Asianet Suvarna News Asianet Suvarna News

ರಾಹುಲ್ ಗಾಂಧಿ ಅಮೆರಿಕ ಭೇಟಿಗೂ, ಭಾರತ ಸರ್ಕಾರದ ವಿರುದ್ಧ ಟ್ವಿಟರ್ ಮಾಜಿ ಸಿಇಒ ಡಾರ್ಸೆ ಆರೋಪಕ್ಕೂ ಸಂಬಂಧವಿದೆಯಾ?

ಹಿಂದಿನ ಘಟನೆಗಳನ್ನು ನೆಪವಾಗಿಸಿಕೊಂಡು ಟ್ವಿಟರ್‌ ಮಾಜಿ ಸಿಇಒ ಜಾಕ್‌ ಡಾರ್ಸೆ ಭಾರತ ಸರ್ಕಾರದ ಮೇಲೆ ಪ್ರಹಾರ ನಡೆಸಿದ್ದಾರೆ. ಇನ್ನು ಈ ಆರೋಪಗಳು ರಾಹುಲ್ ಗಾಂಧಿ ಅವರ ಅಮೆರಿಕ ಪ್ರವಾಸದ ಸಂದರ್ಭದಲ್ಲೇ ಬಂದಿರೋದು ಅನೇಕ ಅನುಮಾನಗಳನ್ನು ಹುಟ್ಟುಹಾಕಿದೆ. ಈ ಬಗ್ಗೆ ಟ್ವಿಟರ್ ನಲ್ಲಿ ಸಾಕಷ್ಟು ಚರ್ಚೆ ಕೂಡ ನಡೆಯುತ್ತಿದೆ.ಇನ್ನು ಕಾಂಗ್ರೆಸ್, ಭಾರತ ಸರ್ಕಾರದ ವಿರುದ್ಧ ಮಾಡಿರುವ ಈ ಆರೋಪಗಳನ್ನು ಟೀಕಿಸುವ ಬದಲು ಸ್ವಾಗತಿಸುತ್ತಿರುವುದು ಕೂಡ ಸಂದೇಹಕ್ಕೆ ಎಡೆಮಾಡಿಕೊಟ್ಟಿದೆ.

why congress celebrates spreads jack dorsey bcc dick harry statments rahul gandhi usa visit timings anu
Author
First Published Jun 13, 2023, 11:46 AM IST | Last Updated Jun 13, 2023, 11:49 AM IST

