ಬ್ಯಾಂಕುಗಳ ನಡುವೆ ಶೀಘ್ರದಲ್ಲೇ ಡಿಜಿಟಲ್‌ ಕರೆನ್ಸಿ ವಹಿವಾಟು ಶುರು

ಭಾರತೀಯ ರಿಸರ್ವ್ ಬ್ಯಾಂಕ್‌ (ಆರ್‌ಬಿಐ) ಶೀಘ್ರದಲ್ಲೇ ಬ್ಯಾಂಕುಗಳ ನಡುವಿನ ಕೊಡುಕೊಳ್ಳುವಿಕೆ ಅಥವಾ ಕಾಲ್‌ ಮನಿ ಮಾರ್ಕೆಟ್‌ನಲ್ಲಿ ಡಿಜಿಟಲ್‌ ಕರೆನ್ಸಿ ಬಳಕೆಯನ್ನು ಪ್ರಾಯೋಗಿಕವಾಗಿ ಆರಂಭಿಸಲಿದೆ.

RBI Digital currency transactions between banks will soon begin akb

ನವದೆಹಲಿ: ಭಾರತೀಯ ರಿಸರ್ವ್ ಬ್ಯಾಂಕ್‌ (ಆರ್‌ಬಿಐ) ಶೀಘ್ರದಲ್ಲೇ ಬ್ಯಾಂಕುಗಳ ನಡುವಿನ ಕೊಡುಕೊಳ್ಳುವಿಕೆ ಅಥವಾ ಕಾಲ್‌ ಮನಿ ಮಾರ್ಕೆಟ್‌ನಲ್ಲಿ ಡಿಜಿಟಲ್‌ ಕರೆನ್ಸಿ ಬಳಕೆಯನ್ನು ಪ್ರಾಯೋಗಿಕವಾಗಿ ಆರಂಭಿಸಲಿದೆ. ಜಿ20 ಸಮಾವೇಶದ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಆರ್‌ಬಿಐ ಕಾರ್ಯಕಾರಿ ನಿರ್ದೇಶಕ ಅಜಯ್‌ ಕುಮಾರ್‌ ಚೌಧರಿ ಈ ವಿಷಯ ತಿಳಿಸಿದ್ದಾರೆ.

ಡಿಜಿಟಲ್‌ ರುಪೀ-ಹೋಲ್‌ಸೇಲ್‌ (ಎ-ಡಬ್ಲ್ಯು) (Digital Rupee-Wholesale)ಎಂದು ಕರೆಸಿಕೊಳ್ಳುವ ಈ ಕರೆನ್ಸಿಯನ್ನು ಸರ್ಕಾರಿ ಷೇರುಗಳ ವಹಿವಾಟಿನಲ್ಲಿ ಬಳಕೆ ಮಾಡುವುದನ್ನು ಸರ್ಕಾರ ಕಳೆದ ವರ್ಷವೇ ಆರಂಭಿಸಿತ್ತು. ಈ ತಿಂಗಳು ಅಥವಾ ಮುಂದಿನ ತಿಂಗಳು ಕಾಲ್‌ ಮಾರ್ಕೆಟ್‌ನಲ್ಲೂ ಇದನ್ನು ಬಳಸುವುದಾಗಿ ಅವರು ಮಾಹಿತಿ ನೀಡಿದ್ದಾರೆ.

ಭಾರತದಲ್ಲಿ ಡಿಜಿಟಲ್ ರೂಪಾಯಿ ಪೇಪರ್ ಕರೆನ್ಸಿ ಸ್ಥಾನವನ್ನು ಬದಲಾಯಿಸಲು ಸಾಧ್ಯವಿಲ್ಲ: ಎಸ್ ಬಿಐ ಮುಖ್ಯಸ್ಥ ಖಾರ

ಬ್ಯಾಂಕುಗಳ ನಡುವೆ ಡಿಜಿಟಲ್‌ ಕರೆನ್ಸಿ ಬಳಸಲು ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾ (State Bank of India), ಬ್ಯಾಂಕ್‌ ಆಫ್‌ ಬರೋಡಾ (Bank of Baroda), ಯೂನಿಯನ್‌ ಬ್ಯಾಂಕ್‌, ಎಚ್‌ಡಿಎಫ್‌ಸಿ ಬ್ಯಾಂಕ್‌ (HDFC Bank), ಐಸಿಐಸಿಐ ಬ್ಯಾಂಕ್‌, ಯಸ್‌ ಬ್ಯಾಂಕ್‌, ಐಡಿಎಫ್‌ಸಿ ಫಸ್ಟ್‌ ಬ್ಯಾಂಕ್‌(IDFC First Bank) ಹಾಗೂ ಎಚ್‌ಎಸ್‌ಬಿಸಿ ಬ್ಯಾಂಕುಗಳನ್ನು ಆರ್‌ಬಿಐ ಆಯ್ಕೆ ಮಾಡಿಕೊಂಡಿದೆ. ಈ ಬ್ಯಾಂಕುಗಳ ನಡುವಿನ ಆಂತರಿಕ ವ್ಯವಹಾರದಲ್ಲಿ ಇನ್ನುಮುಂದೆ ಡಿಜಿಟಲ್‌ ಕರೆನ್ಸಿಯನ್ನು ಬಳಕೆ ಮಾಡಲು ಅವಕಾಶ ಕಲ್ಪಿಸಲಾಗುತ್ತದೆ.

