Asianet Suvarna News Asianet Suvarna News

ಹತ ನಕ್ಸಲ್ ನಾಯಕ ತೇಲ್ತುಂಬ್ಡೆ ತಲೆಗಿತ್ತು 50 ಲಕ್ಷ ರೂಪಾಯಿ ಮೌಲ್ಯ!

* ತೇಲ್ತುಂಬ್ಡೆ ತಲೆಗೆ 50 ಲಕ್ಷ ಬಹುಮಾನ ಘೋಷಿಸಲಾಗಿತ್ತು

* 20 ವರ್ಷಗಳಿಂದ ಮಹಾರಾಷ್ಟ್ರದಲ್ಲಿ ನಕ್ಸಲ್‌ ಕೃತ್ಯ

* ಹಲವು ವರ್ಷಗಳಿಂದ ತೇಲ್ತುಂಬ್ಡೆಗಾಗಿ ಹುಡುಕಾಟ

Milind Teltumbde most wanted Naxalite carrying Rs 50 lakh reward killed in Gadchiroli encounter pod
Author
Bangalore, First Published Nov 15, 2021, 11:45 AM IST

ನಾಗ್ಪುರ(ನ.15): ಭೀಮಾ ಕೊರೆಗಾಂವ್‌ (Bhima Koregaon) ಹಿಂಸೆ ಪ್ರಕರಣದ ಪ್ರಮುಖ ಆರೋಪಿ, ನಕ್ಸಲ್‌ ನಾಯಕ ಮಿಲಿಂದ್‌ ತೇಲ್ತುಂಬ್ಡೆ (Milind Teltumbde) ಮಹಾರಾಷ್ಟ್ರದ ಗಡ್‌ಚಿರೋಲಿ ಜಿಲ್ಲೆಯಲ್ಲಿ ಶನಿವಾರ ನಡೆದ ಎನ್‌ಕೌಂಟರ್‌ಗೆ (Encounter) ಬಲಿಯಾಗಿರುವುದು ನಕ್ಸಲ್‌ ವಿರೋಧಿ ಕಾರಾರ‍ಯಚರಣೆಗೆ ಸಿಕ್ಕ ಅತಿ ದೊಡ್ಡ ಜಯ ಎಂದು ಪೊಲೀಸ್‌ ಉಪ ಮಹಾ ನಿರ್ದೇಶಕ ಸಂದೀಪ್‌ ಪಾಟೀಲ್‌ ತಿಳಿಸಿದ್ದಾರೆ.

1996ರಿಂದ ಈತ ನಕ್ಸಲ್‌ ಚಟುವಟಿಕೆಯಲ್ಲಿ ಭಾಗಿಯಾಗಿದ್ದು, ನಿಷೇಧಿತ ಕಮ್ಯುನಿಟಿ ಪಾರ್ಟಿ ಆಫ್‌ ಇಂಡಿಯಾ ನಕ್ಸಲ್‌ ಸಂಘಟನೆಯ ಪ್ರಮುಖ ನಾಯಕನಾಗಿದ್ದ. ಅನಿಲ್‌, ದೀಪಕ್‌, ಕಾಮ್ರೇಡ್‌ ಎಂ ಎಂಬ ಹೆಸರಿನಿಂದ ಓಡಾಡುತ್ತಿದ್ದ ತೇಲ್ತುಂಬ್ಡೆ ತಲೆಮರೆಸಿಕೊಂಡಿದ್ದಾನೆ. ಈತನ ತಲೆಗೆ 50 ಲಕ್ಷ ಬಹುಮಾನ ಎಂದು ರಾಷ್ಟ್ರೀಯ ತನಿಖಾದಳ ಘೋಷಿಸಿತ್ತು. ಕಳೆದ 20 ವರ್ಷಗಳಿಂದ ಮಹಾರಾಷ್ಟ್ರದಲ್ಲಿ ನಕ್ಸಲ್‌ ಚಟುವಟಿಕೆಗಳಿಗೆ ಬೆನ್ನೆಲುಬಾಗಿದ್ದವರ ಪೈಕಿ ತೇಲ್ತುಂಬ್ಡೆ ಪ್ರಮುಖನಾಗಿದ್ದ. ಈತನೊಬ್ಬನೇ ನಕ್ಸಲರ ಅತ್ಯಂತ ಪ್ರಮುಖ ನಾಯಕನಾಗಿದ್ದು, ಹಲವು ವರ್ಷಗಳಿಂದ ಈತನಿಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದರು ಎಂದು ತಿಳಿಸಿದ್ದಾರೆ.

