ಸಾಲ ತೀರಿಸಿದ 30 ದಿನದಲ್ಲಿ ಆಸ್ತಿ ದಾಖಲೆ ಹಿಂದಿರುಗಿಸಿ: ಎಲ್ಲ ಬ್ಯಾಂಕ್‌ಗಳಿಗೆ ಆರ್‌ಬಿಐ ಖಡಕ್ ಸೂಚನೆ
ವ್ಯಕ್ತಿಗಳು ಸಂಪೂರ್ಣ ಸಾಲ ಮರುಪಾವತಿ ಮಾಡಿದ 30 ದಿನಗಳ ಒಳಗೆ, ಬ್ಯಾಂಕ್‌ನಲ್ಲಿ ಅವರು ಇರಿಸಿದ್ದ ಸ್ಥಿರ ಅಥವಾ ಚರಾಸ್ತಿಯ ಎಲ್ಲ ಮೂಲ ದಾಖಲೆಗಳನ್ನು ಹಿಂತಿರುಗಿಸಬೇಕು ಎಂದು ರಿಸರ್ವ್ ಬ್ಯಾಂಕ್ (Reserve Bank of India) ಆದೇಶಿಸಿದೆ.

ಮುಂಬೈ: ವ್ಯಕ್ತಿಗಳು ಸಂಪೂರ್ಣ ಸಾಲ ಮರುಪಾವತಿ ಮಾಡಿದ 30 ದಿನಗಳ ಒಳಗೆ, ಬ್ಯಾಂಕ್‌ನಲ್ಲಿ ಅವರು ಇರಿಸಿದ್ದ ಸ್ಥಿರ ಅಥವಾ ಚರಾಸ್ತಿಯ ಎಲ್ಲ ಮೂಲ ದಾಖಲೆಗಳನ್ನು ಹಿಂತಿರುಗಿಸಬೇಕು ಎಂದು ರಿಸರ್ವ್ ಬ್ಯಾಂಕ್ (Reserve Bank of India) ಆದೇಶಿಸಿದೆ. ಒಂದು ವೇಳೆ ಮೂಲ ದಾಖಲೆ (document) ನೀಡುವುದು ತಡವಾದರೆ ದಿನಕ್ಕೆ 5 ಸಾವಿರ ರು.ನಂತೆ ದಂಡ ಕಟ್ಟಬೇಕು ಎಂದು ತಾಕೀತು ಮಾಡಿದೆ. ಅಲ್ಲದೆ, ಈ ಅವಧಿಯಲ್ಲಿ ಯಾವುದೇ ನೋಂದಣಿ ಶುಲ್ಕವನ್ನು ವಿಧಿಸುವಂತಿಲ್ಲ ಎಂದು ಅದು ತಿಳಿಸಿದೆ.
ಇನ್ನು, ಮೂಲ ಆಸ್ತಿ ದಾಖಲೆಗಳನ್ನು (original property documents) ಬಿಡುಗಡೆ ಮಾಡಲು ವಿಳಂಬವಾದರೆ ಬ್ಯಾಂಕ್‌ಗಳಿಗೆ ಸಂಬಂಧಿಸಿದ ನಿಯಂತ್ರಿತ ಘಟಕವು ಇದಕ್ಕೆ ಕಾರಣ ಕೇಳುತ್ತದೆ ಹಾಗೂ ಇಂಥ ವಿಳಂಬಕ್ಕೆ ಆದ ಕಾರಣಗಳನ್ನು ಸಾಲ ಪಡೆದವನಿಗೆ ತಿಳಿಸುತ್ತದೆ. ವಿಳಂಬಕ್ಕೆ ಸಾಲದಾತ ಬ್ಯಾಂಕ್ ಕಾರಣವಾಗಿದ್ದರೆ, ಅದು ಪ್ರತಿ ದಿನ ವಿಳಂಬಕ್ಕೆ 5,000 ರು. ದರದಲ್ಲಿ ಸಾಲಗಾರನಿಗೆ ಪರಿಹಾರವನ್ನು ನೀಡುತ್ತದೆ ಎಂದು ಆರ್‌ಬಿಐ ಸುತ್ತೋಲೆ (RBI circular) ಹೊರಡಿಸಿದೆ.