ನ್ಯೂಯಾರ್ಕ್ (ಜೂ.13): ಹಳೆಯ ಘಟನೆಗಳನ್ನು ಮುಂದಿಟ್ಟುಕೊಂಡು ಟ್ವಿಟರ್‌ ಮಾಜಿ ಸಿಇಒ ಜಾಕ್‌ ಡಾರ್ಸೆ ಭಾರತ ಸರ್ಕಾರದ ಮೇಲೆ ಪ್ರಹಾರ ನಡೆಸಿದ್ದಾರೆ. ರೈತರ ಪ್ರತಿಭಟನೆಗೆ ಸಂಬಂಧಿಸಿದ ಹಾಗೂ ಸರ್ಕಾರದ ವಿರುದ್ಧ ಟೀಕೆಗಳನ್ನು ವ್ಯಕ್ತಪಡಿಸುತ್ತದ್ದ ಟ್ವಿಟರ್‌ ಖಾತೆಗಳನ್ನು ಬ್ಲಾಕ್ ಮಾಡುವಂತೆ ಭಾರತ ಸರ್ಕಾರ ಟ್ವಿಟರ್ ಮೇಲೆ ಒತ್ತಡ ಹೇರಿತ್ತು ಎಂದು ಡಾರ್ಸೆ ಆರೋಪಿಸಿದ್ದಾರೆ. ಡಾರ್ಸೆ ಅವರ ಈ ಆರೋಪ ರಾಹುಲ್ ಗಾಂಧಿ ಅವರ ಅಮೆರಿಕ ಭೇಟಿ ಸಂದರ್ಭದಲ್ಲೇ ವ್ಯಕ್ತವಾಗಿರೋದು ಅನೇಕ ಸಂದೇಹಗಳನ್ನು ಹುಟ್ಟುಹಾಕಿದೆ ಕೂಡ. ಇನ್ನು ಕಾಂಗ್ರೆಸ್ ಪಕ್ಷ ಕೂಡ ವಿದೇಶಿ ವ್ಯಕ್ತಿಯೊಬ್ಬ ಭಾರತ ಸರ್ಕಾರದ ವಿರುದ್ಧದ ಮಾಡಿರುವ ಈ ಆರೋಪಗಳನ್ನು ಟೀಕಿಸುವ ಬದಲು ಸ್ವಾಗತಿಸುತ್ತಿರುವುದು ಅನೇಕ ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ. ವಿಶ್ವ ಬ್ಯಾಂಕ್, ಐಎಂಎಫ್ ಅಥವಾ ಮೋರ್ಗನ್ ಸ್ಟ್ಯಾನ್ಲಿ ಭಾರತ ಆರ್ಥಿಕತೆಯ ಬಗ್ಗೆ ಉತ್ತಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದಾಗ ಅದನ್ನು ನಂಬಲು ಹಿಂದೇಟು ಹಾಕುವ ಕಾಂಗ್ರೆಸ್ ಹಾಗೂ ಎಡ ಪಕ್ಷಗಳು, ಜಾಕ್‌ ಡಾರ್ಸೆ, ಬಿಬಿಸಿ ಅಥವಾ ಟಾಮ್ ಡಿಕ್ ಹೆರಿ ಭಾರತದ ವಿರುದ್ಧ ಹೇಳಿಕೆಗಳನ್ನು ನೀಡಿದರೆ ಅದನ್ನು ಎಲ್ಲೆಡೆ ಪ್ರಚಾರ ಮಾಡುವ ಕೆಲಸ ಮಾಡುತ್ತಿವ ಎಂದು ಅಂಕುರ್ ಸಿಂಗ್ ಎಂಬ ಟ್ವಿಟರ್ ಬಳಕೆದಾರರು ಆರೋಪಿಸಿದ್ದಾರೆ. 

ಡಾರ್ಸೆ ಆರೋಪವೇನು?
ರೈತರ ಪ್ರತಿಭಟನೆಗೆ ಸಂಬಂಧಿಸಿದ ಹಾಗೂ ಸರ್ಕಾರದ ವಿರುದ್ಧ ಟೀಕೆಗಳನ್ನು ವ್ಯಕ್ತಪಡಿಸುತ್ತದ್ದ ಟ್ವಿಟರ್‌ ಖಾತೆಗಳನ್ನು ಬ್ಲಾಕ್ ಮಾಡುವಂತೆ ಭಾರತದಿಂದ ಟ್ವಿಟರ್ ಗೆ ಅನೇಕ ಮನವಿಗಳು ಬಂದಿದ್ದವು. 
ಅಷ್ಟೇ ಅಲ್ಲದೆ, ಈ ಮನವಿಗಳಿಗೆ ಸ್ಪಂದಿಸದಿದ್ದರೆ ಭಾರತದಲ್ಲಿ ಟ್ವಿಟರ್‌ ಸ್ಥಗಿತಗೊಳಿಸುವ, ಕಂಪನಿಯ ಉದ್ಯೋಗಿಗಳ ಮನೆಗಳ ಮೇಲೆ ದಾಳಿ ನಡೆಸುವ ಹಾಗೂ ಟ್ವಿಟರ್ ಕಚೇರಿಗಳನ್ನು ಮುಚ್ಚುವ ಬೆದರಿಕೆಗಳನ್ನು ಕೂಡ ಹಾಕಲಾಗಿತ್ತು ಎಂದು ಡಾರ್ಸೆ ಕೇಂದ್ರ ಸರ್ಕಾರದ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿದ್ದಾರೆ. ಡಾರ್ಸೆ ಮಾಡಿರುವ ಈ ಆರೋಪಗಳ ಬಗ್ಗೆ ಕೇಂದ್ರ ಸರ್ಕಾರ ಇನ್ನಷ್ಟೇ ಪ್ರತಿಕ್ರಿಯೆ ನೀಡಬೇಕಿದೆ. ಆದರೆ, ಯುವ ಕಾಂಗ್ರೆಸ್ ಹಾಗೂ ಭಾರತೀಯ ರಾಷ್ಟ್ರೀಯ ವಿದ್ಯಾರ್ಥಿ ಸಂಘಟನೆಯು  ಡಾರ್ಸೆ ಅವರು ಯೂಟ್ಯೂಬ್ ಚಾನೆಲ್ ಗೆ ನೀಡಿರುವ ಸಂದರ್ಶನದಲ್ಲಿ ಉಲ್ಲೇಖಿಸಿರುವ ಈ ವಿಚಾರದ ವಿಡಿಯೋ ತುಣುಕನ್ನು ಟ್ವಿಟರ್ ನಲ್ಲಿ ಹಂಚಿಕೊಂಡಿವೆ. ಇದಕ್ಕೆ ಟ್ವಿಟರ್ ನಲ್ಲಿ ಅನೇಕ ಪರ-ವಿರೋಧ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿದ್ದು, ಭಾರೀ ಚರ್ಚೆಗೆ ವೇದಿಕೆ ಕಲ್ಪಿಸಿದೆ. 