ನಕ್ಸಲರ ವಿರುದ್ಧ ಸಿ-60 ಪೊಲೀಸ್‌ ಕಮಾಂಡೋ ಪಡೆ ಶನಿವಾರ ಮಹಾರಾಷ್ಟ್ರದ ಗಡ್‌ಚಿರೋಲಿ ಜಿಲ್ಲೆಯ ಅರಣ್ಯಪ್ರದೇಶದಲ್ಲಿ ಶನಿವಾರ ಕೂಂಬಿಂಗ್‌ ನಡೆಸುತ್ತಿತ್ತು. ಈ ವೇಳೆ ಪೊಲೀಸರು ಮತ್ತು ನಕ್ಸಲರ ನಡುವೆ ನಡೆದ ಗುಂಡಿನ ಚಕಮಕಿಯಲ್ಲಿ ತೇಲ್ತುಂಬ್ಡೆ, ಆತನ ಮಹಿಳಾ ಮತ್ತು ಪುರುಷ ಬಾಡಿಗಾರ್ಡ್‌ ಹಾಗೂ 6 ಮಹಿಳೆಯರು ಸೇರಿ 26 ನಕ್ಸಲರು ಹತ್ಯೆಯಾಗಿದ್ದರು. ಘಟನಾ ಸ್ಥಳದಿಂದ ಪೊಲೀಸರು 12 ಬೋರ್‌ ವೆಪನ್‌, 9 ಎಸ್‌ಎಲ್‌ಆರ್‌ಗಳು, 5 ಎಕೆ-47 ಬಂದೂಕು ಸೇರಿ 29 ಬಂದೂಕುಗಳನ್ನು ವಶಕ್ಕೆ ಪಡೆಯಲಾಗಿದೆ.

ಕಾಸರಗೋಡಿನ ಮಧೂರಲ್ಲಿ ಸೆರೆಸಿಕ್ಕ ನಕ್ಸಲ್‌ ಕೃಷ್ಣಮೂರ್ತಿ!

ಕೇರಳದ (Kerala) ಭಯೋತ್ಪಾದನಾ ನಿಗ್ರಹ ದಳಕ್ಕೆ ಸೆರೆ ಸಿಕ್ಕ ಕರ್ನಾಟಕ ಮೂಲದ ಕುಖ್ಯಾತ ನಕ್ಸಲ್‌ ನಾಯಕರಾದ ಬಿ.ಜಿ.ಕೃಷ್ಣಮೂರ್ತಿ (Naxal Leader BG Krishnamurthy) ಮತ್ತು ಸಾವಿತ್ರಿ ಅವರನ್ನು ಕಾಸರಗೋಡು (kasaragodu) ಸಮೀಪದ ಮಧೂರು ಬಳಿ ವಶಕ್ಕೆ ಪಡೆಯಲಾಗಿತ್ತು ಎಂಬ ವಿಷಯ ಬೆಳಕಿಗೆ ಬಂದಿದೆ. ಈ ನಡುವೆ ಬಿ.ಜಿ.ಕೃಷ್ಣಮೂರ್ತಿ ಮತ್ತು ಸಾವಿತ್ರಿ ಅವರನ್ನು ಸ್ಥಳೀಯ ನ್ಯಾಯಾಲಯ 9 ದಿನಗಳ ಕಾಲ ನ್ಯಾಯಾಂಗ ವಶಕ್ಕೆ ಒಪ್ಪಿಸಿದೆ.

ಇಬ್ಬರನ್ನೂ ಕೇರಳ ಪೊಲೀಸರು (Kerala Police) ಬುಧವಾರ ಭಾರಿ ಬಿಗಿ ಭದ್ರತೆಯಲ್ಲಿ ತಲಶ್ಶೇರಿಯ ಜಿಲ್ಲಾ ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದರು. ಈ ವೇಳೆ ನ್ಯಾಯಾಲಯ 9 ದಿನಗಳ ಕಾಲ ನ್ಯಾಯಾಂಗ ವಶಕ್ಕೆ ಒಪ್ಪಿಸಿ ಆದೇಶ ಹೊರಡಿಸಿತು.

