ಇಸ್ರೋದಿಂದ ಮೊದಲ ರಾಕೆಟ್‌ ಉಡಾವಣೆಯಾಗಿ 60 ವರ್ಷ ತುಂಬುತ್ತಿದ್ದು, ಈ ನಿಮಿತ್ತ ಸಂಭ್ರಮಾಚರಣೆಗೆ ಶನಿವಾರ ಕೇಂದ್ರ ಬಾಹ್ಯಾಕಾಶ ಖಾತೆ ರಾಜ್ಯ ಸಚಿವ ಜಿತೇಂದ್ರ ಸಿಂಗ್‌ ಚಾಲನೆ ನೀಡಿದರು.

ತಿರುವನಂತಪುರಂ: ಇಸ್ರೋದಿಂದ ಮೊದಲ ರಾಕೆಟ್‌ ಉಡಾವಣೆಯಾಗಿ 60 ವರ್ಷ ತುಂಬುತ್ತಿದ್ದು, ಈ ನಿಮಿತ್ತ ಸಂಭ್ರಮಾಚರಣೆಗೆ ಶನಿವಾರ ಕೇಂದ್ರ ಬಾಹ್ಯಾಕಾಶ ಖಾತೆ ರಾಜ್ಯ ಸಚಿವ ಜಿತೇಂದ್ರ ಸಿಂಗ್‌ ಚಾಲನೆ ನೀಡಿದರು. 1963ರಲ್ಲಿ ಭಾರತ ಮೊದಲ ರಾಕೆಟ್ ಹಾರಿಸಿತ್ತು. ಈ ನಿಮಿತ್ತ ಈಗ 60ನೇ ವರ್ಷಾಚರಣೆಗೆ ಚಾಲನೆ ನೀಡಿ ಮಾತನಾಡಿದ ಸಿಂಗ್‌, 60ನೇ ವರ್ಷಾಚರಣೆ ವೇಳೆಯೇ ಚಂದ್ರಯಾನ-2 ಯಶಸ್ವಿಯಾಗಿರುವುದು ವಿಶೇಷ. ವಿಕ್ರಂ ಸಾರಾಭಾಯಿ ಬಾಹ್ಯಾಕಾಶ ಕೇಂದ್ರವು ಭಾರತದ ಬಾಹ್ಯಾಕಾಶ ಯಾನದ ಆಕಾಂಕ್ಷೆಗಳನ್ನು ನಿಜ ಮಾಡಿ ತೋರಿಸಿರುವುದು ಹೆಮ್ಮೆಯ ವಿಚಾರ ಎಂದರು.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ವಿದೇಶಾಂಗ ಖಾತೆ ರಾಜ್ಯ ಸಚಿವ ಮುರಳೀಧರನ್‌ ಮಾತನಾಡಿ, ವಿದೇಶಗಳಲ್ಲಿ ಚಂದ್ರಯಾನ-2 ಯಶಸ್ವಿಯಾಗಿರುವ ಹಿನ್ನೆಲೆಯಲ್ಲಿ ಎಲ್ಲರೂ ಇಸ್ರೋ ಸಂಸ್ಥೆಯ ಬಗ್ಗೆ ಹೆಮ್ಮೆ ವ್ಯಕ್ತಪಡಿಸುತ್ತಾರೆ ಎಂದರು. ಸಂಭ್ರಮಾಚರಣೆ ನಿಮಿತ್ತ ಆರ್‌ಹೆಚ್‌-200 ರಾಕೆಟ್‌ ಉಡಾವಣೆ, ಬಾಹ್ಯಾಕಾಶ ತಂತ್ರಜ್ಞಾನ ಪ್ರದರ್ಶನ, ವಿದ್ಯಾರ್ಥಿಗಳೊಂದಿಗೆ ಸಂವಾದ ಮತ್ತು ವಿಜ್ಞಾನಿಗಳಿಂದ ಉಪನ್ಯಾಸ ಏರ್ಪಡಿಸಲಾಗಿತ್ತು.

Scroll to load tweet…

Chandrayan 4: ಚಂದ್ರನ ನೆಲದಿಂದ ಮಣ್ಣನ್ನು ಭೂಮಿಗೆ ವಾಪಾಸ್‌ ತರಲಿದೆ ಇಸ್ರೋ!

Tumakur : ಇಸ್ರೋ ಉತ್ಪಾದನಾ ಘಟಕ ಕಾರ್ಯಾರಂಭ ಶೀಘ್ರ