Asianet Suvarna News Asianet Suvarna News

ಪ್ರಧಾನಿ ಮೋದಿ ಭೂತಾನ್‌ ಭೇಟಿ: ಸೂಕ್ಷ್ಮ, ಭದ್ರತೆ ಆಧಾರಿತ ಮಹತ್ವದ ಮಾತುಕತೆ

ಚೀನಾದೊಂದಿಗಿನ ಭೂತಾನ್‌ನ ಗಡಿ ವಿವಾದ ಮತ್ತು ಆಯಕಟ್ಟಿನ ಪ್ರದೇಶಗಳಲ್ಲಿ ಚೀನಾ ಅತಿಕ್ರಮಣದ ಬಗ್ಗೆ ಕಳವಳ ವ್ಯಕ್ತಪಡಿಸಿರುವ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಭೇಟಿ ಮಹತ್ವದ್ದಾಗಿದೆ.  ಮೇಜರ್ ಜನರಲ್ ಸುಧಾಕರ್ (ನಿವೃತ್ತ) ಅವರೊಂದಿಗೆ ಮಾತನಾಡಿರುವ ಏಷಿಯಾನೆಟ್ ನ್ಯೂಸ್‌ ಈ ಭೇಟಿಯ ಸೂಕ್ಷ್ಮತೆ ಮತ್ತು ಭದ್ರತಾ ಪರಿಣಾಮಗಳನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸಿದೆ.
 

Its sensitive security-oriented significant PM Modi Bhutan Visit san
Author
First Published Mar 23, 2024, 4:16 PM IST

ನವದೆಹಲಿ (ಮಾ.23): ಪ್ರಧಾನಮಂತ್ರಿ ನರೇಂದ್ರ ಮೋದಿಯವರು, ಭೂತಾನ್‌ ಪ್ರಧಾನಿ ತ್ಶೆರಿಂಗ್ ಟೊಬ್ಗೇ ಅವರ ಆಹ್ವಾನದ ಮೇರೆಗೆ ರಾಜಧಾನಿ ಥಿಂಪುಗೆ ಆಗಮಿಸಿದಾಗ ಭೂತಾನ್‌ನೊಂದಿಗೆ ನಿಯಮಿತ ಉನ್ನತ ಮಟ್ಟದ ವಿನಿಮಯದ ಮಾತುಕತೆಯ ಸಂಪ್ರದಾಯವನ್ನು ಉಳಿಸಿಕೊಂಡಿದ್ದಾರೆ. ಈ ಭೇಟಿಯು ಪ್ರಧಾನಿ ನರೇಂದ್ರ ಮೋದಿ ಸರ್ಕಾರದ ನೆರೆಹೊರೆತ ಮೊದಲ ಲೀತಿಯ ಮೇಲೆ ನವದೆಹಲಿ ಇಟ್ಟಿರುವ ಮಹತ್ವವನ್ನು ಬಲಪಡಿಸಿದೆ. ದೇಶದಲ್ಲಿ ಚುನಾವಣೆ ಪ್ರಕ್ರಿಯೆಗಳು ನಡೆಯುತ್ತಿರುವ ಹೊತ್ತಿನಲ್ಲಿಯೇ ಮೋದಿ, ಭೂತಾನ್‌ಗೆ ಭೇಟಿ ನೀಡಿರುವುದು ಮಹತ್ವ ಪಡೆದುಕೊಂಡಿದೆ. ಕೆಲ ದಿನಗಳ ಐದು ದಿನಗಳ ಭೇಟಿಗಾಗಿ ದೆಹಲಿ ಹಾಗೂ ಮುಂಬೈನಲ್ಲಿದ್ದ  ಭೂತಾನ್‌ ಪ್ರಧಾನಿ, ತಮ್ಮ ದೇಶಕ್ಕೆ ಭೇಟಿ ನೀಡುವಂತೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಆಹ್ವಾನ ನೀಡಿದ್ದರು. ಭೂತಾನ್ ಪ್ರಧಾನಿ ಕಚೇರಿಯ ಜವಾಬ್ದಾರಿಯನ್ನು ವಹಿಸಿಕೊಂಡ ನಂತರ ಇದು ಅವರ ಮೊದಲ ವಿದೇಶಿ ಭೇಟಿಯಾಗಿತ್ತು. ಪ್ರಧಾನಿ ಮೋದಿ ಮೂಲತಃ ಮಾರ್ಚ್ 20-21 ರಂದು ಭೂತಾನ್‌ಗೆ ಭೇಟಿ ನೀಡಬೇಕಿತ್ತು ಆದರೆ ಭೂತಾನ್‌ನ ಪಾರೋ ವಿಮಾನ ನಿಲ್ದಾಣದ ಮೇಲೆ ಪ್ರತಿಕೂಲ ಹವಾಮಾನದಿಂದಾಗಿ ಅದನ್ನು ಒಂದು ದಿನದ ಮಟ್ಟಿಗೆ ಮುಂದೂಡಲಾಗಿತ್ತು.

