Asianet Suvarna News Asianet Suvarna News

Golden Temple ಬಳಿ ತಂಬಾಕು ಜಗಿಯುತ್ತಿದ್ದಕ್ಕೆ ಕೊಲೆ ಮಾಡಿದ ನಿಹಾಂಗ್‌ ಸಿಖ್ಖರು..! ಸಿಸಿ ಕ್ಯಾಮರಾದಲ್ಲಿ ಸೆರೆ

ಘಟನೆಯ ನಂತರ, ನಿಹಾಂಗ್ ಸಿಖ್ಖರು ಸ್ಥಳವನ್ನು ತೊರೆದಿದ್ದಾರೆ. ಆದರೆ, 6 - 7 ಜನರ ನಡುವೆಯೇ ವ್ಯಕ್ತಿಯನ್ನು ಕೊಲೆ ಮಾಡಿರುವುದು ಹಾಗೂ ಸ್ಥಳದಲ್ಲಿದ್ದ ಜನರು ಪೊಲೀಸರಿಗೆ ಕರೆ ಮಾಡಿಲ್ಲ ಎಂದು ಅಮೃತಸರ ಪೊಲೀಸರು ತಿಳಿಸಿದ್ದಾರೆ. 

2 nihang sikhs kill man for chewing tobacco near amritsars golden temple ash
Author
First Published Sep 8, 2022, 8:27 PM IST

ಪಂಜಾಬ್‌ನ ಅಮೃತಸರದಲ್ಲಿ ಯುವಕನೊಬ್ಬನನ್ನು ಇಬ್ಬರು ನಿಹಾಂಗ್ ಸಿಖ್ಖರು ಕೊಲೆ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಹರ್ಮಂದಿರ್ ಸಾಹಿಬ್ ಬಳಿಯ ಮಾರುಕಟ್ಟೆ ಪ್ರದೇಶದಲ್ಲಿ ಬುಧವಾರ ಈ ಕೃತ್ಯ ನಡೆದಿದ್ದು, ಘಟನೆಯ ದೃಶ್ಯಗಳು ಸುತ್ತಮುತ್ತಲಿನ ಕ್ಯಾಮೆರಾಗಳಲ್ಲಿ ಸೆರೆಯಾಗಿವೆ. ಒಬ್ಬ ವ್ಯಕ್ತಿ ರಸ್ತೆಯಲ್ಲಿ ಹೋಗುತ್ತಿದ್ದಾಗ ಇಬ್ಬರು ನಿಹಾಂಗ್ ಸಿಖ್ಖರು ತಮ್ಮ ಕತ್ತಿಗಳಿಂದ ಆತನ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ಕೊಲೆಯಾದ ಸಂತ್ರಸ್ತೆಯ ಕುಟುಂಬದ ಪ್ರಕಾರ, ವ್ಯಕ್ತಿ ಜಲಿಯನ್ ವಾಲಾಬಾಗ್ ಬಳಿ ರಸ್ತೆ ದಾಟುತ್ತಿದ್ದಾಗ ಇಬ್ಬರು ವ್ಯಕ್ತಿಗಳು ಆತನ ಮೇಲೆ ದಾಳಿ ಮಾಡಿ ಅಪರಾಧ ಸ್ಥಳದಿಂದ ಪರಾರಿಯಾಗಿದ್ದಾರೆ. ಆ ವ್ಯಕ್ತಿಯ ಎದೆಗೆ ಮಾರ್ಕೆಟ್‌ ಪ್ರದೇಶದಲ್ಲಿ ಕತ್ತಿಯಿಂದ ಇರಿದಿದ್ದಾರೆ. ಇಡೀ ರಾತ್ರಿ ಅವರ ದೇಹ ಅಲ್ಲೇ ಬಿದ್ದಿದ್ದ ಕಾರಣ ರಕ್ತಸ್ರಾವವಾಗಿ ಕೊಲೆಯಾಗಿದೆ ಎಂದು ಅವರು ಹೇಳಿದ್ದಾರೆ. ಈ ಕೃತ್ಯ ಸಮೀಪದ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಮೃತರನ್ನು ಹರ್ಮನ್‌ಜೀತ್‌ ಸಿಂಗ್ ಎಂದು ಗುರುತಿಸಲಾಗಿದ್ದು, ಅಮೃತಸರ ಪೊಲೀಸರಿಗೆ ದೂರು ನೀಡಲಾಗಿದೆ. ಪೊಲೀಸ್ ಕಮಿಷನರ್ ಅರುಣ್ ಪಾಲ್ ಸಿಂಗ್ ಅವರು ನಡೆಸಿದ ಪತ್ರಿಕಾಗೋಷ್ಠಿಯಲ್ಲಿ, ಶ್ರೀ ಹರ್ಮಂದಿರ್ ಸಾಹಿಬ್ ಬಳಿ ಈ ಘಟನೆ ಸಂಭವಿಸಿದ್ದು, ಇಬ್ಬರು ನಿಹಾಂಗ್ ಸಿಖ್ಖರು ವ್ಯಕ್ತಿಯನ್ನು ಕೊಂದಿದ್ದಾರೆ ಎಂದು ಅಧಿಕಾರಿ ತಿಳಿಸಿದ್ದಾರೆ. ಕೊಲೆಯಾದ ವ್ಯಕ್ತಿ ಮದ್ಯ ಸೇವಿಸಿ ಕೈಯಲ್ಲಿದ್ದ ಅಮಲು ಪದಾರ್ಥ ತಿನ್ನಲು ಆರಂಭಿಸಿದ್ದರು ಎಂಬುದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ ಎಂದೂ ಪೊಲೀಸರು ತಿಳಿಸಿದ್ದಾರೆ. ನಿಹಾಂಗ್ ಸಿಖ್ಖರು, ಆ ಪದಾರ್ಥಗಳನ್ನು ಸೇವಿಸದಂತೆ ತಡೆದರು. ಆದರೆ ಈ ವೇಳೆ ಜಗಳ ಆರಂಭವಾಗಿದ್ದು, ಕೈ ಕೈ ಮಿಲಾಯಿಸಿದ್ದಾರೆ. ಹಾಗೆ, ಮತ್ತೊಬ್ಬ ವ್ಯಕ್ತಿ ರಮಣದೀಪ್ ಸಿಂಗ್ ಎಂಬ ವ್ಯಕ್ತಿ ಸಹ ಈ ಜಗಳದಲ್ಲಿ ಕೈಜೋಡಿಸಿದ್ದು, ಆತನನ್ನು ಪೊಲೀಸರು ಬಂಧಿಸಿದ್ದಾರೆ.

