ಖಲಿಸ್ತಾನ ಪ್ರತ್ಯೇಕ ಹೋರಾಟದ ಕೂಗು ತೀವ್ರಗೊಳ್ಳುತ್ತಿರುವ ಬೆನ್ನಲ್ಲೇ ಇದೀಗ ಮತ್ತೊಂದು ಆಘಾತಕಾರಿ ಘಟನೆ ಪಂಜಾಬ್‌ನಲ್ಲಿ ನಡೆದಿದೆ. ಮುಖಕಕ್ಕೆ ತ್ರಿವರ್ಣ ಧ್ವಜ ಪೈಂಟ್ ಬಳಿದ ಯುವತಿಗೆ ಅಮೃತಸರದ ಸ್ವರ್ಣ ಮಂದಿರ ಪ್ರವೇಶ ನಿರಾಕರಿಸಲಾಗಿದೆ. ಇದಕ್ಕೆ ಕಾರಣ ಇದು ಭಾರತ ಅಲ್ಲ, ಪಂಜಾಬ್ ಎಂದಿದ್ದಾರೆ. ಈ ವಿಡಿಯೋ ವೈರಲ್ ಆಗಿದ್ದು, ಆಕ್ರೋಶ ವ್ಯಕ್ತವಾಗಿದೆ.
ಅಮೃತಸರ(ಏ.17): ಪಂಜಾಬ್‌ನಲ್ಲಿ ಬೃಂದನ್‌ವಾಲೆ ಹತ್ಯೆ ಬಳಿಕ ಸೈಲೆಂಟ್ ಆಗಿದ್ದ ಖಲಿಸ್ತಾನ ಪ್ರತ್ಯೇಕತಾ ಹೋರಾಟ, ದೆಹಲಿಯಲ್ಲಿ ನಡೆದ ರೈತರ ಹೋರಾಟದ ವೇಳೆ ಮತ್ತೆ ಆರಂಭಗೊಂಡಿತ್ತು. ಅಮೃತ್ ಪಾಲ್ ಸಿಂಗ್ ಎಂಟ್ರಿ ಬಳಿಕ ಖಲಿಸ್ತಾನ ಹೋರಾಟ ಮತ್ತೆ ತೀವ್ರಗೊಂಡಿದೆ. ಇದೀಗ ಅಮೃತ್ ಪಾಲ್ ಸಿಂಗ್ ತಲೆಮರೆಸಿಕೊಂಡಿದ್ದಾನೆ. ಈ ಬೆಳವಣಿಗೆ ನಡುವೆ ಅಮೃತಸರದ ಗೋಲ್ಡನ್ ಟೆಂಪಲ್‌ನಲ್ಲಿ ಆಘಾತಕಾರಿ ಘಟನೆಯೊಂದು ನಡೆದಿದೆ. ಯುವತಿಯೊಬ್ಬಳು ಮುಖಕ್ಕೆ ಭಾರತದ ತ್ರಿವರ್ಣಧ್ವಜದ ಪೈಂಟ್ ಬಳಿದು ಸ್ವರ್ಣಮಂದಿಕ್ಕೆ ತೆರಳಿದ್ದಳು. ಆದರೆ ಈ ಯುವತಿಗೆ ಗೋಲ್ಡನ್ ಟೆಂಪಲ್ ಪ್ರವೇಶಿಸಲು ಅನುಮತಿ ನಿರಾಕರಿಸಲಾಗಿದೆ. ಇದಕ್ಕೆ ನೀಡಿದ ಕಾರಣ ಒಂದು ಕ್ಷಣ ಬೆಚ್ಚಿ ಬೀಳುವಂತಿದೆ. ತ್ರಿವರ್ಣಧ್ವಜ ಬಳಿದಿರುವ ಕಾರಣ ಪ್ರವೇಶ ನಿರಾಕರಿಸಲಾಗಿದೆ.ಕಾರಣ ಇದು ಪಂಜಾಬ್, ಭಾರತ ಅಲ್ಲ ಎಂದು ಪ್ರವೇಶ ನಿರಾಕರಿಸಿದ ಗೋಲ್ಡನ್ ಟೆಂಪಲ್ ಸಿಬ್ಬಂದಿ ಹೇಳಿರುವ ವಿಡಿಯೋ ವೈರಲ್ ಆಗಿದೆ.