ಬ್ಯಾಂಕುಗಳ ನಡುವೆ ಶೀಘ್ರದಲ್ಲೇ ಡಿಜಿಟಲ್ ಕರೆನ್ಸಿ ವಹಿವಾಟು ಶುರು
ಇನ್ನು ಮೂಲ ಚರ/ಸ್ಥಿರ ಆಸ್ತಿ ದಾಖಲೆಗಳಿಗೆ (immovable property documents) ನಷ್ಟ/ಹಾನಿ ಉಂಟಾಗಿದ್ದರೆ, ಬ್ಯಾಂಕ್‌ಗಳು ಚರ/ಸ್ಥಿರ ಆಸ್ತಿ ದಾಖಲೆಗಳ ನಕಲು/ಪ್ರಮಾಣೀಕೃತ ನಕಲುಗಳನ್ನು ಸಾಲಗಾರನಿಗೆ ಒದಗಿಸಿಕೊಡಬೇಕು ಮತ್ತು ಅದಕ್ಕೆ ಸಂಬಂಧಿಸಿದ ವೆಚ್ಚಗಳನ್ನು ಭರಿಸತಕ್ಕದ್ದು. ಈ ನಕಲು ದಾಖಲೆಗಳನ್ನು ಒದಗಿಸಲು 30 ದಿನಗಳ ಹೆಚ್ಚುವರಿ ಸಮಯ ನೀಡಲಾಗುತ್ತದೆ. ನಂತರವೂ ವಿಳಂಬವಾದರೆ ದಿನದ ಲೆಕ್ಕಾಚಾರದಲ್ಲಿ ದಂಡ ಹಾಕಲಾಗುತ್ತದೆ" ಎಂದು ತಿಳಿಸಿದೆ.
ಸಂಪೂರ್ಣ ಸಾಲ ಇತ್ಯರ್ಥ ಮಾಡಿದ ಬಳಿಕವೂ ಬ್ಯಾಂಕ್‌ಗಳು, ಸಾಲಗಾರನಿಗೆ ಮೂಲ ದಾಖಲೆಗಳನ್ನು ನೀಡುವಲ್ಲಿ ವಿಳಂಬ ತಂತ್ರ ಅನುಸರಿಸುತ್ತವೆ ಎಂಬ ದೂರುಗಳಿದ್ದವು. ಹೀಗಾಗಿ ರಿಸರ್ವ್ ಬ್ಯಾಂಕ್ (original documents) ಈ ಕ್ರಮ ಕೈಗೊಂಡಿದೆ.
2019ರಲ್ಲಿ 3 ಲಕ್ಷ ಕೋಟಿಗಾಗಿ ಸರ್ಕಾರ ಆರ್‌ಬಿಐ ಮಧ್ಯೆ ಜಟಾಪಟಿ ನಡೆದಿತ್ತು: RBI ಮಾಜಿ ಉಪ ಗವರ್ನರ್
ಕಾಗದ ರಹಿತ ಕೋರ್ಟ್‌ಗೆ 7210 ಕೋಟಿ ರೂ : ಇ-ಕೋರ್ಟ್ಸ್ 3ನೇ ಹಂತದ ಯೋಜನೆಗೆ ಅನುಮೋದನೆ
ನವದೆಹಲಿ: ಕೇಂದ್ರ ಸಚಿವ ಸಂಪುಟವು ಇ-ಕೋರ್ಟ್ಸ್ ಯೋಜನೆಯ 3ನೇ ಹಂತದ ಯೋಜನೆಗೆ ಅನುಮೋದನೆ ನೀಡಿದೆ. ಇದಕ್ಕಾಗಿ 7,210 ಕೋಟಿ ರು.ಗಳನ್ನು ಮುಂದಿನ 4 ವರ್ಷದಲ್ಲಿ ವೆಚ್ಚ ಮಾಡಿ ಕೋರ್ಟುಗಳನ್ನು ಮತ್ತಷ್ಟು ಕಾಗದರಹಿತ ಮಾಡಲು ಕ್ರಮ ಕೈಗೊಳ್ಳಲು ಸಮ್ಮತಿಸಿದೆ. