Asianet Suvarna News Asianet Suvarna News

ವೀಕೆಂಡ್ ಲಾಕ್‌ಡೌನ್‌ಗೆ ಮಳೆರಾಯನ ಸ್ವಾಗತ.. ಮನೆಯಲ್ಲೇ ಕುಳಿತು ಬಜ್ಜಿ-ಪಕೋಡ!

ಕೊರೋನಾ ವೀಕೆಂಡ್ ಲಾಕ್ ಡೌನ್/ ಸ್ವಾಗತ ಕೋರಿದ ಮಳೆರಾಯ/  ಮನೆಯಲ್ಲೇ ಕುಳಿತು ಬಜ್ಜಿ ಮಾಡಿಕೊಂಡು ಕಾಫಿ ಹೀರಿ/ ಇನ್ನು ಎರಡು ದಿನ ಸಂಜೆ ಮಳೆ ಇದೆ

Heavy downpour welcomes long weekend curfew in Bengaluru mah
Author
Bengaluru, First Published Apr 23, 2021, 8:26 PM IST

ಬೆಂಗಳೂರು (ಏ. 23)   ಲಾಕ್ ಡೌನ್ ಮಾಡೋ ಕೆಲಸವೇ ಇರ್ಲಿಲ್ಲ ಬಿಡಿ. ಬೆಂಗಳೂರಿನ ಜನ ಶುಕ್ರವಾರ ಸಂಜೆ ಮನೆಯಿಂದ ಹೊರಬರುವ ಮಾತೇ ಇಲ್ಲ.  ಗುಡುಗು ಸಹಿತ ಮಳೆ ಅಬ್ಬರಿಸಿದೆ. ಜನ ಬೆಚ್ಚಗೆ ಮನೆ ಸೇರಿಕೊಂಡಿದ್ದಾರೆ. ಅಲ್ಲಿಗೆ ಲಾಕ್ ಡೌನ್ ಸರ್ವಗುಣ ಸಂಪನ್ನ. ಸಂಜೆ ಮಳೆ  ವೀಕೆಂಡ್ ಲಾಕ್ ಡೌನ್ ಗೆ ಸ್ವಾಗತ ಸುಸ್ವಾಗತ ಹೇಳಿದೆ.

ನಡೀರಪ್ಪಾ ಮನೆಗೆ ಹೋಗಿ.. ಕೊರೋನಾ ನಿಯಂತ್ರಣಕ್ಕೆ ವೀಕೆಂಡ್  ಲಾಕ್ ಡೌನ್ ಮಾಡಲಾಗಿದೆ... ಇದು ಸಭ್ಯಸ್ಥರಿಗೆ ಹೇಳುವ ಮಾತು.. ಇದನ್ನು ಕೇಳದಿದ್ದವರಿಗೆ ಇದ್ದೇ ಇದೆಯಲ್ಲ ಲಾಠಿ ರುಚಿ... ಪೊಲೀಸರಿಗೆ  ಕೆಲಸ ಕಡಿಮೆಯಾಗಿದೆ.  ಜನ ಮನೆಯಲ್ಲೇ ಕುಳಿತು ಬಜ್ಜಿನೋ.. ಪಕೋಡನ ಮಾಡಿಕೊಂಡು ಟೀ-ಕಾಫಿ ಹೀರ್ತಾ ಇದ್ದಾರೆ.

ಅನಿವಾರ್ಯ ಎಂದು ಕಚೇರಿಗೆ ಹೋದವರೂ ಬೇಗ ಬೇಗನೇ ಮನೆ ಸೇರಿಕೊಂಡಿದ್ದಾರೆ.  ಎರಡು ದಿನದಿಂದ ಬೆಂಗಳೂರು ಸಂಜೆ ಮಳೆ ಕಂಡಿದೆ. ಹವಾಮಾನ ಇಲಾಖೆ ಸಹ ಮಳೆ ಆಗುತ್ತದೆ ನಿಮ್ಮ ಹುಷಾರು ನಿಮಗೆ ಎಂದು ಮೊದಲೇ ಹೇಳಿತ್ತು..

