Asianet Suvarna News Asianet Suvarna News

ಕಂತೆ ಕಂತೆ ನೋಟು ಸಿಕ್ಕಿದ್ದೇ ತಡ, ಧೀರಜ್‌ ಸಾಹು ಬ್ಯುಸಿನೆಸ್‌ ಗೊತ್ತೇ ಇಲ್ಲ ಎಂದ ಕಾಂಗ್ರೆಸ್‌!

ಕಾಂಗ್ರೆಸ್ ರಾಜ್ಯಸಭಾ ಸಂಸದ ಧೀರಜ್ ಸಾಹು ಅವರ ಬಳಿ ಇರುವ ಹಣ ಲೆಕ್ಕಹಾಕಿಯೇ ಅಧಿಕಾರಿಗಳಿಗೆ ಸುಸ್ತಾಗಿದೆ. ಸತತ ನಾಲ್ಕು ದಿನಗಳಿಂದ ನೋಟಿನ ಎಣಿಕೆ ನಡೆಯುತ್ತಿದೆ. ಅಷ್ಟೇ ಅಲ್ಲ 136 ಚೀಲಗಳಲ್ಲಿ ತುಂಬಿದ ನೋಟನ್ನು ಇನ್ನೂ ಲೆಕ್ಕ ಹಾಕಬೇಕಿದೆ. ಇದೇ ವೇಳೆ ಕಾಂಗ್ರೆಸ್ ತನ್ನ ನಾಯಕನ ಮೇಲೆಯೇ ಪ್ರಶ್ನೆಗಳನ್ನು ಎತ್ತಿದೆ.
 

Jairam Ramesh says Congress has nothing to do with the business of Rajya Sabha MP Dheeraj Sahu san
Author
First Published Dec 9, 2023, 9:40 PM IST

ನವದೆಹಲಿ (ಡಿ.9): ಕಾಂಗ್ರೆಸ್ ಪಕ್ಷದ ರಾಜ್ಯಸಭಾ ಸಂಸದ ಧೀರಜ್‌ ಸಾಹು ಅವರ ಮನೆ ಈಗ ಮಿನಿ ರಿಸರ್ವ್‌ ಬ್ಯಾಂಕ್‌ ಆಗಿದೆ. ಮನೆಯಲ್ಲಿ ಸಿಕ್ಕಿದ ಹಣವನ್ನು ಎಣಿಸೋಕೆ ದಿನಗಳೇ ಸಾಲುತ್ತಿಲ್ಲ. ಅಂದಾಜು 300 ಕೋಟಿ ರೂಪಾಯಿ ಹಣ ಇದ್ದಿರಬಹುದು ಎಂದು ಅಂದಾಜಿಸಲಾಗಿದೆ. ಕಳೆದ ನಾಲ್ಕು ದಿನಗಳಿಂದ ನೋಟು ಎಣಿಸುವ ಕಾರ್ಯ ನಡೆಯುತ್ತಿದೆ. ಇದರೊಂದಿಗೆ 136 ಚೀಲಗಳಲ್ಲಿ ತುಂಬಿರುವ ಹಣವನ್ನು ಅಧಿಕಾರಿಗಳು ಎಣಿಸಬೇಕಿದ್ದು, ಧೀರಜ್‌ ಸಾಹು ಮನೆಯಲ್ಲಿಯೇ ಅಧಿಕಾರಿಗಳು ದಿನ ಕಳೆಯುತ್ತಿದ್ದಾರೆ. ಈ ನಡುವೆ ಕಾಂಗ್ರೆಸ್ ತನ್ನ ರಾಜ್ಯಸಭಾ ಸಂಸದನ ಜೊತೆಗೆ ಅಂತರ ಕಾಯ್ದುಕೊಳ್ಳುವ ಪ್ರಯತ್ನ ಮಾಡುತ್ತಿದೆ. ಈ ನಿಟ್ಟಿನಲ್ಲಿ ಹಿರಿಯ ನಾಯಕ ಜೈರಾಮ್‌ ರಮೇಶ್‌ ತಮ್ಮದೇ ಪಕ್ಷದ ನಾಯಕನನ್ನು ಪ್ರಶ್ನೆ ಮಾಡಿದ್ದಾರೆ. ಧೀರಜ್‌ ಸಾಹು ಅವರ ಉದ್ಯಮಕ್ಕೂ ಕಾಂಗ್ರೆಸ್‌ ಪಕ್ಷಕ್ಕೂ ಯಾವುದೇ ರೀತಿಯ ಸಂಬಂಧವಿಲ್ಲ ಎಂದು ಹೇಳುವ ಮೂಲಕ ಈ ವಿಚಾರದಲ್ಲಿ ಪಕ್ಷವನ್ನು ಮುಜುಗರದಿಂದ ತಪ್ಪಿಸುವ ಪ್ರಯತ್ನ ಮಾಡಿದ್ದಾರೆ.