ಟ್ವಿಟರ್ ಬಳಕೆದಾರರಿಂದ ಕ್ಲಾಸ್
ರಾಹುಲ್ ಗಾಂಧಿ ಅವರ ವಿದೇಶಿ ಪ್ರವಾಸ ಹಾಗೂ ಭಾರತ ಸರ್ಕಾರದ ವಿರುದ್ಧದ ಜಾಕ್ ಡಾರ್ಸೆ, ಬಿಬಿಸಿ ಹಾಗೂ ಡಿಕ್ ಹೆರಿ ಅವರ ಆರೋಪಗಳು ಸರ್ಕಾರದ ವಿರುದ್ಧ ಯೋಚಿಸಿಯೇ ಮಾಡಿರುವ ರಣತಂತ್ರಗಳಂತೆ ಭಾಸವಾಗುತ್ತಿವೆ. ಈ ಬಗ್ಗೆ ಅನೇಕ ಟ್ವಿಟರ್ ಬಳಕೆದಾರರು ಕಾಂಗ್ರೆಸ್ ಗೆ ಕ್ಲಾಸ್ ತೆಗೆದುಕೊಂಡಿದ್ದಾರೆ ಕೂಡ. ಟ್ವಿಟರ್ ಬಳಕೆದಾರ ಜಿತೆನ್ ಗಜಾರಿಯಾ ಎಂಬುವರು ಜಾಕ್ ಡಾರ್ಸೆಇಷ್ಟು ತಿಂಗಳ ಕಾಲ ಸುಮ್ಮನೆ ಇದ್ದಿದ್ದು ಏಕೆ ಎಂದು ಪ್ರಶ್ನಿಸಿದ್ದಾರೆ. ಅಷ್ಟೇ ಅಲ್ಲ, ರಾಹುಲ್ ಗಾಂಧಿ ಅಮೆರಿಕ ಪ್ರವಾಸದಲ್ಲಿರುವ ಸಮಯದಲ್ಲೇ ಭಾರತ ವಿರೋಧಿ ಹೇಳಿಕೆಗಳು ಏಕೆ ಬರುತ್ತಿವೆ? ಇದು ಅವರ ಮೀಟಿಂಗ್ ಮೂಲಕ ತಯಾರಾಗಿರೋದೆ? ಇದು ಕಾಂಗ್ರೆಸ್ ಮುಖವಾಡವನ್ನು ಪೂರ್ಣ ಪ್ರಮಾಣದಲ್ಲಿ ಬಯಲು ಮಾಡಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಇನ್ನೊಬ್ಬ ಬಳಕೆದಾರ ಸಿನ್ಹಾ, ಪಪ್ಪು ಅಮೆರಿಕಕ್ಕೆ ಟೈಂಪಾಸ್ ಗಾಗಿ ಭೇಟಿ ನೀಡಿಲ್ಲ. ಕಳೆದ 6-7 ದಿನಗಳಿಂದ ಭಾರತ ವಿರೋಧಿ ಶಕ್ತಿಗಳನ್ನು ರಹಸ್ಯವಾಗಿ ಭೇಟಿ ಮಾಡುತ್ತಿದ್ದಾರೆ. ಇದೇ ಕಾರಣಕ್ಕೆ ಡಾರ್ಸೆ ಅವರ ಸರ್ವಾಧಿಕಾರಿ ಸರ್ಕಾರ ಎಂಬ ಅರ್ಥದ ಹೇಳಿಕೆ ಆಶ್ಚರ್ಯ ಹುಟ್ಟುಹಾಕುತ್ತಿಲ್ಲ. ಇದು ಡಾರ್ಸೆ ಟ್ವಿಟರ್ ಮುಖ್ಯಸ್ಥನಾಗಿದ್ದ ಸಂದರ್ಭದಲ್ಲಿ ಮಾಡಿದ ರೀತಿಯಲ್ಲೇ ಕಾಂಗ್ರೆಸ್ ಟೂಲ್ ಕಿಟ್ ಅಂತೆ ವರ್ತಿಸುತ್ತಿದ್ದಾರೆ ಎಂದಿದ್ದಾರೆ. ಇನ್ನು ಸಂದೀಪ್ ಘೋಷ್ ಎಂಬುವರು ಇದು 2024ನೇ ಸಾಲಿಗೆ ತಯಾರಿಯಾಗಿದೆ. 2024 ಮೋದಿ ಪಾಲಿಗೆ 2014ರಿಂದ ದೊಡ್ಡ ಸವಾಲಾಗಿದೆ ಎಂದು ಸಂದೀಪ್ ಘೋಷ್ ಎಂಬುವರು ತಿಳಿಸಿದ್ದಾರೆ.