ಏಷ್ಯಾನೆಟ್ ನ್ಯೂಸ್‌ ಪ್ರಧಾನಿ ನರೇಂದ್ರ ಮೋದಿ ಅವರ ಭೂತಾನ್‌ ಕಿರು ಭೇಟಿಯ ಪ್ರಾಮುಖ್ಯತೆಯನ್ನು ಅರ್ಥ ಮಾಡಿಕೊಳ್ಳುವ ನಿಟ್ಟಿನಲ್ಲಿ  ರಕ್ಷಣಾ ಮತ್ತು ಕಾರ್ಯತಂತ್ರದ ವ್ಯವಹಾರಗಳ ವಿಶ್ಲೇಷಕ, ಮೇಜರ್ ಜನರಲ್ ಸುಧಾಕರ್ (ನಿವೃತ್ತ) ಅವರೊಂದಿಗೆ ಮಾತನಾಡಿತು ಸರಳವಾಗಿ ಹೇಳುವುದಾದರೆ, ಈ ಭೇಟಿಯು "ಸೂಕ್ಷ್ಮ, ಭದ್ರತೆ-ಆಧಾರಿತ ಮತ್ತು ಮಹತ್ವದ್ದಾಗಿದೆ" ಎಂದು ಹೇಳಿದ್ದಾರೆ.

ಭೂತಾನ್ ಮತ್ತು ಚೀನಾ ತಮ್ಮ ಗಡಿ ವಿವಾದವನ್ನು ಪರಿಹರಿಸಲು 'ಮೂರು-ಹಂತದ ಮಾರ್ಗಸೂಚಿ' ಒಪ್ಪಂದಕ್ಕೆ ಸಹಿ ಹಾಕಿದಾಗಿನಿಂದ, 2021 ರಲ್ಲಿ, ಈ ಬೆಳವಣಿಗೆಯು ದೆಹಲಿಯಲ್ಲಿ ಗಮನ ಸೆಳೆದಿದೆ. ಒಪ್ಪಂದದ ವಿಷಯಗಳನ್ನು ಇನ್ನೂ ಅನಾವರಣಗೊಳಿಸದ ಕಾರಣ, ಸಮಸ್ಯೆಯನ್ನು ಪರಿಹರಿಸಲು ಥಿಂಪು ಮತ್ತು ಬೀಜಿಂಗ್ ಇದುವರೆಗೆ ವಿವಿಧ ಹಂತಗಳಲ್ಲಿ 25 ಸುತ್ತಿನ ಸಭೆಗಳನ್ನು ನಡೆಸಿವೆ. ಈ ಹಿಂದೆ ಚೀನಾ ವಿವಾದಿತ ಪ್ರದೇಶಗಳ ವಿನಿಮಯವನ್ನು ಭೂತಾನ್‌ಗೆ ನೀಡಿತ್ತು. 1990 ರ ದಶಕದಿಂದಲೂ ಮಾತುಕತೆಗಳ ಭಾಗವಾಗಿ, ಭೂತಾನ್ ತನ್ನ ಭೂಪ್ರದೇಶದ ಪಶ್ಚಿಮದಲ್ಲಿ 298 ಚದರ ಕಿಲೋಮೀಟರ್ ಪ್ರದೇಶವನ್ನು ಚೀನಾಗೆ ನೀಡಿದರೆ, ಉತ್ತರದಲ್ಲಿ 495 ಚದರ ಕಿಲೋಮೀಟರ್ ಪ್ರದೇಶವನ್ನು ತನ್ನ ಬೇಡಿಕೆಯನ್ನು ಬಿಟ್ಟುಕೊಡಲು ಬೀಜಿಂಗ್ ಒಪ್ಪಿಕೊಂಡಿದೆ.  ಇದರಲ್ಲಿ ಡೋಕ್ಲಾಮ್ 89 ಚದರ ಕಿಮೀ, ಚರಿತಾಂಗ್, ಸಿಂಚುಲುಂಗ್ಪಾ ಡ್ರಾಮನಾ, ಮತ್ತು ಶಖಾಟೋ ಭಾಗಗಳನ್ನು ಒಳಗೊಂಡಿವೆ. ಚೀನಾ ಜಂಫೇರಿ ರಿಡ್ಜ್‌ಗೆ ಪ್ರವೇಶಿಸುವುದು ಭಾರತದ ಭದ್ರತೆಯ ಹಿತಾಸಕ್ತಿಯಲ್ಲ ಮತ್ತು ಹೊಸದಿಲ್ಲಿ ಈ ಪ್ರದೇಶದಲ್ಲಿ ಯಾವುದೇ ಚೀನಾದ ಹೆಜ್ಜೆಗುರುತನ್ನು ಕಾಣಿಸಲು ಬಿಡಬಾರದು' ಎಂದು ಸುಧಾಕರ್‌ ಹೇಳಿದ್ದಾರೆ.