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಸಂಪುಟ ಸಭೆಯ (Cabinet meeting) ನಂತರ ಮಾಧ್ಯಮಗಳಿಗೆ ಮಾಹಿತಿ ನೀಡಿದ ವಾರ್ತಾ ಮತ್ತು ಪ್ರಸಾರ ಖಾತೆ ಸಚಿವ (Information and Broadcasting Minister) ಅನುರಾಗ್ ಠಾಕೂರ್(Anurag Thakur), ತಂತ್ರಜ್ಞಾನ ಬಳಸಿಕೊಂಡು ನ್ಯಾಯದಾನ ವ್ಯವಸ್ಥೆ ಸುಧಾರಿಸುವ ಕ್ರಮ ಇದಾಗಿದೆ ಎಂದರು. ರಾಷ್ಟ್ರೀಯ ಇ-ಆಡಳಿತ ಯೋಜನೆಯ (National e-Governance Plan) ಭಾಗವಾಗಿ, 2007 ರಿಂದ ಇ-ಕೋರ್ಟ್ಸ್ ಯೋಜನೆಯು ಅನುಷ್ಠಾನದಲ್ಲಿದೆ. ಯೋಜನೆಯ 2ನೇ ಹಂತ ಇದೇ ವರ್ಷದ ಆರಂಭದಲ್ಲಿ ಮುಗಿದಿದೆ. ಹೀಗಾಗಿ ಈಗ 3ನೇ ಹಂತಕ್ಕೆ ಯೋಜನೆ ವಿಸ್ತರಿಸಲಾಗಿದೆ.
ಏನಿದು ಯೋಜನೆ?:
ಮೂರನೇ ಹಂತದಲ್ಲಿ ಡಿಜಿಟಲ್, ಆನ್‌ಲೈನ್ ಮತ್ತು ಕಾಗದ ರಹಿತ ನ್ಯಾಯಾಲಯಕ್ಕೆ (paperless court) ಕ್ರಮ ಕೈಗೊಳ್ಳಲಾಗುತ್ತದೆ. ಅಂದರೆ ನ್ಯಾಯಾಲಯದ ಎಲ್ಲ ದಾಖಲೆಗಳ ಡಿಜಿಟಲೀಕರಣ ಮಾಡಲಾಗುತ್ತದೆ. ಪ್ರಕರಣಗಳ ಇ-ಫೈಲಿಂಗ್, ಕೋರ್ಟ್ ಶುಲ್ಕ ಕಟ್ಟಲು ಇ-ಪೇಮೆಂಟ್ ವ್ಯವಸ್ಥೆ ಮಾಡಲಾಗುತ್ತದೆ. ಇದಕ್ಕಾಗಿ ಕೋರ್ಟ್‌ಗಳಲ್ಲಿ ಇ-ಸೇವಾ ಕೇಂದ್ರಗಳನ್ನು ತೆರೆಯಲಾಗುತ್ತದೆ. ಏಕೀಕೃತ ತಂತ್ರಜ್ಞಾನ ವೇದಿಕೆ ರಚಿಸಿ ಒಂದೇ ವೇದಿಕೆಯಲ್ಲಿ ಕೋರ್ಟ್‌ನ ಎಲ್ಲ ಮಾಹಿತಿ ಸಿಗುವಂತೆ ನೋಡಿಕೊಳ್ಳಲಾಗುತ್ತದೆ. ಇದು ನ್ಯಾಯಾಲಯಗಳು, ದಾವೆದಾರರು ಮತ್ತು ಇತರ ಮಧ್ಯಸ್ಥಗಾರರ ನಡುವೆ ತಡೆರಹಿತ ಮತ್ತು ಕಾಗದರಹಿತ ಸೇವೆ ಒದಗಿಸುತ್ತದೆ. ನ್ಯಾಯಾಲಯದ ಶುಲ್ಕಗಳು, ದಂಡಗಳು ಮತ್ತು ದಂಡಗಳನ್ನು ಎಲ್ಲಿಂದಲಾದರೂ, ಯಾವುದೇ ಸಮಯದಲ್ಲಿ ಪಾವತಿಸಬಹುದು. ಇದರಿಂದ ಭೌತಿಕ ಪ್ರಯಾಣ ತಗ್ಗಿ ವೆಚ್ಚ ಉಳಿತಾಯವಾಗುತ್ತದೆ.