ಕೊರೆಯುವ -25 ಡಿಗ್ರಿ ತಾಪಮಾನದಲ್ಲಿ ಯೋಧರಿಗೆ ತರಬೇತಿ ರಾಶಿ ಬಿದ್ದ ಹಿಮದ ಮೇಲೆ ಹೆಜ್ಜೆ ಹಾಕುತ್ತಿರುವ ಐಟಿಬಿಪಿ ಯೋಧರು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್
ಉತ್ತರಾಖಂಡ್(ಫೆ.13): ಐಟಿಬಿಪಿ ಯೋಧರಿಗೆ ಉತ್ತರಾಖಂಡದ ಗಡಿಯಲ್ಲಿ -25 ಡಿಗ್ರಿ ತಾಪಮಾನದ ಮೈ ಕೊರೆಯುವ ಚಳಿಯಲ್ಲೇ ತರಬೇತಿ ನೀಡಲಾಗುತ್ತಿದ್ದು, ಇದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇಂದು ಬೆಳಗ್ಗೆ ಈ ವಿಡಿಯೋವನ್ನು ಟ್ವಿಟ್ ಮಾಡಲಾಗಿದ್ದು, ಅದಾಗಲೇ 20,000 ಕ್ಕೂ ಹೆಚ್ಚು ಜನರು ಈ ವಿಡಿಯೋವನ್ನು ವೀಕ್ಷಿಸಿದ್ದಾರೆ. ಜೊತೆಗೆ 1,500ಕ್ಕೂ ಹೆಚ್ಚು ಜನರು ಈ ವಿಡಿಯೋವನ್ನು ಮೆಚ್ಚಿದ್ದಾರೆ. ಇಂಡೋ-ಟಿಬೆಟಿಯನ್ ಬಾರ್ಡರ್ ಪೋಲೀಸ್ (ಐಟಿಬಿಪಿ) ಸಿಬ್ಬಂದಿ ಉತ್ತರಾಖಂಡದ ಗಡಿಯಲ್ಲಿ ಅತ್ಯಂತ ಶೀತ ವಾತಾವರಣದಲ್ಲಿ ತರಬೇತಿ ಪಡೆಯುತ್ತಿರುವುದು ಕಂಡುಬಂದಿದೆ.
ಮೈನಸ್ 25 ಡಿಗ್ರಿ ಸೆಲ್ಸಿಯಸ್ ತಾಪಮಾನದಲ್ಲಿ ಮತ್ತು ಹಿಮ ಹಾಗೂ ಪರ್ವತಗಳಿಂದ ಆವೃತವಾದ ಪ್ರದೇಶದಲ್ಲಿ ಐಟಿಬಿಪಿ ಸಿಬ್ಬಂದಿ ಧೈರ್ಯದಿಂದ ತರಬೇತಿ ಪಡೆಯುತ್ತಿದ್ದಾರೆ. ಐಟಿಬಿಪಿ ಸಿಬ್ಬಂದಿಯನ್ನು ನಿರ್ವಹಿಸುವ ಅವರ ನಾಯಕ ತರಬೇತಿಯ ಸೂಚನೆಗಳನ್ನು ನೀಡುವುದನ್ನು ವಿಡಿಯೋದಲ್ಲಿ ಕೇಳಬಹುದು. ವಿಪರೀತ ಚಳಿಯ ನಡುವೆಯೂ ಯೋಧರು ಶಕ್ತಿ ಮತ್ತು ದಿಟ್ಟ ಧ್ವನಿಯೊಂದಿಗೆ ತರಬೇತಿ ಪಡೆಯುತ್ತಿದ್ದಾರೆ. ಈ ವಿಡಿಯೋ ನೋಡಿದ ಜನ ಯೋಧರ ಶಕ್ತಿ ಸಾಮರ್ಥ್ಯದ ಬಗ್ಗೆ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.
ದೇಶ ಕಾಯುವುದಕ್ಕಾಗಿ ಮನೆ ಮಠ ಬಿಟ್ಟು ದೂರದಲ್ಲೆಲ್ಲೋ ಇರುವ ಯೋಧರಿಗೆ ಹಬ್ಬ ಹರಿದಿನ ಯಾವುದು ಇಲ್ಲ. ತಾವೆಲ್ಲಿರುತ್ತಾರೋ ಅದೇ ಮನೆ. ತನ್ನ ಜೊತೆ ಇರುವವರೇ ಕುಟುಂಬದವರು. ಅವರೊಂದಿಗೆಯೇ ಹಬ್ಬ. ಹೌದು ಮೈನಸ್ ತಾಪಮಾನದ ರಕ್ತ ಹೆಪ್ಪುಗಟ್ಟುವಂತಹ ಚಳಿಯಲ್ಲಿ ಭಾರತೀಯ ಯೋಧರು ಬಿಹು ಹಬ್ಬ ಆಚರಿಸಿದ ವಿಡಿಯೋ ತಿಂಗಳ ಹಿಂದೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು, ಆ ಚಳಿಯಲ್ಲೂ ಯೋಧರ ಉತ್ಸಾಹ ನೋಡಿದ ನೆಟ್ಟಿಗರು ಸೆಲ್ಯೂಟ್ ಹೊಡೆದಿದ್ದರು.