ಆದಾಯ ತೆರಿಗೆ ಅಧಿಕಾರಿಗಳು ಅವರ ಕಚೇರಿಗಳಿಂದ ಇಷ್ಟು ದೊಡ್ಡ ಮೊತ್ತದ ಹಣವನ್ನು ಹೊರತೆಗೆಯುತ್ತಿದ್ದಾರೆ ಎಂದು ಜೈರಾಮ್ ರಮೇಶ್ ಹೇಳಿದ್ದಾರೆ. ಈ ಹಣದ ಬಗ್ಗೆ ಅವರು ಮಾತ್ರ ಹೇಳಬಹುದು. ಇದಕ್ಕೆ ಸ್ಪಷ್ಟನೆಯನ್ನು ಅವರಲ್ಲಿಯೇ ಕೇಳಬೇಕು ಎಂದು ಟ್ವೀಟ್‌ ಮಾಡಿದ್ದಾರೆ. 'ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಸಂಸದ ಧೀರಜ್ ಸಾಹು ಅವರ ವ್ಯವಹಾರಗಳೊಂದಿಗೆ ಯಾವುದೇ ರೀತಿಯಲ್ಲಿ ಸಂಪರ್ಕ ಹೊಂದಿಲ್ಲ. ಆದಾಯ ತೆರಿಗೆ ಅಧಿಕಾರಿಗಳು ತನ್ನ ಆಸ್ತಿಗಳಿಂದ ಹೇಗೆ ಬೃಹತ್ ಮೊತ್ತದ ನಗದನ್ನು ಹೊರತೆಗೆಯಲಾಗಿದೆ ಎಂದು ಅವರು ಮಾತ್ರ ವಿವರಿಸಬಹುದು ಮತ್ತು ಸ್ಪಷ್ಟನೆ ನೀಡಬೇಕು' ಎಂದು ತಿಳಿಸಿದ್ದಾರೆ.

ಸಂಸದ ಧೀರಜ್ ಸಾಹು ಅವರ ಮನೆಯಿಂದ ವಶಪಡಿಸಿಕೊಂಡ ಮೊತ್ತವು 300 ಕೋಟಿ ರೂಪಾಯಿಗಳಿಗೆ ತಲುಪಿದೆ. ಇದು ಯಾವುದೇ ಏಜೆನ್ಸಿಯಿಂದ ಒಂದೇ ಕಾರ್ಯಾಚರಣೆಯಲ್ಲಿ ವಶಪಡಿಸಿಕೊಂಡ "ಇದುವರೆಗಿನ ಅತ್ಯಧಿಕ" ಕಪ್ಪು ಹಣವಾಗಿದೆ. ಇದಲ್ಲದೇ 3 ಸೂಟ್ ಕೇಸ್ ಪೂರ್ತಿ ಚಿನ್ನಾಭರಣ ಪತ್ತೆಯಾಗಿದೆ.

ಐಟಿ ರೇಡ್‌ ವೇಳೆ ಜಾರ್ಖಂಡ್‌ ಕಾಂಗ್ರೆಸ್‌ ಎಂಪಿ ಬಳಿ 400 ಕೋಟಿ ಹಣ! ಈವರೆಗೂ 225 ಕೋಟಿ ಕ್ಯಾಶ್‌ ಎಣಿಸಿದ ಅಧಿಕಾರಿಗಳು

ಎರಡು ದಿನಗಳಲ್ಲಿ ಎಲ್ಲಾ ಹಣವನ್ನು ಎಣಿಸುವ ಗುರಿಯೊಂದಿಗೆ ನಾವು ಒಟ್ಟಾಗಿ ಕೆಲಸ ಮಾಡುತ್ತಿದ್ದೇವೆ ಎಂದು ಭಾರತೀಯ ಎಸ್‌ಬಿಐ ಬಲಂಗಿರ್ ಪ್ರಾದೇಶಿಕ ವ್ಯವಸ್ಥಾಪಕ ಭಗತ್ ಬೆಹೆರಾ ಹೇಳಿದ್ದಾರೆ. 50 ಉದ್ಯೋಗಿಗಳು ಹಣ ಎಣಿಕೆ ಮಾಡುತ್ತಿದ್ದಾರೆ ಮತ್ತು ಇತರರು ಶೀಘ್ರದಲ್ಲೇ ನಮ್ಮೊಂದಿಗೆ ಸೇರಲು ಹೇಳಿದ್ದೇವೆ. ಪ್ಯಾಕೆಟ್‌ಗಳ ಎಣಿಕೆ ಮುಂದುವರೆದಿದೆ. ತಿತ್ಲಗಢದಲ್ಲಿಯೂ ಒಂದಷ್ಟು ಹಣ ಎಣಿಸಲಾಗಿದೆ ಎಂದು ಹೇಳಿದ್ದಾರೆ. ಇನ್ನು ಬ್ಯಾಂಕ್ ಪ್ರದೇಶಗಳಲ್ಲಿ ಆದಾಯ ತೆರಿಗೆ ಮತ್ತು ಪೊಲೀಸ್ ಇಲಾಖೆ ಸಂಪೂರ್ಣ ಭದ್ರತಾ ವ್ಯವಸ್ಥೆ ಮಾಡಿದೆ.

ಐಟಿ ರೇಡ್‌: ಕಾಂಗ್ರೆಸ್‌ ಸಂಸದನ ನಿವಾಸದಲ್ಲಿ ಪತ್ತೆಯಾಯ್ತು ನೂರಾರು ಕೋಟಿ ರೂ. ನಗದು!

Follow Us:
Download App:
  • android
  • ios