ನಕಲಿ ಕೀ ಬಳಸಿ ರತ್ನ ಭಂಡಾರ ಓಪನ್; ಇತ್ತ ಪುರಿ ಎಸ್‌ಪಿ ಆರೋಗ್ಯದಲ್ಲಿ ಏರುಪೇರು

ಸಂಪೂರ್ಣ ವಿಧಿವಿಧಾನಳೊಂದಿಗೆ ನಕಲಿ ಕೀ ಬಳಸಿ ರತ್ನ ಭಂಡಾರ ತೆರೆಯಲಾಗಿದ್ದು, ಇತ್ತ ಪುರಿಯ ಪೊಲೀಸ್ ವರಿಷ್ಠಾಧಿಕಾರಿಯ ಆರೋಗ್ಯದಲ್ಲಿ ಏರುಪೇರು ಉಂಟಾಗಿದೆ. 

jagannath temple ratna bhandarn open and fluctuations in puri SP health mrq

ಪುರಿ: ಓಡಿಶಾದ ಪುರಿ ಜಗನ್ನಾಥ ದೇವಾಲಯದ ರತ್ನ ಭಂಡಾರವನ್ನು  50 ವರ್ಷಗಳ ಬಳಿಕ ತೆರೆಯಲಾಗಿದೆ. 11 ಸದಸ್ಯರ ತಂಡ 1.28ಕ್ಕೆ ಶುಭ ಮುಹೂರ್ತದಲ್ಲಿ ಭಂಡಾರವನ್ನು ತೆರೆಯಲಾಗಿದೆ. 11 ಸದಸ್ಯರು ಹೊರಗೆ ಬರುವರೆಗೂ ದೇವಸ್ಥಾನದ ಸುತ್ತಲೂ ನಿಷೇಧಾಜ್ಞೆ ವಿಧಿಸಲಾಗಿದೆ. ದೇವಸ್ಥಾನದ ನಾಲ್ಕು ಬಾಗಿಲುಗಳನ್ನು ಮುಚ್ಚಲಾಗಿದ್ದು, ಭಕ್ತರ ಪ್ರವೇಶಕ್ಕೆ ನಿರ್ಬಂಧ ಹಾಕಲಾಗಿದೆ. ದೇವಸ್ಥಾನದ ಸುತ್ತಲೂ ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸರನ್ನು ನಿಯೋಜನೆ ಮಾಡಲಾಗಿದೆ. ರತ್ನ ಭಂಡಾರ ತೆರೆಯಲು ರಾಜ್ಯ ಸರ್ಕಾರ ಶನಿವಾರ ಅನುಮೋದನೆಯನ್ನು ನೀಡಿದೆ. ಸಂಪೂರ್ಣ ವಿಧಿವಿಧಾನಳೊಂದಿಗೆ ನಕಲಿ ಕೀ ಬಳಸಿ ರತ್ನ ಭಂಡಾರ ತೆರೆಯಲಾಗಿದೆ ಎಂದು ವರದಿಯಾಗಿದೆ.

ರತ್ನಭಂಡಾರ್ ಸಮಿತಿ ಅಧ್ಯಕ್ಷ ನ್ಯಾಯಮೂರ್ತಿ ವಷ್ನಾಥ್ ರಥ, ದೇವಸ್ಥಾನದ ಮುಖ್ಯ ಆಡಳಿತಾಧಿಕಾರಿ ಹಾಗೂ ಇತರ ಹಿರಿಯ ಅಧಿಕಾರಿಗಳು ದೇವಸ್ಥಾನದ ಒಳಗಿನ ತಾತ್ಕಾಲಿಕ ಸ್ಟ್ರಾಂಗ್ ರೂಂ ಅನ್ನು ಶನಿವಾರ ರಾತ್ರಿಯೇ ಪರಿಶೀಲನೆ ನಡೆಸಿದ್ದರು. 1978ರಲ್ಲಿ ಒಳಾಂಗಣ ತೆರೆದಾಗ ಅಲ್ಲಿ ಒಂದು ಸುರಂಗವಿತ್ತು. ಈ ವೇಳೆ ಅಲ್ಲಿದ್ದ ಸೇವಕನಿಗೆ ಹಾವು ಕಾಣಿಸಿತ್ತು ಎಂಬ ಅಂಶ ದಾಖಲಾಗಿತ್ತು. ಆದರೆ ಆ ಸುರಂಗ ಯಾಕೆ ಇದೆ? ಅದು ಎಲ್ಲಿ ಕೊನೆಯಾಗುತ್ತೆ ಎಂಬುದರ ಬಗ್ಗೆ ಸ್ಪಷ್ಟ ಮಾಹಿತಿ ಇಲ್ಲ. 

4 ದಶಕದ ಬಳಿಕ ನಕಲಿ ಕೀ ಬಳಸಿ ಪುರಿ ಜಗನ್ನಾಥನ ರತ್ನ ಭಂಡಾರ ಓಪನ್, ಖಜಾನೆ ಲೂಟಿ ಮಾಡಲಾಗಿದ್ಯಾ?

