ಆಪರೇಶನ್ ಬ್ಲೂ ಸ್ಟಾರ್ ವರ್ಷಾಚರಣೆ ದಿನ ಆತಂಕ ಗೋಲ್ಡನ್ ಟೆಂಪಲ್ ಎಂದುರು ಖಲಿಸ್ತಾನ ಪರ ಘೋಷಣೆ ಗ್ಯಾಂಗ್ ವಾರ್‌ನಿಂದ ಆತಂಕದಲ್ಲಿರುವ ಪಂಜಾಬ್‌ನಲ್ಲಿ ಪ್ರತ್ಯೇಕ ಕೂಗು
ಪಂಜಾಬ್(ಜೂ.06): ಅಮೃತಸರ ಸ್ವರ್ಣಮಂದಿರದಲ್ಲಿ ಅಡಗಿದ್ದ ಉಗ್ರರ ಸದೆಬಡಿಯಲು ಅಂದಿನ ಪ್ರಧಾನಿ ಇಂದಿರಾ ಗಾಂಧಿ ಆಪರೇಶನ್ ಬ್ಲೂ ಸ್ಟಾರ್ ಕಾರ್ಯಚರಣೆ ನಡೆಸಿದ್ದರು. ಇದೀಗ ಅದೇ ಸ್ವರ್ಣ ಮಂದಿರದ ಹೊರಭಾಗದಲ್ಲಿ ಖಲಿಸ್ತಾನ ಪರ ಘೋಷಣೆ ಕೂಗಲಾಗಿದೆ. ಆಪರೇಶನ್ ಬ್ಲೂ ಸ್ಟಾರ್ ವರ್ಷಾಚರಣೆ ದಿನದಂದೆ ಪಂಜಾಬ್ ಉಗ್ರ ಸಂಘಟನೆ ಖಲಿಸ್ತಾನ ಪರ ಘೋಷಣೆ ಕೂಗಲಾಗಿದೆ. ಇದು ಪಂಜಾಬ್ ಭದ್ರತೆಗೆ ಸವಾಲೆಸೆಯುವಂತಿದೆ.
ಇಂದು ಆಪರೇಷನ್ ಬ್ಲೂಸ್ಟಾರ್ 38ನೇ ವರ್ಷಾಚರಣೆ. ಇದರ ಅಂಗವಾಗಿ ಸಿಖ್ ಸಂಘಟನೆಗಳ ಸ್ವರ್ಣಮಂದಿರದ ಹೊರಭಾಗದಲ್ಲಿ ಜಮಾವಣೆಗೊಂಡಿದ್ದರು. ಬಳಿಕ ಖತ್ತಿ ಝಳಪಿಸಿ ಖಲಿಸ್ತಾನ ಪರ ಘೋಷಣೆ ಕೂಗಲಾಗಿದೆ. ಹಲವು ಯುವಕರು ಖಲಿಸ್ತಾನ ಪರ ಬ್ಯಾನರ್ ಹಾಗೂ ಘೋಷಣೆ ಕೂಗಿದ್ದಾರೆ. ಇದು ಪಂಜಾಬ್ ಆತಂಕ ಹೆಚ್ಚಿಸಿದೆ.
ಖಲಿಸ್ತಾನಕ್ಕೆ ಅರವಿಂದ್ ಕೇಜ್ರಿವಾಲ್ ಬೆಂಬಲ ಮತ್ತೊಮ್ಮೆ ಸಾಬೀತು!
ಅಮೃತಸರದ ಶಿರೋಮಣಿ ಅಕಾಲಿದಳ ಸಂಘಟನೆ ಯುವಕರು ಕೂಡ ಖಲಿಸ್ತಾನ ಪರ ಘೋಷಣೆ ಕೂಗಿದ್ದಾರೆ. ಮಾಜಿ ಸಂಸದ ಸಿಮ್ರನ್‌ಜಿತ್ ಸಿಂಗ್ ಮಾನ್ ನೇತೃತ್ವದ ಯುವಕರ ಗುಂಪು ಖಲಿಸ್ತಾನ ಪರ ಘೋಷಣೆ ಕೂಗಿದ್ದಾರೆ. ಇದೇ ವೇಳೆ ಸಿಧು ಮೂಸೆ ವಾಲಾ ಹತ್ಯೆಗೆ ನ್ಯಾಯಬೇಕೆಂದು ಆಗ್ರಹಿಸಿದ್ದಾರೆ.