ಗೋಲ್ಡನ್ ಟೆಂಪಲ್ ಸಿಬ್ಬಂದಿ ಪ್ರವೇಶ ನಿರಾಕರಣೆ ಬಳಿಕ ಯುವತಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾಳೆ. ಯುವತಿಯ ಪರವಾಗಿ ವ್ಯಕ್ತಿಯೊಬ್ಬರು ಅದೇ ಸಿಬ್ಬಂದಿ ಬಳಿ ಪ್ರವೇಶ ನಿರಾಕರಿಸಲು ಕಾರಣ ಕೇಳಿದ್ದಾರೆ. ಈ ವೇಳೆ ಸಿಬ್ಬಂದಿ, ಯವತಿ ತ್ವಿವರ್ಣಧ್ವಜದ ಪೈಂಟ್ ಬಳಿದಿದ್ದಾರೆ. ಇದರಿಂದ ಪ್ರವೇಶ ನಿರಾಕರಿಸಾಗಿದೆ ಎಂದು ಉತ್ತರಿಸಿದ್ದಾರೆ. ಇದರಿಂದ ಆಕ್ರೋಶಗೊಂಡ ಯುವತಿ ಹಾಗೂ ವ್ಯಕ್ತಿ ಇದು ಹೇಗೆ ಸಾಧ್ಯ. ಪಂಜಾಬ್ ಇರುವುದು ಭಾರತದಲ್ಲಿ ಎಂದು ತಿರುಗೇಟು ನೀಡಿದ್ದಾರೆ. ಆದರೆ ಇದನ್ನು ಒಪ್ಪಲು ಸಿಬ್ಬಂದಿ ತಯಾರಿಲ್ಲ. ಇದು ಪಂಜಾಬ್, ಭಾರತವಲ್ಲ. ಇಲ್ಲಿ ಅಸಂಬದ್ಧ ಮಾತುಗಳನ್ನಾಡಬೇಡಿ ಎಂದು ಕ್ಯಾಮರ ಕಸಿದುಕೊಳ್ಳಲು ಯತ್ನಿಸಿದ್ದಾನೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಹಲವರು ಸ್ವರ್ಣ ಮಂದಿರ ಆಡಳಿತ ಮಂಡಳಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
Golden Temple ಬಳಿ ತಂಬಾಕು ಜಗಿಯುತ್ತಿದ್ದಕ್ಕೆ ಕೊಲೆ ಮಾಡಿದ ನಿಹಾಂಗ್ ಸಿಖ್ಖರು..! ಸಿಸಿ ಕ್ಯಾಮರಾದಲ್ಲಿ ಸೆರೆ
ವಿಡಿಯೋ ವೈರಲ್ ಆದ ಬೆನ್ನಲ್ಲೇ ಅಮೃತಸರದ ಗೋಲ್ಡನ್ ಟೆಂಪಲ್ ಆಡಳಿತ ಮಂಡಳಿ ವಿರುದ್ದ ಟೀಕೆಗಳು ವ್ಯಕ್ತವಾಗಿದೆ. ಇದರ ಬೆನ್ನಲ್ಲೇ ಶಿರೋಮಣಿ ಗುರುದ್ವಾರ ಪ್ರಬಂಧಕ್ ಸಮಿತಿಯ ಮುಖ್ಯ ಕಾರ್ಯದರ್ಶಿ ಗುರುಚರಣ್ ಸಿಂಗ್ ಗ್ರೆವಾಲ್ ಸಿಬ್ಬಂದಿ ಅನುಚಿತ ವರ್ತನೆಗೆ ಕ್ಷಮೆ ಯಾಚಿಸಿದ್ದಾರೆ. ಇಷ್ಟೇ ಅಲ್ಲ ಯುವತಿ ಮುಖದಲ್ಲಿ ಬಳಿದಿರುವುದು ತ್ರಿವರ್ಣ ಧ್ವಜವಲ್ಲ. ಇದರಲ್ಲಿ ಆಶೋಕ ಚಕ್ರವಿಲ್ಲ. ಇದು ಒಂದು ಪಕ್ಷದ ಚಿಹ್ನೆಯಂತಿದೆ. ಹೀಗಾಗಿ ಅವಕಾಶ ನಿರಾಕರಿಸಲಾಗಿದೆ ಎಂದು ಸಮರ್ಥನೆ ನೀಡಿದ್ದಾರೆ.