ಭಾರತೀಯ ಸೇನೆಯ Chinar Corps ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಖಾತೆ ಬ್ಲಾಕ್: ಕಾರಣ ನೀಡದ ಮೆಟಾ!
ಬಿಎಸ್‌ಜೆ ಜವಾನರು ಕಾಶ್ಮೀರದ ಹಿಮದಿಂದ ಆವೃತವಾದ ಪರ್ವತಗಳಲ್ಲಿ ಹೆಪ್ಪುಗಟ್ಟುವಂತಹ ತಾಪಮಾನದ ನಡುವೆ ಜಾನಪದ ಹಾಡಿಗೆ ನೃತ್ಯ ಮಾಡಿ ತಮ್ಮ ಸಂಪ್ರದಾಯಿಕ ಹಬ್ಬ ಬಿಹುವನ್ನು ಆಚರಿಸಿದರು. ಕಾಶ್ಮೀರದ ಗಡಿ ಭದ್ರತಾ ಪಡೆಯ ಅಧಿಕೃತ ಟ್ವಿಟ್ಟರ್ ಖಾತೆಯಿಂದ ಈ ವಿಡಿಯೋ ಪೋಸ್ಟ್ ಆಗಿದ್ದು, ಸೈನಿಕರು ಜಾನಪದ ಹಾಡಿಗೆ ಡಾನ್ಸ್ ಮಾಡುತ್ತಿರುವ ದೃಶ್ಯ ವಿಡಿಯೋದಲ್ಲಿದೆ.
ಪರ್ವತಗಳು ಹಾಗೂ ಹಿಮದ ಪರ್ವತಗಳು, ಕುರುಡು ಹಿಮಪಾತಗಳು, ಹೆಪ್ಪುಗಟ್ಟಿಸುವ ತಾಪಮಾನ, 24 ಗಂಟೆಗಳ ಜಾಗರಣೆ ಎಲ್‌ಒಸಿಯ ಒತ್ತಡ, ಮನೆಗಳಿಂದ ದೂರ. ಇವುಗಳ್ಯಾವುದು ಕೂಡ ಬಿಎಸ್‌ಎಫ್ ಪಡೆಗಳ ಕೆಲವು ಹೆಜ್ಜೆಗಳ ಡಾನ್ಸ್ ಮಾಡುವುದನ್ನು ತಡೆಯಲಾಗಲಿಲ್ಲ ಎಂದು ಬರೆದು ಕಾಶ್ಮೀರದ ಬಿಎಸ್‌ಎಫ್ ಖಾತೆ ಈ ವಿಡಿಯೋವನ್ನು ಪೋಸ್ಟ್ ಮಾಡಿದೆ. ಕಾಶ್ಮೀರದ (Kashmir) ಕುಪ್ವಾರಾ (Kupwara) ಜಿಲ್ಲೆಯ ಕೆರಾನ್ ಸೆಕ್ಟರ್‌ನಲ್ಲಿ (Keran sector) ಮೈ ಕೊರೆಯುವ ತಾಪಮಾನ, ಹಿಮಪಾತಗಳು ಮತ್ತು 24 ಗಂಟೆಗಳ ಕರ್ತವ್ಯದ ಒತ್ತಡದ ಹೊರತಾಗಿಯೂ ಸೈನಿಕರು ಬಿಹುವನ್ನು ಆಚರಿಸಿದರು ಎಂದು ಟ್ವೀಟ್‌ನಲ್ಲಿ ತಿಳಿಸಲಾಗಿದೆ.
ಚೀನೀಯರ ಮಣಿಸಿದ ಐಟಿಬಿಪಿಯ 20 ವೀರರಿಗೆ ಶೌರ್ಯಪದಕ!
ಜವಾನರಲ್ಲಿ ಒಬ್ಬರು ಸಾಂಪ್ರದಾಯಿಕ ಗಾಮೋಸ/ಗಮುಸಾವನ್ನು(ಶಾಲು) ಧರಿಸಿರುವುದು ಕಂಡುಬರುತ್ತದೆ, ಇದು ಮುಖ್ಯವಾಗಿ ಮೂರು ಬದಿಗಳಲ್ಲಿ ಕೆಂಪು ಬಾರ್ಡರ್‌ನ್ನು ಹೊಂದಿರುವ ಬಟ್ಟೆಯ ತುಂಡು ಇದು ಅಸ್ಸಾಮಿ ಸಂಸ್ಕೃತಿಯ ಪ್ರತೀಕ. ಈ ವಿಡಿಯೋವನ್ನು ಸಾವಿರಾರು ಜನ ವೀಕ್ಷಿಸಿದ್ದು , ಯೋಧರ ಉತ್ಸಾಹಕ್ಕೆ ಭೇಷ್ ಎಂದಿದ್ದಾರೆ.