ಜೈಪುರದ ಉದ್ಯಮಿ ಅಂಜಲಿ ಜೈನ್ 'ಸ್ವರ್ಣ್ ಪ್ರಸಾದ' ಎಂಬ ವಿಶೇಷ ಸಿಹಿ ತಿಂಡಿಯನ್ನು ತಯಾರಿಸಿದ್ದಾರೆ. ಚಿನ್ನದ ಭಸ್ಮ, ಉತ್ಕೃಷ್ಟ ಒಣ ಹಣ್ಣುಗಳು ಮತ್ತು ಶುದ್ಧ ಕೇಸರಿಯಿಂದ ತಯಾರಿಸಲಾದ ಈ ಸಿಹಿಯ ಬೆಲೆ ಪ್ರತಿ ಕೆಜಿಗೆ 1.11 ಲಕ್ಷ ರೂಪಾಯಿ ಆಗಿದ್ದು, ಇದರ ಒಂದು ತುಂಡಿಗೆ 3,000 ರೂ. ಬೆಲೆ ಇದೆ.
ಜೈಪುರ: ಹಬ್ಬ ಹರಿದಿನಗಳಲ್ಲಿ ಸಿಹಿ ತಿಂಡಿಗಳಿಗೆ ವಿಶೇಷ ಸ್ಥಾನಮಾನವಿದೆ. ಆದರೆ ಜೈಪುರದ ಉದ್ಯಮಿ ಮಹಿಳೆ ಅಂಜಲಿ ಜೈನ್ ಈ ಸಿಹಿತಿಂಡಿಗಳನ್ನು ಮತ್ತೊಂದು ಹಂತಕ್ಕೆ ತೆಗೆದುಕೊಂಡು ಹೋಗಿದ್ದಾರೆ. ಅದರ ಭಾಗವಾಗಿ ಸ್ವರ್ಣ್ ಪ್ರಸಾದ ಎಂಬ ಸಿಹಿ ತಿಂಡಿಯನ್ನು ತಯಾರಿಸಿದ್ದಾರೆ. ಈ ತಿಂಡಿ ಕೇಜಿಗೆ 1.11 ಲಕ್ಷ ರು. ಅಷ್ಟೇ!! ಇದರ ಒಂದು ತುಂಡು 3,000 ರು. ಇದ್ದು, ಇದರಲ್ಲಿ ಚಿನ್ನದ ಭಸ್ಮ, ಉತ್ಕೃಷ್ಟ ಒಣ ಹಣ್ಣುಗಳು ಮತ್ತು ಶುದ್ಧ ಕೇಸರಿಯನ್ನು ಬಳಸಿ ತಯಾರಿಸಲಾಗಿದ್ದು, ಐಷಾರಾಮಿ ಜತೆಗೆ ಆರೋಗ್ಯಕರ ಅಂಶವನ್ನು ಇದರಲ್ಲಿ ಬೆರೆಸಿದ್ದಾರೆ. ಇದಿಷ್ಟೇ ಅಲ್ಲದೇ ಜೈನ್ ಇನ್ನಿತರ ಸಿಹಿ ತಿಂಡಿಗಳನ್ನು ಮಾಡಿದ್ದು, ಅದರ ಬೆಲೆಯೂ 50 ಸಾವಿರದ ಮೇಲೆಯೇ ಇದೆ.