ಮಳೆಗಾಲದ ಸಂಜೆಗಳನ್ನು ಮಜವಾಗಿಸುವ ಪಕೋಡಾ ರೆಸಿಪಿ

ವರ್ಕ್ ಫ್ರಾಮ್ ಹೋಂ ಮಾಡಿಕೊಂಡಿದ್ದವರಿಗೆ ಕರೆಂಟ್ ಕೈ ಕೊಡ್ತು.. ವೈ ಫೈ ಹೋಯ್ತು.. ಒಂದಷ್ಟೂ ಹೊತ್ತು ಸಮಸ್ಯೆಯಾಗಿದ್ದು ಸುಳ್ಳಲ್ಲ. ಮೊಬೈಲ್‌ ನಲ್ಲಿ ಕಣ್ಣಾಯಿಸುವಷ್ಟೊತ್ತಿಗೆ   ಕರೆಂಟ್ ಬಂತು ಮತ್ತೆ ಕೆಲಸ ಶುರು.. ಒಂದು ಕಾಫಿ ಕುಡಿದಿದ್ದೇ ಬಂತು!

ಅಯ್ಯೋ..ಒಂದು ವಾರ ಮುಗೀತಪ್ಪಾ ಬಸ್ ಹೆಂಗೂ ಶುರುವಾಗಿದೆ ಅಂದು ಊರ ಕಡೆ ಹೊರಟವರು ನೆನೆಯಬೇಕಾಯ್ತು... ಅಲ್ಲಿಲ್ಲಿ ಆಶ್ರಯ ಪಡೆದುಕೊಂಡ್ರು.. ಮೆಟ್ರೋ ಸಂಚಾರ ಇಲ್ಲ ಬಿಡಿ.. ಮೆಜೆಸ್ಟಿಕ್​, ಗಾಂಧಿನಗರ, ಯಶವಂತಪುರ, ದಾಸರಹಳ್ಳಿ, ರಾಜಾಜಿನಗರ, ಬಸವೇಶ್ವರನಗರ, ವಿಲ್ಸನ್​ ಗಾರ್ಡನ್​, ಶಾಂತಿ ನಗರ, ಕೋರಮಂಗಲ, ಜಯನಗರ, ಬನಶಂಕರಿ, ಕತ್ರಿಗುಪ್ಪೆ, ವಿದ್ಯಾಪೀಠ ಎಲ್ಲಕಡೆಯೂ ಮಳೆ ಒಂದರ್ಧ ಗಂಟೆ ಅಬ್ಬರಿಸಿತು. ಪರಿಣಾಮ ಗೊತ್ತಲ್ಲ ಅದೇ ಟ್ರಾಫಿಕ್ ಜಾಮ್.. ಇದು ಅನಿವಾರ್ಯವಾಗಿ ಆಫೀಸಿಗೆ ಹೋದವರ ಕತೆ.

ವೀಕೆಂಡ್ ಲಾಕ್ ಡೌನ್; ಏನಿರುತ್ತದೆ, ಏನಿರಲ್ಲ?

ಒಂದು ಕಡೆ ಕಲಬುರಗಿ ಸುಡುತ್ತಿದೆ. ಅತಿ ಹೆಚ್ಚು ಉಷ್ಣಾಂಶ  40 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ. ಆದರೆ ಎರಡು ದಿನದ ಮಳೆ ದಕ್ಷಿಣ ಒಳನಾಡನ್ನು ತಂಪಾಗಿಸಿದೆ. ಮುಂದಿನ  ಎರಡು ದಿನದಲ್ಲಿಯೂ  ಗುಡುಗು ಸಹಿತ ಮಳೆ ಸಾಧ್ಯತೆ ದಕ್ಷಿಣ ಒಳನಾಡಿನಲ್ಲಿ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಬೆಂಗ್ಳೂರಲ್ಲೂ ಸಂಜೆ ಮಳೆ ಖಂಡಿತ. 

ಈರುಳ್ಳಿ ಪಕೋಡಾ; ನೀವು ತಿನ್ನಿ ನಿಮ್ಮವರಿಗೂ ತಿನ್ನಿಸಿ

Follow Us:
Download App:
  • android
  • ios