ್ಷಗಳೇ ಬೇಕು. ಈ ಹಿನ್ನೆಲೆಯಲ್ಲಿ ದೇಶದ ನಿರ್ಮಾಣಕ್ಕಾಗಿ ನಾವು ಹೆಚ್ಚು ಶ್ರಮ ಪಡಬೇಕಿದೆ ಎಂದು ಹೇಳಿದರು.

ದೇಗುಲಗಳಿಗೆ ಹಿಂದೂ ಆಡಳಿತ: ಆರೆಸ್ಸೆಸ್‌ ಆಗ್ರಹ!

31 ಜಿಲ್ಲೆಗಳಿಂದ 500 ಕ್ಕೂ ಹೆಚ್ಚು ಸಂಗೀತಗಾರರು!: ಮ್ಯೂಸಿಕಲ್ ಬ್ಯಾಂಡ್ ಶಿಬಿರವು ಶಿವಪುರಿ ಲಿಂಕ್ ರಸ್ತೆಯಲ್ಲಿರುವ ಗ್ವಾಲಿಯರ್‌ನಲ್ಲಿರುವ ಸರಸ್ವತಿ ಶಿಶು ಮಂದಿರದಲ್ಲಿ (Saraswathi Shishu Mandir) (ಶಾಲೆ) ಮುಕ್ತಾಯವಾಯಿತು ಎಂದು ಹಿರಿಯ ಆರ್‌ಎಸ್‌ಎಸ್ ಮಧ್ಯ ಭಾರತ್ ಕಾರ್ಯಕಾರಿ ತಿಳಿಸಿದ್ದಾರೆ. ಆರ್‌ಎಸ್‌ಎಸ್ ಮಧ್ಯಪ್ರದೇಶ ಭಾರತ್ ಪ್ರಾಂತ್‌ನ 31 ಜಿಲ್ಲೆಗಳಿಂದ 500 ಕ್ಕೂ ಹೆಚ್ಚು ಸಂಗೀತಗಾರರು (ಗ್ವಾಲಿಯರ್‌ ಹಾಗೂ ಭೋಪಾಲ ಸೇರಿಸಿ) ಶಿಬಿರದಲ್ಲಿ ಭಾಗವಹಿಸಿದ್ದರು.

Follow Us:
Download App:
  • android
  • ios