ರೈತ ಪ್ರತಿಭಟನೆ ಹತ್ತಿಕ್ಕಲು ಕೇಂದ್ರ ಸರ್ಕಾರ ನಡೆಸಿದ ಪ್ರಯತ್ನ ತಪ್ಪು ಎಂದು ಸಿಎಂ ಕೇಜ್ರಿವಾಲ್, ಡಾರ್ಸೆ ಆರೋಪ ಮುಂದಿಟ್ಟು ಬಿಜೆಪಿ ವಿರುದ್ಧ ಹರಿಹಾಯ್ದಿದ್ದಾರೆ. ಟ್ವಿಟರ್ ಮಾಜಿ ಸಿಇಒ ಸಿಡಿಸಿದ ಬಾಂಬ್ ಇದೀಗ ಬಿಜೆಪಿ ವಿರೋಧಿ ಪಕ್ಷಗಳಿಗೆ ಹೈವೋಲ್ಟೇಜ್ ನೀಡಿದೆ.

ನವದೆಹಲಿ(ಜೂ.13) ಟ್ವಿಟರ್ ಮಾಜಿ ಸಿಇಒ ಜ್ಯಾಕ್ ಡೋರ್ಸೆ ಕೇಂದ್ರ ಬಿಜೆಪಿ ಸರ್ಕಾರದ ವಿರುದ್ಧ ಮಾಡಿರುವ ಗಂಭೀರ ಆರೋಪ ವಿಪಕ್ಷಗಳಿಗೆ ಮತ್ತಷ್ಟು ಶಕ್ತಿ ನೀಡಿದೆ. ರೈತ ಪ್ರತಿಭಟನೆ ಸಂದರ್ಭದಲ್ಲಿ ಕೇಂದ್ರ ಸರ್ಕಾರ, ಪ್ರತಿ ಭಟನೆ ಪರ ಇರುವ ಟ್ವಿಟರ್ ಖಾತೆ ಬ್ಲಾಕ್ ಮಾಡಲೂ ಒತ್ತಡ ಹೇರಿತ್ತು ಅನ್ನೋ ಹೇಳಿಕೆ ಸಂಚಲನ ಸೃಷ್ಟಿಸಿದೆ. ಈ ಹೇಳಿಕೆ ಮುಂದಿಟ್ಟುಕೊಂಡು ಕಾಂಗ್ರೆಸ್ , ಕೇಂದ್ರ ಸರ್ಕಾರವನ್ನು ಟೀಕಿಸಿದೆ.ಇದೀಗ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಕೂಡ ಕೇಂದ್ರದ ವಿರುದ್ಧ ಹರಿಹಾಯ್ದಿದ್ದಾರೆ. ರೈತರ ಪ್ರತಿಭಟನೆ ಹತ್ತಿಕ್ಕಲು ಕೇಂದ್ರ ಬಿಜಿಪೆ ಸರ್ಕಾರ ಯತ್ನಿಸಿರುವುದು ತಪ್ಪು ಎಂದು ಕೇಜ್ರಿವಾಲ್ ಹೇಳಿದ್ದಾರೆ.

ರೈತರ ಪ್ರತಿಭಟನೆ ತಡೆಯಲು ಕೇಂದ್ರ ಬಿಜೆಪಿ ಸರ್ಕಾರ ನಡೆಸಿದ ಹುನ್ನಾರ ಅತೀ ದೊಡ್ಡ ತಪ್ಪು ಎಂದು ಕೇಜ್ರಿವಾಲ್ ಹೇಳಿದ್ದಾರೆ. ಇದೀಗ ಕಾಂಗ್ರೆಸ್ ಸೇರಿದಂತೆ ಬಿಜೆಪಿ ವಿರೋಧಿ ಪಕ್ಷಗಳು ಜ್ಯಾಕ್ ಡೊರ್ಸೆ ಹೇಳಿಕೆಯನ್ನೇ ಮುಂದಿಟ್ಟು ಆರೋಪದಲ್ಲಿ ತೊಡಗಿದೆ. ಕಾಂಗ್ರೆಸ್ ಮತ್ತೂ ಒಂದು ಹೆಜ್ಜೆ ಮುಂದೆ ಹೋಗಿದೆ. ರಾಹುಲ್ ಗಾಂಧಿ ಟ್ವಿಟರ್ ಖಾತೆ ಬ್ಲಾಕ್ ಹಿಂದೆ ಕೇಂದ್ರ ಬಿಜೆಪಿ ಸರ್ಕಾರದ ಕೈವಾಡವಿದೆ ಎಂದು ಆರೋಪಿಸಿದೆ. 

ರಾಹುಲ್ ಗಾಂಧಿ ಅಮೆರಿಕ ಭೇಟಿಗೂ, ಭಾರತ ಸರ್ಕಾರದ ವಿರುದ್ಧ ಟ್ವಿಟರ್ ಮಾಜಿ ಸಿಇಒ ಡಾರ್ಸೆ ಆರೋಪಕ್ಕೂ ಸಂಬಂಧವಿದೆಯಾ?