ಜಂಫೇರಿ ರಿಡ್ಜ್‌ಅನ್ನು ಚೀನಾ ಬಯಸುತ್ತಿರೋದೇಕೆ?
ಭೂತಾನ್ ತನ್ನ ನೆರೆಯ ಎರಡೂ ದೇಶಗಳಿಗೆ ಅತ್ಯಂತ ಪ್ರದೇಶ ಎನ್ನುವುದನ್ನು ಇಲ್ಲಿ ಗಮನಿಸಬೇಕು.  ಅದರ ಉತ್ತರ ಮತ್ತು ವಾಯುವ್ಯದಲ್ಲಿ, ಚೀನಾ-ನಿಯಂತ್ರಿತ ಟಿಬೆಟ್ ಪ್ರದೇಶವಿದೆ, ಆದರೆ ಇದು ಭಾರತದ ಈಶಾನ್ಯ ಪ್ರದೇಶದಿಂದ ಎಲ್ಲಾ ಕಡೆಗಳಲ್ಲಿ ಸುತ್ತುವರೆದಿದೆ.  ಇನ್ನು ಜಂಫೇರಿ ರಿಡ್ಜ್ ಸುತ್ತಲಿನ ಪ್ರದೇಶವು ಭಾರತಕ್ಕೆ ಆಯಕಟ್ಟಿನ ಪ್ರಾಮುಖ್ಯತೆ ಹೊಂದಿರುವ ಪ್ರದೇಶ. ಚೀನಾ, ಭೂತಾನ್ ಮತ್ತು ಭಾರತದ ನಡುವಿನ ತ್ರಿ-ಜಂಕ್ಷನ್‌ನಲ್ಲಿರುವ ಡೋಕ್ಲಾಮ್ ಪ್ರದೇಶವು ದೆಹಲಿಗೆ ಅತ್ಯಂತ ಪ್ರಮುಖ ಎನ್ನುವುದು ಈಗಾಗಲೇ ಗೊತ್ತಾಗಿದೆ. ಜಂಫೇರಿ ರಿಡ್ಜ್ ಮತ್ತು ಸಿಲಿಗುರಿ ಕಾರಿಡಾರ್ ನಡುವಿನ ಅಂತರವು ಕೇವಲ 17 ಕಿಮೀ. ಚೀನಾದ ಪೀಪಲ್ಸ್ ಲಿಬರೇಶನ್ ಆರ್ಮಿಯು ಈ ಪ್ರದೇಶಕ್ಕೆ ಅವಕಾಶ ಪಡೆದಲ್ಲಿ, ಭಾರತದ ಗಡಿ ಇನ್ನಷ್ಟು ಸಲೀಸಾಗಲಿದೆ. ಭಾರತದ ಮೇಲೆ ಅತ್ಯಂತ ವೇಗವಾಗಿ ಆಕ್ರಮಣಕಾರಿ ದಾಳಿ ನಡೆಸಲು ಸಾಧ್ಯವಾಗುತ್ತದೆ.

ಯುದ್ಧದಂತಹ ಸನ್ನಿವೇಶದಲ್ಲಿ, ಚೀನಾ ತನ್ನ ಸೈನ್ಯ ಮತ್ತು ಯಂತ್ರಗಳನ್ನು ಸುಲಭವಾಗಿ ಇಲ್ಲಿಂದೇ ಸಜ್ಜುಗೊಳಿಸಬಹುದು ಅದಲ್ಲದೆ, ಸಿಲಿಗುರಿ ಕಾರಿಡಾರ್‌ಅನ್ನೂ ತಡೆಯಬಹುದು. ಇದು 22 ಕಿಮೀ ಅಗಲದ ಭೂಪ್ರದೇಶ ಭಾರತವನ್ನು ತನ್ನ ಈಶಾನ್ಯ ಪ್ರದೇಶಕ್ಕೆ ಸಂಪರ್ಕಿಸುತ್ತದೆ. 2017 ರಲ್ಲಿ, ಭಾರತ ಮತ್ತು ಚೀನಾದ ಸೇನೆಗಳು ಡೋಕ್ಲಾಮ್‌ನಲ್ಲಿ 72 ದಿನಗಳ ಕಾಲ ಘರ್ಷಣೆಯಲ್ಲಿ ತೊಡಗಿದ್ದವು, ನಂತರ ಭಾರತವು ಚೀನಾವನ್ನು ಆ ಪ್ರದೇಶದಲ್ಲಿ ರಸ್ತೆ ನಿರ್ಮಿಸುವುದನ್ನು ನಿಲ್ಲಿಸಿತು.