ಭಾರತದಿಂದ ChatGPTಗೆ ಪ್ರತಿಸ್ಪರ್ಧೆ ಸಾಧ್ಯವಿಲ್ಲ, AI ಸಂಸ್ಥಾಪಕನ ಸವಾಲು ಸ್ವೀಕರಿಸಿದ ಟೆಕ್ ಮಹೀಂದ್ರ!

ಕೇಂದ್ರ ಮಂತ್ರಿ ರಾಜೀವ್ ಚಂದ್ರಶೇಖರ್ ಅವರ ಪ್ರತಿಕ್ರಿಯೆ
'ಜಾಕ್ ಆರೋಪ ಸಂಪೂರ್ಣ ಸುಳ್ಳು. ಬಹುಶಃ ಟ್ವಿಟರ್ ಇತಿಹಾಸದಲ್ಲಿನ ಆ ಸಂದಿಗ್ಧ ಪರಿಸ್ಥಿತಿಯನ್ನು ಮರೆಮಾಚಲು ಡಾರ್ಸೆ ಇಂಥ ಆರೋಪ ಮಾಡುತ್ತಿದ್ದಾರೆ. ಟ್ವಿಟರ್ ನಲ್ಲಿ ಡಾರ್ಸೆ ಹಾಗೂ ಅವರ ತಂಡ ಭಾರತದ ಕಾನೂನುಗಳನ್ನು ಸಾಕಷ್ಟು ಉಲ್ಲಂಘಿಸಿದ್ದಾರೆ. 2020ರಿಂದ 2022ರ ತನಕ ಕಾನೂನುಗಳನ್ನು ಪದೇಪದೆ ಪಾಲಿಸಿಲ್ಲ. 2022ರ ಜೂನ್ ನಲ್ಲಿ ಅವರು ಅಂತಿಮವಾಗಿ ಕಾನೂನು ಪಾಲನೆ ಮಾಡಿದರು. ಈ ಪ್ರಕರಣದಲ್ಲಿ ಯಾರು ಜೈಲಿಗೂ ಹೋಗಿಲ್ಲ, ಟ್ವಿಟರ್ ಮುಚ್ಚಲಿಲ್ಲ ಕೂಡ' ಎಂದು ಕೇಂದ್ರ ಮಂತ್ರಿ ರಾಜೀವ್ ಚಂದ್ರಶೇಖರ್ ಪ್ರತಿಕ್ರಿಯಿಸಿದ್ದಾರೆ. 
 

Latest Videos
Follow Us:
Download App:
  • android
  • ios