ಯಾರು ಈ ಕೃಷ್ಣಮೂರ್ತಿ?:

ಶೃಂಗೇರಿ (Sringeri) ತಾಲೂಕಿನ ಬುಕಡಿಬೈಲು ಗ್ರಾಮದ ನಿವಾಸಿ ಬಿ.ಜಿ. ಕೃಷ್ಣಮೂರ್ತಿ, ಪರಿಸರ, ನದಿ ಮೂಲ ಹಾಗೂ ಆದಿವಾಸಿಗಳ ಪರವಾಗಿ ಹೋರಾಟದಲ್ಲಿ ಗುರುತಿಸಿಕೊಂಡು 2002ರ ವೇಳೆಗೆ ನಕ್ಸಲ್‌ ಚಳವಳಿಯಲ್ಲಿ ತೊಡಗಿಸಿಕೊಂಡಿದ್ದಾನೆ. ಶೃಂಗೇರಿ ಸಮೀಪದ ತಲಗಾರು ಬಳಿ ಪೊಲೀಸರ ಮೇಲೆ ದಾಳಿ ನಡೆದ ಸಂಬಂಧ 2004ರಲ್ಲಿ ಬಿ.ಜಿ. ಕೃಷ್ಣಮೂರ್ತಿ ವಿರುದ್ಧ ಶೃಂಗೇರಿ ಪೊಲೀಸ್‌ ಠಾಣೆಯಲ್ಲಿ ಮೊದಲ ಪ್ರಕರಣ ದಾಖಲಾಯಿತು. ನಂತರದಲ್ಲಿ ಜಿಲ್ಲೆಯ ವಿವಿಧೆಡೆ ನಕ್ಸಲೀಯರ ದಾಳಿಗೆ ಸಂಬಂಧಿಸಿದಂತೆ ಕೃಷ್ಣಮೂರ್ತಿ ವಿರುದ್ಧ ಒಟ್ಟು 29 ಪ್ರಕರಣಗಳು ದಾಖಲಾಗಿದ್ದು, ಈ ಪೈಕಿ 26 ಪ್ರಕರಣಗಳು ಚಿಕ್ಕಮಗಳೂರು ಜಿಲ್ಲೆಯಲ್ಲಿ ದಾಖಲಾಗಿದ್ದರೆ, ಇನ್ನುಳಿದ 3 ಪ್ರಕರಣಗಳು ಶಿವಮೊಗ್ಗ ಜಿಲ್ಲೆಯಲ್ಲಿ ದಾಖಲಾಗಿವೆ. 2005ರಲ್ಲಿ ನಕ್ಸಲ್‌ ನಾಯಕ ಸಾಕೇತ್‌ ರಾಜನ್‌ ಸಾವಿನ ಬಳಿಕ, ಈತ ಕರ್ನಾಟಕದಲ್ಲಿ ನಕ್ಸಲ್‌ ಹೋರಾಟದ ನೇತೃತ್ವ ವಹಿಸಿಕೊಂಡಿದ್ದ.

ಮೂಡಿಗೆರೆ ತಾಲೂಕಿನ ಮಾವಿನಕೆರೆ ಗ್ರಾಮದ ಸಾವಿತ್ರಿ ವಿರುದ್ಧ ಹರೂರುಮಕ್ಕಿ ಗ್ರಾಮದ ಅಚ್ಚುತಗೌಡ ಅವರ ಮನೆಗೆ ಭೇಟಿ ನೀಡಿದ ಕಾರಣಕ್ಕಾಗಿ ಮೊದಲ ಬಾರಿಗೆ 2007ರಲ್ಲಿ ಪ್ರಕರಣ ದಾಖಲಾಗಿದ್ದು, ಅವರ ವಿರುದ್ಧ ಒಟ್ಟು 6 ಪ್ರಕರಣಗಳು ದಾಖಲಾಗಿವೆ.

Follow Us:
Download App:
  • android
  • ios