ಅಮೆರಿಕದ ಮಹಿಳೆಗೆ ಮಹಾಮೋಸ, 300 ರೂಪಾಯಿ ಆಭರಣ 6 ಕೋಟಿಗೆ ಮಾರಾಟ!

artificial jewellery US woman duped ಅಮೆರಿಕದ ಮಹಿಳೆಯೊಬ್ಬರು ಜೈಪುರದಲ್ಲಿ ಜ್ಯುವೆಲ್ಲರಿ ಮಳಿಗೆಯಲ್ಲಿ ಆಭರಣವನ್ನು ಕಂಡಿದ್ದಾರೆ. ಆಕರ್ಷಕವಾಗಿದ್ದ ಈ ಆಭರಣವನ್ನು ಖರೀದಿ ಮಾಡಿದ ಬೆನ್ನಲ್ಲಿಯೇ ಅದು ಫೇಕ್‌ ಎಂದು ಗೊತ್ತಾಗಿ ಜೈಪುರ ಪೊಲೀಸರಿಗೆ ದೂರು ನೀಡಿದ್ದಾರೆ.

Jaipur US woman buys jewellery for Rs 6 crore finds out it costs only Rs 300 san

ನವದೆಹಲಿ (ಜೂ.11): ಎರಡು ವರ್ಷದ ಹಿಂದೆ ಪ್ರವಾಸಕ್ಕೆಂದು ಬಂದಿದ್ದ ಮಹಿಳೆ, ಸ್ಥಳೀಯ ಜ್ಯುವೆಲ್ಲರಿ ಅಂಗಡಿಯಲ್ಲಿ ಆಕರ್ಷಕವಾದ ಆಭರಣ ಕಂಡಿದ್ದಾರೆ. ಖರೀದಿಸುವ ನಿಟ್ಟಿನಲ್ಲಿ ರೇಟ್‌ ಕೇಳೋಕೆ ಬಂದಿದ್ದ ಅಮೆರಿಕ ಮೂಲದ ಮಹಿಳೆಗೆ ಈ ಜ್ಯುವೆಲ್ಲರಿ ಅಂಗಡಿಯ ಮಾಲೀಕ ಅಪ್ಪ-ಮಕ್ಕಳು ಹೇಳಿರುವ ರೇಟ್‌ ಬರೋಬ್ಬರಿ 6 ಕೋಟಿ. ನೋಡೋಕೆ ಆಕರ್ಷಕವಾಗಿದ್ದ ಈ ನಕ್ಲೇಸ್‌ಅನ್ನು ಖುಷಿಯಿಂದಲೇ ಆಕೆ ಖರೀದಿ ಮಾಡಿದ್ದಳು 6 ಕೋಟಿ ರೂಪಾಯಿಯನ್ನೂ ಪಾವತಿ ಮಾಡಿ ಖುಷಿಯಿಂದ ಅಮೆರಿಕ್ಕೆ ವಾಪಸಾಗಿದ್ದಳು. ಆದರೆ, ಎರಡು ವರ್ಷದ ನಂತರ ಆಕೆಗೆ ಇದು ಅಸಲಿ ಆಭರಣವಲ್ಲ ಎಂದು ಗೊತ್ತಾಗಿದೆ. ಅಪ್ಪ-ಮಕ್ಕಳು ಬರೀ 300 ರೂಪಾಯಿಯ ಆಭರಣವನ್ನು ಈ ಮಹಿಳೆಗೆ 6 ಕೋಟಿ ರೂಪಾಯಿಗೆ ಮಾರಾಟ ಮಾಡಿದ್ದರು. ಮೋಸ ಕಂಡ ಮಹಿಳೆ ಈಗ ಜೈಪುರ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲು ಮಾಡಿದ್ದಾರೆ. 