ಇದನ್ನು ಓದಿ: US Shooting: ಫೇಸ್‌ಬುಕ್‌ ಲೈವ್‌ ಮಾಡಿ ಸಿಕ್ಕಸಿಕ್ಕವರ ಮೇಲೆ ಗುಂಡಿನ ದಾಳಿ; ಇಬ್ಬರ ಹತ್ಯೆ ಮಾಡಿದ ಆರೋಪಿ ವಶಕ್ಕೆ

ಅಪರಾಧದ ಉಳಿದ ಆರೋಪಿಗಳನ್ನು ಗುರುತಿಸಲಾಗಿದ್ದು, ಆದಷ್ಟು ಬೇಗ ಬಂಧಿಸಲಾಗುವುದು ಎಂದು ಅಮೃತಸರ ಪೊಲೀಸರು ತಿಳಿಸಿದ್ದಾರೆ. ಘಟನೆ ನಡೆದ ಸ್ಥಳದಲ್ಲಿ 6 - 7 ಜನರಿದ್ದರೂ, ಅವರೆಲ್ಲರ ಎದುರಲ್ಲೇ ಈ ಅಮಾನುಷ ಕೃತ್ಯ ನಡೆಸಿರುವುದು ನಾಚಿಕೆಗೇಡಿನ ಸಂಗತಿ ಎಂದು ಮಿಶ್ರಾ ಹೇಳಿದ್ದಾರೆ. ಹಾಗೂ, ಅಪರಾಧ ನಡೆದ ಸ್ಥಳದಲ್ಲಿದ್ದ ಯಾವುದೇ ಪಾದಚಾರಿಗಳು ಅಥವಾ ಜನರು ಪೊಲೀಸ್ ಠಾಣೆಗೆ ಕರೆ ಮಾಡಲಿಲ್ಲ ಅಥವಾ ಘಟನೆಯ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಲಿಲ್ಲ ಎಂದೂ ಅವರು ಹೇಳಿದ್ದಾರೆ. ಇನ್ನು, ಹರ್ಮನ್‌ಜೀತ್ ಸಿಂಗ್ ಅವರ ದೇಹವು ರಾತ್ರಿಯಿಡೀ ನೆಲದ ಮೇಲೆ ಬಿದ್ದಿತ್ತು ಮತ್ತು ಬೆಳಗ್ಗೆ ಅದನ್ನು ಎತ್ತಿಕೊಳ್ಳಲಾಯಿತು ಎಂದೂ ಪೊಲೀಸರು ತಿಳಿಸಿದ್ದಾರೆ. 

ಈ ಹಿನ್ನೆಲೆ, ಸಾರ್ವಜನಿಕರು ಸಹ ಮಾನವರಾಗಿ ಸಮಾಜದ ಬಗ್ಗೆ ಕೆಲವು ಕರ್ತವ್ಯಗಳನ್ನು ಹೊಂದಿದ್ದಾರೆ ಎಂದು ಅಮೃತಸರ ಪೋಲೀಸ್ ಕಮಿಷನರ್ ಜನರಿಗೆ ಕಿವಿಮಾತು ಹೇಳಿದ್ದಾರೆ. ಸಾರ್ವಜನಿಕರು ಇಂತಹ ಘಟನೆ ಗಮನಕ್ಕೆ ಬಂದಲ್ಲಿ ಹತ್ತಿರದ ಪೊಲೀಸ್ ಠಾಣೆಗೆ ಅಥವಾ ಆಂಬ್ಯುಲೆನ್ಸ್‌ಗೆ 112 ಗೆ ಡಯಲ್ ಮಾಡುವಂತೆ ಅವರು ಮನವಿ ಮಾಡಿಕೊಂಡರು.

ಇದನ್ನೂ ಓದಿ: Momos ವಿಚಾರಕ್ಕೆ ದೆಹಲಿಯಲ್ಲಿ 40 ವರ್ಷದ ವ್ಯಕ್ತಿ ಹತ್ಯೆ; 18 ವರ್ಷದ ಆರೋಪಿ ಬಂಧನ

Follow Us:
Download App:
  • android
  • ios