Breaking: ಪ್ರಧಾನಿ ನರೇಂದ್ರ ಮೋದಿ ಅವರ ಭೂತಾನ್ ಭೇಟಿ ಮುಂದೂಡಿಕೆ
ಲೋಕಸಭಾ ಚುನಾವಣೆಯ ನಡುವೆ ಪ್ರಧಾನಿ ನರೇಂದ್ರ ಮೋದಿ ಅವರ ಎರಡು ದಿನಗಳ ಭೂತಾನ್ ಭೇಟಿ ನಿಗದಿಯಾಗಿತ್ತು. ಆದರೆ, ಈ ಭೇಟಿ ಮುಂದೂಡಿಕೆಯಾಗಿದೆ ಎಂದು ಕೇಂದ್ರ ವಿದೇಶಾಂಗ ಇಲಾಖೆ ತಿಳಿಸಿದೆ.
ನವದೆಹಲಿ (ಮಾ.20): ಪ್ರಧಾನಿ ನರೇಂದ್ರ ಮೋದಿ ಅವರ ಎರಡು ದಿನಗಳ ಭೂತಾನ್ ಪ್ರವಾಸ ಮುಂದೂಡಿಕೆಯಾಗಿದೆ. ಮಾರ್ಚ್ 21 ಹಾಗೂ 22 ರಂದು ಅವರು ಭೂತಾನ್ ಪ್ರವಾಸ ಮಾಡಬೇಕಿತ್ತು. ಆದರೆ, ಭೂತಾನ್‌ನಲ್ಲಿ ವಾತಾವರಣ ಸರಿ ಇಲ್ಲದಿರುವ ಕಾರಣ ಅವರ ಭೇಟಿಯನ್ನು ಮುಂದೂಡಲಾಗಿದೆ ಎಂದು ಕೇಂದ್ರ ವಿದೇಶಾಂಗ ಇಲಾಖೆ ತಿಳಿಸಿದ್ದು, ಹೊಸ ದಿನಾಂಕವನ್ನು ಶೀಘ್ರದಲ್ಲಿಯೇ ತಿಳಿಸಲಾಗುವುದು ಎಂದಿದೆ. 'ಮಾರ್ಚ್ 21-22 ರಂದು ನಡೆಯಬೇಕಿದ್ದ ಪ್ರಧಾನಿ ಮೋದಿ ಅವರ ಭೂತಾನ್ ಪ್ರವಾಸವನ್ನು ಈ ಪ್ರದೇಶದಲ್ಲಿನ ಪ್ರತಿಕೂಲ ಹವಾಮಾನದಿಂದಾಗಿ ಮುಂದೂಡಲಾಗಿದೆ. ಪ್ರಸ್ತುತ ಭೇಟಿಗೆ ಹೊಸ ದಿನಾಂಕಗಳನ್ನು ನಿಗದಿಪಡಿಸಲಾಗುತ್ತಿದೆ' ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ತನ್ನ ಹೇಳಿಕೆಯಲ್ಲಿ ತಿಳಿಸಿದೆ.