ಪೊಲೀಸರ ವರದಿಯ ಪ್ರಕಾರ, ಅಮೆರಿಕ ಮೂಲದ ಪ್ರಜೆಯಾಗಿರುವ ಚೆರಿ, ಎರಡು ವರ್ಷದ ಹಿಂದೆ   ನಗರದ ಗೋಪಾಲಜಿ ಕಾ ರಾಸ್ತಾದ ಅಂಗಡಿಯೊಂದರಿಂದ ನಕ್ಲೇಸ್‌ ಅನ್ನು ಖರೀದಿ ಮಾಡಿದ್ದರು. ಇದಕ್ಕಾಗಿ ಅವರು ಬರೋಬ್ಬರಿ 6 ಕೋಟಿ ರೂಪಾಯಿ ಪಾವತಿ ಮಾಡಿದ್ದರು. ನಕ್ಲೇಸ್‌ ಖರೀದಿ ಮಾಡುವ ವೇಳೆ ಆಕೆಗೆ, ಆಭರಣದ ಶುದ್ಧತೆಯನ್ನು ತೋರಿಸುವ ಹಾಲ್‌ಮಾರ್ಕ್‌ ಪ್ರಮಾಣಪತ್ರವನ್ನೂ ಮಾಲೀಕರು ನೀಡಿದ್ದಾರೆ. ಬಳಿಕ ಅಮೆರಿಕಕ್ಕೆ ತೆರಳಿದ್ದ ಚೆರಿ, ಅಲ್ಲಿ ತಾನು ಭಾರತದಿಂದ ತಂಡ ಆಭರಣವನ್ನು ಪ್ರದರ್ಶನಕ್ಕೆ ಇಟ್ಟಿದ್ದರು. ಈ ವೇಳೆ ಈ ಆಭರಣ ನಕಲಿ ಎನ್ನುವುದು ಗೊತ್ತಾಗಿದೆ.  ಆ ನಂತರ, ಜೈಪುರಕ್ಕೆ ಮರಳಿದ ಆಕೆ, ಮತ್ತು ಆಭರಣದ ಅಂಗಡಿ, ರಾಮಾ ರೇಡಿಯಂಗೆ ಭೇಟಿ ನೀಡಿದ್ದಲ್ಲದೆ, ಅಂಗಡಿ ಮಾಲೀಕ ಗೌರವ್ ಸೋನಿ ಅವರಿಗೆ ನಕಲಿ ಆಭರಣಗಳ ಬಗ್ಗೆ ದೂರು ನೀಡಿದರು.

ಆಕೆಯು ಆಭರಣವನ್ನು ಅದರ ಶುದ್ಧತೆಯನ್ನು ಪರೀಕ್ಷಿಸಲು ಇತರ ಅಂಗಡಿಗಳಿಗೆ ಕಳುಹಿಸಿದಳು, ಇದು ಪರೀಕ್ಷೆಗಳ ನಂತರ ಅದನ್ನು ದೃಢಪಡಿಸಿತು. ಇದರ ನಂತರ, ಚೆರಿ ಘಟನೆಯ ಬಗ್ಗೆ ಯುಎಸ್ ರಾಯಭಾರ ಕಚೇರಿಗೆ ಮಾಹಿತಿ ನೀಡಿದ್ದಾರೆ. ಮೇ 18 ರಂದು, ಆಭರಣ ವ್ಯಾಪಾರಿ ರಾಜೇಂದ್ರ ಸೋನಿ ಮತ್ತು ಅವರ ಮಗ ಗೌರವ್ ಸೋನಿ ವಿರುದ್ಧ ಭಾರತೀಯ ದಂಡ ಸಂಹಿತೆಯ ಹಲವಾರು ಸೆಕ್ಷನ್‌ಗಳ ಅಡಿಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ.