ಟ್ವಿಟ್ಟರ್‌ನ ಸಹಸಂಸ್ಥಾಪಕರಾಗಿರುವ ಹಾಗೂ 2021ರವರೆಗೆ ಆ ಕಂಪನಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ (ಸಿಇಒ) ಆಗಿದ್ದ ಜಾಕ್‌ ಡೋರ್ಸಿ, ಯೂಟ್ಯೂಬ್‌ನಲ್ಲಿ ಪ್ರಸಾರವಾಗುವ ಸುದ್ದಿ ಕಾರ್ಯಕ್ರಮ ‘ಬ್ರೇಕಿಂಗ್‌ ಪಾಯಿಂಟ್ಸ್‌’ಗೆ ಸೋಮವಾರ ಸಂದರ್ಶನ ನೀಡಿದ್ದಾರೆ. 2020 ಹಾಗೂ 2021ರಲ್ಲಿ ಭಾರತದ ರೈತರು ಮೂರು ಕೃಷಿ ಕಾನೂನುಗಳ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದರು. ಆ ಸಂದರ್ಭದಲ್ಲಿ ಸರ್ಕಾರದ ವಿರುದ್ಧವಾಗಿ ಟ್ವೀಟರ್‌ನಲ್ಲಿ ಹೇಳಿಕೆ ಪ್ರಕಟವಾದರೆ ಅದನ್ನು ಅಳಿಸಬೇಕು ಹಾಗೂ ಕೆಲವು ಖಾತೆಗಳಿಗೆ ನಿರ್ಬಂಧಿಸಬೇಕು ಎಂಬ ಬೇಡಿಕೆ ಬಂದಿತ್ತು. ಇಲ್ಲದೆ ಹೋದರೆ ಕಂಪನಿಯನ್ನು ಮುಚ್ಚಿಸುವ ಹಾಗೂ ನೌಕರರ ಮೇಲೆ ದಾಳಿ ನಡೆಸುವ ಬೆದರಿಕೆ ಒಡ್ಡಲಾಗಿತ್ತು ಎಂದು ಹೇಳಿದ್ದಾರೆ. ಇದೇ ಹೇಳಿಕೆಯನ್ನು ವಿಪಕ್ಷಗಳು ಅಸ್ತ್ರವಾಗಿ ಬಳಸಿಕೊಂಡಿದೆ. 

Jack Dorsey ಅವಧಿಯಲ್ಲಿ ಅಮೆರಿಕಾಗೆ ಬೆಣ್ಣೆ ಭಾರತಕ್ಕೆ ಸುಣ್ಣ ನೀಡ್ತಿದ್ದ ಟ್ವಿಟ್ಟರ್: ಏನಿದು ವಿವಾದ?

ಜ್ಯಾಕ್ ಡೋರ್ಸೆ ಮಾಡಿರುವ ಆರೋಪವನ್ನು ಕೇಂದ್ರ ಸರ್ಕಾರ ತಳ್ಳಿ ಹಾಕಿದೆ. ಈ ಕುರಿತು ಪ್ರತಿಕ್ರಿಯೆ ನೀಡಿರುವ ಕೇಂದ್ರ ಐಟಿ ಖಾತೆ ರಾಜ್ಯ ಸಚಿವ ರಾಜೀವ್ ಚಂದ್ರಶೇಖರ್, ಇದು ಸಂಪೂರ್ಣ ಸುಳ್ಳು ಎಂದಿದ್ದಾರೆ. ಭಾರತದ ಸಾರ್ವಭೌಮ ಕಾನೂನುಗಳನ್ನು ಒಪ್ಪಿಕೊಳ್ಳುವುದಕ್ಕೆ ಡೋರ್ಸೆ ಸಿಇಒ ಆಗಿದ್ದಾಗ ಟ್ವಿಟ್ಟರ್‌ಗೆ ಸಮಸ್ಯೆಯಾಗಿತ್ತು. ಆಗ ನಿರಂತರವಾಗಿ ಭಾರತದ ಕಾನೂನುಗಳನ್ನು ಉಲ್ಲಂಘಿಸಲಾಗುತ್ತಿತ್ತು. ನಮಗೆ ಭಾರತೀಯ ಕಾನೂನುಗಳು ಅನ್ವಯಿಸುವುದೇ ಇಲ್ಲ ಎಂಬಂತೆ ಟ್ವಿಟ್ಟರ್‌ ವರ್ತಿಸುತ್ತಿತ್ತು. ಆದರೆ 2022ರ ಜೂನ್‌ನಲ್ಲಿ ಕೊನೆಗೂ ಟ್ವಿಟ್ಟರ್‌ ಭಾರತೀಯ ಕಾನೂನುಗಳನ್ನು ಒಪ್ಪಿಕೊಂಡಿತು. ಆದರೆ ಈಗ ಅವರು ಹೇಳುತ್ತಿರುವುದು ಶುದ್ಧ ಸುಳ್ಳು. ಯಾರೊಬ್ಬರೂ ಜೈಲಿಗೂ ಹೋಗಿಲ್ಲ ಅಥವಾ ಟ್ವಿಟ್ಟರ್‌ ಕೂಡ ಬಂದ್‌ ಆಗಿಲ್ಲ ಎಂದಿದ್ದಾರೆ.