Order of the Druk Gyalpo: ಪ್ರಧಾನಿ ನರೇಂದ್ರ ಮೋದಿಗೆ ಭೂತಾನ್‌ನ ಅತ್ಯುನ್ನತ ನಾಗರೀಕ ಪ್ರಶಸ್ತಿ

1949 ರಲ್ಲಿ ಭಾರತ ಮತ್ತು ಭೂತಾನ್ ಶಾಂತಿ ಮತ್ತು ಸೌಹಾರ್ದದ ಇಂಡೋ-ಭೂತಾನ್ ಒಪ್ಪಂದಕ್ಕೆ ಸಹಿ ಹಾಕಿದ ನಂತರ, ಭದ್ರತಾ ಖಾತರಿಗಳು ಮತ್ತು ಆರ್ಥಿಕ ಬೆಂಬಲಕ್ಕೆ ಬದಲಾಗಿ ಥಿಂಪು ಅವರ ವಿದೇಶಾಂಗ ನೀತಿ ಮತ್ತು ರಕ್ಷಣಾ ವಿಭಾಗದ ನೀತಿಗಳನ್ನು ಭಾರತ ಎದುರು ನೋಡುತ್ತಿದೆ. 2007 ರಲ್ಲಿ, ಭೂತಾನ್‌ಗೆ ಹೆಚ್ಚಿನ ಸ್ವಾಯತ್ತತೆಯನ್ನು ನೀಡಲು ಒಪ್ಪಂದವನ್ನು ಪರಿಷ್ಕರಿಸಲಾಯಿತು, ಹಾಗಿದ್ದರೂ, ಈ ದೇಶದ ವಿದೇಶಾಂಗ ವ್ಯವಹಾರಗಳಲ್ಲಿ ಭಾರತವು ಇನ್ನೂ ಪ್ರಮುಖ ಪಾತ್ರವನ್ನು ವಹಿಸುತ್ತಿದೆ.

Breaking: ಪ್ರಧಾನಿ ನರೇಂದ್ರ ಮೋದಿ ಅವರ ಭೂತಾನ್‌ ಭೇಟಿ ಮುಂದೂಡಿಕೆ

ಭೂತಾನ್‌ನ ರಾಜ ಜಿಗ್ಮೆ ಖೇಸರ್ ನಾಮ್‌ಗೈಲ್ ವಾಂಗ್‌ಚುಕ್ ಮತ್ತು ಭೂತಾನ್‌ನ ನಾಲ್ಕನೇ ರಾಜ ಜಿಗ್ಮೆ ಸಿಂಗ್ಯೆ ವಾಂಗ್‌ಚುಕ್ ಅವರು ಪ್ರಧಾನಿ ಮೋದಿಯನ್ನು ತಮ್ಮ ದೇಶಕ್ಕೆ  ಬರಮಾಡಿಕೊಂಡರು. ಅವರು ತಮ್ಮ ಭೂತಾನ್ ಪ್ರಧಾನಿ ಜೊತೆ ದ್ವಿಪಕ್ಷೀಯ ಮಾತುಕತೆ ನಡೆಸಲು ನಿರ್ಧರಿಸಿದ್ದಾರೆ. ಮೋದಿ, ಥಿಂಪುವಿನಲ್ಲಿ ಭಾರತ ಸರ್ಕಾರದ ನೆರವಿನೊಂದಿಗೆ ನಿರ್ಮಿಸಲಾದ ಅತ್ಯಾಧುನಿಕ ಆಸ್ಪತ್ರೆಯಾದ ಗ್ಯಾಲ್ಟ್ಸುನ್ ಜೆಟ್ಸನ್ ಪೆಮಾ ತಾಯಿ ಮತ್ತು ಮಕ್ಕಳ ಆಸ್ಪತ್ರೆಯನ್ನು ಉದ್ಘಾಟಿಸಲಿದ್ದಾರೆ.

Follow Us:
Download App:
  • android
  • ios