ಪಂಜಾಬ್‌ನಲ್ಲಿ ಪದೇ ಪದೇ ಖಲಿಸ್ತಾನ ಪರ ಘೋಷಣೆ ಮೊಳಗುತ್ತಲೇ ಇದೆ. ಕೇವಲ ಪಂಜಾಬ್‌ನಲ್ಲಿ ಮಾತ್ರವಲ್ಲ, ದೇಶದ ಇತರ ರಾಜ್ಯ ಹಾಗೂ ವಿದೇಶಗಳಲ್ಲೂ ಖಲಿಸ್ತಾನ ಪರ ಘೋಷಣೆಗಳು ಸಾಮಾನ್ಯವಾಗಿದೆ.
ಗೋಡೆಯ ಮೇಲೆ ಖಲಿಸ್ತಾನಿ ಬರಹ
ಒಂದು ವರ್ಷದಿಂದ ಮತ್ತೆ ಸಕ್ರಿಯವಾಗಿರುವ ಪ್ರತ್ಯೇಕವಾದಿ ಖಲಿಸ್ತಾನಿ ಸಂಘಟನೆ, ಇದೀಗ ಹಿಮಾಚಲ ಪ್ರದೇಶದ ಧರ್ಮಶಾಲಾದಲ್ಲಿರುವ ವಿಧಾನಸೌಧದ ಮುಂಬಾಗಿಲ ಕಟ್ಟಡಕ್ಕೆ ತನ್ನ ಧ್ವಜ ಕಟ್ಟಿ, ಗೋಡೆಯ ಮೇಲೆ ಖಲಿಸ್ತಾನಿ ಪರ ಬರಹ ಬರೆಯುವ ಮೂಲಕ ದೇಶ ಮತ್ತೊಮ್ಮೆ ದೇಶ ವಿರೋಧಿ ಕೃತ್ಯ ಮೆರೆದಿದೆ.
ಆಪ್ ಗೆಲ್ಲಲು ಖಲಿಸ್ತಾನಿ ಮತ, ಬಂಡವಾಳ ಕಾರಣ ಎಂದ SFJ
ಭಾನುವಾರ ಬೆಳಗ್ಗೆ ಈ ವಿಷಯ ಅಧಿಕಾರಿಗಳು ಮತ್ತು ಪೊಲೀಸರ ಗಮನಕ್ಕೆ ಬಂದಿದ್ದು, ತಕ್ಷಣವೇ ಧ್ವಜವನ್ನು ಇಳಿಸಿ, ಗೋಡೆಯ ಮೇಲಿನ ಬರಹವನ್ನು ಅಳಿಸಲಾಗಿದೆ. ಘಟನೆಯನ್ನು ರಾಜ್ಯ ಸರ್ಕಾರ ಗಂಭೀರವಾಗಿ ಪರಿಗಣಿಸಿದ್ದು, ದೋಷಿಗಳ ವಿರುದ್ಧ ಸೂಕ್ತ ಕ್ರಮದ ಭರವಸೆ ನೀಡಿದೆ ಹಾಗೂ ವಿಶೇಷ ತನಿಖಾ ತಂಡ (ಎಸ್‌ಐಟಿ) ರಚಿಸಿ ತನಿಖೆಗೆ ಆದೇಶಿಸಿದೆ.