ಆದರೆ ಪ್ರಬಂಧಕ್ ಸಮಿತಿಯ ಸಮರ್ಥನೆ ತೃಪ್ತಿ ತಂದಿಲ್ಲ ಎಂದು ಸಾಮಾಜಿಕ ಜಾಲತಾಣದಲ್ಲಿ ಮತ್ತೆ ಆಕ್ರೋಶ ವ್ಯಕ್ತವಾಗಿದೆ. ಕಾರಣ ಸಿಬ್ಬಂದಿ ಇದು ತ್ರಿವರ್ಣಧ್ವಜದ ರೀತಿ ಇಲ್ಲ ಎಂದು ಹೇಳಿಲ್ಲ. ಭಾರತದ ಫ್ಲ್ಯಾಗ್ ಬಳಿದಿರುವ ಕಾರಣ ಪ್ರವೇಶ ನಿರಾಕರಿಸಲಾಗುತ್ತದೆ ಎಂದಿದ್ದಾನೆ. ಇಷ್ಟೇ ಅಲ್ಲ ಅದು ಭಾರತ ಅಲ್ಲ, ಪಂಜಾಬ್ ಎಂದಿದ್ದಾನೆ. ಹೀಗಾಗಿ ಗೋಲ್ಡನ್ ಟೆಂಪಲ್ ಆಡಳಿತ ಮಂಡಳಿ ಇದೀಗ ಸಮರ್ಥನೆ ಒಂದಕ್ಕೊಂದು ತಾಳೆ ಆಗುತ್ತಿಲ್ಲ.
Operation Blue Star ಸ್ವರ್ಣ ಮಂದಿರದ ಬಳಿ ಖಲಿಸ್ತಾನ ಪರ ಘೋಷಣೆ, ಪಂಜಾಬ್‌ನಲ್ಲಿ ಹೆಚ್ಚಿದ ಆತಂಕ
ಇದೇ ವೇಳೆ ಸಾಮಾಜಿಕ ಮಾಧ್ಯಮದಲ್ಲಿ ಹಲವರು ಈ ಬೆಳವಣಿಗೆಗೆ ಆತಂಕ ವ್ಯಕ್ತಪಡಿಸಿದ್ದಾರೆ. ಇದಕ್ಕೆ ಕಾರಣವನ್ನೂ ನೀಡಿದ್ದಾರೆ. ಪಂಜಾಬ್‌ನಲ್ಲಿ ಖಲಿಸ್ತಾನ ಹೋರಾಟ ತೀವ್ರಗೊಂಡ ಬಳಿಕ ಉಗ್ರ ಬ್ರಿಂದನ್ ವಾಲೆ ಹಾಗೂ ಇತರ ಸಹಚರರು ಇದೇ ಗೋಲ್ಡನ್ ಟೆಂಪಲ್‌ನಲ್ಲಿ ಅಡಗಿಕುಳಿತು ಎಚ್ಚರಿಕೆ ನೀಡಿದ್ದರು. ಈ ವೇಳೆ ಭಾರತೀಯ ಸೇನೆ ಸ್ವರ್ಣಮಂದಿರದ ಮೇಲೆ ದಾಳಿ ಮಾಡಿ ಬ್ರಿಂದನ್‌ವಾಲೆ ಹಾಗೂ ಸಹಚರರನ್ನು ಹತ್ಯೆ ಮಾಡಿತ್ತು.