ರಹಸ್ಯ ಸುರಂಗ

ಕೆಲ ವರದಿಗಳ ಪ್ರಕಾರ, ದೇವಸ್ಥಾನದ ನಿರ್ಮಾಣದ ಸಂದರ್ಭದಲ್ಲಿಯೇ ಈ ಸುರಂಗ ನಿರ್ಮಾಣ ಮಾಡಲಾಗಿತ್ತಂತೆ. ಶತ್ರುಗಳಿಂದ ರತ್ನಾಭರಣಗಳನ್ನು ಸುರಕ್ಷಿತವಾಗಿ ಮತ್ತೊಂದು ಸ್ಥಳಕ್ಕೆ ಸ್ಥಳಾಂತರಿಸು ಸುರಂಗ ನಿರ್ಮಿಸಲಾಗಿತ್ತಂತೆ. ಆದ್ರೆ ಈ ಸುರಂಗ ಎಷ್ಟು ಉದ್ದವಿದೆ ಮತ್ತು ಎಲ್ಲಿಗೆ ಸಂಪರ್ಕ ಹೊಂದಿದೆ ಎಂಬುದರ ಬಗ್ಗೆಯೂ ನಿಖರತೆ ಇಲ್ಲ. ಹಾಗಾಗಿ ಈ ಸುರಂಗದ ನಿಗೂಢತೆಯನ್ನು ಕಾಯ್ದುಕೊಂಡಿದೆ. ಪುರಿ ಶ್ರೀಮಂಡಿ ಮಾಜಿ ಆಡಳಿತಗಾರ ರವಿ ನಾರಾಯಣ ಮಿಶ್ರಾ ಕೂಡ ಈ ಸುರಂಗದ ಬಗ್ಗೆ ಹೇಳುತ್ತಾರೆ. ಕೆಲವರ ಪ್ರಕಾರ ರಹಸ್ಯ ಸುರಂಗ ಸಮುದ್ರವನ್ನು ಸಂಪರ್ಕಿಸುತ್ತದೆಯಂತೆ. ಸಮುದ್ರ ಮಾರ್ಗವಾಗಿ ಭಂಡಾರವನ್ನು ಸಾಗಿಸೋದು ನಿರ್ಮಾಣಕಾರರ ಪ್ಲಾನ್ ಆಗಿತ್ತು ಎಂದು ಹೇಳಲಾಗುತ್ತಿದೆ.

ಪುರಿ ಎಸ್‌ಪಿ ಆರೋಗ್ಯದಲ್ಲಿ ಏರುಪೇರು

ರತ್ನ ಭಂಡಾರ ತೆರೆಯುವ ಪ್ರಕ್ರಿಯೆ ಆರಂಭವಾಗುತ್ತಲೇ ಪುರಿಯ ಪೊಲೀಸ್ ವರಿಷ್ಠಾಧಿಕಾರಿ ಆರೋಗ್ಯದಲ್ಲಿ ಏರುಪೇರು ಉಂಟಾಗಿದೆ. ಎಸ್‌ಪಿ ಅಚೇತ್ ಪ್ರಜ್ಞಾಹೀನರಾಗಿದ್ದು, ಡಾ.ಸಿಬಿಕೆ ಮೊಹಾಂತಿ ಚಿಕಿತ್ಸೆ ಆರಂಭಿಸಿದ್ದಾರೆ. ಎಸ್‌ಪಿ ಅಚೇತ್ ಬೆಹರನ್ ದ್ವಾರದ ಬಳಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿದ್ದರು ಎಂದು ವರದಿಯಾಗಿದೆ. ಸದ್ಯ ಎಸ್‌ಪಿ ಆರೋಗ್ಯ ಸ್ಥಿರವಾಗಿದೆ ಎಂದು ಹೇಳಲಾಗುತ್ತಿದೆ. 

ಕಳೆದೋಗಿದೆ ಪುರಿ ಜಗನ್ನಾಥ ರತ್ನಭಂಡಾರ ಕೀಲಿ ಕೈ.. ಆದ್ರೂ ಓಪನ್‌ ಆಗುತ್ತೆ ಬಾಗಿಲು ಹೇಗೆ ಗೊತ್ತಾ ?

197ರಲ್ಲಿ ರತ್ನಭಂಡಾರ ತೆರೆಯಲಾಗಿತ್ತು. ಭಂಡಾರದಲ್ಲಿ 12,800 ಕ್ಕೂ ಹೆಚ್ಚು ರತ್ನಖಚಿತ ಚಿನ್ನದ ಆಭರಣಗಳು ಪತ್ತೆಯಾಗಿದ್ದವು. ಇವುಗಳ ಜೊತೆಯಲ್ಲಿ 22 ಸಾವಿರಕ್ಕೂ ಅಧಿಕ ಬೆಳ್ಳಿ ವಸ್ತುಗಳು ಸಹ ಅಲ್ಲಿದ್ದವು. 2018ರಲ್ಲಿ ಮತ್ತೆ ಬಾಗಿಲು ತೆಗೆಯಲು ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಗೆ ಸೂಚನೆ ನೀಡಿದಾಗ ಭಂಡಾರದ ಕೀಲಿ ಕೈ ಕಾಣಿಯಾಗಿತ್ತು. 

ಭಂಡಾರದ ರಕ್ಷಣೆಗೆ ಸರ್ಪಗಾವಲು ಇದೆ ಎಂಬ ಬಲವಾದ ನಂಬಿಕೆ ಇದೆ. ಈ ಹಿನ್ನೆಲೆ ಸಮಿತಿಯ ಸದಸ್ಯರು ಹಾವು ಕಾಣಿಸಿಕೊಂಡರೆ ತೆಗೆದುಕೊಳ್ಳಬಹುದಾದ ಮುಂಜಾಗ್ರತ ಕ್ರಮಗಳನ್ನು 11 ಸದಸ್ಯರ ಸಮಿತಿ ತೆಗೆದುಕೊಂಡಿದೆ ಎಂದು ವರದಿಯಾಗಿದೆ. ನುರಿತ ವೈದ್ಯಕೀಯ ತಂಡವೂ ಸದಸ್ಯರ ಜೊತೆಯಲ್ಲಿದೆ ಎಂದು ವರದಿಗಳು ಪ್ರಕಟವಾಗಿವೆ.

Latest Videos
Follow Us:
Download App:
  • android
  • ios