ಇನ್ಮುಂದೆ ಬ್ಯಾಂಕಿಂಗೇತರ ಹಣಕಾಸು ಸಂಸ್ಥೆಗಳು ಕೂಡ ಇ-ರುಪಿ ವೋಚರ್ ವಿತರಿಸಬಹುದು: ಆರ್ ಬಿಐ 

ಮಂಡಿಯೂರಿ ಶೇಖ್‌ ಹಸೀನಾ ಜೊತೆ ರಿಷಿ ಮಾತುಕತೆ!

ನವದೆಹಲಿ: ಜಿ20 ಶೃಂಗಕ್ಕಾಗಿ ದೆಹಲಿಗೆ ಆಗಮಿಸಿದ್ದ ಬ್ರಿಟನ್‌ ಪ್ರಧಾನಿ ರಿಷಿ ಸುನಕ್‌, ಭಾನುವಾರ ಬಾಂಗ್ಲಾದೇಶದ ಪ್ರಧಾನಿ ಶೇಖ್‌ ಹಸೀನಾ ಅವರೊಂದಿಗೆ ಮಾತುಕತೆ ನಡೆಸಿದರು. ಭಾನುವಾರ ಬೆಳಗ್ಗೆ ಎಲ್ಲಾ ಜಾಗತಿಕ ನಾಯಕರು ರಾಜ್‌ಘಾಟ್‌ನಲ್ಲಿರುವ ಮಹಾತ್ಮಾ ಗಾಂಧೀಜಿ ಅವರ ಸಮಾಧಿ ಸ್ಥಳಕ್ಕೆ ಪುಷ್ಪ ನಮನ ಸಲ್ಲಿಸಲು ತೆರಳಿದ್ದರು. ಈ ವೇಳೆ ರಾಜ್‌ಘಾಟ್‌ ಆವರಣದಲ್ಲಿ ಹಸೀನಾ ಅವರು ಕುರ್ಚಿಯಲ್ಲಿ ಕುಳಿತಿದ್ದನ್ನು ಗಮನಿಸಿದ ರಿಷಿ, ಅವರು ಇದ್ದ ಸ್ಥಳಕ್ಕೆ ತೆರಳಿ ಮಂಡಿಯೂರಿ ಕುಳಿತು ಬಾಂಗ್ಲಾ ಪ್ರಧಾನಿಯೊಂದಿಗೆ ಮಾತುಕತೆ ನಡೆಸಿದರು. ಹಿರಿಯ ನಾಯಕಿಯೊಂದಿಗೆ ರಿಷಿ ನಡೆದುಕೊಂಡ ರೀತಿಯ ಬಗ್ಗೆ ಜಾಲತಾಣದಲ್ಲಿ ಭಾರೀ ಶ್ಲಾಘನೆ ವ್ಯಕ್ತವಾಗಿದೆ.

ಮೋದಿ ವಿದೇಶ ಯಾತ್ರೆಯಿಂದ ಶ್ರೀಮಂತರಿಗೆ ಲಾಭ: ಪ್ರಿಯಾಂಕಾ

ಜೈಪುರ: ರಾಜಸ್ಥಾನದ ಚುನಾವಣೆ ಪ್ರಚಾರದಲ್ಲಿರುವ ಪ್ರಿಯಾಂಕಾ ಗಾಂಧಿ, ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಹರಿಹಾಯ್ದಿದ್ದಾರೆ. ಟೋಂಕ್‌ನಲ್ಲಿ ಭಾನುವಾರ ಸಮಾವೇಶದಲ್ಲಿ ಮಾತನಾಡಿದ ಅವರು,ಪ್ರಧಾನಿ ವಿದೇಶಕ್ಕೆ ತೆರಳುವುದು ಅಲ್ಲಿನ ಉದ್ಯಮಿ ಸ್ನೇಹಿತದೊಂದಿಗೆ ಒಪ್ಪಂದ ಮಾಡಿಕೊಳ್ಳುವುದಕ್ಕೆ ಹೊರತು ಬಡವರಿಗೆ ಸಹಾಯವಾಗಲೆಂದಲ್ಲ. ಇವರ ವ್ಯವಹಾರಗಳೆಲ್ಲವೂ ಶ್ರೀಮಂತರ ಆಶೋತ್ತರಗಳಲಿಗೆ ಪೂರೈಕೆಗೆ ಹೊರತು ಬಡವರ ಕಲ್ಯಾಣಕ್ಕಲ್ಲ. ಬಿಜೆಪಿಗೆ ಬಡವರು ಹಾಗೂ ಮಧ್ಯಮ ವರ್ಗವನ್ನು ಮೇಲೆತ್ತುವ ಬದಲು ಅಧಿಕಾರ ದಾಹವೇ ಹೆಚ್ಚು ಎಂದು ವಾಗ್ದಾಳಿ ನಡೆಸಿದರು. ಹೀಗಾಗಿಯೇ ಜಿ20 ಸಭೆ ನಡೆಯುವ ಸ್ಥಳದಲ್ಲಿ ನೀರು ತುಂಬಿಕೊಂಡಿರುವುದು. ಏಕೆಂದರೆ ಅಹಂ ಕಡಿಮೆ ಮಾಡಿ ಜನರ ಅಭಿವೃದ್ಧಿ ಮಾಡಿ ಎಂದು ದೇವರೇ ಮಳೆಗರೆದಿದ್ದಾನೆ ಎಂದು ಕಿಡಿಕಾರಿದರು.

Latest Videos
Follow Us:
Download App:
  • android
  • ios