'ತನಿಖೆಯ ಸಮಯದಲ್ಲಿ ಪೊಲೀಸರು ಆಭರಣಗಳನ್ನು ಪರೀಕ್ಷೆಗೆ ಕಳುಹಿಸಿದ್ದಾರೆ. ಇವುಗಳು ವಜ್ರವಲ್ಲ, ಚಂದನದ ಕಲ್ಲು ಎನ್ನುವುದು ಗೊತ್ತಾಗಿದೆ. ಇನ್ನಷ್ಟು ಪರೀಕ್ಷೆಗಳ ಬಳಿಕ, ಆಭರಣಗಳ ಸುತ್ತ ಇರುವ ಚಿನ್ನದ ಕಂಟೆಂಟ್‌ಗಳು 14 ಕ್ಯಾರೆಟ್‌ಗಳಾಗಿರಬೇಕು ಆದರೆ, ಇದು ಕೇವಲ 2 ಕ್ಯಾರಟ್‌ನದ್ದಾಗಿದೆ. ಇನ್ನು ಆಭರಣ ಅಂಗಡಿಯ ಮಾಲೀಕರು ಈ ಮಹಿಳೆ ಆಭರಣದೊಂದಿಗೆ ಪರಾರಿಯಾಗಿದ್ದಾರೆ ಎಂದು ಆರೋಪ ಮಾಡಿದ್ದರು. ಆದರೆ, ಸಿಸಿಟಿವಿ ದೃಶ್ಯಾವಳಿಯಲ್ಲಿ ಇದು ಸುಳ್ಳು ಎನ್ನುವುದು ತಿಳಿದುಬಂದಿದೆ ಎಂದು  ಜೈಪುರ ಪೊಲೀಸ್ ಡಿಸಿಪಿ ಬಜರಂಗ್ ಸಿಂಗ್ ಶೇಖಾವತ್ ತಿಳಿಸಿದ್ದಾರೆ.

ದರ್ಶನ್‌ ಬಾಳಲ್ಲಿ ಪವಿತ್ರ ಬಂಧನವಾಗಿದ್ದು ಯಾವಾಗ, ಇಲ್ಲಿದೆ ಡೀಟೇಲ್ಸ್‌!

ಇನ್ನು ಜ್ಯುವಲ್ಲರಿ ಅಂಗಡಿಯ ಅಪ್ಪ-ಮಗ ನಾಪತ್ತೆಯಾಗಿದ್ದು ಅವರ ಶೋಧ ಕಾರ್ಯ ನಡೆಯುತ್ತಿದೆ. ಇನ್ನು ನಕಲಿ ಹಾಲ್‌ಮಾರ್ಕ್‌ ಪ್ರಮಾಣಪತ್ರ ಪ್ರಿಂಟ್‌ ಮಾಡ್ತಿದ್ದ ನಂದಕಿಶೋರ್‌ನನ್ನು ಬಂಧಿಸಲಾಗಿದೆ. ಪ್ರಕರಣದ ಪ್ರಮುಖ ಆರೋಪಿ ಗೌರವ್‌ ಸೋನಿಗಾಗಿ ಲುಕ್‌ಔಟ್‌ ನೋಟಿಸ್‌ ಜಾರಿ ಮಾಡಲಾಗಿದೆ. ಅಮೆರಿಕದ ಮಹಿಳೆಯ ದೂರಿನ ಬಳಿಕ, ಗೌರವ್‌ ಸೋನಿ ಹಾಗೂ ರಾಜೇಂದ್ರ ಸೋನಿ ವಿರುದ್ ಮತ್ತೂ ಕೆಲವು ದೂರುಗಳು ದಾಖಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

'ಹೆಂಡ್ತಿಗೆ ಹೊಡೆದ್ರೂ ಜೈ, ಕೊಲೆ ಮಾಡಿದ್ರೂ ಸೈ..' ದರ್ಶನ್‌ ಫ್ಯಾನ್ಸ್‌ಗೆ ಬುದ್ದಿ ಹೇಳೋರು ಯಾರು?

Latest Videos
Follow Us:
Download App:
  • android
  • ios