ಗಡಿಯಲ್ಲಿ ಪಾಕಿಸ್ತಾನದಿಂದ ಸ್ಫೋಟಕ ರವಾನೆ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಗುಪ್ತಚರ ಸಂಸ್ಥೆಗಳು ಖಲಿಸ್ತಾನಿ ಸಂಘಟನೆಗೆ ಪಾಕಿಸ್ತಾನ ಕುಮ್ಮಕ್ಕು ನೀಡುತ್ತಿರುವ ಕುರಿತು ಎಚ್ಚರಿಕೆ ಗಂಟೆ ಮೊಳಗಿಸಿವೆ. ಈ ಬಗ್ಗೆ ಕೇಂದ್ರ ಗೃಹ ಸಚಿವಾಲಯ ಪರಿಶೀಲನೆ ಆರಂಭಿಸಿದೆ ಎನ್ನಲಾಗಿದೆ.
ಖಲಿಸ್ತಾನಿ ಭಯೋತ್ಪಾದನೆಗೆ ಜೀವ ತುಂಬಲು ಪಾಕ್ ಯತ್ನ
ಖಲಿಸ್ತಾನಿ ಉಗ್ರ ಸಂಘಟನೆಗಳಾದ ಬಬ್ಬರ್ ಖಾಲ್ಸಾ ಇಂಟರ್‌ನ್ಯಾಷನಲ್ ಹಾಗೂ ಖಾಲಿಸ್ತಾನ್ ಜಿಂದಾಬಾದ್ ಫೋರ್ಸ್ ಸಂಘಟನೆಗಳಿಗೆ ಸೇರಿದ ಹಿರಿಯ ಸದಸ್ಯರನ್ನು ಇತ್ತೀಚೆಗೆ ಪಾಕಿಸ್ತಾನಕ್ಕೆ ಕರೆಸಿ, ಆ ದೇಶದ ನಿಯಂತ್ರಕರು ಸಭೆ ನಡೆಸಿದ್ದಾರೆ. ಈ ಉಗ್ರರಿಗೆ ಪಾಕಿಸ್ತಾನ ಏನಾದರೂ ತರಬೇತಿ ಶಿಬಿರವನ್ನೇನಾದರೂ ತೆರೆದಿದೆಯೇ ಎಂಬ ಮಾಹಿತಿ ಲಭ್ಯವಾಗಿಲ್ಲ.
ಫರೀದ್‌ಕೋಟ್‌ನಲ್ಲಿ ನರ್ಸ್ ಆಗಿದ್ದ ಮಹಿಳೆ ಹಾಗೂ ದುಬೈನಲ್ಲಿ ಚಾಲಕನಾಗಿರುವ ವ್ಯಕ್ತಿಯೊಬ್ಬನನ್ನು ಕಳೆದ ವರ್ಷ ನವೆಂಬರ್‌ನಲ್ಲಿ ಪಂಜಾಬ್‌ನಲ್ಲಿ ವಿಚಾರಣೆಗೆ ಒಳಪಡಿಸಲಾಗಿತ್ತು. ತನ್ಮೂಲಕ ಪಾಕಿಸ್ತಾನದ ಕಳ್ಳ ಸಂಚು ಬಯಲಾಗಿತ್ತು. ಈ ಇಬ್ಬರೂ ವ್ಯಕ್ತಿಗಳಿಗೆ ಪಂಜಾಬ್‌ನಲ್ಲಿ ಭಯೋತ್ಪಾದನೆ ಮರುಹುಟ್ಟು ಹಾಕುವ ಹೊಣೆ ನೀಡಲಾಗಿತ್ತು. ಇಬ್ಬರಿಗೂ ವಿದೇಶದಿಂದ ದೇಣಿಗೆಯೂ ಬಂದಿತ್ತು ಎಂಬ ಸಂಗತಿ ತನಿಖೆ ವೇಳೆ ಗೊತ್ತಾಗಿತ್ತು.
1984ರಲ್ಲಿ ಜೂನ್ 1 ರಿಂದ 10ರ ವರೆಗೆ ಈ ಆಪರೇಶನ್ ಬ್ಲೂ ಸ್ಟಾರ್ ಕಾರ್ಯಚರಣೆ ನಡೆದಿತ್ತು.